2019ರಿಂದ ಕೊರೋನ (Corona) ಬಂದಿದ್ದೇ ಬಂದಿದ್ದು. “ಜೀವ (Life) ಉಳಿದರೆ ತಾನೇ ಜೀವನ” ಎನ್ನುವಂತ ಪರಿಸ್ಥಿತಿ. ಹೀಗಾಗಿ ಮಕ್ಕಳು (Children) ಶಾಲೆಗೆ (School) ಹೋಗದಿದ್ದರೂ ಪರ್ವಾಗಿಲ್ಲ, ಮನೆಯಲ್ಲೇ (Home) ಆರೋಗ್ಯವಾಗಿ (Healthy), ಸೇಫ್ (Safe) ಆಗಿ ಇದ್ದರೆ ಸಾಕು ಎನ್ನುವಂತಾಗಿತ್ತು ತಂದೆ (father), ತಾಯಿಗಳಿಗೆ (Mother). ಆದಾದ ಮೇಲೆ ಮಕ್ಕಳು ಶಾಲೆಯನ್ನೇ ಮರೆಯುವಂತಾಯ್ತು. ಹಂಗೂ ಹಿಂಗೂ ಕೋವಿಡ್ (Covid) ಕಡಿಮೆಯಾಗಿ, ಮಕ್ಕಳು ಶಾಲೆಯತ್ತ ಮುಖ ಮಾಡುತ್ತಿದ್ದಂತೆ ಪರೀಕ್ಷೆ (Exam) ಬಂತು. ಆದಾದ ಬಳಿಕ ಬೇಸಿಗೆ ರಜೆಯೂ (Summer Holiday) ಬಂತು. ಇನ್ನು ಈಗ ಬೇಸಿಗೆ ರಜೆ ಕಳೆದು, ಶಾಲೆ ಶುರುವಾಗಲಿದೆ. ನಾಳೆಯಿಂದಲೇ ರಾಜ್ಯಾದ್ಯಂತ ಶಾಲೆಗಳು ಪುನಾರಂಭವಾಗಲಿದೆ. ಇದೆ ವೇಳೆ ಕೋವಿಡ್ ಸೋಂಕು ನಿಧಾನಕ್ಕೆ ಉಲ್ಬಣಿಸುತ್ತಿದ್ದು, ಮಳೆಯಿಂದಾಗಿ (Rain) ಸಾಂಕ್ರಾಮಿಕ ರೋಗಗಳೂ (epidemic) ಕೂಡ ಕಾಣಿಸಿಕೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಲೆಗೆ ಹೋಗುವ ಮಕ್ಕಳು ಹೇಗಿರಬೇಕು? ಅವರ ಪೋಷಕರು ಯಾವ ಜಾಗೃತೆ ವಹಿಸಬೇಕು? ಶಾಲೆಯಲ್ಲಿ ಶಿಕ್ಷಕರ ಜವಾಬ್ದಾರಿಗಳೇನು? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ…
ರಜೆ ಮುಗಿಯಿತು, ಶಾಲೆ ಶುರುವಾಯ್ತು
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಸೋಮವಾರದಿಂದ ಅಂದರೆ ಮೇ 16ರಿಂದ ಆರಂಭವಾಗಲಿದೆ. ಪ್ರತಿ ವರ್ಷ ಜೂನ್ 1ರಂದು ಶಾಲೆ ಆರಂಭವಾಗುತ್ತಿತ್ತು. ಆದರೆ ಈ ಬಾರಿ ಕೊರೋನಾದಿಂದಾಗಿ ಶಾಲೆ ಸರಿಯಾಗಿ ನಡೆದಿಲ್ಲ. ಹೀಗಾಗಿ ಬೇಸಿಗೆ ರಜೆಗೆ ಕತ್ತರಿ ಹಾಕಲಾಗಿದೆ. ಶಾಲೆ ಪ್ರಾರಂಭಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆಯು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಮತ್ತೊಂದೆಡೆ, ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲು ಶಾಲೆಗಳೂ ಕೂಡ ಸಜ್ಜಾಗಿವೆ.
ಮಕ್ಕಳ ಸ್ವಾಗತಕ್ಕೆ ಸಜ್ಜಾದ ಶಾಲೆಗಳು
ಶಾಲೆಗಳ ಪ್ರಾರಂಭೋತ್ಸವವನ್ನು ಹಬ್ಬದ ರೀತಿ ಮಾಡಬೇಕು ಅಂತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸೋಂಕಿನ ಭೀತಿಯಿಂದಾಗಿ ಶಾಲೆಯತ್ತ ಬಾರದ ಮಕ್ಕಳನ್ನು ಆಕರ್ಷಿಸುವುದು ಇದರ ಉದ್ದೇಶ. ಇದಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳು, ನಾಗರಿಕರು, ಪೋಷಕರು, ಹಿರಿಯ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಮಕ್ಕಳಲ್ಲಿ ಸ್ಥೈರ್ಯ ತುಂಬಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: Explained: ಟೊಮೆಟೋ ತಿಂದ್ರೆ Tomato flu ಬರುತ್ತಾ? ಈ ಕುರಿತು ಏನ್ ಹೇಳ್ತಿದ್ದಾರೆ ತಜ್ಞರು
ಮಕ್ಕಳ ಸ್ವಾಗತಕ್ಕೆ ತಳಿರು-ತೋರಣ, ರಂಗೋಲಿ
ಶಾಲೆಗಳಲ್ಲಿ ತೋರಣ ಕಟ್ಟಿ, ರಂಗೋಲಿ ಬಿಡಿಸಿ ಮಕ್ಕಳನ್ನು ಸ್ವಾಗತಿಸಬೇಕು. ಹಾಜರಾತಿ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ತರಗತಿ ಮತ್ತು ಶಿಕ್ಷಕರ ವೇಳಾಪಟ್ಟಿತಯಾರು ಮಾಡಿಟ್ಟುಕೊಳ್ಳಬೇಕು. ಇದಕ್ಕಾಗಿ ಶಿಕ್ಷಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.
ಸೋಂಕಿನ ಭೀತಿ ನಡುವೆ ಶಾಲಾರಂಭ
ಹೌದು, ಸಂಪೂರ್ಣ ಕಡಿಮೆ ಆಗುತ್ತಿದೆ ಎಂದಕೊಂಡಿದ್ದ ಕೊರೋನ ಮತ್ತೆ ಆರ್ಭಟಿಸುತ್ತಿದೆ. ಇದರ ಜೊತೆಗೆ ಕೇರಳದಲ್ಲಿ ಟೊಮೇಟೋ ಫ್ಲೂ ಎಂಬ ವಿಚಿತ್ರ ರೋಗ ಮಕ್ಕಳಲ್ಲಿ ಕಾಣಿಸಿಕೊಂಡಿದೆ. ಇದು ಸಾಲದು ಎಂಬಂತೆ ರಾಜ್ಯದಲ್ಲಿ ಮಳೆ ಹಾಗೂ ಬಿಸಿಲಿನ ಕಣ್ಣಾಮುಚ್ಚಾಲೆ ಶುರುವಾಗಿದೆ. ಇದರಿಂದಾಗಿ ಜ್ವರ, ಶೀತ, ತಲೆನೋವಿನಂತಹ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳಿಸೋದು ಹೇಗೆ ಎಂಬ ಚಿಂತೆ ಸಹಜವಾಗೇ ಪೋಷಕರನ್ನು ಕಾಡುತ್ತಿದೆ.
ಶಾಲೆಗೆ ಹೋಗುವ ಮಕ್ಕಳು ಏನು ಮಾಡಬೇಕು?
ಶಾಲೆಗೆ ಹೋಗುವ ಮಕ್ಕಳು ಮೊದಲು ಭಯವನ್ನು ಬಿಡಬೇಕು. ಶಾಲೆ ಎಂಬುದು ನಿಮಗೆ ಶಿಕ್ಷೆ ನೀಡುವ ಸ್ಥಳವಲ್ಲ, ಬದಲಾಗಿ ಓದು, ಬರಹ ಕಲಿಸಿ, ನಿಮ್ಮ ಸುಂದರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಸ್ಥಳ ಎಂಬುದನ್ನು ಅರಿತುಕೊಳ್ಳಬೇಕು. ಖುಷಿ ಖುಷಿಯಿಂದಲೇ ಶಾಲೆಗೆ ಹೊರಡಬೇಕು.
ಎಲ್ಲಾ ತಯಾರಿಯನ್ನು ಇಂದೇ ಮುಗಿಸಿ
ನಾಳೆ ಬೆಳಗ್ಗೆವರೆಗೂ ಟೈಮ್ ಇದೆಯಲ್ಲ ಅಂತ ಮೈಮರೆಯಬೇಡಿ. ನಾಳೆ ಶಾಲೆಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಇಂದೇ ಜೋಡಿಸಿಡಿ. ಸ್ಕೂಲ್ ಬ್ಯಾಗ್, ಪಟ್ಟಿ, ಪೆನ್ನು, ಸ್ಲೇಟ್, ಬಳಪ, ಪೆನ್ಸಿಲ್ ಬಾಕ್ಸ್ ಇತ್ಯಾದಿಗಳನ್ನು ಜೋಡಿಸಿಟ್ಟಿರಿ. ಸಮವಸ್ತ್ರ ಅಥವಾ ಶುಭ್ರವಾದ ಉಡುಪನ್ನು ಅಮ್ಮನಿಂದ ಪಡೆದು ಇಟ್ಟುಕೊಂಡಿರಿ.
ಛತ್ರಿ ಇದೆಯಾ? ರೇನ್‌ಕೋಟ್ ಇದೆಯಾ?
ಇನ್ನೂ ಮೂರು ದಿನ ಮಳೆ ಅಬ್ಬರ ಇದೆ ಅಂತ ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ನಾಳೆ ಶಾಲೆಗೆ ಹೋಗುವಾಗ ನಿಮ್ಮ ಬ್ಯಾಗ್‌ನಲ್ಲಿ ಛತ್ರಿ ಅಥವಾ ರೇನ್‌ಕೋಟ್ ಇರಲಿ. ಯಾವುದೇ ಕಾರಣಕ್ಕೂ ಮಳೆಯಲ್ಲಿ ನೆನೆಯಬೇಡಿ.
ಅನಾರೋಗ್ಯವಾದರೆ ಪೋಷಕರಿಗೆ ತಿಳಿಸಿ
ಶಾಲೆ ಅಂದರೆ ಕೆಲ ಮಕ್ಕಳಿಗೆ ಸುಮ್ಮನೆ ಅನಾರೋಗ್ಯ ಕಾಡುತ್ತದೆ. ಆದರೆ ನೀವು ಹಾಗೆ ಮಾಡಬೇಡಿ. ನಿಜವಾಗಲೂ ನಿಮಗೆ ಅನಾರೋಗ್ಯವಾಗಿದ್ದರೆ ತಂದೆ, ತಾಯಿಗೆ ತಿಳಿಸಿ, ಅದಕ್ಕೆ ಸರಿಯಾದ ಚಿಕಿತ್ಸೆ ಪಡೆಯಿರಿ.
ಮಕ್ಕಳ ಪೋಷಕರು ಏನು ಮಾಡಬೇಕು?
ಮಕ್ಕಳು ಅಗತ್ಯ ವಸ್ತುಗಳನ್ನು ಹೊಂದಿಸಿ ಇಟ್ಟುಕೊಂಡಿದ್ದಾರೆಯೇ ಗಮನಿಸಿ, ಮುಕ್ತವಾಗಿ ಮಾತನಾಡಿ, ಶಾಲೆ ಬಗ್ಗೆ ಅವರಿಗಿರುವ ಭಯ ಹೋಗಲಾಡಿಸಿ. ಅವರ ಆರೋಗ್ಯದ ಬಗ್ಗೆ ಗಮನ ಹರಿಸಿ, ಅನಾರೋಗ್ಯವಾಗಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ.
ಮಾಸ್ಕ್, ಸ್ಯಾನಿಟೈಸರ್, ಬಿಸಿ ನೀರು ಜೊತೆಗಿರಲಿ
ನಿಮ್ಮ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸರ್ ಮಹತ್ವ ತಿಳಿಸಿ. ಮಾಸ್ಕ್ ಧರಿಸುವುದು, ಅದನ್ನು ಶುಚಿಯಾಗಿ ಇಟ್ಟುಕೊಳ್ಳುವುದನ್ನು ಹೇಳಿಕೊಡಿ. ಸ್ಯಾನಿಟೈಸರ್ ಹೇಗೆ, ಎಲ್ಲಿ, ಎಷ್ಟು ಬಳಸಬೇಕು ತಿಳಿಸಿ. ಅವರಿಗೆ ಬಿಸಿ ನೀರು ಕಾಯಿಸಿ, ಆರಿಸಿ, ಪ್ರತ್ಯೇಕ ಬಾಟಲಿಯಲ್ಲಿ ತುಂಬಿ ಕೊಡಿ. ಶಾಲೆಯಲ್ಲಿ ಹೇಗಿರಬೇಕು, ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ತಿಳಿಸಿಕೊಡಿ.
ಮಕ್ಕಳ ಮುಂದೆ ಶಿಕ್ಷಕರು ಹೇಗಿರಬೇಕು?
ನಿಮ್ಮನ್ನೇ ನಂಬಿಕೊಂಡು ಬರುವ ಮಕ್ಕಳನ್ನು ನಿಮ್ಮ ಮಕ್ಕಳಂತೆ ಕಾಣಿರಿ. ಅವರನ್ನು ಪ್ರೀತಿಯಿಂದ ಸ್ವಾಗತಿಸಿ, ಶಾಲೆ ಬಗ್ಗೆ ಅವರಿಗೆ ಇರುವ ಆತಂಕ ದೂರ ಮಾಡಿ. ಸಾಂಕ್ರಾಮಿಕ ರೋಗಗಳ ಬಗ್ಗೆ, ಅದರಿಂದ ರಕ್ಷಣೆ ಪಡೆಯುವ ಬಗ್ಗೆ ಹೇಳಿಕೊಡಿ. ಯಾವುದೇ ಮಗು ಅನಾರೋಗ್ಯಕ್ಕೆ ಒಳಗಾದರೇ ತಕ್ಷಣವೇ ಪಾಲಕರನ್ನು ಕರೆಸಿ, ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ