HOME » NEWS » Explained » ADVANTAGES OF JOHNSON AND JOHNSONS COVID 19 VACCINE CLEARED BY UNITED STATES RHHSN STG

Explainer: ಜಾನ್ಸನ್ ಆ್ಯಂಡ್ ಜಾನ್ಸನ್ ಕೋವಿಡ್ 19 ಲಸಿಕೆಗೆ ಅಮೆರಿಕ ಗ್ರೀನ್ ಸಿಗ್ನಲ್: ಇದರ ಪ್ರಯೋಜನಗಳೇನು ಗೊತ್ತಾ..?

2020 ರ ಜನವರಿಯಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ತನ್ನ ಕೊರೋನಾ ವೈರಸ್ ಲಸಿಕೆಯ ಕೆಲಸವನ್ನು ಪ್ರಾರಂಭಿಸಿತು ಮತ್ತು ಇದಕ್ಕಾಗಿ ಮಾರ್ಚ್​ನಲ್ಲಿ ಅಮೆರಿಕ ಸರ್ಕಾರದಿಂದ 456 ಮಿಲಿಯನ್ ಡಾಲರ್ ಸಹಾಯವನ್ನು ಪಡೆಯಿತು. ಹಂತ 1 ಅಥವಾ 2 ಪ್ರಯೋಗಗಳು ಜುಲೈನಲ್ಲಿ ಪ್ರಾರಂಭವಾದವು ಮತ್ತು ಸೆಪ್ಟೆಂಬರ್​ನಲ್ಲಿ ಕಂಪನಿಯು 3 ನೇ ಹಂತದ ಪ್ರಯೋಗವನ್ನು ಪ್ರಾರಂಭಿಸಿತು.

news18-kannada
Updated:March 1, 2021, 5:27 PM IST
Explainer: ಜಾನ್ಸನ್ ಆ್ಯಂಡ್ ಜಾನ್ಸನ್ ಕೋವಿಡ್ 19 ಲಸಿಕೆಗೆ ಅಮೆರಿಕ ಗ್ರೀನ್ ಸಿಗ್ನಲ್: ಇದರ ಪ್ರಯೋಜನಗಳೇನು ಗೊತ್ತಾ..?
ಸಾಂದರ್ಭಿಕ ಚಿತ್ರ,
  • Share this:
ಜಾನ್ಸನ್ ಆ್ಯಂಡ್ ಜಾನ್ಸನ್​ನ ಒಂದು ಡೋಸ್ ಕೋವಿಡ್ -19 ಲಸಿಕೆಗೆ ಯುನೈಟೆಡ್ ಸ್ಟೇಟ್ಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್​ಡಿಎ) ಶನಿವಾರ ತುರ್ತು ಬಳಕೆಗಾಗಿ ಅಧಿಕೃತ ಅನುಮತಿ ನೀಡಿದೆ. ಮುಂದಿನ ವಾರದ ಆರಂಭದಲ್ಲಿ ಅಮೆರಿಕನ್ನರನ್ನು ತಲುಪಬಹುದಾದ ಮೂರನೇ ಪರಿಣಾಮಕಾರಿ ಲಸಿಕೆಯ ಲಕ್ಷಾಂತರ ಡೋಸ್​ಗಳನ್ನು ಹೊರತರಲು ಪ್ರಾರಂಭಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಯುಎಸ್​ನಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಮಿಲಿಯನ್​ಗಟ್ಟಲೆ ಅಮೆರಿಕನ್ನರು ಲಸಿಕೆ ಪಡೆಯಲು ವೇಟಿಂಗ್ ಲಿಸ್ಟ್​ನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರಕಟಣೆ ಒಂದು ನಿರ್ಣಾಯಕವಾಗಿದೆ. ಭಾರತೀಯ ಕಾಲಮಾನ ಭಾನುವಾರ ರಾತ್ರಿಯ ಹೊತ್ತಿಗೆ ಅಮೆರಿಕದಲ್ಲಿ 28.55 ಮಿಲಿಯನ್ ದೃಢಪಡಿಸಿದ ಪ್ರಕರಣಗಳಿದ್ದು, 512,000 ಜನರು ಕೊರೋನಾದಿಂದ ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಡೇಟಾಬೇಸ್ ಹೇಳಿದೆ.

ಜಾನ್ಸನ್ ಆ್ಯಂಡ್ ಜಾನ್ಸನ್ ಜೂನ್ ಅಂತ್ಯದ ವೇಳೆಗೆ 100 ಮಿಲಿಯನ್ ಡೋಸ್ ನೀಡುವುದಾಗಿ ಅಮೆರಿಕಕ್ಕೆ ವಾಗ್ದಾನ ಮಾಡಿದೆ. ಜುಲೈ ಅಂತ್ಯದ ವೇಳೆಗೆ ಫೈಜರ್ - ಬಯೋಎನ್ಟೆಕ್ ಮತ್ತು ಮಾಡರ್ನಾ ತಯಾರಿಸಿದ ಎರಡು-ಡೋಸ್ ಲಸಿಕೆಗಳಿಂದ 600 ಮಿಲಿಯನ್ ಡೋಸ್​ಗಳನ್ನು ಸಂಯೋಜಿಸಿದಾಗ, ಲಸಿಕೆ ಬೇಕಾಗಿರುವ ಯಾವುದೇ ಅಮೆರಿಕದ ವಯಸ್ಕರಿಗಿಂತ ಹೆಚ್ಚು ಡೋಸ್ ಲಭ್ಯವಾಗಲಿದೆ.

ಅಮೆರಿಕದ ಕ್ಲಿನಿಕಲ್ ಟ್ರಯಲ್ ಸೈಟ್​ನಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಯ ಶೇ. 72 ಪರಿಣಾಮಕಾರಿತ್ವದ ದರದ ಬಗ್ಗೆ ಅನಗತ್ಯವಾಗಿ ಆತಂಕ ಪಡಬೇಡಿ ಎಂದು ಸರ್ಕಾರದ ಉನ್ನತ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೋನಿ ಎಸ್. ಫೌಸಿ ಶನಿವಾರ ಅಮೆರಿಕನ್ನರಿಗೆ ಸಲಹೆ ನೀಡಿದರು. ಏಕೆಂದರೆ ಮಾಡರ್ನಾ ಮತ್ತು ಫೈಜರ್ - ಬಯೋಎನ್ಟೆಕ್ ಲಸಿಕೆಗಳು ಅನ್ನು ಪರೀಕ್ಷಿಸುವ ಅಧ್ಯಯನಗಳಲ್ಲಿ ಸುಮಾರು ಶೇ. 95 ಕ್ಕಿಂತ ಸ್ವಲ್ಪ ಕಡಿಮೆ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿತ್ತು.

"ನಂಬರ್ ಗೇಮ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಏಕೆಂದರೆ ಇದು ನಿಜವಾಗಿಯೂ ಉತ್ತಮವಾದ ಲಸಿಕೆ, ಮತ್ತು ನಮಗೆ ಬೇಕಾಗಿರುವುದು ಸಾಧ್ಯವಾದಷ್ಟು ಉತ್ತಮ ಲಸಿಕೆಗಳು" ಎಂದು ಡಾ. ಫೌಸಿ ಸಂದರ್ಶನವೊಂದರಲ್ಲಿ ಹೇಳಿದರು. ಅಲ್ಲದೆ, ''94 ಮತ್ತು 72 ರ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡುವ ಮೊದಲು, ಈಗ ನೀವು ಮೂರು ಹೆಚ್ಚು ಪರಿಣಾಮಕಾರಿ ಲಸಿಕೆಗಳನ್ನು ಹೊಂದಿದ್ದೀರಿ ಎಂಬ ಅಂಶವನ್ನು ಒಪ್ಪಿಕೊಳ್ಳಿ.'' ಎಂದೂ ತಿಳಿಸಿದ್ದಾರೆ.

JNJ-78436735 ಅಥವಾ Ad26.COV2.S. ಎಂದು ಕರೆಯಲ್ಪಡುವ ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಯನ್ನು ಕಂಪನಿಯ ಬೆಲ್ಜಿಯಂ ಮೂಲದ ಜಾನ್ಸೆನ್ ಫಾರ್ಮಾಸ್ಯುಟಿಕಾ ಅಭಿವೃದ್ಧಿಪಡಿಸಿದೆ. ಬೋಸ್ಟನ್​ನಲ್ಲಿರುವ ಹಾರ್ವರ್ಡ್ ವೈದ್ಯಕೀಯ ಶಾಲೆಯ ಬೋಧನಾ ಆಸ್ಪತ್ರೆಯಾದ ಬೆತ್ ಇಸ್ರೇಲ್ ಡಿಕಾನೆಸ್ ಮೆಡಿಕಲ್ ಸೆಂಟರ್ ಸಹಯೋಗದೊಂದಿಗೆ ಲಸಿಕೆ ಸಿದ್ಧಪಡಿಸಲಾಗಿದೆ.

ಲಸಿಕೆ ಮಾನವ ಜೀವಕೋಶಗಳಿಗೆ ಪ್ರವೇಶಿಸಲು ಬಳಸುವ ಸ್ಪೈಕ್ ಪ್ರೋಟೀನ್ ಅನ್ನು ನಿರ್ಮಿಸಲು SARS-CoV-2 ವೈರಸ್​ನ ಅನುವಂಶಿಕ ಸೂಚನೆಗಳನ್ನು ಆಧರಿಸಿದೆ. ಆದರೆ ಸಿಂಗಲ್ - ಸ್ಟ್ರಾಂಡೆಡ್ ಆರ್​ಎ​ನ್ಎ ಯಲ್ಲಿ ಸೂಚನೆಗಳನ್ನು ಸಂಗ್ರಹಿಸುವ ಫೈಜರ್ - ಬಯೋಟೆಕ್ ಮತ್ತು ಮಾಡರ್ನಾ ಲಸಿಕೆಗಳಿಗಿಂತ ಭಿನ್ನವಾಗಿ, ಜಾನ್ಸನ್ ಆ್ಯಂಡ್ ಜಾನ್ಸನ್ ಡಬಲ್ ಸ್ಟ್ರಾಂಡೆಡ್ ಡಿಎನ್ಎಯನ್ನು ಬಳಸುತ್ತದೆ.ಅಲ್ಲದೆ, ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆ ಅಡೆನೊವೈರಸ್ ಆಧಾರಿತವಾಗಿದೆ. ಇದು ಫೈಜರ್ ಮತ್ತು ಮಾಡರ್ನಾದ ಎಂಆರ್​ಎನ್​ಎ ಲಸಿಕೆಗಳಿಗಿಂತ ಹೆಚ್ಚು ಒರಟಾದ ವಿಧವಾಗಿದೆ. ಡಿಎನ್ಎ ಆರ್​ಎನ್​ಎಯಂತೆ ದುರ್ಬಲವಾಗಿಲ್ಲ, ಮತ್ತು ಅಡೆನೊವೈರಸ್​ನ ಕಠಿಣ ಪ್ರೋಟೀನ್ ಕೋಟ್ ಒಳಗಿನ ಆನುವಂಶಿಕ ವಸ್ತುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಈ ಹಿನ್ನೆಲೆ, ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಯನ್ನು 2-8 ಡಿಗ್ರಿ ಸೆಲ್ಸಿಯಸ್​ನಲ್ಲಿ ಮೂರು ತಿಂಗಳವರೆಗೆ ರೆಫ್ರಿಜರೇಟ್ ಮಾಡಬಹುದು.

ಇದನ್ನು ಓದಿ: ಲಸಿಕೆ ಪಡೆದ ಪ್ರಧಾನಿ; ಇಂದಿನಿಂದ 27 ಕೋಟಿ ಮಂದಿಗೆ ವ್ಯಾಕ್ಸಿನ್ ನೀಡುವ ಮಹಾ ಅಭಿಯಾನ

ಈ ಲಸಿಕೆ ಫೈಜರ್, ಮಾಡರ್ನಾ, ಆಕ್ಸ್ಫರ್ಡ್-ಅಸ್ಟ್ರಾಜೆನಿಕಾ (ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಕೋವಿಶೀಲ್ಡ್ ಎಂಬ ಹೆಸರಲ್ಲಿ ಪರವಾನಗಿ ಅಡಿಯಲ್ಲಿ ತಯಾರಿಸಲಾಗುತ್ತಿದೆ) ಮತ್ತು ಭಾರತ್ ಬಯೋಟೆಕ್ (ಕೊವ್ಯಾಕ್ಸಿನ್) ರೀತಿಯಲ್ಲದೆ, ಇದನ್ನು ಒಂದೇ ಡೋಸ್ ಆಗಿ ನೀಡಲಾಗುತ್ತದೆ.

ಲಸಿಕೆ ನೀಡಲು ಕೆಲವು ಜನಸಂಖ್ಯಾ ಗುಂಪುಗಳಿಗೆ ಆದ್ಯತೆ ನೀಡಬೇಕೆ ಎಂದು ಚರ್ಚಿಸಲು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಮತ್ತು ತಡೆಗಟ್ಟುವಿಕೆಗೆ ಸಲಹೆ ನೀಡುವ ಲಸಿಕೆ ತಜ್ಞರ ಸಮಿತಿಯು ಸಭೆ ನಡೆಸಿ ನಿರ್ಧರಿಸಲಿದೆ.
Youtube Video

2020 ರ ಜನವರಿಯಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ತನ್ನ ಕೊರೋನಾ ವೈರಸ್ ಲಸಿಕೆಯ ಕೆಲಸವನ್ನು ಪ್ರಾರಂಭಿಸಿತು ಮತ್ತು ಇದಕ್ಕಾಗಿ ಮಾರ್ಚ್​ನಲ್ಲಿ ಅಮೆರಿಕ ಸರ್ಕಾರದಿಂದ 456 ಮಿಲಿಯನ್ ಡಾಲರ್ ಸಹಾಯವನ್ನು ಪಡೆಯಿತು. ಹಂತ 1 ಅಥವಾ 2 ಪ್ರಯೋಗಗಳು ಜುಲೈನಲ್ಲಿ ಪ್ರಾರಂಭವಾದವು ಮತ್ತು ಸೆಪ್ಟೆಂಬರ್​ನಲ್ಲಿ ಕಂಪನಿಯು 3 ನೇ ಹಂತದ ಪ್ರಯೋಗವನ್ನು ಪ್ರಾರಂಭಿಸಿತು.
Published by: HR Ramesh
First published: March 1, 2021, 5:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories