• Home
  • »
  • News
  • »
  • explained
  • »
  • Varun Dhawan-Vestibular Hypofunction: ನಟ ವರುಣ್ ಧವನ್‌ರನ್ನು ಕಾಡಿದ್ದ ಆ ರೋಗದ ಬಗ್ಗೆ ನಿಮಗೆಷ್ಟು ಗೊತ್ತು?

Varun Dhawan-Vestibular Hypofunction: ನಟ ವರುಣ್ ಧವನ್‌ರನ್ನು ಕಾಡಿದ್ದ ಆ ರೋಗದ ಬಗ್ಗೆ ನಿಮಗೆಷ್ಟು ಗೊತ್ತು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಂದರ್ಶನವೊಂದರಲ್ಲಿ ನಟ ವರುಣ್ ಧವನ್ ತಾವು ಹೇಗೆ ವೆಸ್ಟಿಬುಲರ್ ಹೈಪೋಫಂಕ್ಷನ್ ಕಾಯಿಲೆಯಿಂದ ಬಳಲಿದ್ದೆ ಎಂದು ಹೇಳಿದ್ದರು. ಇದಾದ ಬಳಿಕ ತುಂಬಾ ಜನರು ಈ ವೆಸ್ಟಿಬುಲರ್ ಹೈಪೋಫಂಕ್ಷನ್ ಕಾಯಿಲೆ ಬಗ್ಗೆ ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದ್ದಾರೆ. ಹಾಗಿದ್ರೆ ಏನಿದು ವೆಸ್ಟಿಬುಲರ್ ಹೈಪೋಫಂಕ್ಷನ್ ಕಾಯಿಲೆ?

ಮುಂದೆ ಓದಿ ...
  • Share this:

    ಬಾಲಿವುಡ್‌ ನ (Bollywood) ಖ್ಯಾತ ನಿರ್ದೇಶಕ ಡೇವಿಡ್ ಧವನ್ ಅವರ ಪುತ್ರ ನಟ ವರುಣ್ ಧವನ್ (Actor Varun Dhawan) ತಮ್ಮ ಚಿತ್ರಗಳ ಮೂಲಕ ಮತ್ತು ಅಭಿನಯದ (Acting) ಮೂಲಕ ಸಾಕಷ್ಟು ಹೆಸರು ಗಳಿಸಿದ್ದಾರೆ. ನಟ ವರುಣ್ ಧವನ್, ಬದ್ಲಾಪುರ್ ಸೇರಿದಂತೆ ಮುಂತಾದ ಸಿನಿಮಾಗಳ (Cinema) ಮೂಲಕ ಚಿತ್ರರಂಗದಲ್ಲಿ ಹೊಸ ಗುರುತನ್ನು ಗಳಿಸಿದ್ದಾರೆ. ನಟ ವರುಣ್ ಧವನ್ ಅವರು ಇತ್ತೀಚಿನ ದಿನಗಳಲ್ಲಿ ಭೇದಿಯಾ ಚಲನಚಿತ್ರ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ವೇಳೆ ಅವರು ತಮ್ಮ ಕಾಯಿಲೆ ಬಗ್ಗೆ ಹೇಳಿಕೊಂಡಿದ್ದಾರೆ. ಮಾಧ್ಯಮ ಸಂವಾದದಲ್ಲಿ ಮಾತನಾಡಿರುವ ನಟ ವರುಣ್ ಧವನ್, ಸಾಂಕ್ರಾಮಿಕ ರೋಗದ ಬಗ್ಗೆ ಹೇಳಿದ್ದಾರೆ.


    ನಟ ವರುಣ್ ಧವನ್ ಗೆ ವೆಸ್ಟಿಬುಲರ್ ಹೈಪೋಫಂಕ್ಷನ್‌ ಕಾಯಿಲೆ


    ಮಾಧ್ಯಮ ಸಂವಾದದಲ್ಲಿ ಮಾತನಾಡಿರುವ ನಟ ವರುಣ್ ಧವನ್, ಸಾಂಕ್ರಾಮಿಕ ರೋಗದ ನಂತರ ನಾನು ನನ್ನನ್ನು ಹಾಗೆಯೇ ತಳ್ಳಿಕೊಂಡು ಹೊರಟಿದ್ದೇನೆ ಎಂದು ಹೇಳಿದ್ದಾರೆ. ಇದು ಈ ವೆಸ್ಟಿಬುಲರ್ ಹೈಪೋಫಂಕ್ಷನ್ ಕಾಯಿಲೆಗೆ ಕಾರಣವಾಯಿತು. ಇದರಿಂದ ದೇಹದ ಸಮತೋಲನ ಹದಗೆಡತೊಡಗಿತು ಎಂದಿದ್ದಾರೆ.


    ಆದರೆ ಈಗ ನಟ ವರುಣ್ ಧವನ್ ಗುಣಮುಖರಾಗಿದ್ದು, ಚೆನ್ನಾಗಿರುವುದಾಗಿ ಹೇಳಿದ್ದಾರೆ. ನಟ ವರುಣ್ ಮಾತಿನ ನಂತರ ತುಂಬಾ ಜನರು ಈ ವೆಸ್ಟಿಬುಲರ್ ಹೈಪೋಫಂಕ್ಷನ್ ಕಾಯಿಲೆ ಬಗ್ಗೆ ಅಂತರ್ಜಾಲದಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಹಾಗಾಗಿ ನೀವು ಈ ಕಾಯಿಲೆಗೆ ಕಾರಣಗಳು ಮತ್ತು ತಡೆಗಟ್ಟುವ ಕ್ರಮ ಒಳಗೊಂಡಂತೆ ವೆಸ್ಟಿಬುಲರ್ ಹೈಪೋಫಂಕ್ಷನ್‌ ಲಕ್ಷಣಗಳ ಬಗ್ಗೆ ಇಲ್ಲಿ ನೋಡೋಣ.


    ಇದನ್ನೂ ಓದಿ: Actress Samantha: ಸಮಂತಾರನ್ನು ಕಾಡುತ್ತಿರುವ ಈ ವಿಚಿತ್ರ ಕಾಯಿಲೆ ಬಗ್ಗೆ ಗೊತ್ತಾ? ವ್ಯಕ್ತಿಯನ್ನೇ ಕುಗ್ಗಿಸುತ್ತಾ ಮೈಯೋಸಿಟಿಸ್?


    ವೆಸ್ಟಿಬುಲರ್ ಹೈಪೋಫಂಕ್ಷನ್ ಎಂದರೇನು?


    ಹಾಪ್ಕಿನ್ಸ್ ಮೆಡಿಸಿನ್ ಪ್ರಕಾರ, ವೆಸ್ಟಿಬುಲರ್ ಹೈಪೋಫಂಕ್ಷನ್ ಎನ್ನುವುದು ನಿಮ್ಮ ಸಮತೋಲನ ವ್ಯವಸ್ಥೆಯ ಒಳಗಿನ ಕಿವಿ ಭಾಗವು ಸರಿಯಾಗಿ ಕೆಲಸ ಮಾಡುವುದು ನಿಲ್ಲಿಸಿದಾಗ ಉಂಟಾಗುವ ಅಸ್ವಸ್ಥತೆ ಆಗಿದೆ. ವೆಸ್ಟಿಬುಲರ್ ವ್ಯವಸ್ಥೆ ನಿಮ್ಮ ಒಳಗಿನ ಕಿವಿಯಲ್ಲಿ ಇದೆ. ಅದು ಕಣ್ಣುಗಳು ಮತ್ತು ಸ್ನಾಯುಗಳನ್ನು ಸಮತೋಲನದಲ್ಲಿಡಲು ಒಟ್ಟಿಗೆ ಕೆಲಸ ಮಾಡುತ್ತದೆ.


    ಆದರೆ ಅದು ಸರಿಯಾಗಿ ಕೆಲಸ ಮಾಡದೇ ಇದ್ದಾಗ ವ್ಯಕ್ತಿಯು ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಾನೆ. ಅದು ಮೆದುಳಿಗೆ ತಪ್ಪು ಸಂದೇಶ ಕಳುಹಿಸಲು ಪ್ರಾರಂಭಿಸುತ್ತದೆ.


    ವೆಸ್ಟಿಬುಲರ್ ಹೈಪೋಫಂಕ್ಷನ್‌ ಕಾಯಿಲೆಯ ಲಕ್ಷಣಗಳು


    ಎನ್ ಎಚ್ ಎಸ್ ಪ್ರಕಾರ, ವೆಸ್ಟಿಬುಲರ್ ಹೈಪೋಫಂಕ್ಷನ್‌ ಲಕ್ಷಣಗಳು ಕಾರಣ ಅವಲಂಬಿಸಿದೆ. ಆದರೆ ಹೆಚ್ಚಿನ ಜನರು ತಲೆತಿರುಗುವಿಕೆ, ವಾಕರಿಕೆ ಮತ್ತು ಕಳಪೆ ಸಮತೋಲನ ಅನುಭವಿಸುತ್ತಾರೆ. ಜೊತೆಗೆ ಜನಸಂದಣಿ ಇರುವ ಸ್ಥಳಗಳಲ್ಲಿ ಅಥವಾ ಕತ್ತಲೆ ಕೋಣೆಗಳಲ್ಲಿ ನಡೆಯಲು ತೊಂದರೆ ಉಂಟಾಗುತ್ತದೆ. ವೇಗವಾಗಿ ಚಲಿಸುವ ವಸ್ತುಗಳ ಭಾವನೆ ಅಹಿತಕರ ಆಗುತ್ತದೆ.


    ವೆಸ್ಟಿಬುಲರ್ ಹೈಪೋಫಂಕ್ಷನ್‌ ನಿಂದ ಉಂಟಾಗುವ ತೊಂದರೆಗಳು


    ವೆಸ್ಟಿಬುಲರ್ ಹೈಪೋಫಂಕ್ಷನ್ ಕಾಯಿಲೆ ಉಂಟಾದಾಗ, ನಿರಂತರ ತಲೆತಿರುಗುವಿಕೆ, ವಾಕಿಂಗ್ ಮತ್ತು ಡ್ರೈವಿಂಗ್ ತೊಂದರೆ ಉಂಟಾಗುತ್ತದೆ. ಇದರ ಜೊತೆಗೆ ಬೀಳುವುದು, ಕತ್ತಲೆಯಲ್ಲಿ ಅಥವಾ ಅಸಮ ಮೇಲ್ಮೈಗಳಲ್ಲಿ ನಡೆಯಲು ಕಷ್ಟ ಆಗುತ್ತದೆ. ಅಲ್ಲದೆ ಕಲಿಯಲು ಮತ್ತು ದಾರಿ ಕಾಣಲು ತೊಂದರೆ ಉಂಟಾಗಬಹುದು.


    ವೆಸ್ಟಿಬುಲರ್ ಹೈಪೋಫಂಕ್ಷನ್ ಡಿಸಾರ್ಡರ್ ಏಕೆ ಬರುತ್ತದೆ?


    ವೆಸ್ಟಿಬುಲರ್ ಹೈಪೋಫಂಕ್ಷನ್ ಅಸ್ವಸ್ಥತೆಗೆ ಔಷಧಿಗಳು, ಸೋಂಕುಗಳು ಮತ್ತು ಕಿವಿಗೆ ಕಳಪೆ ರಕ್ತಪರಿಚಲನೆ ಪರಿಣಾಮದಿಂದ ಉಂಟಾಗಬಹುದು. ಹಾಗೂ ಅರೆ-ಸ್ನಾಯು ಕಾಲುವೆಯಲ್ಲಿ ಕ್ಯಾಲ್ಸಿಯಂ ಅವಶೇಷಗಳ ಶೇಖರಣೆ ಮತ್ತು ತಲೆ ಗಾಯದಿಂದ ಈ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.


    ಇದನ್ನೂ ಓದಿ: Heart Attack: ನಿರ್ಲಕ್ಷ್ಯ ಮಾಡಬೇಡಿ, ಇದು ‘ಹೃದಯ’ಗಳಾ ವಿಷಯ! ನಿಮ್ಮ ಹಾರ್ಟ್ ಮೇಲೂ ಇರಲಿ ಪ್ರೀತಿ


    ವೆಸ್ಟಿಬುಲರ್ ಹೈಪೋಫಂಕ್ಷನ್ ಪತ್ತೆ ಮಾಡುವುದು ಹೇಗೆ?  


    ಕಿವಿ, ಮೂಗು ಮತ್ತು ಗಂಟಲು ತಜ್ಞರು ಕೆಲವು ಪರೀಕ್ಷೆಗಳ ಸಹಾಯದಿಂದ ರೋಗ ನಿರ್ಣಯ ಮಾಡಬಹುದು. ಶ್ರವಣ ಪರೀಕ್ಷೆ, ದೃಷ್ಟಿ ಪರೀಕ್ಷೆ, ರಕ್ತ ಪರೀಕ್ಷೆ, ಮೆದುಳಿನ ಇಮೇಜಿಂಗ್ ಪರೀಕ್ಷೆ, ಸಮತೋಲನದ ಕ್ಲಿನಿಕಲ್ ಪರೀಕ್ಷೆ ಇತ್ಯಾದಿ ಮೂಲಕ ವೆಸ್ಟಿಬುಲರ್ ಹೈಪೋಫಂಕ್ಷನ್ ಕಾಯಿಲೆ ಕಂಡು ಹಿಡಿಯಬಹುದು.

    Published by:renukadariyannavar
    First published: