• ಹೋಂ
  • »
  • ನ್ಯೂಸ್
  • »
  • Explained
  • »
  • Narendra Modi-C Voter: ಈಗ ಚುನಾವಣೆ ನಡೆದ್ರೆ ಮೋದಿಯೇ ಪ್ರಧಾನಿ! ಸಿ ವೋಟರ್ ಸಮೀಕ್ಷೆ ಹೇಳಿದ್ದೇನು?

Narendra Modi-C Voter: ಈಗ ಚುನಾವಣೆ ನಡೆದ್ರೆ ಮೋದಿಯೇ ಪ್ರಧಾನಿ! ಸಿ ವೋಟರ್ ಸಮೀಕ್ಷೆ ಹೇಳಿದ್ದೇನು?

ಮತ್ತೊಮ್ಮೆ ಪ್ರಧಾನಿಯಾಗ್ತಾರಂತೆ ಮೋದಿ!

ಮತ್ತೊಮ್ಮೆ ಪ್ರಧಾನಿಯಾಗ್ತಾರಂತೆ ಮೋದಿ!

ಸಿ ವೋಟರ್ ಇದೀಗ ಲೋಕಸಭಾ ಚುನಾವಣೆ ಕುರಿತಂತೆ ಮತ್ತೊಂದು ಸಮೀಕ್ಷೆ ಪ್ರಕಟಿಸಿದೆ. ಇದರ ಪ್ರಕಾರ ಈಗ ಚುನಾವಣೆ ನಡೆದರೆ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗುತ್ತಾರಂತೆ. ಬಿಜೆಪಿ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆಯಂತೆ! ಹಾಗಾದರೆ ಏನಿದು ಸಿ ವೋಟರ್ ಸಮೀಕ್ಷೆ? ಇದು ನೀಡುವ ಸರ್ವೆ ವರದಿಗಳು ಎಷ್ಟು ವಿಶ್ವಾಸಾರ್ಹ? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ…

ಮುಂದೆ ಓದಿ ...
  • Share this:

ಇತ್ತ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ (Karnataka Assembly Elections) ರಂಗೇರುತ್ತಿದೆ. ಇದರ ಬೆನ್ನಲ್ಲೇ ಲೋಕಸಭಾ ಚುನಾವಣೆ (Lok Sabha elections) ತಯಾರಿಯೂ ನಿಧಾನಕ್ಕೆ ನಡೆದಿದೆ. 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಚುನಾವಣಾ ಸಮೀಕ್ಷೆ (election polls) ನಡೆಸುವ ಸಂಸ್ಥೆಗಳು ಈಗಾಗಲೇ ತಮ್ಮ ರಿಪೋರ್ಟ್ ಕಾರ್ಡ್ ಕೊಟ್ಟಿವೆ. ಹೀಗೆ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆ ನಡೆಸುವ ಸಂಸ್ಥೆಗಳಲ್ಲಿ ಪ್ರಖ್ಯಾತಿ ಪಡೆದಿರುವುದು ಸಿ ವೋಟರ್ (C Voter). ಈಗಾಗಲೇ ಹಲವು ನಿಖರ ಸರ್ವೆ ವರದಿ ನೀಡಿದ್ದ ಸಿ ವೋಟರ್ ಇದೀಗ ಲೋಕಸಭಾ ಚುನಾವಣೆ ಕುರಿತಂತೆ ಮತ್ತೊಂದು ಸಮೀಕ್ಷೆ ಪ್ರಕಟಿಸಿದೆ. ಇದರ ಪ್ರಕಾರ ಈಗ ಚುನಾವಣೆ ನಡೆದರೆ ನರೇಂದ್ರ ಮೋದಿಯವರೇ (Narendra Modi) ಮತ್ತೊಮ್ಮೆ ಪ್ರಧಾನ ಮಂತ್ರಿ (Prime Minister) ಆಗುತ್ತಾರಂತೆ. ಬಿಜೆಪಿ (BJP) ಬಹುಮತ ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆಯಂತೆ! ಹಾಗಾದರೆ ಏನಿದು ಸಿ ವೋಟರ್ ಸಮೀಕ್ಷೆ? ಇದು ನೀಡುವ ಸರ್ವೆ ವರದಿಗಳು ಎಷ್ಟು ವಿಶ್ವಾಸಾರ್ಹ? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ…


ಈಗ ಚುನಾವಣೆ ನಡೆದರೆ ಮೋದಿಯೇ ಪ್ರಧಾನಿ


ದೇಶದ ಚುನಾವಣೆಯ ಸಮೀಕ್ಷೆ ನಡೆಸುವಲ್ಲಿ ಮುಂಚೂಣಿಯಲ್ಲಿರುವ ಸಿ ವೋಟರ್ ಸಂಸ್ಥೆ ಇದೀಗ ಮತ್ತೊಮ್ಮೆ ಲೋಕಸಭಾ ಚುನಾವಣೆ ಬಗ್ಗೆ ಸಮೀಕ್ಷೆ ನಡೆಸಿ, ತನ್ನ ವರದಿ ಪ್ರಕಟಿಸಿದೆ. ಮುಂದಿನ ವರ್ಷ ಅಂದರೆ 2024ರಲ್ಲಿ ಲೋಕಸಭೆ ಚುನಾವಣೆ ನಡೆದರೆ ಮುಂದಿನ ಪ್ರಧಾನಿ ಯಾರು ಎಂದು ತಿಳಿಯಲು ಇಂಡಿಯಾ ಟು ಡೇ-ಸಿ-ವೋಟರ್ ಸಮೀಕ್ಷೆ ನಡೆಸಿತ್ತು. ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷ ಮುಂಚಿತವಾಗಿ ಸಾರ್ವಜನಿಕರ ಮನಸ್ಥಿತಿಯನ್ನು ಈ ಸಮೀಕ್ಷೆಅಳೆದಿದೆ. ಇದರ ಪ್ರಕಾರ ಈಗ ಚುನಾವಣೆ ನಡೆದರೆ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರಂತೆ!


ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ


ಈಗಲೇ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 284 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಇನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ 191 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ.


ಇದನ್ನೂ ಓದಿ: Padma Awards: ಪದ್ಮ ಪ್ರಶಸ್ತಿಗಳು ಏಕೆ ಶ್ರೇಷ್ಠ? ಈ ಅವಾರ್ಡ್‌ಗೆ ಸಾಧಕರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?


ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮೆಚ್ಚುಗೆ


ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಅಚ್ಚಳಿಯದೆ ಉಳಿದಿದೆ. ಶೇ.72 ರಷ್ಟು ಜನರು ಪ್ರಧಾನಿ ಕಾರ್ಯವೈಖರಿ ಬಗ್ಗೆ ತೃಪ್ತರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. 67% ಜನರು ಎನ್‌ಡಿಎ ಸರ್ಕಾರದ ಸಾಧನೆಯಿಂದ ತೃಪ್ತ
ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಹೇಳಿದೆ.


ಎನ್‌ಡಿಎ ಜನಪ್ರಿಯತೆಗೆ ಕಾರಣಗಳೇನು?


ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಪ್ರಕಾರ, ಕಳೆದ ಮೂರು ವರ್ಷಗಳಿಂದ ಹಣದುಬ್ಬರ, ಕೋವಿಡ್ -19 ಸಾಂಕ್ರಾಮಿಕ ಮತ್ತು ಚೀನಾದ ಬಾಹ್ಯ ಬೆದರಿಕೆಗಳ ಹೊರತಾಗಿಯೂ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಆಡಳಿತ ವಿರೋಧಿ ಅಲೆಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ಒಂಬತ್ತು ವರ್ಷಗಳ ಅಧಿಕಾರದ ನಂತರ, ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 67 ರಷ್ಟು ಜನರು ಜನವರಿ 2023 ರಲ್ಲಿ ಕಾರ್ಯಕ್ಷಮತೆ ತೃಪ್ತಿಕರವಾಗಿದೆ ಎಂದು ಹೇಳಿದ್ದಾರೆ. ಆಗಸ್ಟ್ 2022 ರಿಂದ ಈ ಸಂಖ್ಯೆಗಳು ಶೇಕಡಾ 11 ರಷ್ಟು ಹೆಚ್ಚಾಗಿದೆ. ಸಿ ವೋಟರ್ ಸಹಯೋಗದೊಂದಿಗೆ ಇಂಡಿಯಾ ಟುಡೇ ಈ ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆಗೆ ಒಟ್ಟು 1,40,917 ಮಂದಿಯನ್ನು ಸಂದರ್ಶಿಸಲಾಗಿದೆ ಅಂತ ಸಮೀಕ್ಷೆ ಹೇಳಿದೆ.




ಏನಿದು ಸಿ ವೋಟರ್ ಸಂಸ್ಥೆ?


ಸೆಂಟರ್ ಫಾರ್ ವೋಟಿಂಗ್ ಒಪಿನಿಯನ್ ಮತ್ತು ಟ್ರೆಂಡ್ಸ್ ಇನ್ ಎಲೆಕ್ಷನ್ ರಿಸರ್ಚ್, ಅಥವಾ C Voter, ಭಾರತದ ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಅಂತರಾಷ್ಟ್ರೀಯ ಮತದಾನ ಸಂಸ್ಥೆಯಾಗಿದೆ. ಯಶವಂತ್ ದೇಶಮುಖ್ ಅವರು CVoter ನ ನಿರ್ದೇಶಕರು ಮತ್ತು ಸಂಸ್ಥಾಪಕ ಸಂಪಾದಕರು.


ಇದನ್ನೂ ಓದಿ: Budget Halwa: ಬಜೆಟ್‌ಗೂ ಮುನ್ನ ಹಲ್ವಾ ತಯಾರಿಸುವುದೇಕೆ? ಸಿಹಿ ತಿಂದ ಸಿಬ್ಬಂದಿಗೆ ನಿರ್ಬಂಧ ವಿಧಿಸುವುದೇಕೆ?


ಹಲವು ವಾಹಿನಿಗಳೊಂದಿಗೆ ಸಮೀಕ್ಷೆ


C Voter India ಇದು 15 ಯೂನಿಯನ್ ಬಜೆಟ್‌ಗಳು, 100 ಕ್ಕೂ ಹೆಚ್ಚು ರಾಜ್ಯ ಚುನಾವಣೆಗಳು ಮತ್ತು 30 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಒಳಗೊಂಡಿದೆ ಎಂದು ಹೇಳುತ್ತದೆ. 2000 ರಿಂದ ಇದು ಟೈಮ್ಸ್ ನೌ, ANN7, ಯುನೈಟೆಡ್ ಪ್ರೆಸ್ ಇಂಟರ್‌ನ್ಯಾಷನಲ್, ರಾಯಿಟರ್ಸ್, ಬ್ಲೂಮ್‌ಬರ್ಗ್ ನ್ಯೂಸ್, ಬಿಬಿಸಿ ನ್ಯೂಸ್, ಆಜ್‌ ತಕ್, ಎಬಿಪಿ ನ್ಯೂಸ್, ಜೀ ನ್ಯೂಸ್, ಭಾರತೀಯ ಅಭಿವೃದ್ಧಿ ಮತ್ತು ಶೈಕ್ಷಣಿಕ ಸಂವಹನ ಘಟಕದೊಂದಿಗೆ ಕೆಲಸ ಮಾಡಿದೆ.

Published by:Annappa Achari
First published: