• Home
  • »
  • News
  • »
  • explained
  • »
  • Potholes on Bengaluru Roads: ಗುಂಡಿಗೆ ಗಟ್ಟಿ ಮಾಡಿಕೊಂಡು ವಾಹನ ಓಡಿಸಿ, ಯಾಕೆಂದರೆ ರಸ್ತೆ ಮೇಲೆ ಯಮಗುಂಡಿಗಳಿವೆ!

Potholes on Bengaluru Roads: ಗುಂಡಿಗೆ ಗಟ್ಟಿ ಮಾಡಿಕೊಂಡು ವಾಹನ ಓಡಿಸಿ, ಯಾಕೆಂದರೆ ರಸ್ತೆ ಮೇಲೆ ಯಮಗುಂಡಿಗಳಿವೆ!

ಬೆಂಗಳೂರಿನ ರಸ್ತೆಗುಂಡಿಗಳಿಂದ ಅಪಘಾತ

ಬೆಂಗಳೂರಿನ ರಸ್ತೆಗುಂಡಿಗಳಿಂದ ಅಪಘಾತ

ವಾಹನ ಸವಾರನ ಗುಂಡಿಗೆ ಎಷ್ಟೇ ಗಟ್ಟಿಯಾಗಿದ್ದರೂ ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿ ಹಾದು, ಏನೂ ಅಪಾಯವಾಗದೇ ಮನೆ ಅಥವಾ ಕಚೇರಿಗೆ ತಲುಪುವುದು ಸಾಹಸವೇ ಸರಿ. ಬೆಂಗಳೂರಿನ ಶೇ. 17 ರಷ್ಟು ಅಪಘಾತಗಳಿಗೆ ರಸ್ತೆಗುಂಡಿಗಳೇ ಕಾರಣ ಅಂತ ವರದಿಯೊಂದು ಹೇಳುತ್ತಿದೆ!

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರಲ್ಲಿ ರಸ್ತೆಗುಂಡಿಗಳು (Bengaluru road Potholes) ಮತ್ತೆ ಸದ್ದು ಮಾಡ್ತಿದೆ. ಎಲ್ಲೆಂದರಲ್ಲಿ ಗುಂಡಿಗಳು ಕಾಣಿಸಿಕೊಳ್ಳುತ್ತಿದ್ದು, ವಾಹನ ಸವಾರರು (Riders) ಜೀವ ಪಣಕ್ಕಿಟ್ಟು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಅದ್ರಲ್ಲೂ ಕಳೆದ ಕೆಲವು ವರ್ಷಗಳ ಅಪಘಾತಗಳ (Accidents) ಪಟ್ಟಿ ನೋಡಿದರೆ ಎದೆ ನಡುಗಿಸುತ್ತೆ. ವಾಹನ ಸವಾರನ ಗುಂಡಿಗೆ ಎಷ್ಟೇ ಗಟ್ಟಿಯಾಗಿದ್ದರೂ ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿಗಳನ್ನು ಹಾದು, ಏನೂ ಅಪಾಯವಾಗದೇ ಮನೆ ಅಥವಾ ಕಚೇರಿಗೆ ತಲುಪುವುದು ಸಾಹಸವೇ ಸರಿ. ಮೊನ್ನೆ ರಾಜಾಜಿನಗರ (Rajajinagar) ಸುಜಾತ ಥಿಯೇಟರ್ ಬಳಿ ದ್ವಿಚಕ್ರವಾಹನದಲ್ಲಿ (Bike) ಸಾಗುತ್ತಿದ್ದ ತಾಯಿ, ಮಗಳು ರಸ್ತೆ ಗುಂಡಿ ತಪ್ಪಿಸಲು ಯತ್ನಿಸಿದ್ದಾಗ ಸಾರಿಗೆ ಬಸ್‌ ಯಮನಂತೆ ಮೇಲೆ ಹರಿದಿತ್ತು. ತ್ರೀವ ರಕ್ತ ಸ್ರಾವ ಹಿನ್ನಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ರು ತಾಯಿ ಬದುಕಲಿಲ್ಲ. ಇದು ಬರೀ ತಾಯಿ ಮಗಳಿಬ್ಬರ ಕಥೆಯಲ್ಲ. ಇಂತಹ ಎಷ್ಟೋ ಜೀವಗಳು ರಸ್ತೆಗುಂಡಿಯಲ್ಲಿ ಬಿದ್ದು, ನಡು ರಸ್ತೆಯಲ್ಲಿಯೇ ಕೊನೆಯುಸಿರೆಳೆದಿವೆ.


ಬೆಂಗಳೂರಿನ ಶೇ. 17 ರಷ್ಟು ಅಪಘಾತಗಳಿಗೆ ರಸ್ತೆಗುಂಡಿಗಳೇ ಕಾರಣ!


ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆ ಒಂದೆಡೆಯಾದ್ರೆ, ಮತ್ತೊಂದೆಡೆ ರಸ್ತೆ ಗುಂಡಿಗಳಿಂದಲೇ ಜನರಿಗೆ ಹೆಚ್ಚು ಗಂಡಾಂತರ. ಇದೇ ವರ್ಷ ಆರೇಳು ಜೀವಗಳು ರಸ್ತೆಗುಂಡಿಗಳಿಗೆ ಬಲಿಯಾಗಿದೆ. ಅಲ್ಲದೆ ಕಳೆದ ನಾಲ್ಕೈದು ವರ್ಷಗಳಲ್ಲಿ ಶೇ. 17ರಷ್ಟು ಅಪಘಾತಗಳು ರಸ್ತೆ ಗುಂಡಿಗಳಿಂದಲೇ ಆಗಿವೆ ಅಂತ ಸ್ಫೋಟಕ ವರದಿಯೊಂದು ಹೇಳುತ್ತಿದೆ.


ಅಪಘಾತಕ್ಕೆ ಒಳಗಾದ ತಾಯಿ-ಮಗಳು


ರಸ್ತೆ ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡವರು


2021ರಲ್ಲಿ 621 ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 656 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ರಸ್ತೆ ಗುಂಡಿಯಿಂದ್ಲೇ 10 ಮಂದಿ ಸಾವನಪ್ಪಿದ್ದಾರೆ. 2021ರ ಅಕ್ಟೋಬರ್ 8ರಂದು ಚಿಕ್ಕಗೊಲ್ಲರಹಟ್ಟಿಯಲ್ಲಿ 17 ವರ್ಷದ ನುಬಿಯಾ ದುರ್ಮ್ಮರಣ ಹೊಂದಿದ್ದರು. 2021, ಸೆ 17ರಂದು 47 ವರ್ಷದ ವ್ಯಕ್ತಿ ಆನಂದಪ್ಪ ಎಂಬುವರು ಹೆಸರಘಟ್ಟ ಮೇನ್​ ರೋಡ್​ನಲ್ಲಿ ಬಲಿಯಾಗಿದ್ದರು.


ರಸ್ತೆಗಳಲ್ಲಿ ಇದು ಕಾಮನ್ ಆಗಿಬಿಟ್ಟಿದೆ!


ಇದನ್ನೂ ಓದಿ: Explained: ಬೆಂಗಳೂರಿನಲ್ಲಿ ಬದುಕು ಜಟಕಾ 'ಗುಂಡಿ’! ರಾಜಧಾನಿ ರಸ್ತೆಯಲ್ಲಿರೋದು 10,282 ಹೊಂಡ!


ಏರುತ್ತಿದೆ ಸಾವಿನ ಸಂಖ್ಯೆ


2022, ಜ 30ರಂದು ಬ್ಯಾಡರಹಳ್ಳಿಯಲ್ಲಿ ಅಪಘಾತ ನಡೆಗು, ಶಿಕ್ಷಕಿ ಶರ್ಮಿಳಾ ಸಾವನ್ನಪ್ಪಿದ್ದರು. ಗುಂಡಿಯಿಂದ ಬಿದ್ದಾಗ ಅವರ ಮೇಲೆ ವಾಹನ ಮೇಲೆ ಹರಿದು ಸಾವನ್ನಪ್ಪಿದ್ದರು. 2022, ಮಾ 14ರಂದು ಎಂಎಸ್​ ಪಾಳ್ಯದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು 27 ವರ್ಷದ ಅಶ್ಚಿನ್ ಎಂಬಾತ ಸಾವನ್ನಪ್ಪಿದ್ದ, 2022, ಆ 12ರಂದು ಕೆಆರ್ ಪುರಂನಲ್ಲಿ ಅಪಘಾತ ನಡೆದು, ಅಪ್ಪನ ಬೈಕ್‌ನಲ್ಲಿ ಕೂತಿದ್ದ 10 ವರ್ಷದ ಬಾಲಕ ಜೀವನ್ ಸಾವನ್ನಪ್ಪಿದ್ದ. 2022ರ ಆ 22ರಂದು ಹೇರೋಹಳ್ಳಿಯಲ್ಲಿ ಅಪಘಾತ ನಡೆದು ಸುಪ್ರೀತ್ ಎಂಬಾತ ಸಾವನ್ನಪ್ಪಿದ್ದ. 2021, ನವೆಂಬರ್ 27ರಂದು 21 ವರ್ಷದ ಅಜೀಮ್ ಅಹಮದ್ ಬಲಿ ಹೆಲ್ಮೆಟ್ ಧರಿಸಿದ್ರೂ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದ.


ನಂಬಿ ಇದು ಬೆಂಗಳೂರಿನ ರಸ್ತೆಗಳು!


ಕಳೆದ 5 ವರ್ಷಗಳಲ್ಲಿ ಆದ ಅಪಘಾತಗಳೆಷ್ಟು?


ಇನ್ನ ಕಳೆದ ಐದು ವರ್ಷಗಳಲ್ಲಿ ಬೆಂಗಳೂರಲ್ಲಾದ ಅಪಘಾತಗಳು ಪಾಲು ಜಾಸ್ತಿಯೇ ಇದೆ.  2018 ರಲ್ಲಿ ಒಟ್ಟು 810 ಅಪಘಾತಗಲು ಸಂಭವಿಸಿದ್ದು, ಅದರಲ್ಲಿ 832 ಮಂದಿ ಸಾವನ್ನಪ್ಪಿದ್ದಾರೆ. 2019 ರಲ್ಲಿ 632 ಅಪಘಾತಗಳಾಗಿದ್ದು 657 ಜನ ಬಲಿಯಾಗಿದ್ದಾರೆ. 2020ರಲ್ಲಿ 618 ಅಪಘಾತ ಪ್ರಕರಣ ದಾಖಲಾಗಿದ್ದು, 651 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2021ರಲ್ಲಿ 621 ಅಪಘಾತ ಪ್ರಕರಣಗಳು ದಾಖಲಾಗಿದ್ದು 656 ಜೀವಹಾನಿಯಾಗಿದೆ.


ರಸ್ತೆ ಮಧ್ಯದಲ್ಲಿ ಗುಂಡಿಗಳ ದರ್ಶನ!


ರಾಜಧಾನಿಯಲ್ಲಿ 10,282 ರಸ್ತೆ ಗುಂಡಿಗಳು ಇವೆ!


ಬಿಬಿಎಂಪಿಯೇ ನೀಡಿರುವ ಮಾಹಿತಿ ಪ್ರಕಾರ ರಾಜಧಾನಿ ಬೆಂಗಳೂರು ನಗರದಾದ್ಯಂತ ಬರೋಬ್ಬರಿ 10,282 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ. 202 ರಸ್ತೆ ಗುಂಡುಗಳು ಗಂಭೀರ ಸ್ವರೂಪದ ಗುಂಡಿಗಳು ಎಂದು ಗುರುತಿಸಲಾಗಿದೆ. ಇನ್ನು ಈಸ್ಟ್ ವಲಯದಲ್ಲಿ 2295 ರಸ್ತೆ ಗುಂಡಿಗಳಿವೆ.


ಇದನ್ನೂ ಓದಿ: Bengaluru Lakes: ಕಾಣದಂತೆ ಮಾಯವಾಯ್ತಣ್ಣ ಬೆಂಗಳೂರು ಕೆರೆಗಳು! ಜೀವಸೆಲೆಯ ನೆಲೆ ಮೇಲೆ ತಲೆ ಎತ್ತಿದ ಲೇಔಟ್‌ಗಳು!


ಎಲ್ಲೆಲ್ಲಿ ಎಷ್ಟೆಷ್ಟು ರಸ್ತೆ ಗುಂಡಿಗಳಿವೆ?


ಬೊಮ್ಮನಹಳ್ಳಿ ವಲಯದಲ್ಲಿ 1,076 ರಸ್ತೆ ಗುಂಡಿಗಳು, ದಾಸರಹಳ್ಳಿ ವಲಯದಲ್ಲಿ 867 ರಸ್ತೆ ಗುಂಡಿಗಳು, ಪೂರ್ವ ವಲಯದಲ್ಲಿ 2,066 ರಸ್ತೆ ಗುಂಡಿಗಳು, ಮಹದೇವಪುರ ವಲಯದಲ್ಲಿ 729 ರಸ್ತೆ ಗುಂಡಿಗಳು, ಆರ್.ಆರ್.ನಗರ ವಲಯದಲ್ಲಿ 1,068 ರಸ್ತೆ ಗುಂಡಿಗಳು, ದಕ್ಷಿಣ ವಲಯದಲ್ಲಿ 1,414 ರಸ್ತೆ ಗುಂಡಿಗಳು, ಪಶ್ಚಿಮ ವಲಯದಲ್ಲಿ 1,232 ರಸ್ತೆ ಗುಂಡಿಗಳು ಹಾಗೂ ಯಲಹಂಕ ವಲಯದಲ್ಲಿ 755 ರಸ್ತೆ ಗುಂಡಿಗಳು ಸೇರಿದಂತೆ ಒಟ್ಟು 10,282 ರಸ್ತೆ ಗುಂಡಿಗಳಿವೆಯಂತೆ.


(ಮಾಹಿತಿ: ನ್ಯೂಸ್ ಡೆಸ್ಕ್, ನ್ಯೂಸ್ 18 ಕನ್ನಡ)

Published by:Annappa Achari
First published: