• ಹೋಂ
  • »
  • ನ್ಯೂಸ್
  • »
  • Explained
  • »
  • Real Ghost Story: ಶ್, ಎದೆ ಗಟ್ಟಿ ಮಾಡ್ಕೊಂಡು ಇದನ್ನು ಓದಿ! ಇದು ದೆವ್ವ ಕಣ್ಣಾರೆ ಕಂಡವಳ ಅನುಭವ ಕಥನ!

Real Ghost Story: ಶ್, ಎದೆ ಗಟ್ಟಿ ಮಾಡ್ಕೊಂಡು ಇದನ್ನು ಓದಿ! ಇದು ದೆವ್ವ ಕಣ್ಣಾರೆ ಕಂಡವಳ ಅನುಭವ ಕಥನ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

official humans of Bombay ಎಂಬ ಇನ್ಸ್‌ಸ್ಟಾಗ್ರಾಂ ಪೇಜ್‌ನಲ್ಲಿ ತಮ್ಮ ಅನುಭವ ಕಥವನ್ನು ಹೇಳಿಕೊಂಡಿದ್ದಾರೆ. ಅವರ ಪುಟ್ಟ ಮಗು ಕಾಣದ ಆಕೃತಿಯೊಂದಿಗೆ ಮಾತನಾಡುತ್ತಿತ್ತಂತೆ. ಕಾಣದ ವ್ಯಕ್ತಿಯನ್ನು 'ಅಂಕಲ್' ಅಂತಾ ಕರೆಯುತ್ತಾ ಇದ್ದಳಂತೆ! ಹಾಗಾದ್ರೆ ಯಾರು ಆ ಅಂಕಲ್? ಅದು ದೆವ್ವವೋ, ಮಗುವಿನ ಕಲ್ಪನೆಯೋ? ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿವೆ…

ಮುಂದೆ ಓದಿ ...
  • Share this:

ದೆವ್ವಗಳು (Devil), ಭೂತಗಳು (Ghost), ದುಷ್ಟ ಶಕ್ತಿಗಳು ಇವೆಯಾ? ಇದು ಹಿಂದಿನಿಂದಲೂ ಉತ್ತರವೇ ಇಲ್ಲದೇ ನಮ್ಮೆಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರ ಕೇಳುವ, ತಿಳಿದುಕೊಳ್ಳುವ ಕುತೂಹಲ ನಮ್ಮ ನಿಮ್ಮೆಲ್ಲರಲ್ಲೂ ಇದ್ದೇ ಇದೆ. ಆದರೆ ಉತ್ತರ ಮಾತ್ರ ಸ್ಪಷ್ಟವಾಗಿ ತಿಳಿದಿಲ್ಲ. ದೆವ್ವ, ಭೂತ, ಅಥವಾ ದುಷ್ಟಶಕ್ತಿಗಳು ಇವೆ ಅಂತ ಕೆಲವರು ಹೇಳುತ್ತಾರೆ. ನಾವೇ ನೋಡಿದ್ದೇವೆ, ನಮ್ಮ ಅನುಭವಕ್ಕೆ (Experience) ಬಂದಿದೆ ಅಂತ ಕೆಲವರು ಮಾತನಾಡುತ್ತಾರೆ. ಇನ್ನು ಕೆಲವರು ಅದನ್ನು ನೆಗೆಟಿವ್ ಎನರ್ಜಿ (Negative Energy) ಅಂತಾನೂ ವಿಶ್ಲೇಷಿಸುತ್ತಾರೆ. ಇನ್ನು ಇವೆಲ್ಲ ಬರೀ ಸುಳ್ಳು, ನಮ್ಮ ನಮ್ಮ ಮನಸ್ಸಿನ ಭಾವನೆ ಅಷ್ಟೇ ಅಂತಾ ವೈಜ್ಞಾನಿಕ ಮನೋಭಾವದವರು ಹೇಳ್ತಾರೆ. ಆದರೆ ದೆವ್ವ ಭೂತಗಳು ಇವೆಯಾ, ಇಲ್ಲವಾ ಅಂತ ನಿಖರವಾಗಿ ಯಾರೂ ಹೇಳುತ್ತಿಲ್ಲ. ಇದರ ನಡುವೆಯೇ ಮಹಿಳೆಯೊಬ್ಬರು official humans of Bombay ಎಂಬ ಇನ್ಸ್‌ಸ್ಟಾ ಗ್ರಾಂ ಪೇಜ್‌ನಲ್ಲಿ (Instagram Page) ತಮ್ಮ ಅನುಭವ ಕಥನವನ್ನು ಹೇಳಿಕೊಂಡಿದ್ದಾರೆ. ಅವರ ಪುಟ್ಟ ಮಗು ಕಾಣದ ಆಕೃತಿಯೊಂದಿಗೆ ಮಾತನಾಡುತ್ತಿತ್ತಂತೆ. ಕಾಣದ ವ್ಯಕ್ತಿಯನ್ನು ‘ಅಂಕಲ್’ ಅಂತಾ ಕರೆಯುತ್ತಾ ಇದ್ದಳಂತೆ! ಹಾಗಾದ್ರೆ ಯಾರು ಆ ಅಂಕಲ್? ಅದು ದೆವ್ವವೋ, ಮಗುವಿನ ಕಲ್ಪನೆಯೋ? ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿವೆ…   


ಅಂದ ಹಾಗೆ ಇದು ನಾವು ಹೇಳುತ್ತಿರುವ ಕಟ್ಟು ಕಥೆಯಲ್ಲ, official humans of Bombay ಎಂಬ ಇನ್ಸ್‌ಸ್ಟಾ ಗ್ರಾಂ ಪೇಜ್‌ನಲ್ಲಿ (Instagram Page) ತಮ್ಮ ಅನುಭವ ಕಥನವನ್ನು ಮಹಿಳೆಯೊಬ್ಬರು ಹೇಳಿ ಕೊಂಡಿದ್ದಾರೆ. ಅದನ್ನು ಅವರ ಬಾಯಲ್ಲೇ ಕೇಳಿ…


ಹೊಸ ಅಪಾರ್ಟ್‌ಮೆಂಟ್‌ಗೆ ಬಂದಾಗ ವಿಚಿತ್ರ ಅನುಭವ!


ಮೊದಲು ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ನಾವು ಆ ಹೊಸ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆದಾಗ ಹೊಸ ಹೊಸ ಅನುಭವಗಳು ಶುರುವಾಯ್ತು. ಆದರೆ ನಂತರದ 2-3 ದಿನಗಳಲ್ಲಿ ನನ್ನ 2 ವರ್ಷದ ಪುಟ್ಟ ಮಗಳು ವಿಚಿತ್ರ ರೀತಿಯಲ್ಲಿ ವರ್ತಿಸೋದಕ್ಕೆ ಶುರು ಮಾಡಿದಳು. ಎಲ್ಲೆಂದರಲ್ಲಿ ಓಡಾಡಿ ದಾಂಧಲೆ ಎಬ್ಬಿಸುವ ಅವಳು, ಆ ಒಂದು ಕೋಣೆಯೊಳಕ್ಕೆ ಹೋಗಲು ಮಾತ್ರ ಹೆದರುತ್ತಾ ಇದ್ದಳು!


ಕಿಟಕಿ ಪಕ್ಕ ಒಬ್ಬ ‘ಅಂಕಲ್’ ಕುಳಿತಿದ್ದಾರೆ!


ನನಗೂ ಇದು ವಿಚಿತ್ರವಾಗಿ ತೋರಿತು. ಯಾಕಮ್ಮ ಅಲ್ಲಿಗೆ ಹೋಗ್ತಾ ಇಲ್ಲ ನೀನು ಅಂತ ಆಕೆಯನ್ನು ಪ್ರಶ್ನಿಸಿದೆ. ಅಲ್ಲೊಬ್ಬರು ಅಂಕಲ್ ಇದ್ದಾರೆ. ಅಲ್ಲಿ ಕಿಟಕಿ ಪಕ್ಕ ಕೂತಿದ್ದಾರೆ ಅಂತ ನನಗೆ ಹೇಳುತ್ತಿದ್ದಳು. ನಾನು ಇವೆಲ್ಲ ಏನೋ ತಮಾಷೆ ಅಥವಾ ಏನನ್ನೋ ನೋಡಿಕೊಂಡು ಹೇಳುತ್ತಿದ್ದಾಳೆ ಎಂದುಕೊಂಡು ಸುಮ್ಮನಾದೆ. ಆದರೆ ಆಕೆ ಒಂದೇ ಸಮನೆ ರಾತ್ರಿಯೆಲ್ಲ ಅಳೋದಕ್ಕೆ ಶುರು ಮಾಡಿದಳು. ಒಂದೆರಡು ದಿನದಲ್ಲೇ ಆಕೆ ಆರೋಗ್ಯ ಕೂಡ ಹಾಳಾಯ್ತು.


ಇದನ್ನೂ ಓದಿ: Brain Mapping Test: ಬೆಂಗಳೂರಿಗೆ ಬಂತು ಬ್ರೇನ್ ಮ್ಯಾಪಿಂಗ್ ಟೆಸ್ಟ್! ಅಪರಾಧಿಗಳಿಗೆ ಸಿಂಹಸ್ವಪ್ನವೇ ಈ ಹೊಸ ತಂತ್ರಜ್ಞಾನ?


ಮನೆಯಲ್ಲಿ ಚಿತ್ರ ವಿಚಿತ್ರ ಅನುಭವ!


ವಿಚಿತ್ರ ಅಂದ್ರೆ ನನಗೂ ಇಂಥದ್ದೇ ಅನುಭವ ಆಯ್ತು. ನಾನು ಸುಮ್ಮನೆ ಕೆಲಸ ಮಾಡುತ್ತಿದ್ದಾಗ ಪಕ್ಕದಲ್ಲೇ ಯಾರೋ ನಿಂತಂತೆ, ಯಾರೋ ನನ್ನ ನೋಡಿದಂತೆ ಅನಿಸುತ್ತಾ ಇತ್ತು. ಒಮ್ಮೆಯಂತೂ ಕಬೋರ್ಡ್‌ನಲ್ಲಿ ಇಟ್ಟಿದ್ದ ಉಪ್ಪಿನಕಾಯಿ ಬಾಟಲಿ ಡಮಾರ್ ಅಂತ ನೆಲಕ್ಕೆ ಬಿದ್ದು ಒಡೆದೇ ಹೋಯ್ತು. ಬಹುಶಃ ನಾನೇ ಇದನ್ನು ಸರಿಯಾಗಿ ಇಟ್ಟಿಲ್ಲ ಅಂತ ನನ್ನಷ್ಟಕ್ಕೆ ನಾನೇ ಸಮಾಧಾನ ಮಾಡಿಕೊಂಡೆ.


ಗೂಬೆಗಳು ಮನೆಯೊಳಗೇ ಬಂದವು!


ಇದಾದ ಕೆಲವೇ ದಿನಕ್ಕೆ ಗೂಬೆಗಳು ಮನೆಯೊಳಕ್ಕೆ ಬರೋದಕ್ಕೆ ಶುರು ಮಾಡಿದವು. ರಾತ್ರಿಯೆಲ್ಲಾ ಮನೆಯ ಕಿಟಕಿ ಬಳಿ ಕುಳಿತು ವಿಚಿತ್ರವಾಗಿ ಕೂಗುತ್ತಿದ್ದವು. ಒಮ್ಮೆಯಂತೂ ನಾನು ನನ್ನ ಮಗಳೊಂದಿಗೆ ಮಲಗಿದ್ದಾಗ ನನ್ನ ಕಾಲ ಬಳಿ ಯಾರೋ ಕುಳಿತಂತೆ ಕಾಣುತ್ತಿತ್ತು. ನಾನು ನನ್ನ ಗಂಡ ಇರಬಹುದು ಅಂತ ನಿದ್ದೆಗಣ್ಣಲ್ಲಿ ಸುಮ್ಮನಾಗಿದ್ದೆ. ಆದರೆ ಐದು ನಿಮಿಷದ ನಂತರ ನನ್ನ ಪತಿ ಅಲ್ಲಿಗೆ ಬಂದರು. ಹಾಗಾದರೆ ಮೊದಲೇ ನನ್ನ ಕಾಲ ಬಳಿ ಕುಳಿತಿದ್ದವರು ಯಾರು?
ಅಳುತ್ತಾ ಎದ್ದು ಕುಳಿತ ಮಗಳು ಹೇಳಿದ್ದೇನು?


ಆದರೆ ನನ್ನ ಮಗಳು ಎದ್ದು ಕುಳಿತು, ಕಿಟಾರನೆ ಕಿರಿಚುತ್ತಾ ಅಳ ತೊಡಗಿದಳು, ಅಮ್ಮಾ ಅಂಕಲ್‌ಗೆ ಇಲ್ಲಿಂದ ಹೋಗೋಕೆ ಹೇಳು ಅಂತ ಬಿಕ್ಕಳಿಸಿದಳು. ಅಂದು ನಾವೆಲ್ಲರೂ ಭಯದಲ್ಲೇ ರಾತ್ರಿಯನ್ನು ಕಳೆದೆವು.
ಮನೆ ಬಿಟ್ಟಮೇಲೆ ಸಮಸ್ಯೆಗೆ ಪರಿಹಾರ


ಹೀಗೆ ಘಟನೆಯ ಮೇಲೆ ಘಟನೆಗಳು ನಡೆದಾಗ ನಾವು ಹಿರಿಯರಿಗೆ, ಅಕ್ಕಪಕ್ಕದವರಿಗೆ ವಿಚಾರ ತಿಳಿಸಿದೆವು. ಅವರು ಆ ಮನೆ ಸರಿ ಇಲ್ಲ ಬಿಟ್ಟು ಬಿಡಿ ಅಂದರು. ಅಕ್ಕಪಕ್ಕದವರೂ ತಮಗಾದ ಅನುಭವ ಹೇಳಿಕೊಂಡರು. ಒಂದೇ ಒಂದು ಕ್ಷಣ ಯೋಚಿಸದೇ ನಾವು ಆ ಮನೆಯನ್ನು ಬಿಟ್ಟು ಬಂದ್ವಿ. ಬರುವಾಗ ಕೊನೆಯ ಬಾರಿ ತಿರುಗಿ ಆ ಕೋಣೆ ನೋಡಿದ ನನ್ನ ಮಗಳು ಮತ್ತೆ ಅಂಕಲ್ ನೀವ್ ನನ್ ಜೊತೆ ಬರಬೇಡಿ ಅಂತ ಹೇಳಿದ್ದು ಕೇಳಿ ಎಲ್ಲರೂ ಬೆಚ್ಚಿ ಬಿದ್ದಿದ್ದರು. ಬಳಿಕ ಆ ಮನೆ ಬದಲಾಯಿಸಿದಾಗ ಇಂತಹ ಅನುಭವ ಆಗಲಿಲ್ಲ. ಆದರೂ ಅಂದಿನ ಘಟನೆಗಳನ್ನು ನೆನೆಸಿಕೊಂಡರೆ ಈಗಲೂ ಮೈ ನಡುಗುತ್ತದೆ.

Published by:Annappa Achari
First published: