• ಹೋಂ
 • »
 • ನ್ಯೂಸ್
 • »
 • Explained
 • »
 • Vision Syndrome: ಗಂಟೆಗಟ್ಟಲೆ ಮೊಬೈಲ್ ನೋಡಿ ಕಣ್ಣು ಕಳೆದುಕೊಂಡ ಮಹಿಳೆ! ಏನಿದು ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್?

Vision Syndrome: ಗಂಟೆಗಟ್ಟಲೆ ಮೊಬೈಲ್ ನೋಡಿ ಕಣ್ಣು ಕಳೆದುಕೊಂಡ ಮಹಿಳೆ! ಏನಿದು ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜಾಸ್ತಿ ಮೊಬೈಲ್ ಫೋನ್ ನಲ್ಲಿ ಗೇಮ್ಸ್ ಆಡೋದು, ರೈಮ್ಸ್ ನೋಡೋದು, ಚಾಟ್ ಮಾಡುವುದು ಮಾಡಬೇಡಿ, ಕಣ್ಣು ಹಾಳಾಗುತ್ತೆ. ಸುಮ್ಮನೆ ಹೇಳ್ತಾ ಇಲ್ಲ, ಇಲ್ಲೋಂದು ಮಹಿಳೆ ಸ್ಮಾರ್ಟ್‌ಫೋನ್​ನ್ನ ಗಂಟೆಗಟ್ಟಲೆ ನೋಡಿ ಕಣ್ಣು ಕಳೆದುಕೊಂಡಿರುವ ಸುದ್ದಿ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

 • Trending Desk
 • 5-MIN READ
 • Last Updated :
 • Share this:

  ಜಾಸ್ತಿ ಮೊಬೈಲ್ ಫೋನ್ (Mobile Phone) ನಲ್ಲಿ ಗೇಮ್ಸ್ (Games) ಆಡೋದು, ರೈಮ್ಸ್ (Rhymes) ನೋಡೋದು, ಚಾಟ್ (Chat) ಮಾಡುವುದು ಮಾಡಬೇಡಿ, ಕಣ್ಣು ಹಾಳಾಗುತ್ತೆ (Eye Problems) ಅಂತೆಲ್ಲಾ ಮನೆಯಲ್ಲಿ ತಂದೆ ತಾಯಂದಿರು ತಮ್ಮ ಮಕ್ಕಳಿಗೆ ದಿನಕ್ಕೆ ಏನಿಲ್ಲ ಅಂತ ಹೇಳಿದರೂ ಐವತ್ತರಿಂದ ನೂರು ಬಾರಿಯಾದರೂ ಹೇಳುವುದನ್ನು ನಾವೆಲ್ಲಾ ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಇಷ್ಟು ಹೇಳಿದರೂ ಸಹ ಮಕ್ಕಳು ಮಾತ್ರ ಮೊಬೈಲ್ ಫೋನ್ ಸ್ಕ್ರೀನ್ (Screen) ಮೇಲಿನ ದೃಷ್ಟಿಯನ್ನು ಆಕಡೆ ಈಕಡೆ ಸರಿಸುವುದೇ ಇಲ್ಲ ಅಂತಾರೆ. ಹೀಗೆ ಬಿಟ್ಟು ಬಿಡದೆ ಮೊಬೈಲ್ ನೋಡಿ ನೋಡಿ ತನ್ನ ಕಣ್ಣುಗಳನ್ನೇ ಕಳೆದುಕೊಂಡಿದ್ದಳಂತೆ ನೋಡಿ ಇಲ್ಲೊಬ್ಬ ಮಹಿಳೆ.


  ಸ್ಮಾರ್ಟ್‌ಫೋನ್​ನ್ನ ಗಂಟೆಗಟ್ಟಲೆ ನೋಡಿ ಕಣ್ಣು ಕಳೆದುಕೊಂಡಿದ್ದಳಂತೆ ಮಹಿಳೆ


  30 ವರ್ಷದ ಮಹಿಳೆಯೊಬ್ಬಳು ಕತ್ತಲೆಯಲ್ಲಿ ತನ್ನ ಸ್ಮಾರ್ಟ್‌ಫೋನ್ ನಲ್ಲಿ ಹೆಚ್ಚು ಗಂಟೆಗಳ ಕಾಲ ಕಳೆದ ನಂತರ ಸುಮಾರು ಒಂದೂವರೆ ವರ್ಷಗಳ ಕಾಲ ಕುರುಡುತನದಿಂದ ಬಳಲಿದ್ದಾರಂತೆ.


  ಫ್ಲೋಟರ್ ಗಳು, ಪ್ರಕಾಶಮಾನವಾದ ಬೆಳಕಿನ ಮಿಂಚುಗಳು, ಗಾಢವಾದ ಜಿಗ್-ಜಾಗ್ ರೇಖೆಗಳು ಮತ್ತು ಕೆಲವೊಮ್ಮೆ ವಸ್ತುಗಳನ್ನು ನೋಡಲು ಅಥವಾ ಕೇಂದ್ರೀಕರಿಸಲು ಅಸಮರ್ಥತೆ ಈ ರೋಗಲಕ್ಷಣಗಳಲ್ಲಿ ಸೇರಿವೆ ಎಂದು ಅವರನ್ನು ಸಮಾಲೋಚಿಸಿದ ಹೈದರಾಬಾದ್ ನ ವೈದ್ಯರು ಹೇಳಿದ್ದಾರೆ.


  A woman lost her sight after looking at her mobile phone for hours What is smartphone vision syndrome
  ಸಾಂದರ್ಭಿಕ ಚಿತ್ರ


  ರೋಗಲಕ್ಷಣಗಳನ್ನು ವಿವರಿಸಿದ ನರವಿಜ್ಞಾನಿ ಡಾ.ಸುಧೀರ್ ಕುಮಾರ್ ಅವರು, ಮಂಜು ಎಂದು ಗುರುತಿಸಲಾದ ಮಹಿಳೆ ಹಲವಾರು ಸೆಕೆಂಡುಗಳವರೆಗೆ ಏನನ್ನೂ ನೋಡಲು ಸಾಧ್ಯವಾಗದ ಕ್ಷಣಗಳಿವೆ ಎಂದು ಹೇಳಿದರು.


  "ಇದು ಹೆಚ್ಚಾಗಿ ರಾತ್ರಿಯಲ್ಲಿ ಅವಳು ಶೌಚಾಲಯವನ್ನು ಬಳಸಲು ಎದ್ದಾಗ ಸಂಭವಿಸಿದೆ. ಅವಳನ್ನು ಕಣ್ಣಿನ ತಜ್ಞರು ತಪಾಸಣೆ ಮಾಡಿದರು ಮತ್ತು ವಿವರವಾದ ಮೌಲ್ಯಮಾಪನವು ಮಾಡಿದರು." ಎಂದು ಅವರು ಟ್ವೀಟ್ ಮಾಡಿದ್ದಾರೆ.


  ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್ ನಿಂದ ಬಳಲುತ್ತಿದ್ದರಂತೆ ಮಂಜು


  "ನಾನು ಆಕೆಯ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸಿದೆ. ತನ್ನ ವಿಶೇಷ ಸಾಮರ್ಥ್ಯದ ಮಗುವನ್ನು ನೋಡಿಕೊಳ್ಳುವ ಸಲುವಾಗಿ ಬ್ಯೂಟಿಷಿಯನ್ ಕೆಲಸವನ್ನು ತೊರೆದ ನಂತರ ಈ ರೋಗಲಕ್ಷಣಗಳು ಪ್ರಾರಂಭವಾದವು.


  ಅವರು ತನ್ನ ಸ್ಮಾರ್ಟ್‌ಫೋನ್ ನಲ್ಲಿ ಪ್ರತಿದಿನ ಹಲವಾರು ಗಂಟೆಗಳ ಕಾಲ ಬ್ರೌಸ್ ಮಾಡುವ ಹೊಸ ಅಭ್ಯಾಸವನ್ನು ರೂಢಿಸಿಕೊಂಡಿದ್ದರು. ಅದರಲ್ಲೂ ವಿಶೇಷವಾಗಿ ರಾತ್ರಿ ಹೊತ್ತಿನಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಕೋಣೆಯಲ್ಲಿರುವ ದೀಪಗಳನ್ನು ಆರಿಸಿ ಫೋನ್ ಬಳಸುತ್ತಿದ್ದರಂತೆ.


  ಇದೆಲ್ಲಾ ತಿಳಿದ ನಂತರ ಇವರ ರೋಗನಿರ್ಣಯ ನಮಗೆ ಸ್ಪಷ್ಟವಾಯಿತು. ಅವರು ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್ (ಎಸ್‌ವಿಎಸ್) ನಿಂದ ಬಳಲುತ್ತಿದ್ದರು” ಎಂದು ವೈದ್ಯರು ಹೇಳಿದರು.


  ಕಂಪ್ಯೂಟರ್ ಗಳು, ಸ್ಮಾರ್ಟ್‌ಫೋನ್ ಗಳು ಅಥವಾ ಟ್ಯಾಬ್ಲೆಟ್ ಗಳಂತಹ ಸಾಧನಗಳ ದೀರ್ಘಕಾಲೀನ ಬಳಕೆಯು ಕಂಪ್ಯೂಟರ್ ವಿಷನ್ ಸಿಂಡ್ರೋಮ್ (ಸಿವಿಎಸ್) ಅಥವಾ ಡಿಜಿಟಲ್ ವಿಷನ್ ಸಿಂಡ್ರೋಮ್ ಎಂದು ಕರೆಯಲ್ಪಡುವ ವಿವಿಧ ಕಣ್ಣು-ಸಂಬಂಧಿತ ನಿಷ್ಕ್ರಿಯಗೊಳಿಸುವ ರೋಗಲಕ್ಷಣಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಹೇಳಿದರು.


  "ಆಕೆಯ ದೃಷ್ಟಿಹೀನತೆಗೆ ಸಂಭಾವ್ಯ ಕಾರಣದ ಬಗ್ಗೆ ನಾನು ಅವರಿಗೆ ಸಲಹೆ ನೀಡಿದೆ ಮತ್ತು ಸ್ಮಾರ್ಟ್‌ಫೋನ್ ಬಳಕೆಯನ್ನು ಕಡಿಮೆ ಮಾಡಲು ಸೂಚಿಸಿದೆ" ಎಂದು ವೈದ್ಯರು ಹೇಳಿದರು. ಅಗತ್ಯವಿದ್ದರೆ ಸ್ಮಾರ್ಟ್‌ಫೋನ್ ಪರದೆಯನ್ನು ನೋಡುವುದನ್ನು ನಿಲ್ಲಿಸುವುದಾಗಿ ಮಹಿಳೆ ಭರವಸೆ ನೀಡಿದರು ಎಂದು ವೈದ್ಯರು ತಿಳಿಸಿದರು.


  ಇದನ್ನೂ ಓದಿ:Mobile Games: ಬಿಡುಗಡೆಗೆ ಮೊದಲೇ ಸದ್ದು ಮಾಡುತ್ತಿದೆ ಈ ಮೊಬೈಲ್​ ಗೇಮ್​​ಗಳು! 2023 ರಲ್ಲಿ ಲಾಂಚ್​


  ಒಂದು ತಿಂಗಳ ನಂತರ ಮಂಜು ತುಂಬಾನೇ ಸುಧಾರಿಸಿದ್ದರು.


  ಒಂದು ತಿಂಗಳ ನಂತರ ಮಂಜು ಪರಿಶೀಲನೆಗೆ ಬಂದಾಗ, ಅವರು ಸಂಪೂರ್ಣವಾಗಿ ಚೆನ್ನಾಗಿದ್ದರು ಎಂದು ಡಾ.ಕುಮಾರ್ ಹೇಳಿದರು. "ಆಕೆಯ 18 ತಿಂಗಳ ದೃಷ್ಟಿಹೀನತೆ ಸಂಪೂರ್ಣವಾಗಿ ವಾಸಿಯಾಗಿತ್ತು. ಈಗ, ಅವರು ಸಾಮಾನ್ಯ ಜನರಂತೆ ಎಲ್ಲವನ್ನೂ ನೋಡುವ ಸಾಮರ್ಥ್ಯವನ್ನು ಹೊಂದಿದ್ದರು. ಇದಲ್ಲದೆ, ರಾತ್ರಿ ಹೊತ್ತಿನಲ್ಲಿ ಅವರ ಕ್ಷಣಿಕ ದೃಷ್ಟಿ ನಷ್ಟವೂ ನಿಂತು ಹೋಯಿತು. ನಮ್ಮ ಅನುಮಾನ ಸರಿ ಎಂದು ಸಾಬೀತಾಗಿದೆ" ಎಂದು ವೈದ್ಯರು ಹೇಳಿದರು.


  ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್ ಅನ್ನು ಹೇಗೆ ತಡೆಗಟ್ಟುವುದು?


  "ಡಿಜಿಟಲ್ ಸಾಧನಗಳ ಸ್ಕ್ರೀನ್ ಗಳನ್ನು ದೀರ್ಘಕಾಲ ನೋಡುವುದನ್ನು ಬಿಡಬೇಕು, ಏಕೆಂದರೆ ಇದು ದೃಷ್ಟಿಯನ್ನು ನಿಷ್ಕ್ರಿಯಗೊಳಿಸುವ ಸಮಸ್ಯೆಗಳನ್ನು ಉಂಟು ಮಾಡಬಹುದು" ಎಂದು ವೈದ್ಯರು ಹೇಳಿದರು.
  "ಡಿಜಿಟಲ್ ಸ್ಕ್ರೀನ್ ನೋಡುವಾಗ (20-20-20 ನಿಯಮ) ವನ್ನು ಬಳಸಿ. ಇಲ್ಲಿ 20 ಅಡಿ ದೂರದಲ್ಲಿರುವ ಏನನ್ನಾದರೂ ನೋಡಲು ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ವಿರಾಮ ತೆಗೆದುಕೊಳ್ಳಿ" ಎಂದು ಹೇಳಿದರು.

  Published by:Gowtham K
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು