Explained: ಈ ಮಹಿಳೆ ತಿಂಗಳಿಗೆ 18 ಲಕ್ಷ ಲೀಟರ್ ನೀರು ಉಳಿಸುತ್ತಾರಂತೆ! ಏನು ಮಾಡುತ್ತಾರೆ ಇವರು? ನಾವು ನೀವು ಮಾಡಬೇಕಾಗಿರೋದೇನು?

ನೀರು ತುಂಬಾನೇ ಅಮೂಲ್ಯವಾದದ್ದು, ಮಿತವಾಗಿ ಬಳಸಿ ಎಂದು ಅನೇಕ ರೀತಿಯ ಮಾತುಗಳನ್ನು ನಾವು ಪ್ರತಿದಿನ ಬಹುತೇಕವಾಗಿ ಎಲ್ಲಾ ಕಡೆಗಳಲ್ಲಿಯೂ ಕೇಳುತ್ತಲೇ ಇರುತ್ತೇವೆ. ಆದರೆ ಬೆಂಗಳೂರಿನ ಮಹಿಳೆ ಬರೀ ಮಾತನಾಡಿ ಸುಮ್ಮನಾಗಿಲ್ಲ. ಅವರು ನೀರು ಉಳಿಸಲು ಪಣ ತೊಟ್ಟು, ತಿಂಗಳಿಗೆ 18 ಲಕ್ಷ ಲೀಟರ್ ನೀರು ಉಳಿಸುತ್ತಾರಂತೆ! ಹಾಗಿದ್ರೆ ಇದು ಹೇಗೆ ಸಾಧ್ಯ? ಈ ಬಗ್ಗೆ ಅವರು ಹೇಳೋದೇನು? ನೀವೇ ಓದಿ...

ಲಲಿತಾಂಬ ವಿಶ್ವನಾಥಯ್ಯ

ಲಲಿತಾಂಬ ವಿಶ್ವನಾಥಯ್ಯ

  • Share this:
ನೀರು (Water) ತುಂಬಾನೇ ಅಮೂಲ್ಯವಾದದ್ದು, ಮಿತವಾಗಿ ಬಳಸಿ ಎಂದು ಅನೇಕ ರೀತಿಯ ಮಾತುಗಳನ್ನು ನಾವು ಪ್ರತಿದಿನ (Every day) ಬಹುತೇಕವಾಗಿ ಎಲ್ಲಾ ಕಡೆಗಳಲ್ಲಿಯೂ ಕೇಳುತ್ತಲೇ ಇರುತ್ತೇವೆ. ಈ ನೀರು ಹೆಚ್ಚಾಗಿ ವ್ಯರ್ಥವಾಗುವ (Waste) ಪ್ರಮುಖ ಮೂಲಗಳಲ್ಲಿ ಒಂದು ಎಂದರೆ ಅದು ನಾವು ಪಾತ್ರೆಗಳನ್ನು ತೊಳೆಯಲು, ನಮ್ಮ ಕೈಗಳನ್ನು ತೊಳೆದುಕೊಳ್ಳಲು ಹೀಗೆ ಅನೇಕ ಕೆಲಸಗಳಿಗೆ (Work) ಉಪಯೋಗಿಸುವ ನಲ್ಲಿಗಳು ಎಂದು ಹೇಳಬಹುದು. ನಾವು ಒಮ್ಮೆ ನಲ್ಲಿಯನ್ನು ಆರಂಭಿಸಿದರೆ ಸರಾಸರಿ 20 ಸೆಕೆಂಡುಗಳ ಕಾಲ ಕೈಗಳನ್ನು ತೊಳೆದುಕೊಳ್ಳಲು (Wash) ಸುಮಾರು 4 ಲೀಟರ್ ನೀರನ್ನು ಬಳಸುತ್ತವೆ. ಅದನ್ನು ಜನರ ಸಂಖ್ಯೆಯಿಂದ ಗುಣಿಸಿದಾಗ ನಮಗೆ ಅರ್ಥವಾಗುತ್ತೆ, ನಾವು ಪ್ರತಿದಿನ ಎಷ್ಟು ನೀರನ್ನು ಸುಮ್ಮನೆ ವ್ಯರ್ಥ ಮಾಡುತ್ತಿದ್ದೇವೆ ಅಂತ.

ಬೆಂಗಳೂರಿನ ಮಹಿಳೆಯಿಂದ ನೀರಿನ ಪಾಠ

ಈ ಒಂದು ಲೆಕ್ಕ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಿವಾಸಿ ಲಲಿತಾಂಬ ವಿಶ್ವನಾಥಯ್ಯ ಅವರ ನಿದ್ದೆ ಕೆಡಿಸಿತು ಎಂದು ಹೇಳಬಹುದು. ಇದಕ್ಕಾಗಿ ಏನಾದರೂ ಒಂದು ಪರಿಹಾರ ಕಂಡು ಹಿಡಿಯಲೇಬೇಕು ಎಂದು ಏರೇಟರ್‌ಗಳು ಮತ್ತು ನೀರಿನ ನಿರ್ಬಂಧಕಗಳನ್ನು ಬಳಸುವ ಆಲೋಚನೆಗೆ ಬಂದರು. ನಲ್ಲಿಗೆ ಸುಲಭವಾಗಿ ಅಳವಡಿಸಬಹುದಾದ ಸರಳ ಸಾಧನಗಳು ಇವುಗಳಾಗಿದ್ದು, ಇದು ಏನಾದರೂ ತೊಳೆಯುವ ಕೆಲಸಕ್ಕೆ ದಕ್ಷತೆಯನ್ನು ಉಳಿಸಿಕೊಳ್ಳುವಾಗ ನೀರಿನ ಬಳಕೆಯನ್ನು ತಕ್ಷಣವೇ ಮೂರು ಪಟ್ಟು ಕಡಿಮೆ ಮಾಡುತ್ತದೆ ಎಂದು ಹೇಳಬಹುದು.

13 ವರ್ಷಗಳಿಂದ ಸಾಮಾಜಿಕ ಕೆಲಸ

ಲಲಿತಾಂಬ ಅವರು "ನಾನು ಸುಮಾರು 13 ವರ್ಷಗಳಿಂದ ವಿವಿಧ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಘನತ್ಯಾಜ್ಯ ನಿರ್ವಹಣೆಯಿಂದ ಹಿಡಿದು ವಿದ್ಯುತ್ ಮತ್ತು ಜಲಮಂಡಳಿಯ ಸಮಸ್ಯೆಗಳವರೆಗೆ, ಬೆಂಗಳೂರಿನ ಕಳೆದು ಹೋದ ವೈಭವವನ್ನು ಮರಳಿ ಪಡೆಯಲು ನಾನು ಹಲವಾರು ವರ್ಷಗಳಿಂದ ವಿವಿಧ ಸಮಿತಿಗಳು ಮತ್ತು ಕಾರ್ಯ ತಂಡಗಳ ಭಾಗವಾಗಿದ್ದೇನೆ ಅಂತ ಅವರು ಹೇಳಿದ್ದಾರೆ.

ನೀರಿನ ಬಗ್ಗೆ ಲಲಿತಾಂಬ ಅವರು ಹೇಳುವುದೇನು?

"ನೀರು ಬಹುತೇಕವಾಗಿ ಎಲ್ಲಾ ಕೆಲಸಗಳಿಗೂ ತುಂಬಾನೇ ಅತ್ಯಗತ್ಯವಾದದ್ದು ಎಂದು ಹೇಳಬಹುದು. ಅದರ ಈಗಿನ ನೀರಿನ ಕೊರತೆಯು ಮುಂದಿನ ದಿನಗಳಲ್ಲಿ ಒಂದು ದೊಡ್ಡ ಯುದ್ಧವನ್ನೇ ನಾವು ಎದುರಿಸಲು ಕಾರಣವಾಗಬಹುದು" ಎಂದು ಅವರು ಹೇಳುತ್ತಾರೆ. ನೀರನ್ನು ಹಿಡಿದಿಟ್ಟುಕೊಳ್ಳುವ ಮತ್ತು ನೀರನ್ನು ಮರುಬಳಕೆ ಮಾಡುವ ಸಾಮರ್ಥ್ಯವನ್ನು ನಮಗೆ ಒದಗಿಸುವ ಟಾಪ್-ಡೌನ್ ವಿಧಾನಗಳಿವೆ. ಅಂದರೆ ರೀಚಾರ್ಜ್ ಬಾವಿಗಳು, ಮಳೆನೀರು ಕೊಯ್ಲು ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳು, ಇದು ಸಮುದಾಯಗಳಿಗೆ ದೊಡ್ಡ ಪ್ರಮಾಣದಲ್ಲಿ ಪರಿಣಾಮವನ್ನು ನೀಡುತ್ತದೆ.

ನೀರಿನ ಸುರಕ್ಷತೆಯ ಕ್ರಮ ಅಳವಡಿಕೆ

ಮಳೆನೀರು ಕೊಯ್ಲು ನಡೆಯುತ್ತಿರುವಾಗ, ಕಟ್ಟಡಗಳು ಮತ್ತು ಸಮುದಾಯಗಳೊಳಗಿನ ಒಳಚರಂಡಿ ಸಂಸ್ಕರಣಾ ಘಟಕಗಳು ಸ್ಥಳಾವಕಾಶದ ಕೊರತೆ ಮತ್ತು ಬಂಡವಾಳ ವೆಚ್ಚದಿಂದಾಗಿ ಒಂದು ಸವಾಲಾಗಿ ಪರಿಣಮಿಸಬಹುದು, ಇದು 30 ರಿಂದ 50 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಾಗಬಹುದು.

ಏನದು ಲಲಿತಾಂಬ ಅವರ ಸರಳ ಮಾರ್ಗ?

ಲಲಿತಾಂಬ ಅವರು ನೀರನ್ನು ಸಂರಕ್ಷಿಸಲು ಒಂದು ಸರಳವಾದ ಮಾರ್ಗವಿದೆ ಎಂದು ಅರ್ಥ ಮಾಡಿಕೊಂಡರು, ಅಂದರೆ ಕೈ ತೊಳೆಯುವುದು ಮುಂತಾದ ಕೆಲವು ಕಾರ್ಯಗಳಿಗೆ ಶುದ್ಧ ನೀರಿನ ಬಳಕೆಯನ್ನು ಮಿತಿಗೊಳಿಸುವ ಸಾಧನಗಳನ್ನು ಬಳಸುವುದು, ಆ ಮೂಲಕ ನೀರಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಸಂಖ್ಯೆಯ ಜನರು ಇರುವಂತಹ ಸ್ಥಳಗಳನ್ನು ಗುರಿಯಾಗಿಸಿಕೊಂಡು ಅಲ್ಲಿರುವ ಬಹುತೇಕ ನಲ್ಲಿಗಳಲ್ಲಿ ನೀರಿನ ನಿರ್ಬಂಧಕಗಳು ಮತ್ತು ಏರೇಟರ್‌ಗಳನ್ನು ಹಾಕಲು ಮುಂದಾದರು.

ವಿವಿಧೆಡೆ 125 ಏರೇಟರ್‌ಗಳ ಅಳವಡಿಕೆ

ಕಳೆದ ಒಂದು ತಿಂಗಳಲ್ಲಿ ಲಲಿತಾಂಬ ಅವರು ಈ ಶಾಲೆಗಳು, ಮದುವೆ ಮಂಟಪಗಳು ಮತ್ತು ಕಾನ್ಫರೆನ್ಸ್ ಹಾಲ್‌ಗಳಲ್ಲಿ 125 ಏರೇಟರ್‌ಗಳನ್ನು ಅಳವಡಿಸಿದ್ದಾರೆ. ಇದನ್ನು ಮಾಡುವ ಮೂಲಕ ಅವರು ತಿಂಗಳಿಗೆ 18 ಲಕ್ಷ ಲೀಟರ್ ಸಿಹಿ ನೀರನ್ನು ಉಳಿಸಲು ಸಹಾಯ ಮಾಡಿದ್ದಾರೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: Explained: ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಏಕೆ ಬೆಂಕಿ ಬೀಳ್ತಿದೆ?

12 ಸಾವಿರ ಖರ್ಚು ಮಾಡಿ 125 ಏರೇಟರ್‌ ಖರೀದಿ

ಲಲಿತಾಂಬ ಅವರು ಕೇವಲ 12,000 ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ಇದನ್ನು ಮಾಡಿದ್ದಾರೆ. ಒಂದು ಏರೇಟರ್ ಅಥವಾ ವಾಟರ್ ರಿಸ್ಟ್ರಿಕ್ಟರ್ ಅಳವಡಿಕೆಗೆ ಕೇವಲ 2 ನಿಮಿಷಗಳು ಮಾತ್ರ ಬೇಕಾಗುತ್ತದೆ. ನಲ್ಲಿಯ ಆ ರಂಧ್ರಕ್ಕೆ ಒಂದು ಏರೇಟರ್ ಅನ್ನು ಅಳವಡಿಸುವಾಗ, ವಾಟರ್ ಇನ್‌ಲೆಟ್ ಮತ್ತು ನಲ್ಲಿಯ ನಡುವೆ ವಾಟರ್ ಕಂಟ್ರೋಲರ್ ಅನ್ನು ಇರಿಸಲಾಗುತ್ತದೆ. ಈ ಎರಡು ಸರಳ ಸಾಧನಗಳೊಂದಿಗೆ, ನೀರಿನ ಬಳಕೆಯನ್ನು ಹಿಂದಿನ ಬಳಕೆಗಿಂತಲೂ ಕಾಲು ಭಾಗಕ್ಕೆ ಇಳಿಸಬಹುದು.

ಕೇವಲ 100 ರೂಪಾಯಲ್ಲಿ ನೀರು ಉಳಿಸಿ

"ಈ ಸಾಧನಗಳು ಕೇವಲ 100 ರೂಪಾಯಿಗಳಲ್ಲಿಯೇ ಖರೀದಿಸಬಹುದು ಮತ್ತು ನಿಮಿಷಕ್ಕೆ ಸರಾಸರಿ 10 ಲೀಟರ್ ನೀರನ್ನು ಉಳಿಸಲು ಸಹಾಯ ಮಾಡುತ್ತದೆ. ಈ ಶಾಲೆಗಳು ಮತ್ತು ಮದುವೆ ಮಂಟಪಗಳಲ್ಲಿ ಈ ಸರಳ ಸಾಧನಗಳನ್ನು ಅಳವಡಿಸುವ ಮೂಲಕ ತಿಂಗಳಿಗೆ ಸುಮಾರು 15,000 ಲೀಟರ್ ನೀರನ್ನು ಉಳಿಸಲಾಗಿದೆ" ಎಂದು ಲಲಿತಾಂಬ ಹೇಳುತ್ತಾರೆ.

ನೀರು ಉಳಿಸುವುದು ಕಡ್ಡಾಯವಾಗಲಿ

“ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಈ ಸಾಧನಗಳ ಬಳಕೆಯನ್ನು ಕಡ್ಡಾಯಗೊಳಿಸಬೇಕು. ಹಲವಾರು ಸಿಎಸ್ಆರ್ ನಿಧಿಗಳು, ಸಮುದಾಯ ಶೌಚಾಲಯಗಳು ಮತ್ತು ಕೈ ತೊಳೆಯುವ ಪ್ರದೇಶಗಳನ್ನು ನಿರ್ಮಿಸಲು ಹೋಗುತ್ತಿವೆ. ಈ ಸಾಧನಗಳನ್ನು ಹೊಸದಾಗಿ ನಿರ್ಮಿಸುವ ನಲ್ಲಿಗಳಲ್ಲಿ ಅಳವಡಿಸಬೇಕು” ಎಂದು ಲಲಿತಾಂಬ ವಿನಂತಿಸುತ್ತಾರೆ.

ಇದನ್ನೂ ಓದಿ: Explained: ಸ್ವರ್ಣ'ಲಂಕೆ'ಯಲ್ಲಿ ನಿಲ್ಲದ ಸಂಕಷ್ಟ; ತುತ್ತು ಊಟಕ್ಕೂ ಪರದಾಟ-ಹಣಕ್ಕಾಗಿ ಹಾಹಾಕಾರ! ಮುಂದೇನು ಗತಿ?

ಸ್ಥಳೀಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ

"ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ ನಮ್ಮ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ನಾಗರಿಕರೆಲ್ಲರೂ ಒಟ್ಟಾಗಿ ನಮ್ಮ ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳುವುದು ಉತ್ತಮ" ಎಂದು ಅವರು ಹೇಳುತ್ತಾರೆ. ಲಲಿತಾಂಬ ತನ್ನ ಮನೆಯಿಂದ ಒಂದು ಕ್ರಾಕರಿ (ಅಡುಗೆ ತಯಾರಿಸುವ ಸಾಮಾನುಗಳು) ಬ್ಯಾಂಕ್ ಅನ್ನು ಸಹ ನಡೆಸುತ್ತಾರೆ ಮತ್ತು ಸುಮಾರು 200 ಕ್ರಾಕರಿ ಮತ್ತು ಕಟ್ಲರಿ ಸೆಟ್‌ಗಳನ್ನು ಸಂಗ್ರಹಿಸಿದ್ದಾರೆ, ಅದನ್ನು ಶೂನ್ಯ-ತ್ಯಾಜ್ಯ ಜೀವನವನ್ನು ಉತ್ತೇಜಿಸಲು ಮನೆಯಲ್ಲಿ ಈವೆಂಟ್‌ಗಳನ್ನು ಹೊಂದಿರುವ ಜನರಿಗೆ ಉಚಿತವಾಗಿ ನೀಡುತ್ತಾರೆ.
Published by:Ashwini Prabhu
First published: