• Home
  • »
  • News
  • »
  • explained
  • »
  • Corona Virus: ಕೋವಿಡ್‌, ಓಮಿಕ್ರಾನ್‌ನಂತೆ ಬರಲಿದೆ ಭಯಾನಕ ವೈರಸ್! 80% ಮರಣ ಪ್ರಮಾಣ ಹೊಂದಿದೆಯಂತೆ ಈ ತಳಿ!

Corona Virus: ಕೋವಿಡ್‌, ಓಮಿಕ್ರಾನ್‌ನಂತೆ ಬರಲಿದೆ ಭಯಾನಕ ವೈರಸ್! 80% ಮರಣ ಪ್ರಮಾಣ ಹೊಂದಿದೆಯಂತೆ ಈ ತಳಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೊರೋನಾ ವೈರಸ್‌ನ ಮೊದಲ ಆವಿಷ್ಕಾರವು ಚೀನಾದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು. ನಂತರ ಏನೆಲ್ಲಾ ಪರಿಣಾಮಗಳನ್ನು ವಿಶ್ವ ಎದುರಿಸಬೇಕಾಯಿತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಹೊಸ ಸಂಶೋಧನೆ ಮತ್ತಷ್ಟು ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಮುಂದೆ ಓದಿ ...
  • Share this:

    ಪ್ರಸ್ತುತ ಕೊರೋನಾ, ಓಮಿಕ್ರಾನ್‌ (Corona, Omicron) ಅದರ ರೂಪಾಂತರಗಳ ಹಾವಳಿ ಮಧ್ಯದಲ್ಲಿಯೇ ಕೋವಿಡ್ (Covid) ರೂಪಾಂತರಗಳಾದ BF.7 ಮತ್ತು BA.5.1.7 ಹೆಚ್ಚಿನ ಹರಡುವಿಕೆಯೊಂದಿಗೆ ಸಾಂಕ್ರಾಮಿಕ ರೋಗದ ಭೀತಿಯನ್ನು ದುಪ್ಪಟ್ಟು ಮಾಡಿದೆ. ಈ ಎಲ್ಲಾ ಆತಂಕಗಳ ನಡುವೆ ಕೋವಿಡ್‌ ವೈರಸ್‌ (Covid Virus) ಅನ್ನೇ ಹೋಲುವ, ಅದರ ಗುಣಲಕ್ಷಣಗಳನ್ನು ಹಂಚಿಕೊಳ್ಳುವ, ಅದೇ ತರನಾದ ಜೀವಿಗಳ ನಿರ್ದಿಷ್ಟ ವೈರಸ್‌ ರೂಪಾಂತರದ ಹೊಸ ಸಂಶೋಧನೆ ಮತ್ತಷ್ಟು ಆತಂಕವನ್ನು ಸೃಷ್ಟಿ ಮಾಡಿದೆ. ಪ್ರಸ್ತುತ ಇದೇ ರೀತಿಯಾದ ಒಂದು ಸಂಶೋಧನೆ ನಡೆದಿದ್ದು, ಕೊರೋನಾ ಮತ್ತು ಓಮಿಕ್ರಾನ್‌ ವೈರಸ್‌ಗಳ ರೂಪಾಂತರವನ್ನು ಅಭಿವೃದ್ಧಿ ಪಡಿಸಲಾಗಿದೆ. 


    ಮೊದಲಿಗೆ ಕೊರೋನಾ ವೈರಸ್ ಇಡೀ ಜಗತ್ತನ್ನೇ ಅಲ್ಲಾಡಿಸಿದ ಬಳಿಕ ಅದರ ಉಗಮ ಸ್ಥಾನ ಯಾವುದು ಎನ್ನುವ ಕುರಿತು ಇಡೀ ಜಗತ್ತೇ ತಲೆ ಕೆಡಿಸಿಕೊಂಡಿತ್ತು. ಅನೇಕ ತಜ್ಞರು ಕೊರೋನಾ ವೈರಸ್‌ ಮೊದಲಿಗೆ ಚೀನಾದ ವುಹಾನ್ ಮಾಂಸ ಮಾರುಕಟ್ಟೆಯಲ್ಲಿ ಪತ್ತೆಯಾಯಿತು ಎಂದು ನಂಬಿದ್ದರು. ಆದರೆ ಕೆಲ ವರದಿಗಳ ಬಳಿಕ ವೈರಸ್ ಉಗಮ ಸ್ಥಾನ ವುಹಾನ್​ನ ಒಂದು ಸಂಶೋಧನಾ ಲ್ಯಾಬ್ ಎಂದು ಹೇಳಲಾಯಿತು.


    ಹಾಗಿದ್ದರೆ ಚೀನಾದ ಲ್ಯಾಬ್‌ನಲ್ಲಿ ಅಭಿವೃದ್ಧಿಯಾದ ವೈರಸ್‌ನಂತೆಯೇ ಇದು ಕೂಡ ಕಾರ್ಯನಿರ್ವಹಿಸುತ್ತದೆಯೇ? ಎಷ್ಟು ಅಪಾಯಕಾರಿ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.


    ಬೋಸ್ಟನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಸಂಶೋಧನೆ


    ಹೌದು, ಬೋಸ್ಟನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡವೊಂದು 80% ರಷ್ಟು ಮರಣ ಪ್ರಮಾಣವನ್ನು ಹೊಂದಿರುವ ಕೋವಿಡ್ ಸ್ಟ್ರೈನ್ (‌ ವೈರಸ್‌ ರೂಪಾಂತರ) ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವೈರಸ್‌ ಅನ್ನು ಪ್ರಸ್ತುತ ಓಮಿಕ್ರಾನ್‌ ಮತ್ತು ಚೀನಾದ ವುಹಾನ್‌ನಲ್ಲಿ ಸೃಷ್ಟಿಯಾದ ಎರಡನೇ ವೈರಸ್‌ಗಳನ್ನು ಸಂಯೋಜನೆ ಮಾಡಿ ಈ ರೂಪಾಂತರವನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಮೂಲ ವೈರಸ್‌ಗಿಂತ ವಿಭಿನ್ನವಾಗಿ ವರ್ತಿಸುತ್ತದೆ ಎನ್ನಲಾಗಿದೆ.


    ಇದನ್ನೂ ಓದಿ: ಏರ್‌ಇಂಡಿಯಾ ಈಗ ಸಖತ್ ಪಾಶ್ ಆಗ್ತಿದೆ, ಏನೆಲ್ಲಾ ಹೊಸ ಫೆಸಿಲಿಟಿ ಇರುತ್ತೆ ನೋಡಿ


    ವಿಜ್ಞಾನಿಗಳ ಈ ಸಂಶೋಧನೆ ಸುಮಾರು 80 ಪ್ರತಿಶತ ಇಲಿಗಳ ಮರಣಕ್ಕೆ ಕಾರಣವಾಗಿದೆ ಎಂದು ಡೈಲಿ ಮೇಲ್‌ ವರದಿ ಮಾಡಿದೆ. ಇದರ ಮಧ್ಯೆ ಆರೋಗ್ಯ ತಜ್ಞರು ಗಂಭೀರ ಅಪಾಯ ಎಂದು ವಿಜ್ಞಾನಿಗಳ ವಿರುದ್ಧ ಧ್ವನಿ ಎತ್ತಿದ್ದಾರೆ.


    A scary virus coming like covid omicron This breed has an 80% mortality rate
    ಸಾಂದರ್ಭಿಕ ಚಿತ್ರ


     ಸಂಶೋಧನೆ ನಡೆಸಿದವರು ಯಾರು?
    ಶಾಲೆಯ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಪ್ರಯೋಗಾಲಯಗಳಲ್ಲಿ ಫ್ಲೋರಿಡಾ ಮತ್ತು ಬೋಸ್ಟನ್‌ನ ವಿಜ್ಞಾನಿಗಳ ತಂಡವು ಈ ಸಂಶೋಧನೆಯನ್ನು ನಡೆಸಿತು. ಈ ಲ್ಯಾಬ್ ಅಮೆರಿಕಾದಲ್ಲಿನ 13 ಜೈವಿಕ ಸುರಕ್ಷತೆ ಮಟ್ಟದ 4 ಲ್ಯಾಬ್‌ಗಳಲ್ಲಿ ಒಂದಾಗಿದೆ. ಇದು ಕೋವಿಡ್‌ ಮತ್ತು ಎಬೋಲಾದಂತಹ ಅಪಾಯಕಾರಿ ಸಂಶೋಧನಾ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ.


    ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಹೇಗೆ ಪ್ರಯೋಗ ನಡೆಯಿತು?
    ಸಂಶೋಧಕರು ಓಮಿಕ್ರಾನ್‌ನಿಂದ ಸ್ಪೈಕ್ ಪ್ರೊಟೀನ್ ಅನ್ನು ಹೊರತೆಗೆದು ಮತ್ತು ಅದನ್ನು ಚೀನಾದಲ್ಲಿ ಕಂಡು ಬಂದ ಮೊದಲ ಪೇರೆಂಟ್‌ ಕೊರೋನ ವೈರಸ್‌ ಜೊತೆ ಸಂಯೋಜಿಸಿ ರಚಿಸಿದ್ದಾರೆ ಎನ್ನಲಾಗಿದೆ.


    ಈ ಹೈಬ್ರಿಡ್ ರೂಪಾಂತರ ವೈರಸ್‌ ಎಷ್ಟು ಮಾರಕವಾಗಿದೆ ಎಂಬುದನ್ನು ವಿಜ್ಞಾನಿಗಳು ಇಲಿಗಲ ಮೇಲೆ ಮೊದಲು ಪ್ರಯೋಗಿಸುವ ಮೂಲಕ ವರದಿ ಮಾಡಿದ್ದಾರೆ.


    ಈ ಹೊಸ ವೈರಸ್ ಎಷ್ಟು ಮಾರಕ?
    ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಓಮಿಕ್ರಾನ್ ಎಸ್-ವಾಹಕ ವೈರಸ್ 80 ಪ್ರತಿಶತದಷ್ಟು ಮರಣ ಪ್ರಮಾಣದೊಂದಿಗೆ ತೀವ್ರವಾದ ರೋಗಕ್ಕೆ ಕಾರಣವಾಗಿದೆ ಎಂದು ಸಂಶೋಧನೆಯಲ್ಲಿ ಉಲ್ಲೇಖವಾಗಿದೆ. ಹೊಸ ತಳಿಯು ಓಮಿಕ್ರಾನ್ ರೂಪಾಂತರಕ್ಕಿಂತ ಐದು ಪಟ್ಟು ಹೆಚ್ಚು ಸಾಂಕ್ರಾಮಿಕ ವೈರಸ್ ಕಣಗಳನ್ನು ಹೊಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.


    ಇದನ್ನೂ ಓದಿ: ಬಿಜೆಪಿ ಸಂಪರ್ಕದಲ್ಲಿ ಸಿಎಂ ನಿತೀಶ್ ಕುಮಾರ್: ಬಾಂಬ್ ಸಿಡಿಸಿದ ಪ್ರಶಾಂತ್ ಕಿಶೋರ್


    ಪ್ರಯೋಗಾಲಯ ನಿರ್ಮಿತ ವೈರಸ್ ಮನುಕುಲಕ್ಕೆ ಅಪಾಯಕಾರಿ
    ಕೋವಿಡ್‌ನಿಂದ ಈಗಾಗಲೇ ವಿಶ್ವ ಬೇಸತ್ತು ಹೋಗಿದೆ. ಅಂಥದ್ದರಲ್ಲಿ ಬೋಸ್ಟನ್ ವಿಶ್ವವಿದ್ಯಾನಿಲಯದ ಈ ಸಂಶೋಧನೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಈ ಸಂಶೋಧನೆ ಬಳಿಕ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಜನ ಚಿಂತಿತರಾಗಿದ್ದಾರೆ. ಈ ಸಂಶೋಧನೆಯನ್ನು ಕೆಲವರು ತಪ್ಪು ಎಂದು ವಾದಿಸಿದ್ದಾರೆ.


    ಕೊರೋನಾ ವೈರಸ್‌ನ ಮೊದಲ ಆವಿಷ್ಕಾರವು ಚೀನಾದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು, ತದನಂತರ ಏನೆಲ್ಲಾ ಪರಿಣಾಮಗಳನ್ನು ವಿಶ್ವ ಎದುರಿಸಬೇಕಾಯಿತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದರ ಬೆನ್ನಲ್ಲೇ ನಡೆದ ಈ ಸಂಶೋಧನೆ ಮತ್ತಷ್ಟು ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.


    A scary virus coming like covid omicron This breed has an 80% mortality rate
    ಸಾದರ್ಭಿಕ ಚಿತ್ರ


    ವಿಶ್ವವಿದ್ಯಾಲಯ ಏನು ಹೇಳುತ್ತದೆ?
    ತಮ್ಮ ಸಂಶೋಧನೆಯನ್ನು ಸಮರ್ಥಿಸಿಕೊಂಡು ಮತ್ತು ಆಕ್ರೋಶವನ್ನು ನಿರ್ಲಕ್ಷಿಸಿ, ಸಂಶೋಧನೆಯ ಪ್ರಮುಖ ಲೇಖಕ ಮೊಹ್ಸನ್ ಸಯೀದ್, ಇತರರು ಪ್ರಕಟಿಸಿದ ಅಧ್ಯಯನಗಳಿಗೆ ಅನುಗುಣವಾಗಿ, ಈ ಕೆಲಸವು ಓಮಿಕ್ರಾನ್ ರೋಗಕಾರಕತೆಯನ್ನು ಪ್ರೇರೇಪಿಸುವ ಸ್ಪೈಕ್ ಪ್ರೋಟೀನ್ ಅಲ್ಲ, ಬದಲಿಗೆ ಇತರ ವೈರಲ್ ಪ್ರೋಟೀನ್‌ಗಳನ್ನು ತೋರಿಸುತ್ತದೆ. ಆ ಪ್ರೋಟೀನ್‌ಗಳ ನಿರ್ಣಯವು ಉತ್ತಮ ರೋಗನಿರ್ಣಯ ಮತ್ತು ರೋಗ ನಿರ್ವಹಣೆಯ ತಂತ್ರಗಳಿಗೆ ಕಾರಣವಾಗುತ್ತದೆ ಎಂದಿದ್ದಾರೆ.ಒಟ್ಟಾರೆ, ಈ ಅಧ್ಯಯನವು ರೋಗವನ್ನು ಉಂಟುಮಾಡುವ ಓಮಿಕ್ರಾನ್ ಸಾಮರ್ಥ್ಯದ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.


    ಈ ಸಂಶೋಧನೆಯು ಅದರ ಉದ್ದೇಶವನ್ನು ಪೂರೈಸುತ್ತದೆಯೇ?
    ಸಂಶೋಧನೆಯು ಅದರ ಉದ್ದೇಶವನ್ನು ಪೂರೈಸುತ್ತದೆಯೇ ಎಂಬ ಪ್ರಶ್ನೆಗೆ ಹೌದು ಎನ್ನುತ್ತಾರೆ ಸಂಶೋಧಕರು. ಇಲಿಗಳು ವೈರಸ್ ಸೋಂಕಿಗೆ ಒಳಗಾದಾಗ, ಅವುಗಳಲ್ಲಿ 80% ಇಲಿಗಳು ಸಾವನ್ನಪ್ಪಿದವು. ಆದರೆ ಪೂರ್ವಜರ ವೈರಸ್ ಸ್ಟ್ರೈನ್ ಸೋಂಕಿಗೆ ಒಳಗಾದಾಗ, 100% ಇಲಿಗಳು ಮರಣ ಹೊಂದಿದವು ಎಂದು ಸಂಶೋಧನೆ ತಿಳಿಸಿದೆ.


    ಇದಕ್ಕೆ ಅಧಿಕಾರಿಗಳ ಪ್ರತಿಕ್ರಿಯೆ ಏನು?
    ಯೋಜನೆಗೆ ಧನಸಹಾಯ ನೀಡಿದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳು STAT ಗೆ ಬೋಸ್ಟನ್ ವಿಶ್ವವಿದ್ಯಾನಿಲಯದ ಮೂಲ ಅನುದಾನ ಅರ್ಜಿಗಳು ಈ ನಿರ್ದಿಷ್ಟ ಕೆಲಸವನ್ನು ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಲಿಲ್ಲ ಎಂದು ಹೇಳಿದರು .


    ಇದನ್ನೂ ಓದಿ: 24 ವರ್ಷದಲ್ಲಿ ಯಾರೂ ಮಾಡಿರದ ಸಾಧನೆ ಮಾಡಿದ ಕನ್ನಡಿಗ!


    ಮುಂಜಾಗ್ರತೆ ತೆಗೆದುಕೊಳ್ಳಿ
    ಹೊಸ ರೂಪಾಂತರಗಳು ಹೆಚ್ಚಿನ ಪ್ರಸರಣ ದರವನ್ನು ಹೊಂದಿವೆ. ಜನ ಈ ಎಲ್ಲಾ ವೈರಸ್‌, ಸೋಂಕುಗಳಿಂದ ಸುರಕ್ಷಿತವಾಗಿರಲು, ಮಾಸ್ಕ್ ಧರಿಸಿ, ಕಿಕ್ಕಿರಿದ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ, ಹಿರಿಯರು ಮತ್ತು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಮತ್ತು ನಿಮ್ಮ ಕೈಗಳನ್ನು ಶುಚಿಯಾಗಿರಿಸಿಕೊಳ್ಳಿ.

    Published by:Harshith AS
    First published: