• ಹೋಂ
 • »
 • ನ್ಯೂಸ್
 • »
 • Explained
 • »
 • Explainer: ಎರಿಥ್ರೋಮೆಲಾಲ್ಜಿಯಾ ಸಮಸ್ಯೆ ಅಂದ್ರೇನು? ಇದರ ಲಕ್ಷಣಗಳು ಹೀಗಿವೆ

Explainer: ಎರಿಥ್ರೋಮೆಲಾಲ್ಜಿಯಾ ಸಮಸ್ಯೆ ಅಂದ್ರೇನು? ಇದರ ಲಕ್ಷಣಗಳು ಹೀಗಿವೆ

ಎರಿಥ್ರೋಮೆಲಾಲ್ಜಿಯಾ ಸಮಸ್ಯೆ

ಎರಿಥ್ರೋಮೆಲಾಲ್ಜಿಯಾ ಸಮಸ್ಯೆ

ಇತ್ತೀಚಿಗಷ್ಟೇ ಟೈಮ್ಸ್ ಮಾಧ್ಯಮವು ಇಂತಹ ಒಂದು ಸ್ಥಿತಿಯಿಂದ ಬಳಲುತ್ತಿರುವ ಒಬ್ಬ ವ್ಯಕ್ತಿಯ ಬಗ್ಗೆ ವರದಿ ಮಾಡಿತ್ತು. ಇದು ಬಲು ಅಪರೂಪದ ಸ್ಥಿತಿಯಾಗಿದೆ ಎಂತಲೂ ಸಹ ಹೇಳಬಹುದು.

 • Share this:

ನಾವು ನಿತ್ಯ ಕೆಲಸ ಮಾಡುತ್ತಿರುವಾಗ ಒಮ್ಮೊಮ್ಮೆ ದೀಪ ಹಚ್ಚಬೇಕಾದರೋ ಅಥವಾ ಸುಡುವ ಬಾಣಲೆಯನ್ನೋ ಅಕಸ್ಮಾತಾಗಿ ಸ್ವಲ್ಪ ಮಟ್ಟಿಗೆ ತಗುಲಿಸಿಕೊಂಡರೆತ್ತೇವೆ ಎಂದರೆ ತಪ್ಪಾಗಲಾರದು. ಅಂತಹ ಸಂದರ್ಭದಲ್ಲಿ ನಮ್ಮ ಶರೀರದ ಯಾವುದೇ ಭಾಗಕ್ಕಾಗಲಿ ಆದ ಆ ಸುಡುವ ಅನುಭವ ನೆನೆಸಿಕೊಂಡರೆ ಸಾಕು, ಮೈ ಜುಮ್ಮೆನ್ನುತ್ತದೆ. ಆದರೆ, ಯಾವುದೇ ಅಂತಹ ಅವಘಡಗಳು ನಡೆಯದೆಯೇ ತನ್ನಿಂದ ತಾನಾಗಿಯೇ ಮೈಯಲ್ಲೆಲ್ಲ ಬೆಂಕಿ ಹತ್ತಿ ಸುಡುತ್ತಿರುವ ಅನುಭವವಾಗುತ್ತಿದ್ದರೆ ಏನಾಗಬೇಡ? ಹೌದು, ವೈಜ್ಞಾನಿಕವಾಗಿ ಅಂತಹ ಅನುಭವವನ್ನೂ (Experience) ಸಹ ನೀಡುವ ಒಂದು ಆರೋಗ್ಯ ಸ್ಥಿತಿಯಿದೆ. ಅದನ್ನೇ ಎರಿಥ್ರೋಮೆಲಾಲ್ಜಿಯಾ (Erythromelalgia) ಎಂದು ಕರೆಯಲಾಗುತ್ತದೆ.


ಎರಿಥ್ರೋಮೆಲಾಲ್ಜಿಯಾ ಬಾಧಿತ ವ್ಯಕ್ತಿ


ಇತ್ತೀಚಿಗಷ್ಟೇ ಟೈಮ್ಸ್ ಮಾಧ್ಯಮವು ಇಂತಹ ಒಂದು ಸ್ಥಿತಿಯಿಂದ ಬಳಲುತ್ತಿರುವ ಒಬ್ಬ ವ್ಯಕ್ತಿಯ ಬಗ್ಗೆ ವರದಿ ಮಾಡಿತ್ತು. ಇದು ಬಲು ಅಪರೂಪದ ಸ್ಥಿತಿಯಾಗಿದೆ ಎಂತಲೂ ಸಹ ಹೇಳಬಹುದು.


ಇಂತಹ ಸಂದರ್ಭದಲ್ಲಿ ಇದರಿಂದ ಬಾಧಿತ ವ್ಯಕ್ತಿ ತನ್ನ ದೇಹವೆಲ್ಲ ದಹಿಸುತ್ತಿರುವಂತಹ ಅನುಭವಕ್ಕೊಳಗಾಗುತ್ತಾನೆಂದರೆ ಸಾಮಾನ್ಯ ಜನರಿಗೆ ಅದನ್ನು ಊಹಿಸಿಕೊಳ್ಳಲೂ ಸಹ ಸಾಧ್ಯವಿಲ್ಲ ಎನ್ನಬಹುದು.


ಟೈಮ್ಸ್ ಗೆ ನೀಡಿದ ತಮ್ಮ ಅನುಭವದಲ್ಲಿ ಇದರಿಂದ ಬಾಧಿತರಾಗಿದ್ದ ಜೇ ಬನಾಚ್ ಅವರು ಸಾಕಷ್ಟು ಸ್ಪಷ್ಟವಾಗಿ ತಮ್ಮಲ್ಲಾದ ಅನುಭವದ ಬಗ್ಗೆ ವಿವರ ಬಿಚ್ಚಿಟ್ಟಿದ್ದಾರೆ. ಅಂದು 2018 ರಂದು ಅವರ ಜನ್ಮದಿನವಿತ್ತು. ರಾತ್ರಿಯ ಸಮಯದಲ್ಲಿ ಅವರಿಗೆ ಒಂದು ಕಿರಿಕಿರಿಯ ಅನುಭವವಾಗಿ ಎಚ್ಚರಗೊಂಡರು.


ಅವರ ಕೈನ ಹೆಬ್ಬೆರಳಿನಲ್ಲಿ ತುರಿಕೆಯ ಅನುಭವವಾಗುತ್ತಿತ್ತು. ಅವರಿಗೆ ತಮ್ಮ ಆ ಬೆರಳು ಉಬ್ಬುತ್ತಿರುವ ಹಾಗೆ ತೋಚುತ್ತಿತ್ತು. ನೋಡ ನೋಡುತ್ತಲೇ ಆ ಅನುಭವ ಕೈನ ಇತರೆ ಬೆರಳುಗಳಿಗೂ ಹರಡಿತು, ಅಂಗೈಯನ್ನೂ ಸಹ ವ್ಯಾಪಿಸಿತು.


ತುರಿಕೆಗಿಂತಲೂ ವಿಭಿನ್ನವಾದ ಅನುಭವವೇ ಆಗತೊಡಗಿತು ಬನಾಚ್ ಅವರಿಗೆ. ಕೆಲ ಕ್ಷಣಗಳಲ್ಲೇ ಅವರ ಆ ಕೈ ತನ್ನ ಸಹಜ ಆಕಾರಕ್ಕಿಂತ ದುಪ್ಪಟ್ಟಾಗಿತ್ತು ಎಂಬುದಾಗಿ ಬನಾಚ್ ವಿವರಿಸಿದ್ದಾರೆ.


ಮರುದಿನ ಬೆಳಗ್ಗೆ ಎದ್ದ ಬನಾಚ್ ತಡಮಾಡದೆ ಆರ್ಥೋಪೆಡಿಕ್ ವೈದ್ಯರ ಬಳಿ ತೆರಳಿ ತಪಾಸಣೆಗೊಳಗಾದರು. ಅವರ ಕೈ ಇನ್ನಷ್ಟು ಬಾವು ಆಗದಂತೆ ವೈದ್ಯರು ಅವರಿಗೆ ಇಂಜೆಕ್ಷನ್ ನೀಡಿ ಕಳುಹಿಸಿದ್ದಾರೆ. ಹೀಗೆ ಇಂಜೆಕ್ಷನ್ ಪಡೆದು ಮನೆಗೆ ಬಂದಾದ ಮೇಲೆ ಬನಾಚ್ ಅವರಿಗೆ ವಿಭಿನ್ನ ಅನುಭವವೇ ಆಗತೊಡಗಲು ಪ್ರಾರಂಭಿಸಿತು.


ಅವರೇ ಹೇಳುವಂತೆ, "ನನ್ನ ಕೈ ಅಕ್ಷರಶಃ ಬೆಂಕಿಯಲ್ಲಿ ದಹಿಸುತ್ತಿರುವಂತಹ ಅನುಭವವಾಗತೊಡಗಿತು. ಇದು ಅತ್ಯಂತ ಅಸಹನೀಯ ಹಾಗೂ ನೋವಿನಿಂದ ಕೂಡಿತ್ತು. ಶೀಘ್ರದಲ್ಲೇ ನನಗೆ ಇದು ಇಎಂ ಅಥವಾ ಎರಿಥ್ರೋಮೆಲಾಲ್ಜಿಯಾದ ಅಥವಾ 'ಮ್ಯಾನ್ ಆನ್ ಫೈರ್ ಸಿಂಡ್ರೋಮ್' ಸ್ಥಿತಿ ಎಂದು ಗೊತ್ತಾಯಿತು" ಎನ್ನುತ್ತಾರೆ.


ಏನಿದು ಎರಿಥ್ರೋಮೆಲಾಲ್ಜಿಯಾ


'ಮ್ಯಾನ್ ಆನ್ ಫೈರ್ ಸಿಂಡ್ರೋಮ್' ಎಂತಲೂ ಕರೆಯಲ್ಪಡುವ ಈ ಆರೋಗ್ಯ ಸ್ಥಿತಿ ಅತ್ಯಂತ ತೀಕ್ಷ್ಣವಾದ ನೋವನ್ನು ನೀಡುವಂತಹ ಪರಿಸ್ಥಿತಿಯಾಗಿದೆ.


ಕೈಕಾಲುಗಳಿಗೆ ಸಜೀವವಾಗಿ ಬೆಂಕಿ ಹಚ್ಚಿದ್ದಾರೆನೋ ಅನ್ನುವಷ್ಟರ ಮಟ್ಟಿಗೆ ನೋವಿರುತ್ತದೆ ಎನ್ನಲಾಗುತ್ತದೆ. ಎಕ್ಸಿಯನ್ ಬಯೋಸಿಸ್ಟಮ್ಸ್ ನ ವರದಿಯು ಇಂತಹ ಸ್ಥಿತಿಯಲ್ಲಿ ಯಾವುದೇ ರೀತಿಯ ನೋವು ನಿವಾರಕಗಳು ಇದರ ನೋವನ್ನು ಕಡಿಮೆ ಮಾಡಲು ಸಮರ್ಥವಾಗಿರುವುದಿಲ್ಲ ಎನ್ನುತ್ತದೆ.


ಇದನ್ನೂ ಓದಿ: ನಾಲಿಗೆ ರುಚಿಗೆಂದು ತಿನ್ನೋ ಈ ಆಹಾರಗಳು ನಿಮ್ಮ ಪ್ರಾಣಕ್ಕೇ ಡೇಂಜರ್ ಹುಷಾರ್!


ಎರಿಥ್ರೋಮೆಲಾಲ್ಜಿಯಾ ಆರೋಗ್ಯ ಸ್ಥಿತಿ ಎಂಬುದು ಯಾವ ವಯಸ್ಸಿನಲ್ಲಾದರೂ ಕಾಣಿಸಿಕೊಳ್ಳಬಹುದಾಗಿದೆ. ಕೆಲವರಿಗೆ ಹುಟ್ಟಿನಿಂದಲೇ ಈ ಸ್ಥಿತಿ ಇರುತ್ತದೆ. ಇನ್ನು ಕೆಲವರು ವಯಸ್ಕರಾದಾಗ ಇದರ ಅನುಭವ ಪಡೆಯಬಹುದು ಎಂದಾಗಿದೆ.


ಇಎಂ ಎಂಬ ಸ್ಥಿತಿ ಇದ್ದಾಗ ಹೇಗನಿಸುತ್ತದೆ?


ಬನಾಚ್ ಅವರು ಇಎಂ ಇದ್ದಾಗ ಯಾವ ರೀತಿ ಅನಿಸುತ್ತದೆ ಎಂಬುದರ ಬಗ್ಗೆ ಹೀಗೆ ಬರೆಯುತ್ತಾರೆ, "ನಾನು ದಹಿಸುವಿಕೆಯ ಪದ ಬಳಸಿರುವಾಗ ನನಗನಿಸುವಂತೆ ಬಹುತೇಕ ಓದುಗರು ಇದನ್ನು ಬಿಸಿ/ಶಾಖ ಎಂಬುದನ್ನು ಊಹಿಸಿರುತ್ತಾರೆ. ಆದರೆ ಇಲ್ಲಿ ತಿಳಿಯಬೇಕಾದ ಬಲು ಸೂಕ್ಷ್ಮ ವಿಷಯ್ವೆಂದರೆ ಇದು ಉರಿಯುವಂತಹ ಅನುಭವವಾಗಿದೆ".


ಬನಾಚ್ ಅವರ ಪ್ರಕಾರ, "ಸ್ಟೋವ್ ಬರ್ನರ್ ಮೇಲೆ ನನ್ನ ಕೈಗಳನ್ನು ಹಿಡಿದಂತಹ ಅನುಭವವಾದಾಗ ನನಗೆ ನಾನು ಚಿಕ್ಕವನಿದ್ದಾಗ ಕೈಗಳಿಂದ ಮಂಜುಗಡ್ಡೆಯನ್ನು ಹಿಡಿದು ನಂತರ ಅದನ್ನು ಬಿಸಿ ಮಾಡಲೆಂದು ಬಿಸಿನೀರಿನಲ್ಲಿ ನನ್ನ ಕೈಗಳನ್ನು ಅದ್ದುತ್ತಿದ್ದಂತಹ ಸ್ಮರಣೆ ನನಗೆ ಬಂದಂತಾಗುತ್ತಿತ್ತು. "


ಅಲ್ಲದೆ ಅವರು ಹೇಳುವಂತೆ, "ನನ್ನ ಕಿವಿಯ ಬಳಿ ಯಾರೋ ಲೈಟರ್ ಒಂದನ್ನು ಹಚ್ಚಿರುವಂತಹ ಅನುಭವವಾಗುತ್ತಿತ್ತು." ಅವರಿಗೆ ಸನ್ ಬರ್ನ್ ರೀತಿಯ ಅನುಭವ ಮುಖದ ಮೇಲಾಗುತ್ತಿತ್ತು.


ಇನ್ನು ಕಾಲುಗಳ ಬಗ್ಗೆ ಹೇಳುವುದಾದರೆ ಅವರಿಗೆ ಬರಿಗಾಲಿನಲ್ಲಿ ಬಿಸಿ ಕಲ್ಲಿದ್ದಿಲುಗಳ ಮೇಲೆ ನಡೆಯುತ್ತಿದ್ದಂತಹ ಅನುಭವವಾಗುತ್ತಿತ್ತು. ಈ ರೀತಿ ಆ ಇಎಂ ಎಪಿಸೋಡುಗಳು ಬಂದಾಗಲೆಲ್ಲ ಬನಾಚ್ ಸಾಕಷ್ಟು ನೋವನುಭವಿಸುತ್ತಿದ್ದರು.


ಇಎಂ ಎಷ್ಟು ಬಾರಿ ಬರುತ್ತದೆ?


NHS ವರದಿ ಮಾಡಿರುವಂತೆ ಇಎಂ ಆಕ್ರಮಣಗಳು ಒಂದು ಬಾರಿ ಬಂದಾಗ ಕೆಲವು ನಿಮಿಷಗಳಿಂದ ಹಿಡಿದು ಕೆಲ ದಿನಗಳವರೆಗೂ ವ್ಯಾಪಿಸಬಹುದಾಗಿದೆ, ಮೊದಲಿಗೆ ಇದರ ಆಕ್ರಮಣವಾದಾಗ ಸರಳವಾಗಿ ತುರಿಕೆಯ ಅನುಭವವಾಗುತ್ತದೆ.


ತದಂತರ ಅದು ಪ್ರಖರತೆ ಪಡೆಯುತ್ತ ಸಾಕಷ್ಟು ನೋವಿನ ಅನುಭವ ನೀಡುತ್ತದೆ. ಕೇಪಾದ ಚರ್ಮದ ಮೇಲೆ ಸ್ವಲ್ಪ ಸ್ಪರ್ಷಿಸಿದರೂ ಧಗ ಧಗ ಉರಿಯುವಂತಹ ಅನುಭವವಾಗತೊಡಗುತ್ತದೆ.


ಇನ್ನು ಜೀವನಶೈಲಿಗೆ ಸಂಬಂಧಿಸಿದಂತೆ ಕೆಲ ಚಟುವಟಿಕೆಗಳೂ ಸಹ ಇದು ಬರುವಂತೆ ಪ್ರಚೋದಿಸುತ್ತವೆ ಎಂದು ಹೇಳಬಹುದಾಗಿದೆ. ಉದಾಹರಣೆಗೆ ವ್ಯಾಯಾಮ, ಬಿಸಿಯಾದ ಕೋಣೆಗೆ ಪ್ರವೇಶಿಸುವುದು, ಟೈಟ್ ಸಾಕ್ಸ್ ಅಥವಾ ಉಡುಪು ಧರಿಸುವಿಕೆ, ಒತ್ತಡ, ಮದ್ಯಸೇವನೆ, ಖಾರವಾದ ಆಹಾರ ಸೇವನೆ, ನಿರ್ಜಲೀಕರಣ ಇತ್ಯಾದಿ.


ಈ ಸಿಂಡ್ರೋಮ್ ಬರಲು ಕಾರಣ ಹಾಗೂ ಇದಕ್ಕೆ ಏನಾದರೂ ಮದ್ದಿದೆಯೆ?


ಈ ಸ್ಥಿತಿಗೆ ಒಂದು ಪ್ರಾಥಮಿಕ ಹಾಗೂ ಇನ್ನೊಂದು ದ್ವಿತೀಯಕ ಕಾರಣಗಳಿವೆ ಎಂದು ಹೇಳಲಾಗುತ್ತದೆ. ಕೆಲವು ಜೆನೆಟಿಕ್ ಅಥವಾ ಅನುವಂಶಿಕ ಅಂಶಗಳು ಇದು ಬರಲು ಪ್ರಾಥಮಿಕ ಕಾರಣಗಳಾಗಿದ್ದರೆ, ಕೆಲ ಆರೋಗ್ಯ ಸ್ಥಿತಿಗಳಾದ ಪಾಲಿಸಿಥೇಮಿಯಾ ವೆರಾ, ಆಟೋ ಇಮ್ಯೂನ್ ಕಾಯಿಲೆಗಳಾದಂತಹ ಲ್ಯೂಪಸ್ ಹಾಗೂ ರ್‍ಹ್ಯೂಮಟಾಯ್ಡ್ ಅರ್ಥ್ರೈಟಿಸ್ ಗಳು ದ್ವಿತೀಯಕ ಕಾರಣಗಳಾಗಿರಬಹುದು ಎನ್ನಲಾಗಿದೆ.


ಒಂದೊಮ್ಮೆ ಈ ಸ್ಥಿತಿ ಬಂದರೆ ಕಾಲ ಕ್ರಮೇಣ ಇದು ಮತ್ತೆ ಬರಬಹುದಾದ ತೀವ್ರತೆ ಏರುತ್ತದೆ ಹಾಗೂ ಇದು ಹಲವು ವರ್ಷಗಳು ಹಾಗೂ ದಶಕಗಳವರೆಗೂ ನಿರಂತರವಾಗಿ ಇರಬಹುದಾಗಿದೆ.


ಇದನ್ನೂ ಓದಿ: ಪೋಷಕರೇ, ಎಚ್ಚರ! ನಿಮ್ಮ ಮಕ್ಕಳಿಗೆ ಹಾಲಿನ ಜೊತೆಗೆ ಈ ಆಹಾರಗಳನ್ನು ನೀಡಲೇಬೇಡಿ


ಬನಾಚ್ ಹೇಳುವಂತೆ ಅಟ್ಯಾಕ್ ಆದ ಸಂದರ್ಭದಲ್ಲಿ ಉರಿಯುತ್ತಿರುವ ಶರೀರದ ಭಾಗಗಳಿಗೆ ತಂಪನ್ನೀಯಲು ಅದಕ್ಕೆ ಐಸ್ ಹಚ್ಚುವುದಾಗಲಿ, ನೀರು ಹಾಕುವುದಾಗಲಿ ಮಾಡಬಾರದು. ಏಕೆಂದರೆ ಇದು ಸೋಂಕುಂಟು ಮಾಡಬಹುದು ಮುಂದೆ ಅದು ಗ್ಯಾಂಗರೀನ್ ಸಹ ಆಗಿ ಪರಿವರ್ತಿತವಾಗಬಹುದು.


ಈ ಸ್ಥಿತಿಯಿಂದ ಬಳಲುತ್ತಿದ್ದ ಕೆಲವರು ತಮ್ಮ ನೋವನ್ನು ಸಹಿಸಲಾಗದೆ ತಮ್ಮ ಕೈ ಅಥವಾ ಕಾಲುಗಳನ್ನು ಕತ್ತರಿಸಿಕೊಳ್ಳಲು ಮುಂದೆ ಬಂದಿರುವ ಅಥವಾ ಆತ್ಮಹತ್ಯೆ ಮಾಡಿಕೊಳ್ಳಲು ಸಜ್ಜಾದ ಉದಾಹರಣೆಗಳಿವೆ.


NHS ವರದಿ ಪ್ರಕಾರ ಎರಿಥ್ರೋಮೆಲಾಲ್ಜಿಯಾ ಎಂಬುದು ಇನ್ನೊಂದು ವೈದ್ಯಕೀಯ ಆರೋಗ್ಯ ಸ್ಥಿತಿ ಅಥವಾ ಪೋಷಕರಿಂದ ಹರಿದುಬಂದ ದೋಷಯುಕ್ತ ಜೀನ್ ನಿಂದ ಬರಬಹುದಾಗಿದೆ.


ಇದಲ್ಲದೆ ಇನ್ನು ಹಲವು ಕಾರಣಗಳಿಂದ ಈ ಸ್ಥಿತಿ ಬರಬಹುದಾಗಿದೆ ಎಂದಾಗಿದೆ. ಉದಾಹರಣೆಗೆ, ರಕ್ತದ ಕಯಿಲೆ - ಪಾಲಿಸೈಥೇಮಿಯಾ, ನರಗಳ ದೋಷ, ಮಲ್ಟಿಪಲ್ ಸ್ಲೆರಾಸಿಸ್, ಆಟೋ ಇಮ್ಯೂನ್ ಕಾಯಿಲೆಗಳಾದಂತಹ ಲ್ಯೂಪಸ್ ಹಾಗೂ ರ್‍ಹ್ಯೂಮಟಾಯ್ಡ್ ಅರ್ಥ್ರೈಟಿಸ್ ಇತ್ಯಾದಿ ಎನ್ನಲಾಗಿದೆ.


ಮದ್ದು


ಟಾಪಿಕಲ್ ಥೆರಪಿ, ಇಂಟ್ರಾವೈನ್ ಚಿಕಿತ್ಸೆ, ಟ್ರಿಗರ್ ನಿಯಂತ್ರಕ ವಿಧಾನಗಳು ಇತ್ಯಾದಿ ಈ ಸ್ಥಿತಿಯನ್ನು ತಹಬದಿಗೆ ತರಲು ಪ್ರಯತ್ನಿಸಬಹುದಾದ ಮದ್ದುಗಳಾಗಿವೆ. ಆದರೂ ಒಬ್ಬ ವ್ಯಕ್ತಿಗೆ ಉಂಟಾದ ಇಎಂ ಸ್ಥಿತಿ ಹೇಗೆ ಎಂಬುದನ್ನು ಸಮಗ್ರವಾಗಿ ಪರಿಶೀಲಿಸಿ ತಕ್ಕ ಚಿಕಿತ್ಸೆಗಳನ್ನು ವೈದ್ಯರು ನಿರ್ಣಯಿಸುತ್ತಾರೆ ಎಂದಾಗಿದೆ.


top videos  ಒಟ್ಟಿನಲ್ಲಿ ಹೇಳಬೇಕೆಂದರೆ ಇದು ನಿಜಕ್ಕೂ ಯಾವ ಶತ್ರುವಿಗೂ ಇಂತಹ ಸ್ಥಿತಿ ಬರುವುದು ಬೇಡ ಎಂಬಂತಾಗಿದ್ದು, ಮುಂಬರುವ ದಿನಗಳಲ್ಲಿ ಇದಕ್ಕೆ ಪರಿಣಾಮಕಾರಿಯಾದ ಹಾಗೂ ವಸ್ತುನಿಷ್ಠವಾದ ಚಿಕಿತ್ಸೆ ಲಭಿಸುವಂತಾಗಲಿ ಎಂದಷ್ಟೇ ಆಶಿಸಬಹುದು.

  First published: