• ಹೋಂ
  • »
  • ನ್ಯೂಸ್
  • »
  • Explained
  • »
  • Yediyurappa-Eshwarappa: ಯಡಿಯೂರಪ್ಪ, ಈಶ್ವರಪ್ಪ ನೇಪಥ್ಯ; ಶಿವಮೊಗ್ಗ ರಾಜಕೀಯದಲ್ಲಿ ಹೊಸ ತಲೆಮಾರಿನ ಅಧಿಪತ್ಯ!

Yediyurappa-Eshwarappa: ಯಡಿಯೂರಪ್ಪ, ಈಶ್ವರಪ್ಪ ನೇಪಥ್ಯ; ಶಿವಮೊಗ್ಗ ರಾಜಕೀಯದಲ್ಲಿ ಹೊಸ ತಲೆಮಾರಿನ ಅಧಿಪತ್ಯ!

ಯಡಿಯೂರಪ್ಪ, ಈಶ್ವರಪ್ಪ ನೇಪಥ್ಯ!

ಯಡಿಯೂರಪ್ಪ, ಈಶ್ವರಪ್ಪ ನೇಪಥ್ಯ!

ಶಿಕಾರಿಪುರದಲ್ಲಿ ಬಿಎಸ್‌ವೈ ತಮ್ಮ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಟ್ಟಿದ್ದರೆ, ಈಶ್ವರಪ್ಪ ಚುನಾವಣೆಗೆ ಗುಡ್ ಬೈ ಹೇಳಿದ್ದಾರೆ. ಅತ್ತ ಕಾಗೋಡು ತಿಮ್ಮಪ್ಪ ಈಗಾಗಲೇ ನೇಪಥ್ಯಕ್ಕೆ ಸರಿದಿದ್ದಾರೆ. ಬದಲಾಗುತ್ತಾ ಶಿವಮೊಗ್ಗದ ರಾಜಕೀಯ?

  • News18 Kannada
  • 2-MIN READ
  • Last Updated :
  • Shimoga, India
  • Share this:

ಶಿವಮೊಗ್ಗ: ಬಿಎಸ್ ಯಡಿಯೂರಪ್ಪ (BS Yediyurappa) ಅವರ ಕಿರಿಯ ಪುತ್ರ ಬಿವೈ ವಿಜಯೇಂದ್ರ (BY Vijayendra) ಶಿಕಾರಿಪುರದಿಂದ (Shikaripur) ಚುನಾವಣಾ ಕಣಕ್ಕಳಿದಿದ್ದು, ಈಗಗಾಲೇ ನಾಮಪತ್ರ ಸಲ್ಲಿಸಿದ್ದಾರೆ. ಇದು ಕರ್ನಾಟಕ ರಾಜಕೀಯದಲ್ಲಿ (Karnataka Politics), ವಿಶೇಷವಾಗಿ ಅವರ ತವರು ಶಿವಮೊಗ್ಗದ (Shivamogga) ರಾಜಕೀಯದಲ್ಲಿ ಹೊಸ ಪೀಳಿಗೆಯ ಉದಯದ ಗುರುತಿನಂತೆ ಭಾಸವಾಗುತ್ತಿದೆ. ಕರ್ನಾಟಕದ ರಾಜಕೀಯ ಹಾಟ್‌ಸ್ಪಾಟ್‌ಗಳಲ್ಲಿ ಒಂದಾದ ಶಿವಮೊಗ್ಗ ಹೊಸ ರಾಜಕೀಯಕ್ಕೆ ಮುನ್ನುಡಿ ಬರೆಯುತ್ತಿದೆ.


ಶಿವಮೊಗ್ಗದ ರಾಜಕೀಯದಲ್ಲಿ ಬದಲಾವಣೆ


ಸಮೃದ್ಧವಾದ ಪಶ್ಚಿಮ ಘಟ್ಟಗಳ ಜಿಲ್ಲೆ ಶಿವಮೊಗ್ಗ ಯಾವಾಗಲೂ ಕರ್ನಾಟಕದ ರಾಜಕೀಯ ಕೇಂದ್ರವಾಗಿದೆ. ಈ ಜಿಲ್ಲೆ ಎಸ್ ಬಂಗಾರಪ್ಪ ಸೇರಿದಂತೆ ನಾಲ್ಕು ಮುಖ್ಯಮಂತ್ರಿಗಳು, ಡಜನ್‌ಗಟ್ಟಲೆ ಇತರ ಪ್ರಮುಖ ವ್ಯಕ್ತಿಗಳು, ಹಲವು ಸಾರ್ವಜನಿಕ ಚಳುವಳಿಗಳನ್ನು ಹುಟ್ಟುಹಾಕಿದ ಜಿಲ್ಲೆ. ಈ ಜಿಲ್ಲೆಯಲ್ಲಿಗ ರಾಜಕೀಯ ಸ್ಥಿತ್ಯಂತರವಾಗಲಿದೆ.




ಪುತ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟ ಬಿಎಸ್‌ವೈ


1999-2004 ಹೊರತು ಪಡಿಸಿ 40 ವರ್ಷಗಳ ಕಾಲ ಶಿವಮೊಗ್ಗ ಯಡಿಯೂರಪ್ಪ ಅವರ ಹಿಡಿತದಲ್ಲಿತ್ತು. 2014-18ರಲ್ಲಿ ಶಿವಮೊಗ್ಗದಿಂದ ಸಂಸದರಾಗಿ ಬಿಎಸ್ ವೈ ನವದೆಹಲಿಗೆ ತೆರಳಿದಾಗ ಅವರ ಹಿರಿಯ ಪುತ್ರ ಬಿ.ವೈ.ರಾಘವೇಂದ್ರ ಶಿಕಾರಿಪುರ ಶಾಸಕರಾಗಿದ್ದರು. ಬಿಎಸ್‌ವೈ 1983ರಿಂದ ಒಂಬತ್ತು ಬಾರಿ ಪ್ರತಿ ಚುನಾವಣೆಯಲ್ಲಿ ಶಿಕಾರಿಪುರದಿಂದ ಸ್ಪರ್ಧಿಸಿದ್ದಾರೆ. ಈ ಬಾರಿ ಅವರು ತಮ್ಮ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟಕೊಟ್ಟಿದ್ದಾರೆ.


ಚುನಾವಣಾ ರಾಜಕೀಯಕ್ಕೆ ಈಶ್ವರಪ್ಪ ಗುಡ್ ಬೈ


ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ಹಳೆಯ ಯುದ್ಧದ ಕುದುರೆ ಕೆಎಸ್ ಈಶ್ವರಪ್ಪ ಕೂಡ ತಮ್ಮ ಒಂದು ಕಾಲದ ಹಿತೈಷಿ ಯಡಿಯೂರಪ್ಪನವರಂತೆಯೇ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಈಶ್ವರಪ್ಪ ಅವರು 1989 ರಿಂದ ಶಿವಮೊಗ್ಗ ಶಾಸಕರಾಗಿದ್ದರು. ಎರಡು ಬಾರಿ (1999 ಮತ್ತು 2013) ಸೋತರು. ಆದರೆ ಅವರು 1989 ರಿಂದ ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.


ಇದನ್ನೂ ಓದಿ: Mahesh Tenginkai: ಶೆಟ್ಟರ್ ವಿರುದ್ಧ ತೊಡೆ ತಟ್ಟಿರುವ ಮಹೇಶ್ ಟೆಂಗಿನಕಾಯಿ ಯಾರು? ಮೊದಲ ಯುದ್ಧದಲ್ಲಿ ಗುರುವಿನ ವಿರುದ್ಧ ಗೆಲ್ಲುತ್ತಾರಾ?


ಪುತ್ರನಿಗೆ ಟಿಕೆಟ್ ಕೊಡಿಸಲು ಈಶ್ವರಪ್ಪ ವಿಫಲ


ಅತ್ತ ಶಿಕಾರಿಪುರದಲ್ಲಿ ತಮ್ಮ ಪುತ್ರನನ್ನು ಕಣಕ್ಕಿಳಿಸಲು ಯಡಿಯೂರಪ್ಪ ಯಶಸ್ವಿಯಾದ್ರೆ, ಇತ್ತ ಶಿವಮೊಗ್ಗ ನಗರದಿಂದ ತಮ್ಮ ಮಗ ಕಾಂತೇಶ್‌ಗೆ ಬಿಜೆಪಿ ಟಿಕೆಟ್ ಕೊಡಿಸಲು ಈಶ್ವರಪ್ಪ ವಿಫಲರಾಗಿದ್ದಾರೆ. ಇದೀಗ ಬಿಜೆಪಿಯಿಂದ ಈಶ್ವರಪ್ಪ ಆಪ್ತರೂ ಆಗಿರುವ ಲಿಂಗಾಯತ ಸಮುದಾಯದ ಚನ್ನಬಸಪ್ಪ ಅವರನ್ನು ಕಣಕ್ಕಿಳಿಸಿದೆ.


ರಾಜಕೀಯ ನಿವೃತ್ತಿ ಪಡೆದ ಕಾಗೋಡು


ಗುಡ್ಡಗಾಡು ಸಾಗರದಲ್ಲಿ 90ರ ಹರೆಯದ ಕಾಡೋಗು ತಿಮ್ಮಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿ ಯುವ ಪೀಳಿಗೆಗೆ ದಾರಿ ಮಾಡಿಕೊಡುತ್ತಿದ್ದಾರೆ. ಕಾಗೋಡು ಅವರು 1962 ರಿಂದ 12 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದ್ದಾರೆ ಮತ್ತು 1972-2018 ರ ನಡುವೆ ಶಾಸಕರಾಗಿದ್ದರು, ಬಳಿಕ ವಿಧಾನಸಭೆ ಸ್ಪೀಕರ್ ಕೂಡ ಆಗಿದ್ದರು.


ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕಾಗೋಡು ಪುತ್ರಿ


ತಂದೆಯ ರಾಜಕಾರಣವನ್ನು ಮುಂದುವರೆಸುವ ಉತ್ಸಾಹದಲ್ಲಿದ್ದ ಕಾಗೋಡು ಪುತ್ರಿ ಡಾ. ರಾಜನಂದಿನಿ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಆದರೆ 2018 ರಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡ ಅವರ ಸೋದರಳಿಯ ಬೇಳೂರು ಗೋಪಾಲಕೃಷ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ಒಲಿದಿದೆ. ಹೀಗಾಗಿ ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ರಾಜನಂದಿನಿ, ತಂದೆಯವರ ವಿರೋಧದ ನಡುವೆಯೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.


ಮತ್ತೆ ಬಂಗಾರಪ್ಪ ಪುತ್ರರ ಕದನ


ಅತ್ತ ಸೊರಬದಲ್ಲಿ ದಿವಂಗತ ಎಸ್. ಬಂಗಾರಪ್ಪ ಅವರ ಪುತ್ರರಾದ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಕ್ರಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್‌ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ.


ನೇಪಥ್ಯಕ್ಕೆ ಸರಿದ ದಿಗ್ಗಜರು


ಬಿಎಸ್‌ವೈ, ಈಶ್ವರಪ್ಪ ಮತ್ತಿತರ ದಿಗ್ಗಜರ ನೇಪಥ್ಯದೊಂದಿಗೆ 2023ರ ವಿಧಾನಸಭಾ ಚುನಾವಣೆ ಶಿವಮೊಗ್ಗ ಜಿಲ್ಲೆಯಲ್ಲಿ ತನ್ನ ಹಳೆ ಚಾರ್ಮ್ ಕಳೆದುಕೊಂಡಿದೆ. ಕಾಗೋಡು ತಿಮ್ಮಪ್ಪ, ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರು ನೇಪಥ್ಯಕ್ಕೆ ಸರಿದಿದ್ದು, ಮುಂದಿನ ಪೀಳಿಗೆಗೆ ಅಧಿಕಾರ ಹಿಡಿಯಲು ಅನುವು ಮಾಡಿಕೊಟ್ಟಿದ್ದಾರೆ.


ಗೆಲುವಿನ ‘ಶಿಕಾರಿ’ ಮಾಡ್ತಾರಾ ವಿಜಯೇಂದ್ರ?


ಶಿಕಾರಿಪುರದಲ್ಲಿ ಕಾಂಗ್ರೆಸ್‌ನಿಂದ ದುರ್ಬಲ ಅಭ್ಯರ್ಥಿ ಕಣಕ್ಕಿಳಿದಿದ್ದರಿಂದ ವಿಜಯೇಂದ್ರ ಗೆಲುವು ಶತಸಿದ್ಧ ಎನ್ನಲಾಗಿದೆ. ಸ್ಥಳೀಯ ಲಿಂಗಾಯತ ನಾಯಕನ ವಿರೋಧದ ನಡುವೆಯೂ ಕಾಂಗ್ರೆಸ್ ಮತ್ತೊಮ್ಮೆ ಕುರುಬರನ್ನು ಕಣಕ್ಕಿಳಿದಿದೆ. ಅವರ ವಿರುದ್ಧ ಗೋಣಿ ಮಾಲತೇಶ್ ಕಣದಲ್ಲಿದ್ದಾರೆ. ಇವ್ರು 2018ರಲ್ಲಿ ಬಿಎಸ್‌ವೈ ವಿರುದ್ಧ 30 ಸಾವಿರಕ್ಕೂ ಅಧಿಕ ಮತಗಳಿಂದ ಸೋತಿದ್ದರು.


ಶಿವಮೊಗ್ಗ ಪಾಲಿಟಿಕ್ಸ್‌ನಲ್ಲಿ ಡೀಲ್ ನಡೀತಾ?


ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಹಾಗೂ ಲಿಂಗಾಯತ ಮುಖಂಡ ನಾಗರಾಜಗೌಡ ಅವರು ಬೆಂಗಳೂರಿನಲ್ಲಿ ಬಿಎಸ್‌ವೈ ಮತ್ತು ಕಾಂಗ್ರೆಸ್ ನಾಯಕತ್ವದ ನಡುವೆ “ಡೀಲ್” ನಡೆದಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ನಡೆದಿದೆಯಾ ಒಳ ಒಪ್ಪಂದ?


ನ್ಯೂಸ್ 18 ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನನ್ನನ್ನು ಕಣಕ್ಕಿಳಿಸಿದ್ದರೆ ನಾನು ವಿಜಯೇಂದ್ರ ಅವರನ್ನು ಸೋಲಿಸುತ್ತಿದ್ದೆ. ಲಿಂಗಾಯತ ಮತಗಳ ವಿಭಜನೆಯಾಗದಂತೆ ನೋಡಿಕೊಳ್ಳಲು ಬೆಂಗಳೂರಿನ ಕಾಂಗ್ರೆಸ್ ನಾಯಕತ್ವ ಬಿಎಸ್‌ವೈ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಮತ್ತೊಮ್ಮೆ ಕುರುಬರನ್ನು ಕಣಕ್ಕಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಜೆಡಿಎಸ್ ನೆರವಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.


ಶಿವಮೊಗ್ಗ ನಗರದ ಲೆಕ್ಕಾಚಾರ ಹೇಗಿದೆ?


ಶಿವಮೊಗ್ಗ ನಗರದಲ್ಲಿ ಬಿಜೆಪಿ ಲಿಂಗಾಯತ ಸಮುದಾಯದ ಚನ್ನಬಸಪ್ಪ ಎಂಬ ಹಿಂದುತ್ವದ ನಾಯಕನನ್ನು ಕಣಕ್ಕಿಳಿಸಿದೆ. ಒಮ್ಮೆ ಸಿದ್ದರಾಮಯ್ಯನವರ ತಲೆ ಕಡಿಯುವುದಾಗಿ ಬೆದರಿಕೆ ಹಾಕಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಎಲ್ಲಾ ಮುಸ್ಲಿಂ ಮತಗಳು ಮತ್ತು ಲಿಂಗಾಯತ ಮತಗಳ ದೊಡ್ಡ ಭಾಗವನ್ನು ಪಡೆಯುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಯುವ ಲಿಂಗಾಯತ ನಾಯಕ ಎಚ್.ಸಿ. ಯೋಗೀಶ್ ಅವರನ್ನು ಕಣಕ್ಕಿಳಿಸಿದೆ.


ಹೊಸ ಆಟವನ್ನು ನೋಡುವ ನಿರೀಕ್ಷೆಯಲ್ಲಿ ಮತದಾರರು


ಹಿರಿಯ ಬಿಜೆಪಿ ನಾಯಕ ಆಯನೂರು ಮಂಜುನಾಥ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಬಂಡಾಯವಾಗಿ ಜೆಡಿಎಸ್ ಟಿಕೆಟ್‌ನಿಂದ ಲಿಂಗಾಯತ ಹೋರಾಟಕ್ಕೆ ಮುಂದಾಗಿದ್ದಾರೆ. ಸಾಗರದಲ್ಲಿ ಬಿಜೆಪಿಯ ಶಾಸಕ ಹರತಾಳು ಹಾಲಪ್ಪ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿದ್ದಾರೆ.


ತೀರ್ಥಹಳ್ಳಿ, ಭದ್ರಾವತಿಯಲ್ಲೇ ಹೇಗಿದೆ ಕದನ?


ತೀರ್ಥಹಳ್ಳಿಯಲ್ಲಿ ಹಳೆ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್ ಮತ್ತು ಬಿಜೆಪಿಯ ಗೃಹ ಸಚಿವ ಆರಗ ಜ್ಞಾನೇಂದ್ರ ನಡುವೆ ಮತ್ತೊಮ್ಮೆ ಹಣಾಹಣಿ ಏರ್ಪಟ್ಟಿದೆ. ಕೈಗಾರಿಕಾ ಪಟ್ಟಣ ಭದ್ರಾವತಿಯಲ್ಲಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಅವರು ತಮ್ಮ ಹಳೆಯ ಪ್ರತಿಸ್ಪರ್ಧಿ ಜೆಡಿಎಸ್‌ನ ಮಾಜಿ ಶಾಸಕ ದಿ. ಅಪ್ಪಾಜಿ ಗೌಡ ಅವರ ಪತ್ನಿ ಶಾರದ ಅಪ್ಪಾಜಿ ಗೌಡ ಅವರನ್ನು ಎದುರಿಸಬೇಕಿದೆ.


ಇದನ್ನೂ ಓದಿ:  Lingayat: ಶೆಟ್ಟರ್, ಸವದಿಗೆ ಕಾಂಗ್ರೆಸ್‌ನಲ್ಲಿ ಜೈ! ಲಿಂಗಾಯತ ಮತಬುಟ್ಟಿಗೆ ಹಾಕಿದ್ರಾ 'ಕೈ'?


ಯಾರೇ ಗೆದ್ದರೂ, ಸೋತರೂ ಚುನಾವಣೆಗೆ ಗುಡ್ ಬೈ ಹೇಳಿದ ಹಳೇ ರಣಕುದುರೆಗಳಿಲ್ಲದೇ ಶಿವಮೊಗ್ಗ ರಾಜಕಾರಣ ಕಳೆಗುಂದುತ್ತದೆಯೇ? ಕಾಲವೇ ಇದಕ್ಕೆ ಉತ್ತರಿಸಲಿದೆ…

top videos
    First published: