Beauty of Shivamogga: ಮಲೆನಾಡಿನ ಪ್ರಕೃತಿ ಸೌಂದರ್ಯವಷ್ಟೇ ರೋಚಕವಾಗಿದೆ ಅಲ್ಲಿನ ಇತಿಹಾಸ ಮತ್ತು ಸಂಸ್ಕೃತಿ

ಶಿವಮೊಗ್ಗವು ಮಲೆನಾಡಿನ ಹೆಬ್ಬಾಗಿಲು ಎಂದು ಹೆಸರುವಾಸಿಯಾಗಿದೆ. ಶಿವಮೊಗ್ಗವು ಮಲೆನಾಡಿಗರಿಗೆ ಒಂದು ಹೆಮ್ಮೆಯ ಜಿಲ್ಲೆ. ಇಲ್ಲಿನ ಕಾಡು, ಬೆಟ್ಟ, ನದಿ, ಹಳ್ಳ ಹೀಗೆ ಶಿವಮೊಗ್ಗ ಸ್ಥಳವನ್ನು ಇಷ್ಟ ಪಡದೇ ಇರೋರು ಈ ಕರ್ನಾಟಕದಲ್ಲಿಯೇ ಇಲ್ಲ. ಅಷ್ಟೊಂದು ಸುಂದರ ಪ್ರದೇಶ ಅದು.

ಜೋಗ ಜಲಪಾತ

ಜೋಗ ಜಲಪಾತ

  • Share this:
ಶಿವಮೊಗ್ಗ (Shivamogga) ಅಂದ್ರೆ ಮಳೆ ಮತ್ತು ಮಲೆನಾಡು ನೆನಪಿಗೆ ಬರುತ್ತದೆ. ಅಲ್ಲಿನ ಕಾಡು, ಬೆಟ್ಟ, ನದಿ, ಹಳ್ಳ ಹೀಗೆ ಶಿವಮೊಗ್ಗ ಸ್ಥಳವನ್ನು ಇಷ್ಟ ಪಡದೇ ಇರೋರು ಯಾರು ಇಲ್ಲ. ಇನ್ನು ಅಲ್ಲಿನ ಶಿವಪ್ಪ ನಾಯಕನ ಅರಮನೆ (Shivappa Nayaka’s Palace), ಆಗುಂಬೆಯ ಕಾಡುಗಳು, ಭದ್ರಾ ವನ್ಯಜೀವಿ ಅಭಯಾರಣ್ಯ, ಕುವೆಂಪು (Kuvempu) ಅವರ ಕವಿ ಮನೆ ಮತ್ತು ಮಾಲ್ಗುಡಿ ವಸ್ತು ಸಂಗ್ರಹಾಲಯದಿಂದ ಶಿವಮೊಗ್ಗವು ಮತ್ತಷ್ಟು ಹೆಸರುವಾಸಿಯಾಗಿರುವುದು ಸುಳ್ಳಲ್ಲ. ಶಿವಮೊಗ್ಗ ಜಿಲ್ಲೆಯ ಮತ್ತೊಂದು ಆಕರ್ಷಣೀಯ ಸ್ಥಳವೆಂದರೆ (Attractive place) ಅದುವೇ ನಮ್ಮ ನಿಮ್ಮೆಲ್ಲರ ನೆಚ್ಚಿನ ಜೋಗಫಾಲ್ಸ್‌. ಈ ಜೋಗಫಾಲ್ಸ್‌ ಅನ್ನು (Jogafalls) ನೋಡಲು ವಿದೇಶಗಳಿಂದ ಜನರು ಬರುತ್ತಾರೆ ಎಂದ್ರೆ ಶಿವಮೊಗ್ಗ ಎಷ್ಟು ಪ್ರಸಿದ್ದ ಸ್ಥಳವಲ್ಲವೆ.. ಹಾಗಿದ್ರೆ ಶಿವಮೊಗ್ಗದ ಇನ್ನಷ್ಟು ರೋಚಕ ಮಾಹಿತಿಗಳಿಗಾಗಿ ಮುಂದೆ ಓದಿ.

ಜಗತ್​​ ಪ್ರಸಿದ್ಧ ಜೋಗಫಾಲ್ಸ್‌ ಬಗ್ಗೆ ಒಂದಿಷ್ಟು ಮಾಹಿತಿ 
ಜಗತ್ಪ್ರಸಿದ್ಧ ಜೋಗಫಾಲ್ಸ್‌, ಶರಾವತಿ ನದಿಯಿಂದ ಧುಮ್ಮಿಕ್ಕುವ ಜಲಪಾತವಾಗಿದೆ. 4 ಕಡೆಗಳಿಂದ ಸುಮಾರು 810 ಅಡಿಗಳಷ್ಟು ಕೆಳಗೆ ನೀರು ಧುಮ್ಮಿಕ್ಕುತ್ತದೆ. ಈ ನಾಲ್ಕು ಪ್ರತ್ಯೇಕ ಎಸಳುಗಳನ್ನು ರಾಜಾ, ರಾಣಿ, ರೋವರ್ ಮತ್ತು ರಾಕೆಟ್ ಎಂದು ಕರೆಯುತ್ತಾರೆ.ಇದು ಕರ್ನಾಟಕದ ಅತಿ ಎತ್ತರದ ಜಲಪಾತ ಮತ್ತು ಏಷ್ಯಾದ ಐದನೇ ಅತಿ ಎತ್ತರದ ಜಲಪಾತ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಮಲೆನಾಡಿನ ಹೆಬ್ಬಾಗಿಲು
ಶಿವಮೊಗ್ಗವು ಮಲೆನಾಡಿನ ಹೆಬ್ಬಾಗಿಲು ಎಂದು ಹೆಸರುವಾಸಿಯಾಗಿದೆ. ಶಿವಮೊಗ್ಗವು ಮಲೆನಾಡಿಗರಿಗೆ ಒಂದು ಹೆಮ್ಮೆಯ ಜಿಲ್ಲೆ. ಈ ಜಿಲ್ಲೆಯು ನಮ್ಮ ರಾಜ್ಯಕ್ಕೆ 4 ಮುಖ್ಯಮಂತ್ರಿಗಳನ್ನು ನೀಡಿದ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: Andaman Tourism: ದಸರಾ ರಜೆಯಲ್ಲಿ ಅಂಡಮಾನ್​ ಟ್ರಿಪ್​ ಪ್ಲಾನ್​ ಮಾಡಿದ್ದೀರಾ; ಈ ಸ್ಥಳಗಳನ್ನು ಮಿಸ್​ ಮಾಡಬೇಡಿ

ಕವಿಗಳಿಗೆ ಹೆಚ್ಚು ಹೆಸರುವಾಸಿಯಾದ ಜಿಲ್ಲೆ
ಇದಲ್ಲದೇ, ಶಿವಮೊಗ್ಗ ಜಿಲ್ಲೆಯು ಕವಿಗಳಿಗೆ ಹೆಚ್ಚು ಹೆಸರುವಾಸಿ. ಆದ್ದರಿಂದ ಇಲ್ಲಿನ ಇಬ್ಬರು ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಅವರು ಯಾರು ಎಂದು ನಿಮಗೆ ಗೊತ್ತೆ ಇರುತ್ತದೆ. ಅವರೇ ನಮ್ಮ ನಿಮ್ಮ ನೆಚ್ಚಿನ ಸಾಹಿತಿ- ಕುವೆಂಪು ಮತ್ತು ಯು.ಆರ್.ಅನಂತಮೂರ್ತಿ.

ಶಿವಮೊಗ್ಗ ಜಿಲ್ಲೆಯ ಬಗ್ಗೆ ಏನಂತಾರೆ ಜೈರಾಮ್ ಕಿಮ್ಮನೆ
ಶಿವಮೊಗ್ಗ ಜಿಲ್ಲೆಯ ಕುರಿತು “ಶಿವಮೊಗ್ಗವು ಅಡಿಕೆ, ಕಡಲೆಕಾಯಿ, ಭತ್ತ ಮತ್ತು ಕಾಳುಮೆಣಸಿನ ವ್ಯಾಪಾರಕ್ಕೆ ಹೆಸರುವಾಸಿಯಾದ ರೋಮಾಂಚಕ ಮಾರುಕಟ್ಟೆಯಿಂದ ಹಿಡಿದು ಆಟೋಮೊಬೈಲ್ ಉದ್ಯಮದ ಅಗತ್ಯತೆಗಳನ್ನು ಪೂರೈಸುವ ಕೈಗಾರಿಕಾ ಕೇಂದ್ರವಾಗಿಯೂ ಈ ಜಿಲ್ಲೆಯು ಮಾರ್ಪಾಡುಗೊಂಡಿದೆ.

ಮರ್ಸಿಡಿಸ್ ಬೆಂಜ್‌ನಂತಹ ಆಟೋಮೊಬೈಲ್ ಮುಖ್ಯ ಸಂಸ್ಥೆಗಳಿಗೆ ಮುಖ್ಯ ಆಟೋಮೋಬೈಲ್‌ ಕಚ್ಚಾ ವಸ್ತುಗಳನ್ನು ಸಹ ಪೂರೈಕೆ ಮಾಡುತ್ತದೆ” ಎಂದು ಕಿಮ್ಮನೆ ಐಷಾರಾಮಿ ರೆಸಾರ್ಟ್‌ಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅಧ್ಯಕ್ಷ ಜೈರಾಮ್ ಕಿಮ್ಮನೆ ಹೇಳುತ್ತಾರೆ.

ಶಿವಮೊಗ್ಗ ಜಿಲ್ಲೆಯ ಹಿನ್ನೆಲೆ:
ಶಿವಮೊಗ್ಗ ಜಿಲ್ಲೆಯು ತುಂಗಾ ನದಿಯ ದಡದಲ್ಲಿ ನೆಲೆಸಿದೆ. ಇಂತಹ ಸುಂದರ ಮಲೆನಾಡಿನ ಸ್ಥಳಕ್ಕೆ ಒಂದು ರೋಚಕ ಇತಿಹಾಸ ಇದ್ದೆ ಇರುತ್ತದೆ ಅಲ್ಲವೇ? ಹೌದು, ಶಿವಮೊಗ್ಗಕ್ಕೂ ಒಂದು ರೋಚಕ ಇತಿಹಾಸವಿದೆ. ಇದು ಕೆಳದಿ ಅರಸರಿಂದ ಸ್ಥಾಪಿಸಲ್ಪಟ್ಟ ನಗರವಾಗಿದೆ. ಇದು ಶಿವಪ್ಪ ನಾಯಕನ ಆಳ್ವಿಕೆಯಲ್ಲಿ ಅತ್ಯಂತ ಪ್ರಸಿದ್ಧ ತಾಣವಾಗಿತ್ತು.

ಶಿವಪ್ಪ ನಾಯಕನ ಅರಮನೆ


ನಿಮಗೆ ಏನಾದರೂ ಈ ಜಿಲ್ಲೆಯ ಇತಿಹಾಸ ತಿಳಿಯಬೇಕೆಂಬ ಕುತೂಹಲ ಇದ್ದರೆ ನೀವು ಶಿವಪ್ಪ ನಾಯಕನ ಅರಮನೆಯನ್ನು ನೋಡಬಹುದು. ಈ ಅರಮನೆಯು ನದಿಯ ತೀರದಲ್ಲಿ ಇದೆ. ಈ ಅರಮನೆಯ ದರ್ಬಾರ್ ಹಾಲ್, ಎರಡು ಅಂತಸ್ತಿನ ರಚನೆಯೊಂದಿಗೆ ಬೃಹತ್ ಮರದ ಸ್ತಂಭಗಳು ಮತ್ತು ಬಾಲ್ಕನಿಗಳು ಅತ್ಯಂತ ಸುಂದರ ಶಿಲ್ಪಾಕಲಾಕೃತಿಯಿಂದ ಕೂಡಿವೆ.

ಇದನ್ನೂ ಓದಿ:  Mysterious Places: ಗುರುತ್ವಾಕರ್ಷಣೆಯೇ ಇಲ್ಲದ ಸ್ಥಳಗಳಿವು! ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

ಭದ್ರಾ ವನ್ಯಜೀವಿ ಅಭಯಾರಣ್ಯ
ಇದರ ನಂತರ ಶಿವಮೊಗ್ಗದ ಹಾಟ್‌ಸ್ಪಾಟ್‌ ಆಗಿದೆ ಭದ್ರಾ ವನ್ಯಜೀವಿ ಅಭಯಾರಣ್ಯ. ಇಲ್ಲಿನ ಸುಂದರ ಹಚ್ಚ ಹಸಿರಿನ ಕಾಡಿಗೆ ನೀವು ಮನಸೋಲುವುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿನ ಭದ್ರಾ ವನ್ಯಜೀವಿಗಳು, ಪಕ್ಷಿಗಳು, ಚಿಟ್ಟೆಗಳು ಮತ್ತು ವಿವಿಧ ಸರೀಸೃಪಗಳಿಗೆ ಈ ಅಭಯಾರಣ್ಯ ನೆಲೆಯಾಗಿದೆ. ಇದನ್ನು 1998 ರಲ್ಲಿ ಭಾರತದ 25 ನೇ ಹುಲಿ ಸಂರಕ್ಷಿತ ಪ್ರದೇಶವಾಗಿ ಗುರುತಿಸಿದೆ.

ಭದ್ರಾ ವನ್ಯಜೀವಿ ಅಭಯಾರಣ್ಯ


ಮಂಡಗದ್ದೆ ಪಕ್ಷಿಧಾಮ
ಇನ್ನು ಶಿವಮೊಗ್ಗ ದಿಂದ ತೀರ್ಥಹಳ್ಳಿ ರಸ್ತೆಗೆ 30-ಕಿಮೀ ದೂರದಲ್ಲಿರುವ ಮಂಡಗದ್ದೆ ಪಕ್ಷಿಧಾಮಕ್ಕೆ ನೀವು ಭೇಟಿ ನೀಡಿದರೆ ಸಾಕು, ನೀವು ಯಾವುದೋ ಬೇರೆ ಲೋಕಕ್ಕೆ ಹೋದಂತೆ ಭಾಸವಾಗುತ್ತದೆ. ಇಲ್ಲಿ ವಾರ್ಷಿಕವಾಗಿ ಮೂರು ಜಾತಿಯ ಪಕ್ಷಿಗಳು ಯಾವಾಗಲೂ ಬಂದು ಹೋಗುತ್ತಿರುತ್ತವೆ.

ಅವುಗಳೆಂದರೆ ಮೀಡಿಯನ್ ಎಗ್ರೆಟ್, ಲಿಟಲ್ ಕಾರ್ಮೊರೆಂಟ್ ಮತ್ತು ಡಾರ್ಟರ್. ಈ ಗುಂಪಿನ ಪಕ್ಷಿಗಳು ಹೆಚ್ಚು ಭೇಟಿ ನೀಡುವ ಸ್ಥಳವೆಂದರೆ ಅದು ಶಿವಮೊಗ್ಗದ ಮಂಡಗದ್ದೆ ಎಂಬ ಸಣ್ಣ ಗ್ರಾಮ. ಈ ಕಾರಣದಿಂದ ಈ ಗ್ರಾಮವು ವನ್ಯಜೀವಿ ಸ್ಥಳವೆಂದು ಭಾರತ ಸರ್ಕಾರವು ಗುರುತಿಸಿದೆ.

ಮಂಡಗದ್ದೆ ಪಕ್ಷಿಧಾಮ


ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಸಫಾರಿ
ವಿಶ್ವ ಪ್ರಸಿದ್ಧ ಜೋಗ ಜಲಪಾತದಿಂದ ಹಿಂತಿರುಗುವಾಗ, ತ್ಯಾವರೆಕೊಪ್ಪ ಎಂಬ ಸ್ಥಳದಲ್ಲಿ ಹುಲಿ ಮತ್ತು ಸಿಂಹ ಸಫಾರಿಯಲ್ಲಿ ಇರುವ ಹುಲಿ ಮತ್ತು ಸಿಂಹಗಳು ಅಲ್ಲಿನ ವಿಸ್ತಾರವಾದ ಆವರಣಗಳಲ್ಲಿ ಅಲೆದಾಡುವುದನ್ನು ನೀವು ನೋಡಿ ಬೆರಗಾಗಬಹುದು.

ಇದನ್ನೂ ಓದಿ: Ancient Temple: ಭಾರತದಾದ್ಯಂತ ನೂರು ವರ್ಷಗಳಿಂದ ಇರುವ ಪ್ರಾಚೀನ ದೇವಾಲಯಗಳಿವೆ, ಅವುಗಳ ಬಗ್ಗೆ ನಿಮಗೆ ಗೊತ್ತಾ?ಸಕ್ರೆಬೈಲ್  ಆನೆ ಶಿಬಿರ
ತುಂಗಾ ನದಿಯ ದಡದಲ್ಲಿರುವ ಸಕ್ರೆಬೈಲ್ ಎಂಬ ಸ್ಥಳವು ಆನೆ ಶಿಬಿರಕ್ಕೆ ಹೆಸರುವಾಸಿಯಾಗಿದೆ. ನೀವು ಅಲ್ಲಿ ಆನೆಗಳು ನದಿಯಲ್ಲಿ ಸ್ನಾನ ಮಾಡುವುದನ್ನು ವೀಕ್ಷಿಸಬಹುದು.

ಸಕ್ರೆಬೈಲ್  ಆನೆ ಶಿಬಿರ


ಕೋಡಚಾದ್ರಿ ಬೆಟ್ಟ
ಸಾಹಸಪ್ರಿಯರಿಗೆ ಶಿವಮೊಗ್ಗ ಒಂದು ಸ್ವರ್ಗ ಇದ್ದಂತೆ. ಏಕೆಂದರೆ, ಇಲ್ಲಿನ ನಿತ್ಯಹರಿದ್ವರ್ಣ ಕಾಡುಗಳು, ಕಾಡಿನಲ್ಲಿರುವ ನಾಗರಹಾವು ಮತ್ತು ಇತರ ವಿಷಕಾರಿ ಪ್ರಾಣಿಗಳು, ಅದ್ಭುತ ಸೂರ್ಯಾಸ್ತ ತಾಣಗಳು ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳವೆಂದು ಹೆಸರುವಾಸಿಯಾಗಿರುವ ಆಗುಂಬೆಯು ಟ್ರೆಕ್ಕಿಂಗ್ ಮಾಡುವುದಕ್ಕೆ ಹೆಚ್ಚು ಸೂಕ್ತ ಸ್ಥಳವೆಂದು ಇಲ್ಲಿನ ಕೋಡಚಾದ್ರಿ ಬೆಟ್ಟಕ್ಕೆ ಆಗಾಗ ಟ್ರೆಕ್ಕಿಂಗ್‌ ಮಾಡುವವರು ಬರುತ್ತಲೇ ಇರುವವರ ಮಾತಾಗಿದೆ.

ಕೋಡಚಾದ್ರಿ ಬೆಟ್ಟ


ಶಿವಮೊಗ್ಗ ಬಹಳ ಶ್ರೀಮಂತವಾದ ಸ್ಥಳ ಮತ್ತೂರು
ಸಾಂಸ್ಕೃತಿಕವಾಗಿ ಶಿವಮೊಗ್ಗ ಬಹಳ ಶ್ರೀಮಂತವಾದ ಸ್ಥಳವೆಂದು ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ. ಇಲ್ಲಿನ ಇನ್ನೊಂದು ವಿಶೇಷ ಎಂದರೆ ಮತ್ತೂರು ಎಂಬ ಗ್ರಾಮ. ಇಲ್ಲಿನ ಸ್ಥಳೀಯ ಜನರು ಇಂದಿಗೂ ವ್ಯವಹರಿಸುವ ಭಾಷೆಯಾಗಿ ಸಂಸ್ಕೃತವನ್ನು ಬಳಸುತ್ತಾರೆ ಎಂದರೆ ನೀವು ನಂಬಲೇಬೇಕು.

ಇದನ್ನೂ ಓದಿ: Holiday Plan: ದಸರಾ ಹತ್ತಿರ ಬರ್ತಿದೆ, ಮೈಸೂರಿಗೆ ಹೋದ್ರೆ ಈ ಪ್ಲೇಸ್​ಗಳನ್ನು ಮಿಸ್​ ಮಾಡ್ದೇ ನೋಡ್ಕೊಂಡು ಬನ್ನಿ

ಈ ಗ್ರಾಮಕ್ಕೆ ನೀವು ಭೇಟಿ ನೀಡಿದರೆ ಅಲ್ಲಿನ ಸ್ಥಳೀಯರು ನಿಮ್ಮೊಂದಿಗೆ ಸಂಸ್ಕೃತದಲ್ಲೇ ವ್ಯವಹರಿಸಿದರೆ ಅಚ್ಚರಿ ಪಡಬೇಕಾಗಿಲ್ಲ. ಅದಕ್ಕಾಗಿ ಅವರು ನಿಮ್ಮನ್ನು ಕುರಿತು "ಕಥಂ ಅಸ್ತಿ" ಅಥವಾ "ನಾಮ್ ಕಿಮ್" ಎಂದು ಕೇಳಿ ಸ್ವಾಗತಿಸಬಹುದು.

ಮತ್ತೂರು


ಇಲ್ಲಿನ ಮತ್ತೊಂದು  ಆಕರ್ಷಣಿಯ ಸ್ಥಳ ಕುಪ್ಪಳ್ಳಿ
ಶಿವಮೊಗ್ಗದಲ್ಲಿ ಮತ್ತೊಂದು ಆಕರ್ಷಣಿಯ ಸ್ಥಳವೆಂದರೆ ಅದುವೇ ಕುಪ್ಪಳ್ಳಿ ಆಗಿದೆ. ನಿಮಗೆ ಸಾಹಿತ್ಯದ ಮೇಲೆ ಹೆಚ್ಚು ಒಲವಿದ್ದರೆ ಈ ಸ್ಥಳವು ನಿಮಗೆ ಸಾಹಿತ್ಯದ ಅನೇಕ ಮಜಲುಗಳನ್ನು ತೋರಿಸುತ್ತದೆ. ಈ ಸ್ಥಳವು ಸಾಹಿತ್ಯಾಭಿಮಾನಿಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತದೆ.

ಕವಿಶೈಲಾ, ಕವಿ ಕುವೆಂಪು ಅವರಿಗೆ ಸಮರ್ಪಿತವಾದ ಒಂದು ಸಣ್ಣ ಬೆಟ್ಟದ ಮೇಲೆ ಮೆಗಾಲಿಥಿಕ್ ಬಂಡೆಗಳಿಂದ ಮಾಡಲ್ಪಟ್ಟ ಒಂದು ರಾಕ್ ಸ್ಮಾರಕ ಮತ್ತು ವೃತ್ತಾಕಾರದ ಶೈಲಿಯಲ್ಲಿ ಜೋಡಿಸಲಾದ ಈ ಸ್ಮಾರಕವು ಇಂಗ್ಲೆಂಡ್‌ನ ಸ್ಟೋನ್‌ಹೆಂಜ್ ಅನ್ನು ನೆನಪಿಸುತ್ತದೆ.

ಕುಪ್ಪಳ್ಳಿಯ ಕವಿಮನೆ


ಈ ಸ್ಮಾರಕವನ್ನು ಸ್ಥಾಪಿಸಲು ಕಾಫಿ ಉದ್ಯಮಿ ಸಿದ್ಧಾರ್ಥ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದು ಕೆಲವರಿಗೆ ಮಾತ್ರ ತಿಳಿದಿದೆ. ಕುಪ್ಪಳ್ಳಿಯ ಕವಿಮನೆಯು ಕುವೆಂಪು ಅವರ ಪೂರ್ವಜರ ಮನೆ, ಇದು ಈಗ ಒಂದು ವಸ್ತುಸಂಗ್ರಹಾಲಯವಾಗಿದ್ದು, ಅಲ್ಲಿ ಕುವೆಂಪು ಅವರ ಪುಸ್ತಕಗಳು, ವಿವಿಧ ಪ್ರಶಸ್ತಿಗಳು ಮತ್ತು ಅವರ ಉಲ್ಲೇಖಗಳು, ಗೃಹೋಪಯೋಗಿ ವಸ್ತುಗಳು, ಶ್ರೀ ರಾಮಾಯಣ ದರ್ಶನದ ಕೈಬರಹದ ಪ್ರತಿ ಇತ್ಯಾದಿಗಳನ್ನು ನೋಡಬಹುದು. ಇಲ್ಲಿ ಕಲಾ ಗ್ಯಾಲರಿ ಮತ್ತು ಸ್ಮಾರಕ ಕಟ್ಟಡವೂ ಇದೆ.

ಇಲ್ಲಿ ನೋಡಬಹುದ್ದಾದ ಮತ್ತಷ್ಟು ಸ್ಥಳಗಳಿವು
ಇನ್ನು ಅನೇಕ ಪ್ರೇಕ್ಷಣಿಯ ಸ್ಥಳಗಳನ್ನು ನಾವು ಇಲ್ಲಿ ನೋಡಬಹುದು. ಅದರಲ್ಲಿ ಮುಖ್ಯವಾಗಿ ನೀನಾಸಂ ಎಂಬ ರಂಗಭೂಮಿ, ಸಾಗರ್, ಗ್ರಾಮೀಣ ಕುಶಲಕರ್ಮಿಗಳು ಮಾಡಿದ ಶ್ರೀಗಂಧದ ಕೆತ್ತನೆಗಳಿಗೆ ಪ್ರಸಿದ್ಧವಾದ ಸಾಂಸ್ಕೃತಿಕ ಕೇಂದ್ರಗಳು.

ಇದನ್ನೂ ಓದಿ:  Most Beautiful Cities: ವಿಶ್ವದ ಅತೀ ಸುಂದರ ಕಟ್ಟಡಗಳಿರುವ ನಗರಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ಆಧ್ಯಾತ್ಮಿಕ ಒಲವು ಹೊಂದಿರುವವರಿಗೆ, ಕೆಳದಿಯಲ್ಲಿರುವ ರಾಮೇಶ್ವರ ದೇವಾಲಯ, ಇಕ್ಕೇರಿಯ ಅಘೋರೇಶ್ವರ ದೇವಾಲಯ ಮತ್ತು ಸಿಗಂದೂರಿನ ಸುಂದರವಾದ ಪರಿಸರದಲ್ಲಿರುವ ಚೌಡೇಶ್ವರಿ ದೇವಾಲಯದಂತಹ ದೇವಾಲಯಗಳಿವೆ.

ಶಿವಮೊಗ್ಗದ ಅತ್ಯಂತ ಪ್ರಸಿದ್ಧ ಸ್ಥಳ: ಮಾಲ್ಗುಡಿ ಮ್ಯೂಸಿಯಂ
ಜನಪ್ರಿಯ ಟಿವಿ ಧಾರಾವಾಹಿ ಮಾಲ್ಗುಡಿ ಡೇಸ್‌ನಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿರುವ ಅರಸಲು ರೈಲು ನಿಲ್ದಾಣದಲ್ಲಿರುವ ಮಾಲ್ಗುಡಿ ಮ್ಯೂಸಿಯಂ ಶಿವಮೊಗ್ಗದ ಅತ್ಯಂತ ಪ್ರಸಿದ್ಧ ಸ್ಥಳವೆಂದು ಇತ್ತೀಚಿಗೆ ಸೇರ್ಪಡೆಯಾಗಿದೆ. ಈ ವಸ್ತುಸಂಗ್ರಹಾಲಯವು ಲೇಖಕ ಆರ್.ಕೆ.ನಾರಾಯಣ್ ಅವರ ಪೌರಾಣಿಕ ಕೃತಿಯನ್ನು ಅಮರಗೊಳಿಸಿದೆ.

ಈ ವಸ್ತುಸಂಗ್ರಹಾಲಯದಲ್ಲಿ ಹಳ್ಳಿಯ ಕಲಾಕೃತಿಗಳು, ಧಾರಾವಾಹಿಯ ಕಲಾವಿದರು ಮತ್ತು ನಟರ ಬಗ್ಗೆ ಮಾಹಿತಿ, ಚಿತ್ರೀಕರಣದ ಸಮಯದಲ್ಲಿ ತೆಗೆದ ಫೋಟೋಗಳ ಸಂಗ್ರಹ ಇವೆಲ್ಲವೂ ಇದೆ. ಹೀಗೆ ಇನ್ನೂ ಅನೇಕ ಪ್ರೇಕ್ಷಣಿಯ ಸ್ಥಳಗಳನ್ನು ನಾವಿಲ್ಲಿ ಕಾಣಬಹುದು.

ಮಾಲ್ಗುಡಿ ಮ್ಯೂಸಿಯಂ


ಇದನ್ನೂ ಓದಿ: Holiday Plan: 2 ದಿನ ರಜೆ, ಎಲ್ಲಿಗೆ ಹೋಗೋದು? ಚಿಂತೆ ಬಿಡಿ, ಬೆಂಗಳೂರು ಸಮೀಪದ ಈ ಸ್ಥಳಕ್ಕೆ ಟ್ರಿಪ್ ಹೋಗಿ

ಕೊನೆಯ ಮಾತು
ಶಿವಮೊಗ್ಗಕ್ಕೆ ಪ್ರವಾಸಿ ಸ್ಥಳಗಳ ಆಕರ್ಷಣೆಗಳ ಕೊರತೆಯಿಲ್ಲದಿದ್ದರೂ, ಈ ಸ್ಥಳಗಳಿಗೆ ಸಿಗಬೇಕಾದ ಮಾರುಕಟ್ಟೆ ಮತ್ತು ಪ್ರಚಾರದ ಕೊರತೆಯಿದೆ ಎಂದು ಹೇಳುವುದು ನಿಜಕ್ಕೂ ಬೇಸರದ ಸಂಗತಿ ಆಗಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯು ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯುವ ಇದಕ್ಕೆ ಉತ್ತಮ ರೀತಿಯಲ್ಲಿ ಪ್ರಚಾರ ಒದಗಿಸಿ ಇನ್ನು ಹೆಚ್ಚು ಜನರು ಬರುವ ಪ್ರೇಕ್ಷಣಿಯ ಸ್ಥಳಗಳಾನ್ನಾಗಿ ಮಾಡಬೇಕು.
Published by:Ashwini Prabhu
First published: