• ಹೋಂ
 • »
 • ನ್ಯೂಸ್
 • »
 • Explained
 • »
 • Air India: ಏರ್ ಇಂಡಿಯಾದಿಂದ ಮಹತ್ವದ ಡೀಲ್, ಭಾರತದ ವಾಯುಯಾನ ಉದ್ಯಮದ ಮೇಲೆ ಹೀಗೆಲ್ಲ ಆಗುತ್ತೆ ಪರಿಣಾಮ

Air India: ಏರ್ ಇಂಡಿಯಾದಿಂದ ಮಹತ್ವದ ಡೀಲ್, ಭಾರತದ ವಾಯುಯಾನ ಉದ್ಯಮದ ಮೇಲೆ ಹೀಗೆಲ್ಲ ಆಗುತ್ತೆ ಪರಿಣಾಮ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಟಾಟಾ ಸಮೂಹವು ಸರ್ಕಾರದಿಂದ ಮರಳಿ ತನ್ನ ತೆಕ್ಕೆಗೆ ಏರ್ ಇಂಡಿಯಾವನ್ನು ಪಡೆದುಕೊಂಡಿದ್ದೇ ಕೊಂಡಿದ್ದು, ಸಂಸ್ಥೆಯನ್ನು ಮೆಲಕ್ಕೆತ್ತಲು, ದೊಡ್ಡ ಮಟ್ಟಕ್ಕೆ ಕೊಂಡಯ್ಯಲು ಹತ್ತಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಾ ಬಂದಿದೆ. ಏರ್ ಇಂಡಿಯಾದ ಒಂದು ವಿಷಯ ಬಾರೀ ಸುದ್ದಿಯಾಗಿದೆ ಅದು ಎನು ಅಂತ ತಿಳಿದುಕೊಳ್ಳೋಣ ಬನ್ನಿ.

ಮುಂದೆ ಓದಿ ...
 • Trending Desk
 • 3-MIN READ
 • Last Updated :
 • Share this:

  ಟಾಟಾ (Tata) ಸಮೂಹವು ಸರ್ಕಾರದಿಂದ (Government) ಮರಳಿ ತನ್ನ ತೆಕ್ಕೆಗೆ ಏರ್ ಇಂಡಿಯಾವನ್ನು(Air India) ಪಡೆದುಕೊಂಡಿದ್ದೇ ಕೊಂಡಿದ್ದು, ಸಂಸ್ಥೆಯನ್ನು (Organization) ಮೆಲಕ್ಕೆತ್ತಲು, ದೊಡ್ಡ ಮಟ್ಟಕ್ಕೆ ಕೊಂಡಯ್ಯಲು ಹತ್ತಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಾ ಬಂದಿದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಎಂದರೆ ಏರ್‌ ಇಂಡಿಯಾ-ಬೋಯಿಂಗ್ ನಡುವಿನ ಭಾರಿ ಒಪ್ಪಂದ. ಟಾಟಾ ಸನ್ಸ್ (Tata Sons) ಒಡೆತನದ ಏರ್ ಇಂಡಿಯಾ 470 ವಿಮಾನಗಳನ್ನು (Airplanes) ಆರ್ಡರ್ ಮಾಡುವ ಮೂಲಕ ವಾಯುಯಾನ ಕ್ಷೇತ್ರದಲ್ಲಿ ದಾಖಲೆ ಬರೆದಿದೆ. ಇದು ಆಧುನಿಕ ವಿಮಾನಯಾನ ಕ್ಷೇತ್ರದಲ್ಲಿ ಏರ್‌ಲೈನ್ಸ್ ಕಂಪನಿಯೊಂದು ಮಾಡಿದ ಅತಿದೊಡ್ಡ ಆರ್ಡರ್‌ಗಳಲ್ಲಿ ಒಂದಾಗಿದೆ.


  ಏರ್ ಇಂಡಿಯಾ-ಬೋಯಿಂಗ್ ಮೆಗಾ ಒಪ್ಪಂದ


  ಫ್ರಾನ್ಸ್ ದೇಶದ ಏರ್​ಬಸ್ ಸಂಸ್ಥೆಯಿಂದ 250 ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದ ಭಾರತದ ಏರ್ ಇಂಡಿಯಾ ಸಂಸ್ಥೆ ಇದೀಗ ಅಮೆರಿಕದ 220 ಬೋಯಿಂಗ್ ವಿಮಾನಗಳನ್ನು ಖರೀದಿಸುವ ಮತ್ತೊಂದು ಒಪ್ಪಂದಕ್ಕೆ ಸಹಿಹಾಕಿದೆ.


  ಭಾರತದ ಅತಿದೊಡ್ಡ ವೈಮಾನಿಕ ಸಂಸ್ಥೆ ಏರ್ ಇಂಡಿಯಾ ಒಟ್ಟು 470 ವಿಮಾನಗಳನ್ನು ಖರೀದಿಸುತ್ತಿರುವುದು ಬಹಳ ದೊಡ್ಡ ಬೆಳವಣಿಗೆ ಎನಿಸಿದೆ. ವೈಮಾನಿಕ ಇತಿಹಾಸದಲ್ಲೇ ಇದೊಂದು ದಾಖಲೆಯ ಒಪ್ಪಂದ ಎನ್ನಲಾಗಿದೆ.


  ವೇಗವಾಗಿ ಬೆಳೆಯುತ್ತಿರುವ ಭಾರತದ ವೈಮಾನಿಕ ಕ್ಷೇತ್ರ


  ಮುಂದುವರಿದ ದೇಶಗಳಂತೆ ಭಾರತದ ವೈಮಾನಿಕ ಕ್ಷೇತ್ರ ಕೂಡ ಬಹಳ ಗಣನೀಯವಾಗಿ ಬೆಳೆಯುತ್ತಿದೆ. ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ವೇಗವಾಗಿ ಬೆಳೆಯುತ್ತಿದ್ದು, ವಿಮಾನಯಾನ ಪ್ರಯಾಣಕ್ಕೆ ಬೇಡಿಕೆ ಹೆಚ್ಚುತ್ತಿದೆ.


  ಫ್ರಾನ್ಸ್ ಅಧ್ಯಕ್ಷರ ಜೊತೆ ವರ್ಚುವಲ್‌ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ನರೇಂದ್ರ ಮೋದಿ ಅವರು, ಮುಂದಿನ 15 ವರ್ಷದಲ್ಲಿ ಇನ್ನೂ 2000 ಕ್ಕೂ ಹೆಚ್ಚು ವಿಮಾನಗಳು ಬೇಕಾಗಬಹುದು ಎಂದು ಹೇಳಿದ್ದರು.


  A major deal by Air India will impact the Indian aviation industry
  ಸಾಂಕೇತಿಕ ಚಿತ್ರ


  ಪ್ರಧಾನಿಯವರ ಈ ಮಾತು ಭಾರತದಲ್ಲಿ ವಾಯುಯಾನ ಸಂಸ್ಥೆ ಎಷ್ಟರ ಮಟ್ಟಿಗೆ ಬೆಳವಣಿಗೆ ಕಾಣುತ್ತಿದೆ ಎಂಬುದನ್ನು ನೋಡಬಹುದಾಗಿದೆ. ಹೀಗಾಗಿ ಈ ನಿಟ್ಟಿನಲ್ಲಿ ಏರ್ ಇಂಡಿಯಾ ಇಷ್ಟು ದೊಡ್ಡ ಸಂಖ್ಯೆಯ ವಿಮಾನಗಳನ್ನು ಖರೀದಿಸುವುದು ಭಾರತದ ಆರ್ಥಿಕತೆಗೆ ದೊಡ್ಡ ಕೊಡುಗೆ ಆಗುವುದರಲ್ಲಿ ಅನುಮಾನವಿಲ್ಲ ಎನ್ನಲಾಗುತ್ತಿದೆ.


  ಡೀಲ್ ಎಷ್ಟು ಮೊತ್ತದ್ದು?


  70 ಬಿಲಿಯನ್ ಡಾಲರ್ ಮೌಲ್ಯದ 470 ವಿಮಾನಗಳನ್ನು ಖರೀದಿಸಲು ಬೋಯಿಂಗ್ ಮತ್ತು ಏರ್‌ಬಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಏರ್ ಇಂಡಿಯಾ ಮಂಗಳವಾರ ಐತಿಹಾಸಿಕ ಘೋಷಣೆ ಮಾಡಿದೆ, ಇದು ವಾಯುಯಾನ ಇತಿಹಾಸದಲ್ಲಿ ಅತಿದೊಡ್ಡ ಆರ್ಡರ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


  ಒಪ್ಪಂದದಲ್ಲಿ ಯಾವೆಲ್ಲಾ ವಿಮಾನ ಇದೆ?


  ಫ್ರಾನ್ಸಿನ ಏರ್‌ಬಸ್‌ನಿಂದ 250 ಮತ್ತು ಅಮೆರಿಕದ ಬೋಯಿಂಗ್‌ನಿಂದ 220 ವಿಮಾನಗಳನ್ನು ಏರ್‌ ಇಂಡಿಯಾ ಖರೀದಿಸಲಿದೆ. ಒಟ್ಟು 420 ಸಣ್ಣ, ಮಧ್ಯಮ ಗಾತ್ರ ಮತ್ತು 40 ದೊಡ್ಡ ಗಾತ್ರದ ವಿಮಾನಗಳನ್ನು ಖರೀದಿಸಲು ಏರ್‌ ಇಂಡಿಯಾ ಮುಂದಾಗಿದ್ದು, ಮುಂದಿನ ಏಳರಿಂದ ಎಂಟು ವರ್ಷಗಳಲ್ಲಿ ವಿಮಾನಗಳು ಏರ್‌ ಇಂಡಿಯಾವನ್ನು ಸೇರಲಿದೆ.


  ಫ್ರಾನ್ಸ್‌ನ ಏರ್‌ಬಸ್‌ ಸಂಸ್ಥೆಯಿಂದ 40 ಭಾರೀಗಾತ್ರದ ಎ350 ವಿಮಾನಗಳನ್ನು, 20 ಬೋಯಿಂಗ್‌ 787 ಎಸ್‌, 10 ಬೋಯಿಂಗ್‌ 777-9ಎಸ್‌, 210 ಎರ್‌ಬಸ್‌ ಎ320/321 ನಿಯೋ, 190 ಬೋಯಿಂಗ್‌ ಮ್ಯಾಕ್ಸ್‌ ವಿಮಾನಗಳನ್ನು ಖರೀದಿಸಲು ಟಾಟಾ ಮಾಲಿಕತ್ವದ ಏರ್‌ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ.


  ಅಮೆರಿಕಾದಲ್ಲಿ ಉದ್ಯೋಗ ಸೃಷ್ಟಿ


  ಈ ಡೀಲ್‌ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಅಮೆರಿಕದಲ್ಲಿ ಬಹಳಷ್ಟು ಉದ್ಯೋಗಗಳನ್ನು ಸೃಷ್ಟಿಸಲಿದೆ. ಏರ್‌ ಇಂಡಿಯಾ-ಬೋಯಿಂಗ್ ನಡುವಿನ ಮಹತ್ವದ ಒಪ್ಪಂದವು ಅಮೆರಿಕದ 44 ರಾಜ್ಯಗಳಲ್ಲಿ 1 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಗಾಢಗೊಳಿಸುತ್ತದೆ ಎಂದು ಅಧ್ಯಕ್ಷ ಜೋ ಬೈಡನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದಾರೆ.


  ಏರ್ ಇಂಡಿಯಾ ಆದೇಶವು ಬೋಯಿಂಗ್‌ನ ಡಾಲರ್ ಮೌಲ್ಯದಲ್ಲಿ ಇದುವರೆಗೆ ಮೂರನೇ ಅತಿದೊಡ್ಡ ಮಾರಾಟವಾಗಿದೆ. ವಿಮಾನಗಳ ಸಂಖ್ಯೆಯಲ್ಲಿ ಎರಡನೆಯದಾಗಿದೆ.


  ಉಭಯ ನಾಯಕರು ಅಮೆರಿಕ-ಭಾರತದ ಸಂಬಂಧದ ಬಲವನ್ನು ಪುನರುಚ್ಚರಿಸಿದ್ದು, ನಮ್ಮ ಎರಡು ದೇಶಗಳಿಗೆ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ನಮ್ಮ ಹಂಚಿಕೆಯ ಆದ್ಯತೆಗಳ ಮೇಲೆ ಸಹಕಾರವನ್ನು ವಿಸ್ತರಿಸಲು ಒಟ್ಟಾಗಿ ಕೆಲಸ ಮಾಡಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.


  ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಏರ್ ಇಂಡಿಯಾ ಬೋಯಿಂಗ್ ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ.


  ಒಪ್ಪಂದಕ್ಕೆ ರಿಷಿ ಸುನಕ್ ಸಂತಸ


  ಬಹುಕೋಟಿ ಡಾಲರ್‌ ಮೌಲ್ಯದ ಪ್ರಯಾಣಿಕ ವಿಮಾನಗಳನ್ನು ಖರೀದಿಸಲು ಏರ್‌ಬಸ್‌ ಮತ್ತು ಬೋಯಿಂಗ್‌ನೊಂದಿಗೆ ಏರ್‌ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ.


  ಈ ಓಪ್ಪಂದಕ್ಕೆ ಯುಕೆ ಪ್ರಧಾನಿ ರಿಷಿ ಸುನಕ್ ಅಭಿನಂದಿಸಿದ್ದಾರೆ. ಈ ಒಪ್ಪಂದವು ವೇಲ್ಸ್ ಮತ್ತು ಡರ್ಬಿಶೈರ್‌ನಲ್ಲಿ ಹೆಚ್ಚು ಅನುಭವ ಉದ್ಯೋಗಿಗಳನ್ನು ಬೆಂಬಲಿಸುವುದರ ಜೊತೆಗೆ ಹೆಚ್ಚು ಅವಕಾಶಗಳನ್ನು ನೀಡುತ್ತದೆ ಎಂದು ಹೇಳಿದ್ದಾರೆ.


  ಭಾರತದ ವಾಯುಯಾನ ಉದ್ಯಮದ ಏನೆಲ್ಲಾ ಎಫೆಕ್ಟ್‌ ಆಗಬಹುದು?


  ಬೋಯಿಂಗ್ ಮತ್ತು ಏರ್‌ಬಸ್‌ನೊಂದಿಗೆ ಏರ್ ಇಂಡಿಯಾದ ಐತಿಹಾಸಿಕ ಒಪ್ಪಂದದ ಘೋಷಣೆಯು ಭಾರತೀಯ ವಾಯುಯಾನ ಉದ್ಯಮದಲ್ಲಿ ಹೊಸ ಬಿರುಗಾಳಿಯನ್ನೇ ಎಬ್ಬಿಸಬಹುದು ಎನ್ನಲಾಗಿದೆ.


  ಏರುತ್ತಿರುವ ಪ್ರಯಾಣದ ಬೇಡಿಕೆಯನ್ನು ಸರಿದೂಗಿಸಲು, ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸಲು ಏರ್ ಇಂಡಿಯಾಗೆ ಇದೊಂದು ಅದ್ಭುತ ಅವಕಾಶವಾಗಿದ್ದು, ಭಾರತದ ಮೇಲೂ ಹಲವು ಒಳ್ಳೆಯ ಪರಿಣಾಮಗಳು ಬೀರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


  ಹಾಗಾದರೆ ನಾವಿಲ್ಲಿ ಏರ್ ಇಂಡಿಯಾ-ಬೋಯಿಂಗ್ ಒಪ್ಪಂದ ಭಾರತದ ವಾಯುಯಾನ ಉದ್ಯಮದ ಮೇಲೆ ಅದರ ಪ್ರಭಾವ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ತಿಳಿಯೋಣ.


  ವಿಮಾನಯಾನ ಸಂಸ್ಥೆಯು ತನ್ನ ದೇಶೀಯ ಮಾರುಕಟ್ಟೆ ಪಾಲನ್ನು 26 ಪ್ರತಿಶತದೊಂದಿಗೆ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ದೊಡ್ಡ ಅವಕಾಶವನ್ನು ಈ ಮೂಲಕ ಹೊಂದಿದೆ.


  ಎರ್‌ಇಂಡಿಯಾದ ಪ್ರಬಲ ಪ್ರತಿಸ್ಪರ್ಧಿ ಇಂಡಿಗೋ 54.9 ಪ್ರತಿಶತದಷ್ಟು ದೊಡ್ಡ ಭಾಗವನ್ನು ನಿಯಂತ್ರಿಸುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.


  ಇದನ್ನೂ ಓದಿ:Travel Tips: ವಿಮಾನದಲ್ಲಿ ಪ್ರಯಾಣಿಸ್ತಿದ್ದೀರಾ? ಫ್ಲೈಟ್ ಹತ್ತೋ ಮೊದಲು ಈ ಆಹಾರ ಅವಾಯ್ಡ್ ಮಾಡಿ


  ಸಾಗರೋತ್ತರ ಪ್ರಯಾಣಕ್ಕೆ ಬಂದಾಗ, ಏರ್ ಇಂಡಿಯಾ ತನ್ನ ಅಸ್ತಿತ್ವವನ್ನು ಯುಎಸ್, ಯುರೋಪ್, ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಆಫ್ರಿಕಾದ ದೇಶಗಳಿಗೆ ಹೆಚ್ಚುವರಿ ವಿಮಾನಗಳ ಆಗಮನದ ನಂತರ ವಿಸ್ತರಿಸಬಹುದು.


  ಏರ್ ಇಂಡಿಯಾ ಸಂಸ್ಥೆ ಅಮೆರಿಕಾ ಮತ್ತು ಯುರೋಪಿಯನ್ ಸ್ಥಳಗಳು, ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳಲ್ಲಿ ಕಡಿಮೆ ಮಾರ್ಗಗಳನ್ನು ಅಂದರೆ ಅತ್ಯಲ್ಪ ಅಸ್ತಿತ್ವವನ್ನು ಹೊಂದಿವೆ. ಮೆಗಾ ಡೀಲ್‌ ಒಪ್ಪಂದದ ಪ್ರಕಾರ ಹೆಚ್ಚಿನ ವಿಮಾನಗಳು ಬಂದರೆ ಈ ಪ್ರದೇಶಗಳಲ್ಲಿ ಏರ್‌ ಇಂಡಿಯಾ ತನ್ನ ಕ್ಷೇತ್ರವನ್ನು ವಿಸ್ತರಿಸಬಹುದು.


  ಈ ಎರಡು ಏರ್‌ಲೈನ್ಸ್ ಸ್ಪರ್ಧಿಸಬೇಕಾಗುತ್ತದೆ ಅಂತೆ


  ಈ ಹೆಚ್ಚುತ್ತಿರುವ ಪ್ರಯಾಣದ ಬೇಡಿಕೆಯನ್ನು ಪಡೆಯಲು, ಏರ್ ಇಂಡಿಯಾ ಜಾಗತಿಕ ಆಟಗಾರರಾದ ಎಮಿರೇಟ್ಸ್, ಎತಿಹಾದ್, ಕತಾರ್ ಏರ್‌ವೇಸ್, ಟರ್ಕಿಶ್ ಏರ್‌ಲೈನ್ಸ್ ಮತ್ತು ಸಿಂಗಾಪುರ್ ಏರ್‌ಲೈನ್ಸ್‌ನೊಂದಿಗೆ ಸ್ಪರ್ಧಿಸಬೇಕಾಗುತ್ತದೆ.


  ಏರ್ ಇಂಡಿಯಾ ಈ ಮಾರ್ಗಗಳಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಮತ್ತು ಈ ಜಾಗತಿಕ ವಿಮಾನಯಾನ ಸಂಸ್ಥೆಗಳೊಂದಿಗೆ ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ.


  ಏರ್ ಇಂಡಿಯಾ ತನ್ನ ಅಸ್ತಿತ್ವದಲ್ಲಿರುವ ಫ್ಲೀಟ್‌ನಲ್ಲಿ 220 ವಿಮಾನಗಳನ್ನು ಹೊಂದಿದೆ. 470 ಹೊಸ ಏರ್‌ಕ್ರಾಫ್ಟ್ ಆರ್ಡರ್‌ಗಳಲ್ಲಿ, 31 ಈ ವರ್ಷದ ಅಂತ್ಯದ ವೇಳೆಗೆ ಆಗಮಿಸಲಿದೆ ಮತ್ತು ಕೆಲವು 36 ಗುತ್ತಿಗೆ ವಿಮಾನಗಳು ಅಲ್ಪಾವಧಿಯಲ್ಲಿ 287 ವಿಮಾನಗಳಿಗೆ ತನ್ನ ಫ್ಲೀಟ್ ಅನ್ನು ತೆಗೆದುಕೊಳ್ಳುತ್ತವೆ.


  726 ವಿಮಾನಗಳು ಇವೆ!


  ದೀರ್ಘಾವಧಿಯಲ್ಲಿ, ವಿತರಣೆಗಳು ಪೂರ್ಣಗೊಂಡ ನಂತರ, ಏರ್ ಇಂಡಿಯಾವು 726 ವಿಮಾನಗಳನ್ನು ಅಂತಿಮಾವಾಗಿ ಹೊಂದಿರುತ್ತದೆ, ಇದು ಅದರ ಪ್ರತಿಸ್ಪರ್ಧಿ ಇಂಡಿಗೋದ ಸ್ಪರ್ಧೆಯನ್ನು ಎದುರಿಸಲು ಸಹಕಾರಿಯಾಗುತ್ತದೆ.


  ಏರ್ ಇಂಡಿಯಾ ಇನ್ನೂ ಸುಮಾರು 120 ವೈಡ್-ಬಾಡಿ ವಿಮಾನಗಳೊಂದಿಗೆ ಇಂಡಿಗೋ ಸಂಸ್ಥೆಗೆ ಪ್ರಬಲ ಎದುರಾಳಿಯಾಗಲಿದೆ.
  ಏರ್ ಇಂಡಿಯಾ ಇಷ್ಟಕ್ಕೆ ಸೀಮಿತಗೊಂಡಿಲ್ಲ. ರೋಲ್ಸ್ ರಾಯ್ಸ್ ಕಂಪನಿಯಿಂದ 68 ಟ್ರೆಂಟ್ ಎಕ್ಸ್​ಡಬ್ಲ್ಯೂಬಿ-97 ಎಂಜಿನ್​ಗಳನ್ನು ಪಡೆಯಲು ಒಪ್ಪಂದ ಮಾಡಿಕೊಂಡಿದೆ.


  ಈ ಎಂಜಿನ್​ಗಳು ಏರ್​ಬಸ್ ವಿಮಾನಗಳ ಚಾಲನೆಗೆ ಬಳಸಿಕೊಳ್ಳಲಾಗುತ್ತದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಈ ಎಂಜಿನ್​ಗಳನ್ನು ಒಂದು ಕಂಪನಿ ಖರೀದಿಸುತ್ತಿರುವುದು ಇದೇ ಮೊದಲು. ಏರ್ ಇಂಡಿಯಾ ಈ ಮೂಲಕ ಟ್ರೆಂಟ್ ಎಕ್ಸ್​ಡಬ್ಲ್ಯೂಬಿ-97 ಎಂಜಿನ್​ನ ಅತಿದೊಡ್ಡ ಆಪರೇಟರ್ ಎನಿಸಲಿದೆ.


  ಏರ್‌ಬಸ್ ಸಿಇಒ ಗ್ಯುಲ್ಯಾಮ್ ಫೌರಿ, ಪ್ರಧಾನಿ ಮೋದಿ, ರತನ್ ಟಾಟಾ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್, ಇತರೆ ನಾಯಕರುಗಳೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಈ ಮಲ್ಟಿ ಬಿಲಿಯನ್ ಡಾಲರ್ ಡೀಲ್‌ ನಡೆದಿದೆ.

  First published: