Covid Vaccine: ನಗರ ಹಾಗೂ ಗ್ರಾಮೀಣ ಭಾರತದ ನಡುವಿನ ಅಂತರಕ್ಕೆ ಕಾರಣ ಇದು

Challenges in Covid Vaccination: ಈ ವರ್ಷಾಂತ್ಯಕ್ಕೆ ಎಲ್ಲ ಪ್ರಾಪ್ತ ವಯಸ್ಕರಿಗೂ ಲಸಿಕೆ ನೀಡುವ ಗುರಿಯನ್ನು ಭಾರತ ತಲುಪಬೇಕೆಂದರೆ ಸರ್ಕಾರವು ಗ್ರಾಮೀಣ ಪ್ರದೇಶದ ಲಸಿಕೆ ಕಾರ್ಯಕ್ರಮದಲ್ಲಿ ದಾಪುಗಾಲಿಡುತ್ತ ಮುನ್ನಡೆಯುವ ಅವಶ್ಯಕತೆಯಿದೆ. ನಗರ ಪ್ರದೇಶಗಳ ಹೋಲಿಕೆಯಲ್ಲಿ, ಗ್ರಾಮೀಣ ಪ್ರದೇಶದ ಲಸಿಕೆ ನೀಡಿಕೆ ಕಾರ್ಯಕ್ರಮದಲ್ಲಿ ಸಾಕಷ್ಟು ಅಡೆತಡೆಗಳು ಎದುರಾಗುತ್ತವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:

  Corona Virus: ಅಂದಾಜು 60ರಿಂದ 70 ಶೇಕಡಾ ನಾಗರಿಕರು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ (Rural India) ವಾಸಿಸುತ್ತಾರೆ. 2011ರಲ್ಲಿ ನಡೆಸಿದ ಜನಗಣತಿ ಪ್ರಕಾರ ನಗರ, ಮಿಶ್ರಿತ ಹಾಗೂ ಗ್ರಾಮೀಣ ಜಿಲ್ಲೆಗಳ ವಿಭಾಗವು ಕ್ರಮವಾಗಿ 13.6%, 13.6% ಹಾಗೂ 72.8% ದಾಖಲಾಗಿತ್ತು. ಗ್ರಾಮೀಣ ಪ್ರದೇಶದ ಹೋಲಿಕೆಯಲ್ಲಿ ಉತ್ತಮ ಆರೋಗ್ಯ ಮೂಲಸೌಕರ್ಯ (Basic Amenities) ಹಾಗೂ ಗ್ರಾಮೀಣ ಸಮುದಾಯದ ಹೋಲಿಕೆಯಲ್ಲಿ ತಲುಪುವುದು ಸುಲಭವಾದ ಕಾರಣ ನಗರ ಪ್ರದೇಶಗಳಲ್ಲಿ ಲಸಿಕೆ ಕಾರ್ಯಕ್ರಮವು ಉತ್ತಮ ರೀತಿಯಲ್ಲಿ ನಡೆಯಬಹುದು ಎಂದು ಅನೇಕರು ಅಂದಾಜಿಸಿದ್ದರು. ಭಾರತವು ಕೋವಿಡ್‌-19 ಲಸಿಕೆ (Covid Vaccine) ನೀಡಲು ಆರಂಭವಾದಾಗ ಈ ಆತಂಕ ಎದುರಾಗಿತ್ತು. 2021ರ ಜೂನ್‌ನಲ್ಲಿ ಹಿಂದೂಸ್ತಾನ್‌ ಟೈಮ್ಸ್‌ ನಡೆಸಿದ ವಿಶ್ಲೇಷಣೆಯ ಪ್ರಕಾರ, ಗ್ರಾಮೀಣ ಹಾಗೂ ಅರೆ ನಗರ ಪ್ರದೇಶದಲ್ಲಿ ವಾಸಿಸುವವರ ಹೋಲಿಕೆಯಲ್ಲಿ ನಗರವಾಸಿಗಳು ದುಪ್ಪಟ್ಟು ಪ್ರಮಾಣದಲ್ಲಿ ಲಸಿಕೆ ಪಡೆಯಲಿದ್ದಾರೆ ಎಂದು ತಿಳಿಸಲಾಗಿತ್ತು.


  2021ರ ಮೇಯಿಂದ ಜುಲೈವರೆಗೆ ಈ ವಿಶ್ಲೇಷಣೆ ಸರಿಯೆಂದು ಸಾಬೀತಾಯಿತು, ಲಸಿಕೆ ನೀಡಿಕೆ ಪ್ರಮಾಣವು ನಗರದ ಹೋಲಿಕೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಇತ್ತು. ಆದರೆ ನಂತರದಲ್ಲಿ ಲಸಿಕೆ ಕಾರ್ಯಕ್ರಮದಲ್ಲಿ ಉತ್ತೇಜನಪೂರ್ವಕ ಚಟುವಟಿಕೆ ಕಂಡುಬಂದು, ಒಂದೆರಡು ತಿಂಗಳಲ್ಲಿ ಭಾರತದ ಗ್ರಾಮೀಣ ಪ್ರದೇಶವೇ ಲಸಿಕೆ ನೀಡಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿತು. ರಾಜ್ಯದಿಂದ ರಾಜ್ಯಕ್ಕೆ ಈ ಅಂಕಿಅಂಶಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದವು ಎಂಬುದನ್ನೂ ನಾವಿಲ್ಲಿ ಗಮನಿಸಬೇಕಿದ್ದರೂ, ಒಟ್ಟಾರೆ ಗ್ರಾಮೀಣ ಜಿಲ್ಲೆಗಳು ಮುನ್ನಡೆಯನ್ನು ಕಾಯ್ದುಕೊಂಡಿದ್ದವು.


  ಲಸಿಕೆ ನೀಡಲಾಗಿದೆ, ಆದರೆ ಸಾಲುತ್ತಿಲ್ಲ

  ಮಿಂಟ್‌ ಪತ್ರಿಕೆಯ ಲೇಖನದ ಪ್ರಕಾರ, ಸೆಪ್ಟೆಂಬರ್‌ 1ರವರೆಗಿನ ಅಂಕಿ ಅಂಶಗಳ ಪ್ರಕಾರ ಪ್ರತಿ ಸಾವಿರ ಜನಸಂಖ್ಯೆಗೆ ಗ್ರಾಮೀಣ ಪ್ರದೇಶದಲ್ಲಿ 489 ಹಾಗೂ ನಗರ ಪ್ರದೇಶಗಳಲ್ಲಿ 451 ಜನರು ಲಸಿಕೆ ಪಡೆದಿದ್ದಾರೆ. ಆದರೆ ಈಗ ಮೈಮರೆಯುವ ಸಮಯವಲ್ಲ. ಈ ವರ್ಷಾಂತ್ಯಕ್ಕೆ ಎಲ್ಲ ಪ್ರಾಪ್ತ ವಯಸ್ಕರಿಗೂ ಲಸಿಕೆ ನೀಡುವ ಗುರಿಯನ್ನು ಭಾರತ ತಲುಪಬೇಕೆಂದರೆ ಸರ್ಕಾರವು ಗ್ರಾಮೀಣ ಪ್ರದೇಶದ ಲಸಿಕೆ ಕಾರ್ಯಕ್ರಮದಲ್ಲಿ ದಾಪುಗಾಲಿಡುತ್ತ ಮುನ್ನಡೆಯುವ ಅವಶ್ಯಕತೆಯಿದೆ. ನಗರ ಪ್ರದೇಶಗಳ ಹೋಲಿಕೆಯಲ್ಲಿ, ಗ್ರಾಮೀಣ ಪ್ರದೇಶದ ಲಸಿಕೆ ನೀಡಿಕೆ ಕಾರ್ಯಕ್ರಮದಲ್ಲಿ ಸಾಕಷ್ಟು ಅಡೆತಡೆಗಳು ಎದುರಾಗುತ್ತವೆ.


  ಇದನ್ನೂ ಓದಿ: 100 Crore COVID-19 Vaccine Doses|100 ಕೋಟಿ ಕೋವಿಡ್ ಲಸಿಕೆ ಸಾಧನೆಯ ಸನಿಹದಲ್ಲಿ ಭಾರತ

  ಹಾಗೆ ನೋಡಿಕದರೆ, ಗ್ರಾಮೀಣ ಪ್ರದೇಶದ ಆರೋಗ್ಯ ಮೂಲಸೌಕರ್ಯ ದುರ್ಬಲವಾಗಿದೆ ಎಂಬುದು ಬರಿಗಣ್ಣಿಗೇ ಕಾಣುತ್ತದೆ. ವೈದ್ಯರು, ದಾದಿಯರು, ತರಬೇತಿ ಪಡೆದ ಸಹಾಯಕ ಸಿಬ್ಬಂದಿಯ ಕೊರತೆ ದೇಶಾದ್ಯಂತ ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಸಾಮಾನ್ಯವಾದರೂ ಈ ಸಮಸ್ಯೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಗಂಭೀರವಾಗಿದೆ. ನಗರಗಳ ಹೋಲಿಕೆಯಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಜನರನ್ನು ತಲುಪುವಿಕೆಯೇ ಹೆಚ್ಚು ಸಮಸ್ಯೆ ಎನ್ನಿಸುತ್ತದೆ.


  ತಾಂತ್ರಿಕ ಸಮಸ್ಯೆಗಳು ಹೆಚ್ಚೇ ಇದೆ

  ಕೋಲ್ಡ್‌ ಚೈನ್‌ ನಿರ್ವಹಣೆ ಮಾಡುತ್ತಲೇ ಲಸಿಕೆಯನ್ನು ಅತ್ಯಂತ ಹಿಂದುಳಿದ ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯುವುದು ಬಹಳ ಸವಾಲಿನ ಕೆಲಸವಾಗಿದೆ. ಅದರಲ್ಲೂ ದಿವ್ಯಾಂಗರು, ಹಿರಿಯ ನಾಗರಿಕರು ಹಾಗೂ ಖಾಯಲೆಯಿಂದ ಬಳಲುತ್ತಿರುವವರಿಗೆ ಲಸಿಕೆ ನೀಡುವಲ್ಲಿ ಮತ್ತಷ್ಟು ಹೆಚ್ಚಿನ ಸಾಗಣಿಗೆ ಸಮಸ್ಯೆ ಎದುರಾಗುತ್ತದೆ. ಹೆಚ್ಚು ಪ್ರಮಾಣದಲ್ಲಿ ಲಸಿಕೆ ಸುರಕ್ಷತೆ ಪಡೆದಿರುವ ಸಮುದಾಯಗಳು ಮೂರನೇ ಅಲೆಯಲ್ಲಿ ಕರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಕಡಿಮೆ ಇರಬಹುದು.


  ಇದನ್ನೂ ಓದಿ: Covaxin for Children: 2 ರಿಂದ 18 ವರ್ಷದೊಳಗಿನ ಮಕ್ಕಳ ಕೋವ್ಯಾಕ್ಸಿನ್ ಲಸಿಕೆಗೆ SEC ಗ್ರೀನ್ ಸಿಗ್ನಲ್

  ಉತ್ತಮ ವಿಚಾರವೆಂದರೆ, ಕೆಲವು ಜಿಲ್ಲೆಗಳಲ್ಲಿ ಯಾವುದೇ ಪೂರ್ವ ನೋಂದಣಿಯ ಅವಶ್ಯಕತೆಯಿಲ್ಲದೆ ಸ್ಥಳದಲ್ಲೆ ನೋಂದಣಿ ಮಾಡಿಕೊಂಡು ಲಸಿಕೆ ನೀಡುವ ಪ್ರಯತ್ನಗಳು ಉತ್ತಮ ಹೆಜ್ಜೆಗಳೆನಿಸಿವೆ. ಆನ್‌ಲೈನ್‌ ಮೂಲಕ ಹಾಗೂ ಕೋವಿನ್‌ ಡ್ಯಾಷ್‌ಬೋರ್ಡ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ತಂತ್ರಜ್ಞಾನ ವ್ಯವಸ್ಥೆ ಇಲ್ಲದ ಅಥವಾ ಸೀಮಿತ ತಂತ್ರಜ್ಞಾನ ತಿಳುವಳಿಕೆ ಉಳ್ಳವರಿಗೆ ಇದು ಸಾಕಷ್ಟು ಅನುಕೂಲವಾಗುತ್ತದೆ. ಇದರಿಂದಾಗಿ ಲಸಿಕೆ ನೀಡಿಕೆ ಪ್ರಮಾಣ ನಿಸ್ಸಂದೇಹವಾಗಿ ಹೆಚ್ಚಳವಾಗಿದೆ. ಆದರೆ, ಇಷ್ಟು ಸಂಖ್ಯೆಯ ಜನರನ್ನು ನಿಯಂತ್ರಿಸಲು ಸೂಕ್ತ ಸೌಕರ್ಯವಿಲ್ಲದ ಪರಿಣಾಮ ಲಸಿಕೆ ನೀಡಿಕೆ ಕೇಂದ್ರಗಳಲ್ಲಿ ಉದ್ದನೆಯ ಸಾಲುಗಳು ಹಾಗೂ ಜನಸಂದಣಿಗೂ ಕಾಣವಾಗಿದೆ.


  ಲಸಿಕೆಯ ಲಭ್ಯತೆ ಬಹು ದೊಡ್ಡ ಸವಾಲು

  ಗಂಟೆಗಳಷ್ಟು ಸಮಯ ಸರತಿ ಸಾಲಿನಲ್ಲಿ ನಿಂತು  ಇನ್ನೇನು ಲಸಿಕೆ ಪಡೆಯಬೇಕು ಎನ್ನುವಷ್ಟರಲ್ಲಿ, ಲಸಿಕೆ ಮುಕ್ತಾಯವಾಗಿದೆ ಎಂಬ ಮಾತು ಕೇಳಿ ಬೇಸರಗೊಂಡವರೂ ಇದ್ದಾರೆ. ಅಂಥವರು ಲಸಿಕೆ ಪಡೆಯಲು ಮಾರನೆಯ ದಿನ ಅಥವಾ ಇನ್ನಾವುದೋ ದಿನ ಮತ್ತೊಮ್ಮೆ ಆಗಮಿಸಬೇಕಿದೆ. ಇನ್ನೊಂದು ರೀತಿಯ ಉದಾಹರಣೆಗಳೆಂದರೆ, ಎರಡನೇ ಡೋಸ್‌ ಲಸಿಕೆ ಪಡೆಯಲು ಸಾಕಷ್ಟು ಸಮಯ ಸರತಿ ಸಾಲಿನಲ್ಲಿ ಕಾದು ಇನ್ನೇನು ಲಸಿಕೆ ಪಡೆಯಬೇಕು ಎನ್ನುವ ವೇಳೆಗೆ, ಈ ಲಸಿಕೆಯು ಮೊದಲನೇ ಡೋಸ್‌ನಲ್ಲಿ ಪಡೆದ ಲಸಿಕೆಗಿಂತ ಭಿನ್ನವಾದದ್ದು ಎಂಬುದನ್ನು ತಿಳಿದು ಬೇಸರಗೊಂಡಿದ್ದಾರೆ. ಇಂತಹ ಸಮಯದಲ್ಲಿ ಕೋವಿಡ್‌ ಅನುಗುಣವಾದ ಮಾರ್ಗಸೂಚಿ(ಸಿಎಬಿ) ಪಾಲನೆ ಮಾಡುವುದೇ ದೊಡ್ಡ ಸವಾಲಿನ ಕೆಲಸವಾಗುತ್ತದೆ, ಲಸಿಕೆ ಕೇಂದ್ರಗಳಿಂದಲೇ ಸೋಂಕು ಹರಡುವ ಅಪಾಯವನ್ನೂ ತಂದೊಡ್ಡುತ್ತವೆ.


  ಇದನ್ನೂ ಓದಿ: Pfizer Vaccine| 2ನೇ ಡೋಸ್‌ ಪಡೆದ 6 ತಿಂಗಳ ನಂತರ ಫೈಜರ್ ಲಸಿಕೆಯ ಪರಿಣಾಮ ಕಡಿಮೆಯಾಗುತ್ತದೆ: ಅಧ್ಯಯನದಲ್ಲಿ ಬಯಲು

  ನಿರಂತರ ಲಸಿಕೆ ಪೂರೈಕೆ ಹಾಗೂ ಈ ಕುರಿತು ಜನರಿಗೆ ಪ್ರತಿನಿತ್ಯ ಮಾಹಿತಿ ನೀಡುತ್ತಿರುವುದು ಈ ಸಮಸ್ಯೆಯನ್ನು ಎದುರಿಸಲು ಇರುವ ಪರಿಣಾಮಕಾರಿ ಹೆಜ್ಜೆ. ಗ್ರಾಮೀಣ ಪ್ರದೇಶದ ಅತಿ ದೊಡ್ಡ ಜನಸಂಖ್ಯೆ ದಿನಗೂಲಿ ಆಧಾರದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದು, ಲಸಿಕೆ ಪಡೆಯುವ ಸಲುವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೇ ಆಗಮಿಸುವುದು ಕಷ್ಟಕರವಾಗುತ್ತದೆ. ತಮ್ಮ ದಿನನಿತ್ಯದ ದುಡಿಮೆಯನ್ನು ಬಿಟ್ಟು ಅನೇಕ ಬಾರಿ ಲಸಿಕೆ ಪಡೆಯಲು ಹೋಗಬೇಕು ಎಂಬ ಆಲೋಚನೆಯು, ಅವರು ಲಸಿಕೆ ಪಡೆಯುವುದರಿಂದ ವಿಮುಖವಾಗುವಂತೆ ಮಾಡುತ್ತದೆ.


  ಲಸಿಕೆ ಅತ್ಯಂತ ಸುರಕ್ಷ

  ಎಲ್ಲ ಪ್ರಾಪ್ತ ವಯಸ್ಕರನ್ನೂ ಲಸಿಕೆ ಸುರಕ್ಷತೆಯೊಳಗೆ ಸೇರಿಸಲು ನಾವು ನಿಧಾನ ಹಾಗೂ ನಿರಂತರವಾಗಿ ಗುರಿಯತ್ತ ಸಾಗುತ್ತಿದ್ದೇವೆ. ಆದರೆ, ಲಸಿಕೆಯ ನಿರಂತರ ಸರಬರಾಜು ಹಾಗೂ ಬಹುದೂರದ ಗ್ರಾಮೀಣ ಪ್ರದೇಶಗಳಿಗೂ ಅದನ್ನು ಕೊಂಡೊಯ್ಯುವುದು ಅತ್ಯಾವಶ್ಯಕವಾಗಿದೆ. ಮಕ್ಕಳಿಗೆ ಲಸಿಕೆ ಹಾಗೂ ವಯಸ್ಕರಿಗೆ ಬೂಸ್ಟರ್‌ ಡೋಸ್‌ ಲಸಿಕೆ ನೀಡಲು ಮತ್ತಷ್ಟು ಉತ್ತಮ ಮೂಲಸೌಕರ್ಯ ಹಾಗೂ ಕ್ಷೇತ್ರದಲ್ಲಿ ವಿತರಣೆ ವ್ಯವಸ್ಥೆಯ ಉತ್ತಮಗೊಳ್ಳುವಿಕೆ ಆಗಬೇಕಾಗುತ್ತದೆ.


  ಅನಿಲ್‌ ಪರ್ಮಾರ್‌


  ಉಪಾಧ್ಯಕ್ಷ, ಸಮುದಾಯ ಹೂಡಿಕೆ, ಯುನೈಟೆಡ್‌ ವೇ, ಮುಂಬೈ

  Published by:Soumya KN
  First published: