• ಹೋಂ
 • »
 • ನ್ಯೂಸ್
 • »
 • Explained
 • »
 • Embroyos Childrens: 30 ವರ್ಷಗಳ ಹಿಂದಿನ ವೀರ್ಯಾಣು, ಅಂಡಾಣುಗಳಿಂದ ಹುಟ್ಟಿದ ಅವಳಿ ಮಕ್ಕಳು! ಈ ದಂಪತಿ ಕಥೆಯೇ ಇಂಟ್ರೆಸ್ಟಿಂಗ್ ಆಗಿದೆ

Embroyos Childrens: 30 ವರ್ಷಗಳ ಹಿಂದಿನ ವೀರ್ಯಾಣು, ಅಂಡಾಣುಗಳಿಂದ ಹುಟ್ಟಿದ ಅವಳಿ ಮಕ್ಕಳು! ಈ ದಂಪತಿ ಕಥೆಯೇ ಇಂಟ್ರೆಸ್ಟಿಂಗ್ ಆಗಿದೆ

ದಂಪತಿಗಳು ಮತ್ತು ಸಂರಕ್ಷಿಸಿದ ಭ್ರೂಣದಿಂದ ಜನಿಸಿದ ಅವಳಿ ಮಕ್ಕಳು

ದಂಪತಿಗಳು ಮತ್ತು ಸಂರಕ್ಷಿಸಿದ ಭ್ರೂಣದಿಂದ ಜನಿಸಿದ ಅವಳಿ ಮಕ್ಕಳು

ಫಿಲಿಪ್ ರಿಡ್ಜ್‌ವೇ ದಂಪತಿಗಳು ಅಕ್ಟೋಬರ್ 31 ರಂದು ಬರಮಾಡಿಕೊಂಡ ಅವಳಿ ಮಕ್ಕಳಾದ ಲಿಡಿಯಾ ಮತ್ತು ತಿಮೋತಿ ಸಂರಕ್ಷಿಸಿಟ್ಟಿದ್ದ ಅತಿ ಹಳೆಯ 30 ವರ್ಷಗಳ ಹಿಂದಿನ ಭ್ರೂಣಗಳಿಂದ ಯಶಸ್ವಿಯಾಗಿ ಜನಿಸಿದ ಮಕ್ಕಳಾಗಿದ್ದಾರೆ.

 • Share this:

  30 ವರ್ಷಗಳ ಹಿಂದಿನ ವೀರ್ಯಾಣು, ಅಂಡಾಣುಗಳಿಂದ ಹುಟ್ಟಿದ ಅವಳಿ ಮಕ್ಕಳು! ಈ ದಂಪತಿ ಕಥೆಯೇ ಇಂಟ್ರೆಸ್ಟಿಂಗ್ ಆಗಿದೆಫಿಲಿಪ್ ರಿಡ್ಜ್‌ವೇ ದಂಪತಿಗಳು ಅಕ್ಟೋಬರ್ 31 ರಂದು ಬರಮಾಡಿಕೊಂಡ ಅವಳಿ ಮಕ್ಕಳಾದ ಲಿಡಿಯಾ ಮತ್ತು ತಿಮೋತಿ ಸಂರಕ್ಷಿಸಿಟ್ಟಿದ್ದ ಅತಿ ಹಳೆಯ (30 ವರ್ಷಗಳು) ಭ್ರೂಣಗಳಿಂದ ( Frozen Embryos) ಯಶಸ್ವಿಯಾಗಿ ಜನಿಸಿದ ಮಕ್ಕಳಾಗಿದ್ದಾರೆ. ಅವಳಿಗಳ (Twins Childrens ಜನ್ಮಕ್ಕೆ ಕಾರಣವಾಗಿರುವ ದೀರ್ಘ ಸಮಯದಿಂದ ಹೆಪ್ಪುಗಟ್ಟಿಸಿದ ಭ್ರೂಣದ ವರ್ಗಾವಣೆಯು ಹೊಸ ದಾಖಲೆಯನ್ನು ಮಾಡಿದೆ ಎಂದು ವರದಿ ತಿಳಿಸಿದೆ. ಇದಕ್ಕೂ ಮೊದಲು ನಾಕ್ಸ್‌ವಿಲ್ಲೆ ಮೂಲದ ಕೇಂದ್ರವು ಇಂತಹುದೇ ದಾಖಲೆಯನ್ನು ಮಾಡಿದ್ದು 27 ವರ್ಷದಿಂದ ಹೆಪ್ಪುಗಟ್ಟಿಸಿರುವ ಭ್ರೂಣದಿಂದ ಶಿಶು ಜನಿಸಿತ್ತು. 28 ವರ್ಷದ ಇನ್ನೊಂದು ಹೆಪ್ಪುಗಟ್ಟಿದ ಭ್ರೂಣವು ಇನ್ನೊಂದು ಮಗುವಿನ ಜನನಕ್ಕೆ ಕಾರಣವಾಗಿದೆ.


  ದೀರ್ಘಸಮಯದಿಂದ ಶೈತ್ಯೀಕರಿಸಿದ ಭ್ರೂಣಗಳಿಂದ ಜನಿಸಿದ ಅವಳಿಗಳನ್ನು (Twins) ರಾಚೆಲ್ ಮತ್ತು ಫಿಲಿಪ್ ರಿಡ್ಜ್‌ವೇ ದಂಪತಿ ಪಡೆದಿದ್ದಾರೆ. 15 ವರ್ಷಗಳ ಕಾಲ, ಭ್ರೂಣಗಳನ್ನು ಯುಎಸ್ ವೆಸ್ಟ್ ಕೋಸ್ಟ್‌ನಲ್ಲಿರುವ ಫಲವತ್ತತೆ ಪ್ರಯೋಗಾಲಯದಲ್ಲಿ ಇರಿಸಲಾಗಿದ್ದು, ಅಲ್ಲಿ ಭ್ರೂಣಗಳನ್ನು ದ್ರವರೂಪದ ಸಾರಜನಕದಲ್ಲಿ -320 ಡಿಗ್ರಿ F (-196 ಡಿಗ್ರಿ C) ನಲ್ಲಿ ಸಂರಕ್ಷಿಸಲಾಗಿತ್ತು.


  ಭ್ರೂಣಗಳನ್ನು ದಾನ ಮಾಡುವ ಉದ್ದೇಶ


  ದಂಪತಿ 2007 ರಲ್ಲಿ ಟೆನ್ನೆಸ್ಸಿಯ ನಾಕ್ಸ್‌ವಿಲ್ಲೆಯಲ್ಲಿರುವ ರಾಷ್ಟ್ರೀಯ ಭ್ರೂಣ ದಾನ ಕೇಂದ್ರಕ್ಕೆ (NEDC) ಭ್ರೂಣಗಳನ್ನು ದಾನ ಮಾಡಿದ್ದರು ಎಂದು ಇಂಡಿಪೆಂಡೆಂಟ್ ವರದಿ ತಿಳಿಸಿದೆ. ರಾಚೆಲ್ ಮತ್ತು ಫಿಲಿಪ್ ರಿಡ್ಜ್‌ವೇ ಕೇವಲ ಮೂರು ಮತ್ತು ಐದು ವರ್ಷ ವಯಸ್ಸಿನವರಾಗಿದ್ದಾಗ ಅವರ ಅವಳಿ ಮಕ್ಕಳು ಐವಿಎಫ್ ಬಳಸಿ ಗರ್ಭಧಾರಣೆಯಾಗಿತ್ತು ಎಂಬುದು ಅಚ್ಚರಿಯ ಸಂಗತಿಯಾಗಿದೆ.


  ಇದನ್ನೂ ಓದಿ: ಪರ್ಫ್ಯೂಮ್ ಎಂದು ಬಾಂಬ್ ಕೈಗೆತ್ತಿಕೊಳ್ಳದಿರಿ! ಉಗ್ರರ ಹೊಸ ಆಯುಧವಿದು, ಎಚ್ಚರ


  ಭ್ರೂಣಗಳ ಜನ್ಮದಾತರು 2007 ರಲ್ಲಿ, ಟೆನ್ನೆಸ್ಸೀಯ ನಾಕ್ಸ್‌ವಿಲ್ಲೆಯಲ್ಲಿರುವ ರಾಷ್ಟ್ರೀಯ ಭ್ರೂಣ ದಾನ ಕೇಂದ್ರಕ್ಕೆ ಭ್ರೂಣಗಳನ್ನು ದಾನಮಾಡುವ ನಿರ್ಧಾರಕ್ಕೆ ಬಂದರು ಹಾಗೂ ಮಕ್ಕಳಿಲ್ಲದ ದಂಪತಿಗಳಿಗೆ ತಮ್ಮ ಭ್ರೂಣ ದಾನವು ಸಹಕಾರಿಯಾಗಲಿ ಎಂಬುದು ಈ ದಂಪತಿಗಳು ಆಶಯವಾಗಿತ್ತು.


  ದಂಪತಿಗಳು ಮತ್ತು ಸಂರಕ್ಷಿಸಿದ ಭ್ರೂಣದಿಂದ ಜನಿಸಿದ ಅವಳಿ ಮಕ್ಕಳು


  ತಮ್ಮ ಭ್ರೂಣಗಳು ಮತ್ತೊಂದು ದಂಪತಿಗಳ ಜೀವನದಲ್ಲಿ ಬೆಳಕಾಗಬೇಕು ಎಂದು ಬಯಸಿದ್ದರು ಎಂದು NEDC ಯ ಮಾರ್ಕೆಟಿಂಗ್ ಮತ್ತು ಅಭಿವೃದ್ಧಿ ನಿರ್ದೇಶಕ ಮಾರ್ಕ್ ಮೆಲ್ಲಿಂಗರ್ ತಿಳಿಸಿದ್ದಾರೆ. ಭ್ರೂಣಗಳನ್ನು ದಾನ ಮಾಡುವ ಪೋಷಕರ ಯಾವುದೇ ವಿವರಗಳನ್ನು ಗೌಪ್ಯವಾಗಿರಿಸಲಾಗುತ್ತದೆ ಎಂದು ಮಾರ್ಕ್ ತಿಳಿಸಿದ್ದಾರೆ.


  ಭ್ರೂಣಗಳನ್ನು ದೀರ್ಘಸಮಯದವರೆಗೆ ಫ್ರೀಜ್ ಮಾಡುವುದು


  ಭ್ರೂಣಗಳನ್ನು ಮೊದಲು ಶೇಖರಿಸಿದ ದಿನದಿಂದ 55 ವರ್ಷಗಳವರೆಗೆ ಫ್ರೀಜ್ ಮಾಡಬಹುದು ಎಂದು ಹ್ಯೂಮನ್ ಫರ್ಟಿಲೈಸೇಶನ್ ಅಂಡ್ ಎಂಬ್ರಿಯಾಲಜಿ ಅಥಾರಿಟಿ ತಿಳಿಸಿದೆ.


  ಅದೂ ಅಲ್ಲದೆ ಭ್ರೂಣಗಳನ್ನು ಹೆಪ್ಪುಗಟ್ಟಿದ ಸಮಯದ ಅವಧಿಯಿಂದ ಪ್ರಭಾವ ಬೀರುತ್ತವೆ ಎಂದು ಯಾವುದೇ ಪುರಾವೆಗಳು ಸೂಚಿಸುವುದಿಲ್ಲ ಎಂದು ಅಥಾರಿಟಿ ಹೇಳಿದೆ.


  ವೈದ್ಯಕೀಯ ಕ್ಲಿಯರೆನ್ಸ್‌ ಅಗತ್ಯವಿದೆ


  ಫಿಲಿಪ್ ಮತ್ತು ರಾಚೆಲ್ ರಿಡ್ಜ್‌ವೇ ದಂಪತಿಗಳು ತಮ್ಮ ಕುಟುಂಬವನ್ನು ಪರಿಪೂರ್ಣಗೊಳಿಸುವ ನಿಟ್ಟಿನಲ್ಲಿ NEDC ಗೆ ಭೇಟಿ ನೀಡಿದ್ದಾರೆ. ದಾನಿಗಳ ವಿವರಗಳ ಮಾಹಿತಿ ಪಡೆಯುವ ಮೊದಲು ವೈದ್ಯಕೀಯ ಕ್ಲಿಯರೆನ್ಸ್‌ಗಾಗಿ NEDC ಗೆ ಭೇಟಿ ನೀಡಿದರು.


  ವೈದ್ಯಕೀಯ ನಿಯಮಗಳನ್ನು ಪೂರ್ಣಗೊಳಿಸಿದ ನಂತರ ದಾನಿಗಳ ವಿವರಗಳನ್ನು ದಂಪತಿಗಳಿಗೆ ಒದಗಿಸಲಾಯಿತು. ವಿವಿಧ ದಾನಿಗಳ ಮಾಹಿತಿಯನ್ನು ಅವಲೋಕಿಸಿದ ದಂಪತಿಗಳು ದಶಕಗಳಿಂದ ಪ್ರನಾಳದಲ್ಲಿ ಹೆಪ್ಪುಗಟ್ಟಿರುವ ಮೂರು ಚಿಕ್ಕ ಭ್ರೂಣಗಳನ್ನು ನಿರ್ಧರಿಸಿದ್ದಾರೆ.


  ಭ್ರೂಣಗಳ ಪೋಷಕರ ಮಾಹಿತಿ ದೊರೆಯುವುದಿಲ್ಲ


  ಪೋಷಕರ ಫೋಟೋಗಳು ಅವರಿಗೆ ಲಭ್ಯವಿರಲಿಲ್ಲ. ಭ್ರೂಣಗಳ ಬಗ್ಗೆ ಕೆಲವೇ ವಿವರಗಳನ್ನು ಕೇಂದ್ರ ಒದಗಿಸುತ್ತದೆ ಎಂದು ತಿಳಿಸಿರುವ ದಂಪತಿಗಳು ಭ್ರೂಣಗಳ ತಂದೆ ತಾಯಿಯ ವಿವರ, ಅವರ ಎತ್ತರ, ಬಣ್ಣ, ತೂಕ ಮೊದಲಾದ ವಿವರಗಳು ದೊರೆಯುವುದಿಲ್ಲ ಎಂದು ತಿಳಿಸಿದ್ದಾರೆ.


  ಅರ್ಧಕ್ಕಿಂತ ಕಡಿಮೆ ಮಾತ್ರ ಜನ್ಮತಾಳುತ್ತವೆ


  ದತ್ತು ಪಡೆಯುವ ಮಕ್ಕಳಂತೆ ಈ ಹೆಪ್ಪುಗಟ್ಟಿಸಿದ ಭ್ರೂಣಗಳಿಗೆ ಪೋಷಕರ ಅಗತ್ಯವಿತ್ತು. ಹುಟ್ಟುವವರೆಗೂ ಮಗುವಿನ ಲಿಂಗದ ಬಗ್ಗೆಯೂ ತಿಳಿಯುವುದಿಲ್ಲ ಎಂಬುದು ದಂಪತಿಗಳ ಹೇಳಿಕೆಯಾಗಿದೆ. ಮೂರು ಭ್ರೂಣಗಳಲ್ಲಿ ಎರಡು ಭ್ರೂಣಗಳನ್ನು ಮಾತ್ರ ಯಶಸ್ವಿಯಾಗಿ ದಂಪತಿಗಳಿಗೆ ಅಳವಡಿಸಲಾಯಿತು.


  ಹೆಪ್ಪುಗಟ್ಟಿಸುವ ಭ್ರೂಣಗಳೆಲ್ಲವೂ ಬದುಕುಳಿಯುವುದಿಲ್ಲ ಎಂದು ತಿಳಿಸಿರುವ ಮಾರ್ಕ್, ಇದು ನಿಜಕ್ಕೂ ಭಾವನಾತ್ಮಕವಾಗಿ ಸವಾಲಿನ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ. ಅವುಗಳಲ್ಲಿ ಅರ್ಧಕ್ಕಿಂತ ಕಡಿಮೆ ಮಾತ್ರವೇ ಜನ್ಮತಾಳುತ್ತವೆ ಎಂದು ತಿಳಿಸಿದ್ದಾರೆ.


  ಭ್ರೂಣವನ್ನು ಅಳವಡಿಸಿಕೊಳ್ಳುವ ಸಮಸ್ಯೆಗಳು


  ಭ್ರೂಣವನ್ನು ದೇಹಕ್ಕೆ ಅಳವಡಿಸುವ ಸಮಯದಲ್ಲಿ ಗರ್ಭಾವಸ್ಥೆಯ ಸಮಸ್ಯೆಗಳಲ್ಲದೆ ಆರ್ಥಿಕ, ದೈಹಿಕ ಮತ್ತು ಭಾವನಾತ್ಮಕ ಸವಾಲುಗಳನ್ನು ಮಹಿಳೆ ಭ್ರೂಣಗಳನ್ನು ಅಳವಡಿಸಿಕೊಳ್ಳುವ ಸಮಯದಲ್ಲಿ ಎದುರಿಸಬೇಕು ಎಂಬುದಾಗಿ ಮಾರ್ಕ್ ತಿಳಿಸಿದ್ದಾರೆ.


  ಆರ್ಥಿಕ ಸವಾಲು ಹೇಗೆಂದರೆ ಭ್ರೂಣವನ್ನು ದತ್ತು ಪಡೆದುಕೊಳ್ಳುವುದು ಸರಕಾರದ ದೃಷ್ಟಿಯಲ್ಲಿ ದತ್ತು ಪಡೆದುಕೊಳ್ಳುವುದಲ್ಲ ಇದಕ್ಕಾಗಿ ಕೆಲವೊಂದು ಕಾನೂನು ನಿಯಮಗಳನ್ನು ಅಗತ್ಯಗಳನ್ನು ಪೂರೈಸಬೇಕಾಗುತ್ತದೆ ಎಂಬುದು ಮಾರ್ಕ್ ಹೇಳಿಕೆಯಾಗಿದೆ.


  ಭ್ರೂಣ ದಾನ ಅಂದ್ರೇನು?


  ಐವಿಎಫ್ ಚಿಕಿತ್ಸೆಗೆ ಜನರು ಒಳಗಾದಾಗ ಅವರು ಬಳಸುವುದಕ್ಕಿಂತ ಹೆಚ್ಚಿನ ಭ್ರೂಣಗಳನ್ನು ಉತ್ಪಾದಿಸಬಹುದು. ಹಾಗೂ ಈ ಹೆಚ್ಚುವರಿ ಭ್ರೂಣಗಳನ್ನು ಭವಿಷ್ಯದ ಬಳಕೆಗಾಗಿ ಸಂಗ್ರಹಿಸಿಡಬಹುದು. ಇಲ್ಲದಿದ್ದರೆ ಸಂತಾನೋತ್ಪತ್ತಿ ಔಷಧದ ವಿಜ್ಞಾನವನ್ನು ಮುನ್ನಡೆಸಲು ಸಂಶೋಧನೆ ಅಥವಾ ತರಬೇತಿಗೆ ದಾನ ಮಾಡಬಹುದು ಅಥವಾ ಮಕ್ಕಳನ್ನು ಹೊಂದಲು ಬಯಸುವ ಜನರಿಗೆ ದಾನ ಮಾಡಬಹುದು.


  ಇತರ ಯಾವುದೇ ಮಾನವ ಅಂಗಾಂಶ ದಾನದಂತೆ, ಭ್ರೂಣಗಳು ಕೆಲವು ಸಾಂಕ್ರಾಮಿಕ ರೋಗಗಳಿಗೆ, ತಪಾಸಣೆಗಳಿಗೆ ಒಳಗಾಗುವುದು ಒಳಗೊಂಡಂತೆ ದಾನ ಮಾಡಲು ಆಯಾ ದೇಶಗಳ ಆಹಾರ ಮತ್ತು ಔಷಧ ಆಡಳಿತದ ಅರ್ಹತಾ ಮಾರ್ಗಸೂಚಿಗಳನ್ನು ಪೂರೈಸಬೇಕು.


  ಸವಾಲುಗಳನ್ನು ಪರಿಹರಿಸಿಕೊಳ್ಳಬೇಕು


  ಭ್ರೂಣವನ್ನು ದೇಹಕ್ಕೆ ಅಳವಡಿಸುವ ಸಮಯದಲ್ಲಿ ಶಾರೀರಿಕ, ವರ್ಗಾವಣೆ ಚಕ್ರಕ್ಕೆ ಹೊಂದಿಕೊಳ್ಳುವಂತೆ ಹಲವಾರು ಔಷಧಿಗಳ ಅಗತ್ಯವಿರುತ್ತದೆ, ಇದರಲ್ಲಿ ಅಡ್ಡಪರಿಣಾಮಗಳನ್ನು ಬೀರುವ ಮತ್ತು ಭಾವನಾತ್ಮಕವಾಗಿ ಕಂಗೆಡಿಸುವ ಚುಚ್ಚುಮದ್ದುಗಳು ಔಷಧಗಳು ಸೇರಿವೆ.


  ಹೀಗಾಗಿ ಔಷಧಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಭ್ರೂಣಗಳು ಅಳವಡಿಸುವ ಪ್ರಕ್ರಿಯೆಗಳ ಸಾಧ್ಯತೆಯನ್ನು ಅರಿತುಕೊಂಡರೆ ಸಾಕಷ್ಟು ಏರಿಳಿತಗಳು ಕಂಡುಬರುತ್ತವೆ ಎಂಬುದು ಮಾರ್ಕ್ ಅಭಿಪ್ರಾಯವಾಗಿದೆ.


  ಭ್ರೂಣದ ಅಳವಡಿಕೆಗೆ ಸಂಬಂಧಿಸಿದ ಅನೇಕ ಕಾನೂನು ಅಡಚಣೆಗಳಿವೆ ಎಂಬುದನ್ನು ವಿವರಿಸಿರುವ ಮಾರ್ಕ್, ರೋಗಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು, ಹೋಮ್ ಸ್ಟಡಿ ಪಾಸ್ ಮಾಡಬೇಕು, ವೈದ್ಯಕೀಯ ಕ್ಲಿಯರೆನ್ಸ್ ಪಡೆಯಬೇಕು, ಭ್ರೂಣದ ಪ್ರೊಫೈಲ್‌ನೊಂದಿಗೆ 'ಹೊಂದಾಣಿಕೆ' ಆಗಲು ಸಂಸ್ಥೆಯ ಆನ್‌ಲೈನ್ ಡೇಟಾಬೇಸ್ ಮೂಲಕ ಸ್ಕ್ರಾಲ್ ಮಾಡಬೇಕು ಮತ್ತು ನಂತರ ಅವರ ಘನೀಕೃತ ಭ್ರೂಣ ವರ್ಗಾವಣೆ (ಎಫ್‌ಇಟಿ) ನಿರ್ವಹಿಸುವ ಪ್ರಕ್ರಿಯೆ ನಡೆಸಬೇಕು ಎಂದು ತಿಳಿಸಿದ್ದಾರೆ.


  ರಿಡ್ಜ್‌ವೇಸ್ ದಂಪತಿಗಳ ಖುಷಿ ದುಪ್ಪಟ್ಟಾಗಿದೆ


  ಅವಳಿ ಭ್ರೂಣದೊಂದಿಗೆ ರಾಚೆಲ್ ಗರ್ಭಾವಸ್ಥೆಯ ಮಧುಮೇಹವನ್ನು ಹೊಂದಿದ್ದರು ಇದನ್ನು ಹೊರತುಪಡಿಸಿ ಉಳಿದೆಲ್ಲಾ ಸಮಸ್ಯೆಗಳನ್ನು ದಂಪತಿ ಸರಾಗವಾಗಿ ಸುಗಮಗೊಳಿಸಿದ್ದರು.


  NEDC ಮೂಲಕ ದತ್ತು ಪಡೆದ ಹೆಚ್ಚಿನ ಸಂಬಂಧಿಗಳು ರಾಚೆಲ್ ಕುಟುಂಬದಲ್ಲಿದ್ದರು ಹಾಗಾಗಿ ಭ್ರೂಣ ದತ್ತು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಆಕೆಯ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಬೆಂಬಲ ರಾಚೆಲ್‌ಗೆ ದೊರೆತಿತ್ತು. ನಮ್ಮ ಕುಟುಂಬದಲ್ಲಿ ಜನಿಸಿರುವ ಪ್ರತಿಯೊಂದು ಮಗುವಿನಂತೆ ಲಿಡಿಯಾ ಹಾಗೂ ತಿಮೋತಿ ಜನಿಸಿದ ನಂತರ ಕುಟುಂಬದ ಖುಷಿ ಇನ್ನಷ್ಟು ಹೆಚ್ಚಾಗಿದೆ ಎಂಬುದು ರಿಡ್ಜ್‌ವೇಸ್ ಮಾತಾಗಿದೆ.


  ಅವಳಿ ಭ್ರೂಣಗಳ ದಾಖಲೆ


  ತಮ್ಮ ಅವಳಿಗಳು ಹಳೆಯ ಭ್ರೂಣವಾಗಿದ್ದರೂ ಯಶಸ್ವಿ ಗರ್ಭಾವಸ್ಥೆಯಲ್ಲಿ ಬಳಕೆಯಾಗಿರುವ ದಾಖಲೆಯನ್ನು ಹೊಂದಿದ್ದಾರೆ ಎಂದು ರಿಡ್ಜ್‌ವೇಸ್ ಹರ್ಷ ವ್ಯಕ್ತಪಡಿಸಿದ್ದಾರೆ.


  ಈ ಹಿಂದೆ ಇದೇ ದಾಖಲೆಯನ್ನು ಮೊಲ್ಲಿ ಗಿಬ್ಸನ್ ಹೊಂದಿದ್ದರು ಅವರು 27 ವರ್ಷಗಳ ಹಾಲ ಹೆಪ್ಪುಗಟ್ಟಿಸಿದ ಭ್ರೂಣದಿಂದ 2020 ರಲ್ಲಿ ಮಗುವನ್ನು ಪಡೆದುಕೊಂಡಿದ್ದರು. ರಿಡ್ಜ್‌ವೇಸ್ ಅವಳಿ ಮಕ್ಕಳು ಅತ್ಯಂತ ಹಳೆಯ ಹೆಪ್ಪುಗಟ್ಟಿಸಿದ ಭ್ರೂಣಗಳಾಗಿದ್ದು ಇದೇ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಪಡೆದುಕೊಂಡಿದ್ದಾರೆ. ರಾಷ್ಟ್ರೀಯ ಭ್ರೂಣ ದಾನ ಕೇಂದ್ರವನ್ನು ಸಂಪರ್ಕಿಸಲು ಭ್ರೂಣವನ್ನು ಅಳವಡಿಸಿಕೊಳ್ಳಲು ಆಸಕ್ತಿ ಹೊಂದಿರುವ ಯಾವುದೇ ದಂಪತಿಗಳಿಗೆ ರಿಡ್ಜ್‌ವೇಸ್ ಸಲಹೆ ನೀಡುತ್ತಾರೆ.
  ರಾಷ್ಟ್ರೀಯ ಭ್ರೂಣ ದಾನ ಕೇಂದ್ರ ಹೇಳುವಂತೆ ಭ್ರೂಣ ದಾನ ಎಂಬುದು ಕಾನೂನುಬದ್ಧವಾದ ದತ್ತು ಪ್ರಕ್ರಿಯೆಗೆ ಸಂಬಂಧಿಸಿಲ್ಲ. ಇದನ್ನು ಕನಿಷ್ಠ ಜನನದ ನಂತರ ಸಂಭವಿಸುವ ದತ್ತು ಪ್ರಕ್ರಿಯೆ ಎಂಬ ಅರ್ಥದಲ್ಲಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ.


  ಸಂಭವಿಸುವ ಅಪಾಯಗಳೇನು?


  ಹೆಪ್ಪುಗಟ್ಟಿದ ಭ್ರೂಣಗಳನ್ನು ಕರಗಿಸುವ ಸಮಯದಲ್ಲಿ ಕೂಡ ಅವುಗಳು ಬದುಕುಳಿಯುವ ಸಾಧ್ಯತೆ 80% ದಷ್ಟಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಇನ್ನು ಭ್ರೂಣ ವರ್ಗಾವಣೆಯ ಬಗ್ಗೆ ಕೂಡ ಅಮೇರಿಕನ್ ಸೊಸೈಟಿ ಫಾರ್ ರಿಪ್ರೊಡಕ್ಟಿವ್ ಮೆಡಿಸಿನ್ ಮತ್ತು CDC ತಿಳಿಸುವಂತೆ ಒಂದು ಸಮಯದಲ್ಲಿ ಒಂದೇ ಭ್ರೂಣವನ್ನು ವರ್ಗಾಯಿಸಬೇಕು ಎಂದಾಗಿದೆ. ಭ್ರೂಣಗಳ ಹೆಚ್ಚಿನ ವರ್ಗಾವಣೆಯು ತಾಯಿ ಮಗುವಿಗೆ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಸ್ಥೆಗಳು ಎಚ್ಚರಿಸಿವೆ.

  Published by:Prajwal B
  First published: