• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಡಿಜಿಟಲ್ ಬ್ಯಾಂಕಿಂಗ್ ಘಟಕ ಎಂದರೇನು? ಅದರ ಕಾರ್ಯ ನಿರ್ವಹಣೆ ಹೇಗೆ? ಇಲ್ಲಿದೆ ಮಾಹಿತಿ

Explained: ಡಿಜಿಟಲ್ ಬ್ಯಾಂಕಿಂಗ್ ಘಟಕ ಎಂದರೇನು? ಅದರ ಕಾರ್ಯ ನಿರ್ವಹಣೆ ಹೇಗೆ? ಇಲ್ಲಿದೆ ಮಾಹಿತಿ

ಡಿಜಿಟಲ್ ಬ್ಯಾಂಕಿಂಗ್

ಡಿಜಿಟಲ್ ಬ್ಯಾಂಕಿಂಗ್

ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಪಾವತಿ ಮತ್ತು ಫಿನ್‌ಟೆಕ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಡಿಜಿಟಲ್ ಬ್ಯಾಂಕಿಂಗ್‌ನ ಪ್ರಯೋಜನಗಳು ಗ್ರಾಹಕ ಸ್ನೇಹಿಯಾಗಿ ದೇಶದ ಮೂಲೆ ಮೂಲೆಯನ್ನು ತಲುಪುವಂತೆ ನೋಡಿಕೊಳ್ಳಲು ಸರ್ಕಾರವು ಬದ್ಧವಾಗಿರುವುದಾಗಿ ಹೇಳಿದ್ದಾರೆ. ಹಾಗಾದರೆ ಡಿಜಿಟಲ್ ಬ್ಯಾಂಕಿಂಗ್ ಯುನಿಟ್ ಎಂದರೇನು? ಇಲ್ಲಿದೆ ಈ ಬಗ್ಗೆ ಮಾಹಿತಿ...

ಮುಂದೆ ಓದಿ ...
  • Share this:

ಡಿಜಿಟಲ್ ಇಂಡಿಯಾ (Digital India) ಎನ್ನುವುದು ನಿಮ್ಮೆಲ್ಲರಿಗೂ ಗೊತ್ತು. ಪ್ರಸ್ತುತ ಭಾರತವು ಡಿಜಿಟಲ್ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಮಾಡಬೇಕಾಗಿರುವ ಗುರಿ ಹೊಂದಿದ್ದು, ಅದಕ್ಕಾಗಿಯೇ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಡಿಜಿಟಲ್ ಆರ್ಥಿಕತೆಯಿಂದ ಇಂಟರ್ನೆಟ್ (Internet) ಪ್ರವೇಶ ಮತ್ತು ಆದಾಯ (Income) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2030 ರ ವೇಳೆಗೆ 800 ಬಿಲಿಯನ್‌ ಡಾಲರ್‌ವರೆಗೆ ಅದ್ಭುತ ಬೆಳವಣಿಗೆಯನ್ನು ವೀಕ್ಷಿಸುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆಯಾಗಿರುವ (Central Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ತಮ್ಮ ಬಜೆಟ್ (Budget) ಮಂಡನೆಯ ಸಂದರ್ಭದಲ್ಲಿ ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸುವ ಬಗ್ಗೆ ಮಾತನಾಡಿದ್ದರು. ಇದೀಗ ಆ ಹೇಳಿಕೆಯನ್ನು ಮತ್ತೆ ಸಚಿವೆ ಮಂಗಳವಾರ (ಏಪ್ರಿಲ್ 19) ಪುನರುಚ್ಛರಿಸಿದ್ದಾರೆ. ಈಗಾಗಲೇ ಉದ್ದೇಶಿಸಿರುವ ಹಣಕಾಸಿನ ವಿಷಯದಲ್ಲಿ ಡಿಜಿಟಲೀಕರಣವನ್ನೂ ಸೇರಿಸುವ ಮಹದೋದ್ದೇಶದ ಅಭಿಯಾನವನ್ನು ಇನ್ನಷ್ಟು ಹತ್ತಿರಕ್ಕೆ ಕೊಂಡೊಯ್ಯುವಲ್ಲಿ ಇದು ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಬಹುದು.


ಡಿಜಿಟಲ್ ಇಂಡಿಯಾ ಪರಿಕಲ್ಪನೆ


ಡಿಜಿಟಲ್ ಇಂಡಿಯಾ ಒಂದು ಯೋಜನೆ. ಇದರ ಲಕ್ಶ್ಯ ಭಾರತಕ್ಕೆ ವಿಶ್ವದಲ್ಲೇ ಒಂದು ಅತ್ಯುತ್ತಮ ಸ್ಥಾನಮಾನವನ್ನು ನೀಡುವುದಾಗಿದೆ. ಇದರ ಜುಲೈ 1, 2015ರಂದು ಇಂಧೋರ್ ನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಶುರುವಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಇದರ ಸ್ಥಾಪಕರಾಗಿದ್ದು, ಇದಕ್ಕಾಗಿ ಒಂದು ಲಕ್ಷ ಕೋಟಿ ಯನ್ನು ಇದಕ್ಕಾಗಿ ಅನುಮೋದಿಸಿದ್ದಾರೆ.


ಇದು ಭಾರತೀಯ ನಾಗರಿಕರ ಡಿಜಿಟಲ್ ಸಬಲೀಕರಣ ಮಾಡುವುದು ಹಾಗೂ ಮಾಹಿತಿಯನ್ನು ಡಿಜಿಟಲೀಕರಣ ಗೊಳಿಸುವುದು ಇದರ ಪ್ರಮುಖ ಉದ್ಧೇಶವಾಗಿದೆ. ಇದು ಕಾಗದಪತ್ರಗಳ ಕಾರ್ಯ, ಸಮಯ ಮತ್ತು ಮಾನವಶ್ರಮವನ್ನು ಉಳಿಸುವಲ್ಲಿ ಒಂದು ಪ್ರಮುಖ ಪಾತ್ರವಹಿಸಿದೆ.


ಡಿಜಿಟಲ್ ಬ್ಯಾಂಕಿಂಗ್ ಯುನಿಟ್ ಘೋಷಣೆ


2022-23ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ಸೀತಾರಾಮನ್ “ಇತ್ತೀಚಿನ ವರ್ಷಗಳಲ್ಲಿ, ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಪಾವತಿಗಳು ಮತ್ತು ಫಿನ್‌ಟೆಕ್ ಆವಿಷ್ಕಾರಗಳು ದೇಶದಲ್ಲಿ ತ್ವರಿತ ಗತಿಯಲ್ಲಿ ಬೆಳೆದಿವೆ. ಡಿಜಿಟಲ್ ಬ್ಯಾಂಕಿಂಗ್‌ನ ಪ್ರಯೋಜನಗಳು ದೇಶದ ಮೂಲೆ ಮೂಲೆಯನ್ನು ಗ್ರಾಹಕ ಸ್ನೇಹಿಯಾಗಿ ತಲುಪುವಂತೆ ನೋಡಿಕೊಳ್ಳಲು ಸರ್ಕಾರ ನಿರಂತರವಾಗಿ ಈ ವಲಯಗಳನ್ನು ಪ್ರೋತ್ಸಾಹಿಸುತ್ತಿದೆ ಅಂತ ಹೇಳಿದ್ದರು.


ಇದನ್ನೂ ಓದಿ: Explained: ಕರ್ನಾಟಕದಲ್ಲೂ ಶುರುವಾಗುವುದೇ ಕೋವಿಡ್ 4ನೇ ಅಲೆ? ಸೋಂಕು ನಿಯಂತ್ರಣಕ್ಕೆ ಸಜ್ಜಾಗಿದ್ಯಾ ರಾಜ್ಯ?


75 ಡಿಜಿಟಲ್ ಬ್ಯಾಂಕಿಂಗ್ ಘಟಕ ಸ್ಥಾಪನೆ


ಈ ಕಾರ್ಯಸೂಚಿಯನ್ನು ಮುಂದಕ್ಕೆ ತೆಗೆದುಕೊಂಡು, ನಮ್ಮ ಸ್ವಾತಂತ್ರ್ಯದ 75 ವರ್ಷಗಳು ತುಂಬುತ್ತಿರುವ ಈ ಸುಸಂದರ್ಭದಲ್ಲಿ ಅದನ್ನು ಗುರುತಿಸಿ ಪ್ರೋತ್ಸಾಹಿಸಲು, ದೇಶದ 75 ಜಿಲ್ಲೆಗಳಲ್ಲಿ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳಿಂದ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು (DBU) ಸ್ಥಾಪಿಸಲು ಉದ್ದೇಶಿಸಲಾಗಿದೆ" ಎಂದು ಹೇಳಿದ್ದರು. ಅದಕ್ಕೆ ಪೂರಕವಾಗಿ ಈಗ ಡಿಬಿಯುಗಳು ಮುನ್ನೆಲೆಗೆ ಬರುತ್ತಿವೆ ಎಂದು ಹೇಳಬಹುದಾಗಿದೆ.


ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಪಾವತಿ


ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಪಾವತಿ ಮತ್ತು ಫಿನ್‌ಟೆಕ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಡಿಜಿಟಲ್ ಬ್ಯಾಂಕಿಂಗ್‌ನ ಪ್ರಯೋಜನಗಳು ಗ್ರಾಹಕ ಸ್ನೇಹಿಯಾಗಿ ದೇಶದ ಮೂಲೆ ಮೂಲೆಯನ್ನು ತಲುಪುವಂತೆ ನೋಡಿಕೊಳ್ಳಲು ಸರ್ಕಾರವು ಬದ್ಧವಾಗಿರುವುದಾಗಿ ಹೇಳಿದ್ದಾರೆ.


2022-23ರಲ್ಲಿ ಎಲ್ಲಾ 1.5 ಲಕ್ಷ ಅಂಚೆ ಕಚೇರಿಗಳನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸಲಾಗುವುದು, ಹಣಕಾಸು ಸೇರ್ಪಡೆ ಮತ್ತು ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂಗಳ ಮೂಲಕ ಖಾತೆಗಳಿಗೆ ಪ್ರವೇಶವನ್ನು ಸಕ್ರಿಯಗೊಳಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದ್ದರು. ಇದು ಪೋಸ್ಟ್ ಆಫೀಸ್ ಖಾತೆಗಳು ಮತ್ತು ಬ್ಯಾಂಕ್ ಖಾತೆಗಳ ನಡುವೆ ಹಣವನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಲು ಸಹ ಅನುಮತಿಸುತ್ತದೆ.


ಅಲ್ಲದೆ, ಹಿಂದಿನ ಬಜೆಟ್‌ನಲ್ಲಿ ಡಿಜಿಟಲ್ ಪಾವತಿಗೆ ಘೋಷಿಸಿದ ಹಣಕಾಸಿನ ನೆರವು 2022-23ರಲ್ಲೂ ಮುಂದುವರಿಯುತ್ತದೆ ಎಂದೂ ಹೇಳಿದ್ದಾರೆ. "ಇದು ಡಿಜಿಟಲ್ ಪಾವತಿಗಳ ಮತ್ತಷ್ಟು ಅಳವಡಿಕೆಗೆ ಉತ್ತೇಜನ ನೀಡಲಿದೆ. ಆರ್ಥಿಕ ಮತ್ತು ಬಳಕೆದಾರ ಸ್ನೇಹಿಯಾಗಿರುವ ಪಾವತಿ ಪ್ಲಾಟ್‌ಫಾರ್ಮ್‌ಗಳ ಬಳಕೆಯನ್ನು ಉತ್ತೇಜಿಸಲು ಸಹ ಗಮನಹರಿಸಲಾಗುವುದು" ಎಂದಿದ್ದಾರೆ.


2022-2023ರ ಬಜೆಟ್ ಭಾಷಣದಲ್ಲಿ 75 ಜಿಲ್ಲೆಗಳಲ್ಲಿ 75 ಡಿಬಿಯುಗಳನ್ನು ಸ್ಮರಣಾರ್ಥವಾಗಿ ಸ್ಥಾಪಿಸುವುದಾಗಿ ಹಣಕಾಸು ಸಚಿವೆ ಘೋಷಿಸಿದ ನಂತರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಡಿಜಿಟಲ್ ಬ್ಯಾಂಕಿಂಗ್ ಘಟಕಗಳ (ಡಿಬಿಯು) ಸ್ಥಾಪನೆಯ ಮಾರ್ಗಸೂಚಿಗಳನ್ನು ಏಪ್ರಿಲ್ 7 ರಂದು ಬಿಡುಗಡೆ ಮಾಡಿತ್ತು.


ಡಿಬಿಯು ಎಂದರೆ ಏನು?


ಡಿಜಿಟಲ್ ಬ್ಯಾಂಕಿಂಗ್ ಘಟಕವು ಡಿಜಿಟಲ್ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳನ್ನು ತಲುಪಿಸಲು ಹಾಗೂ ಯಾವುದೇ ಸಮಯದಲ್ಲಿ ಸ್ವಯಂ-ಸೇವಾ ಮೋಡ್‌ನಲ್ಲಿ ಅಸ್ತಿತ್ವದಲ್ಲಿರುವ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳನ್ನು ಡಿಜಿಟಲ್‌ನಲ್ಲಿ ಪೂರೈಸಲು ಕೆಲವು ಕನಿಷ್ಠ ಡಿಜಿಟಲ್ ಮೂಲಸೌಕರ್ಯವನ್ನು ಹೊಂದಿರುವ ವಿಶೇಷ ಸ್ಥಿರ ಬಿಂದು ಅಥವಾ ವ್ಯಾಪಾರ ಘಟಕ ಅಥವಾ ಕೇಂದ್ರವಾಗಿದೆ.


ಈ ತಿಂಗಳ ಆರಂಭದಲ್ಲಿ, ಅಖಿಲ ಭಾರತೀಯ ಬ್ಯಾಂಕುಗಳ ಸಂಘದ ಕೆಲಸನಿರತ ಸಿಬ್ಬಂದಿ ವರ್ಗ ತಯಾರಿಸಿ ನೀಡಿರುವ ವರದಿಯನ್ನು ಅನುಸರಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಟಲ್ ಬ್ಯಾಂಕಿಂಗ್ ಘಟಕಗಳಿಗೆ ಹೊಸದಾಗಿ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.


ಡಿಬಿಯುಗಳನ್ನು ಯಾರು ಸ್ಥಾಪಿಸುತ್ತಾರೆ?


ಈ ಹಿಂದೆ ಡಿಜಿಟಲ್ ಕ್ಷೇತ್ರದಲ್ಲಿ ಬ್ಯಾಂಕಿಂಗ್ ಪ್ರಕ್ರಿಯೆಯ ಅನುಭವ ಹೊಂದಿರುವ ವಾಣಿಜ್ಯ ಬ್ಯಾಂಕುಗಳು (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಪಾವತಿ ಬ್ಯಾಂಕ್‌ಗಳು ಮತ್ತು ಸ್ಥಳೀಯ ಪ್ರದೇಶದ ಬ್ಯಾಂಕ್‌ಗಳನ್ನು ಹೊರತುಪಡಿಸಿ) ನಿರ್ದಿಷ್ಟವಾಗಿ ನಿರ್ಬಂಧಿಸದ ಹೊರತು, ಪ್ರತಿ ಪ್ರಕರಣದಲ್ಲಿ ಆರ್‌ಬಿಐನಿಂದ ಅನುಮತಿಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲದೆ, ಶ್ರೇಣಿ 1 ರಿಂದ ಶ್ರೇಣಿ 6 ಕೇಂದ್ರಗಳಲ್ಲಿ ಡಿಬಿಯುಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಸರಳವಾಗಿ ಹೇಳಬೇಕೆಂದರೆ ವಾಣಿಜ್ಯಾತ್ಮಕ ಬ್ಯಾಂಕುಗಳು ಈ ಕೇಂದ್ರವನ್ನು ಸ್ಥಾಪಿಸಬಹುದಾಗಿದೆ.


ಡಿಬಿಯುನಲ್ಲಿ ದೊರೆಯುವ ಸೇವೆಗಳು


ರಿಸರ್ವ್ ಬ್ಯಾಂಕ್ ಪ್ರಕಾರ, ಪ್ರತಿ ಡಿಬಿಯು ಘಟಕವು ಕೆಲವು ಕನಿಷ್ಠ ಡಿಜಿಟಲ್ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡಲೇಬೇಕಾಗಿರುತ್ತದೆ. ಅಂತಹ ಉತ್ಪನ್ನಗಳು ಡಿಜಿಟಲ್ ಬ್ಯಾಂಕಿಂಗ್ ವಿಭಾಗದ ಬ್ಯಾಲೆನ್ಸ್ ಶೀಟ್‌ನ ಹೊಣೆಗಾರಿಕೆಗಳು ಮತ್ತು ಸ್ವತ್ತುಗಳೆರಡರಲ್ಲೂ ಇರಬೇಕು. ಸಾಂಪ್ರದಾಯಿಕ ಉತ್ಪನ್ನಗಳಿಗೆ ಡಿಜಿಟಲ್ ಮೌಲ್ಯವರ್ಧಿತ ಸೇವೆಗಳು ಸಹ ಅರ್ಹತೆ ಪಡೆದಿರುತ್ತವೆ.


ಇನ್ನೂ ಹಲವು ವ್ಯವಸ್ಥೆ


ಸೇವೆಗಳಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಉಳಿತಾಯ ಬ್ಯಾಂಕ್ ಖಾತೆಗಳು, ಚಾಲ್ತಿ ಖಾತೆಗಳು, ಸ್ಥಿರ ಠೇವಣಿ ಮತ್ತು ಮರುಕಳಿಸುವ ಠೇವಣಿ ಖಾತೆಗಳು, ಗ್ರಾಹಕರಿಗೆ ಡಿಜಿಟಲ್ ಕಿಟ್, ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಸಮೂಹ ಸಾರಿಗೆ ಸಿಸ್ಟಮ್ ಕಾರ್ಡ್‌ಗಳು, ವ್ಯಾಪಾರಿಗಳಿಗೆ ಡಿಜಿಟಲ್ ಕಿಟ್, ಯುಪಿಐ ಕ್ಯೂಆರ್ ಕೋಡ್, ಭೀಮ್ ಆಧಾರ್ ಮತ್ತು ಪಾಯಿಂಟ್ ಆಫ್ ಸೇಲ್ (PoS) ನಂತಹ ಸೇವೆಗಳನ್ನು ಒದಗಿಸಬೇಕಾಗುತ್ತದೆ.


ಹಲವು ವರ್ಗದ ವ್ಯಾಪಾರಿಗಳಿಗೆ ಸಹಾಯ


ಇನ್ನುಳಿದಂತೆ ಈ ಘಟಕಗಳು ಗುರುತಿಸಲಾದ ಚಿಲ್ಲರೆ ವ್ಯಾಪಾರ, ಮಧ್ಯಮ ಗಾತ್ರದ ಕೈಗಾರಿಕೆಗಳು ಅಥವಾ ಸ್ಕೀಮ್ಯಾಟಿಕ್ ಲೋನ್‌ಗಳಿಗಾಗಿ ಗ್ರಾಹಕರಿಗೆ ಅರ್ಜಿಗಳನ್ನು ಸಲ್ಲಿಸುವುದು ಮತ್ತು ಆನ್‌ಬೋರ್ಡಿಂಗ್ ಮಾಡಿಕೊಳ್ಳುವುದು ಹಾಗೂ ಇನ್ನಿತರೆ ಸೇವೆಗಳನ್ನು ಒಳಗೊಂಡಿರುತ್ತದೆ. ಇದು ಆನ್‌ಲೈನ್ ಅಪ್ಲಿಕೇಶನ್‌ನಿಂದ ವಿತರಣೆ ಮತ್ತು ರಾಷ್ಟ್ರೀಯ ಪೋರ್ಟಲ್‌ನ ಅಡಿಯಲ್ಲಿ ಒಳಗೊಂಡಿರುವ ಗುರುತಿಸಲಾದ ಸರ್ಕಾರಿ ಪ್ರಾಯೋಜಿತ ಯೋಜನೆಗಳವರೆಗೆ ಅಂತಹ ಸಾಲಗಳ ಅಂತ್ಯದಿಂದ ಅಂತ್ಯದ ಡಿಜಿಟಲ್ ಪ್ರಕ್ರಿಯೆಯನ್ನೂ ಒಳಗೊಂಡಿರಬಹುದು.


ಡಿಬಿಯುಗಳು ಹಾಗೂ ಇತರೆ ಫಿನ್‌ಟೆಕ್‌ ಕಂಪನಿಗಳು


ಪ್ರಸ್ತುತ, ನಿಯೋಬ್ಯಾಂಕ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಫಿನ್‌ಟೆಕ್‌ಗಳು ಸಹ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತವೆ. ಆದರೆ, ಅವು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳ (NBFCs) ಸಹಭಾಗಿತ್ವದಲ್ಲಿ ಈ ಸೇವೆಗಳನ್ನು ಒದಗಿಸುತ್ತವೆ. ಭಾರತದಲ್ಲಿ ಸೇವೆಗಳನ್ನು ಒದಗಿಸುವ ಕೆಲವು ನಿಯೋಬ್ಯಾಂಕ್‌ಗಳೆಂದರೆ ಜುಪಿಟರ್, ಫೈ ಮನಿ, ನಿಯೋ, ರೇಜರ್‌ಪೇ ಎಕ್ಸ್.


ಇದನ್ನೂ ಓದಿ: Explained: 'ಕೋಟಿ' ಬಂದಿದೆ ಅಂತ ಕಾಲ್ ಮಾಡುವವರು ನಿಮ್ಮ ನೆಂಟರಲ್ಲ! ಇವ್ರು Cyber 'ಗಂಟು' ಕಳ್ಳರು!


ಆನ್‌ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಹೊಂದಿರುವ ಸಾಂಪ್ರದಾಯಿಕ ಬ್ಯಾಂಕ್‌ಗಳಿಗೆ ಹೋಲಿಸಿದರೆ, ನಿಯೋಬ್ಯಾಂಕ್‌ಗಳು ಅಥವಾ ಡಿಜಿಟಲ್ ಬ್ಯಾಂಕ್‌ಗಳು ಉತ್ಪನ್ನದ ಆವಿಷ್ಕಾರದಲ್ಲಿ ಉತ್ತಮವಾಗಿವೆ ಮತ್ತು ಉತ್ತಮ ಡಿಜಿಟಲ್ ಪರಿಹಾರಗಳನ್ನು ನೀಡುತ್ತವೆ ಎಂದು ಹೇಳಬಹುದು.


ಆದರೂ, ನೈಜ ಬ್ಯಾಂಕಿಂಗ್ ಭಾಗವನ್ನು ನಡೆಸಲು ಅವರು ಪ್ರಸ್ತುತ NBFC ಗಳು ಅಥವಾ ಶೆಡ್ಯೂಲ್ ಬ್ಯಾಂಕ್‌ಗಳೊಂದಿಗೆ ಹೊಂದಿರುವ ವ್ಯವಸ್ಥೆಯನ್ನು ನೀಡಿದರೆ, ಉದ್ಯಮದಲ್ಲಿ ಕೆಲವರು ಈ ಡಿಜಿಟಲ್ ಬ್ಯಾಂಕ್‌ಗಳನ್ನು "ವೈಭವೀಕರಿಸಿದ ಡಿಜಿಟಲ್ ವಿತರಣಾ ಕಂಪನಿಗಳು" ಎಂದು ಗುರುತಿಸಿದ್ದಾರೆ.

First published: