• Home
 • »
 • News
 • »
 • explained
 • »
 • Explainer: ಅಮೆರಿಕಾದೆಲ್ಲೆಡೆ ಬಾಂಬ್ ಸೈಕ್ಲೋನ್‌ನ ಆರ್ಭಟ! ಚಳಿಗಾಲದ ಚಂಡಮಾರುತ ಆರಂಭ

Explainer: ಅಮೆರಿಕಾದೆಲ್ಲೆಡೆ ಬಾಂಬ್ ಸೈಕ್ಲೋನ್‌ನ ಆರ್ಭಟ! ಚಳಿಗಾಲದ ಚಂಡಮಾರುತ ಆರಂಭ

ಚಂಡಮಾರುತದ ದೃಶ್ಯಗಳು

ಚಂಡಮಾರುತದ ದೃಶ್ಯಗಳು

ಇದೀಗ ಅಮೆರಿಕದೆಲ್ಲೆಡೆ ಬಾಂಬ್ ಸೈಕ್ಲೋನ್ ಎಂಬ ಚಳಿಗಾಲದ ಚಂಡಮಾರುತ ಪ್ರಾರಂಭವಾಗಿದೆ.ಇದಲ್ಲದೆ ಯುಎಸ್​ನಲ್ಲಿ ಈ ಕಾರಣಕ್ಕಾಗಿ 5 ಸಾವಿರಕ್ಕೂ ಹೆಚ್ಚಿನ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಂತ್ರಜ್ಞರು ಹೇಳಿದ್ದಾರೆ

 • News18 Kannada
 • 3-MIN READ
 • Last Updated :
 • New Delhi, India
 • Share this:

  ಅಮೆರಿಕಾದಲ್ಲಿ (America) ಇದೀಗ ಚಳಿಗಾಲದ ಚಂಡಮಾರುತ (Winter Storm) ಪ್ರಕೋಪವಾಗಿದೆ. ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗುವ ಮೂಲಕ ಬಾಂಬ್ ಸೈಕ್ಲೋನ್ (Bomb Cyclones) ಆಗಿ ಅಭಿವೃದ್ಧಿ ಹೊಂದಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಯುಎಸ್‌ನಲ್ಲಿ 5,000 ಕ್ಕಿಂತಲೂ ಹೆಚ್ಚಿನ ವಿಮಾನಗಳನ್ನು ಬಾಂಬ್ ಸೈಕ್ಲೋನ್ ಹಿನ್ನಲೆಯಲ್ಲಿ ರದ್ದುಗೊಳಿಸಲಾಯಿತು. ಇದೀಗ ಅಮೆರಿಕಾದಲ್ಲಿ ಪ್ರಾರಂಭವಾದ ಚಂಡಮಾರುತವು ಅಲ್ಲಿನವರನ್ನು ನಿಬ್ಬೆರಗಾಗಿಸಿದೆ. ಯಾಕೆಂದರೆ ಅಲ್ಲಿನ ವರದಿಯ ಪ್ರಕಾರ ಪ್ರತೀ ಗಂಟೆಗೆ ಅರ್ಧ ಇಂಚಿನಷ್ಟು ಹಿಮಪಾತವನ್ನು ಉಂಟುಮಾಡುತ್ತದೆ ಎಂದು ಹೇಳಿದೆ. ಇದರಿಂದ ಅಲ್ಲಿನ ಸ್ಥಳಗಳೆಲ್ಲವೂ ಸಂಪೂರ್ಣವಾಗಿ ಮಂಜಿನಿಂದ ಆವೃತಗೊಳ್ಳಲಿದೆ ಜೊತೆಗೆ ಇದರಿಂದ ಏನೂ ನೋಡಲೂ ಸಾಧ್ಯವಾಗುವುದಿಲ್ಲ ಎಂದಿದ್ದಾರೆ.


  ಇದೀಗ ಅಮೆರಿಕದೆಲ್ಲೆಡೆ ಬಾಂಬ್ ಸೈಕ್ಲೋನ್ ಎಂಬ ಚಳಿಗಾಲದ ಚಂಡಮಾರುತ ಪ್ರಾರಂಭವಾಗಿದೆ.ಇದಲ್ಲದೆ ಯುಎಸ್​ನಲ್ಲಿ ಈ ಕಾರಣಕ್ಕಾಗಿ 5 ಸಾವಿರಕ್ಕೂ ಹೆಚ್ಚಿನ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಂತ್ರಜ್ಞರು ಹೇಳಿದ್ದಾರೆ


  ಹಿಮಪಾತಕ್ಕೆ ಕಾರಣವಾಗಲಿರುವ ಚಂಡಮಾರುತ


  ರಾಷ್ಟ್ರೀಯ ಹವಾಮಾನ ಇಲಾಖೆಯ ಪ್ರಕಾರ ಚಂಡಮಾರುತವು ಪ್ರತಿ ಗಂಟೆಗೆ ಅರ್ಧ ಇಂಚಿನ(1.25 ಸೆಂ.ಮೀ) ನಷ್ಟು ಹಿಮಪಾತವನ್ನುಂಟು ಮಾಡಬಹುದು ಎಂದು ತಿಳಿಸಿದ್ದು ಇದರಿಂದ ಮಂಜು ಮುಸುಕಿದ ವಾತಾವರಣ ನಿರ್ಮಾಣಗೊಳ್ಳುತ್ತದೆ ಹಾಗೂ ಏನೂ ಕಾಣಿಸುವುದಿಲ್ಲ ಎಂದು ತಿಳಿಸಿದ್ದಾರೆ.


  ಪ್ರವಾಹಕ್ಕೆ ಕಾರಣವಾಗಿರುವ ವಾಯುಮಂಡಲದ ನದಿಗಳು


  ವಾಯುಮಂಡಲದ ನದಿಗಳು/ಜಲಮಾರ್ಗಗಳು ಬಿರುಗಾಳಿಯನ್ನು ಹೋಲುವಂತಿದ್ದು ಭಾರೀ ಪ್ರಮಾಣದ ಹಿಮಮಳೆಯನ್ನು ಸುರಿಸುತ್ತವೆ ಹಾಗೂ ಪ್ರವಾಹಕ್ಕೆ ಕಾರಣವಾಗಬಹುದು ಎಂಬುದು ತಜ್ಞರ ಹೇಳಿಕೆಯಾಗಿದೆ. ಮಣ್ಣಿನ ಕುಸಿತದ ಜೊತೆಗೆ ಜೀವಹಾನಿ ಹಾಗೂ ಆಸ್ತಿಹಾನಿಗಳಿಗೂ ಹಿಮಪಾತ ಕಾರಣವಾಗುತ್ತವೆ ಎಂಬುದು ಹವಾಮಾನ ತಜ್ಞರ ಅಭಿಪ್ರಾಯವಾಗಿದೆ.


  ಇದನ್ನೂ ಓದಿ: ಸಿಗರೇಟ್ ತಯಾರಕ ಕಂಪನಿಗಳಿಗೆ ಬಿಗ್‌ ಶಾಕ್‌ ನೀಡಿದ ಸ್ಪೇನ್! ಇವರು ಮಾಡಿದ ಉಪಾಯ ನೋಡಿ


  ವಾಯುಮಂಡಲದ ಜಲಮಾರ್ಗಗಳು/ನದಿಗಳು (AR) ಎಂದರೇನು?


  ವಾಯುಮಂಡಲದ ನದಿಗಳು ಉಷ್ಣವಲಯದಿಂದ ಧ್ರುವಗಳ ಕಡೆಗೆ ನೀರಿನ ಆವಿಯನ್ನು ಸಾಗಿಸುವ ವಾತಾವರಣದಲ್ಲಿ ಉದ್ದವಾದ, ತುಲನಾತ್ಮಕವಾಗಿ ಕಿರಿದಾದ ಪ್ರದೇಶಗಳಾಗಿವೆ. ವಾಯುಮಂಡಲದ ನದಿಗಳು 1,000 ಮೈಲುಗಳಿಗಿಂತ ಹೆಚ್ಚು ಉದ್ದವಿರಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ವಾಯುಮಂಡಲದ ನದಿಯು ಭೂಕುಸಿತಕ್ಕೆ ಕಾರಣವಾದರೆ ಪರ್ವತಗಳ ಮೇಲೆ ಹರಿಯುತ್ತದೆ. ಇದರಿಂದ ನೀರಿನ ಆವಿಯು ಏರುತ್ತದೆ ಹಾಗೂ ನೀರಿನ ಹನಿಗಳಾಗಿ ತಂಪಾಗುತ್ತವೆ.


  ಚಂಡಮಾರುತದ ದೃಶ್ಯಗಳು


  ನಂತರ ಇದುವೇ ಮಳೆ ಅಥವಾ ಹಿಮವಾಗಿ ಬಿಡುಗಡೆಯಾಗುತ್ತದೆ. ವಾಯುಮಂಡಲದ ನದಿಗಳು ಜಾಗತಿಕ ಜಲಚಕ್ರದ ಪ್ರಾಥಮಿಕ ಲಕ್ಷಣವಾಗಿದ್ದರೂ, ಪಶ್ಚಿಮ ಅಮೆರಿಕಾ ರಾಜ್ಯಗಳಲ್ಲಿ ಅವು ವಿಶೇಷವಾಗಿ ಮಹತ್ವದ್ದಾಗಿವೆ ಎಂಬುದು ತಜ್ಞರ ಹೇಳಿಕೆಯಾಗಿದೆ.


  ಕ್ಯಾಲಿಫೋರ್ನಿಯಾದಲ್ಲಿ ದಾಂಧಲೆ ನಡೆಸುತ್ತಿರುವ ವಾಯುಮಂಡಲ ನದಿಗಳು


  ಹೊಸ ವರ್ಷದ ವಾರಾಂತ್ಯದಲ್ಲಿ ಕ್ಯಾಲಿಫೋರ್ನಿಯಾಕ್ಕೆ ಅಪ್ಪಳಿಸಿದ ಕೊನೆಯ ವಾಯುಮಂಡಲದ ನದಿಗಿಂತ ಈ ವಾರ ಅಪ್ಪಳಿಸಿದ ನದಿಯು ಪ್ರಬಲವಾಗಿದೆ. ಇದರಿಂದಾಗಿ ದೊಡ್ಡ ಪ್ರವಾಹಗಳು ಉಂಟಾಗಿದ್ದು, ಡಜನ್‌ಗಟ್ಟಲೆ ಕಾರುಗಳು ಹೆದ್ದಾರಿಗಳಲ್ಲಿ ಸಿಲುಕಿಕೊಂಡವು ಮತ್ತು ಸಾವಿರಾರು ಮನೆಗಳು ವಿದ್ಯುತ್ ಅಭಾವವನ್ನು ಎದುರಿಸಿದವು ಎಂಬುದು ವರದಿಯಾಗಿದೆ.


  ವಾಯುಮಂಡಲದ ನದಿಗಳಿಗಿಂತ ಚಂಡಮಾರುತಗಳು ಏಕೆ ಶಕ್ತಿಯುತವಾಗಿವೆ?


  ವಾಯುಮಂಡಲದ ನದಿಗಳು ರೂಪುಗೊಂಡು ಭೂಮಿಯ ಮೇಲ್ಮೈಗೆ ಚಲಿಸುತ್ತವೆ. ಈ ನದಿಗಳು ಭೂಮಿಯನ್ನು ತಲುಪಿದ ನಂತರ ಅದರಲ್ಲೂ ಕ್ಯಾಲಿಫೋರ್ನಿಯಾದ ಕರಾವಳಿ ಪರ್ವತಗಳನ್ನು ಸಮೀಪಿಸಿದಾಗ ಪರ್ವತಗಳ ಆರಂಭ ಬಿಂದುವಿನಿಂದ ಎತ್ತರಕ್ಕೆ ಚಲಿಸುತ್ತವೆ.


  ನದಿಗಳನ್ನುಂಟು ಮಾಡುವ ನೀರಿನ ಆವಿಯು ಮೇಲಕ್ಕೆ ಚಲಿಸುವಾಗ ವಾತಾವರಣದ ತಾಪಮಾನದೊಂದಿಗೆ ಸೇರಿಕೊಂಡು ತಂಪಾಗುತ್ತವೆ ಹಾಗೂ ನೀರಿನ ಹನಿಗಳಾಗಿ ಬದಲಾಗುತ್ತವೆ ಹಾಗೂ ಸಾಕಷ್ಟು ಮಳೆಯನ್ನು ಸುರಿಸುತ್ತವೆ. ಜೊತೆಗೆ ಗಾಳಿ ಮತ್ತು ನೀರು ಒಟ್ಟಿಗೆ ಭೂಮಿಗೆ ಅಪ್ಪಳಿಸುವುದರಿಂದ ಇದು ಶಕ್ತಿಯುತವಾಗಿರುತ್ತದೆ.


  ಬಾಂಬ್ ಸೈಕ್ಲೋನ್‌ನೊಂದಿಗೆ ಸಂಯೋಜನೆಗೊಂಡಿರುವ ವಾಯುಮಂಡಲದ ನದಿಗಳು


  ಇಂತಹುದೇ ಚಂಡಮಾರುತ ಬಾಂಬ್ ಸೈಕ್ಲೋನ್‌ನೊಂದಿಗೆ ಸೇರಿಕೊಂಡು ಕ್ಯಾಲಿಫೋರ್ನಿಯಾವನ್ನು ಅಕ್ಷರಶಃ ಹಾನಿಗೊಳಿಸಿದೆ. ನ್ಯಾಷನಲ್ ಓಷಿಯಾನಿಕ್ ಮತ್ತು ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ ಪ್ರಕಾರ ಬಿರುಗಾಳಿಯಿಂದ ಉಂಟಾಗುವ ಮಳೆಗೆ ವಾಯುಮಂಡಲದ ಜಲಮಾರ್ಗಗಳು ಅಥವಾ ನದಿಗಳು ಕಾರಣವಾಗಿದ್ದು ಇವುಗಳು ಮಿಸ್ಸಿಸ್ಸಿಪ್ಪಿ ನದಿಯ ಪರಿಮಾಣದ 15 ಪಟ್ಟು ಹೆಚ್ಚು ನಗರವನ್ನು ಜಲಾವೃತಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದಾಗಿದೆ.


  ಹವಾಮಾನ ಬದಲಾವಣೆಯಿಂದ ವಿಸ್ತಾರಗೊಳ್ಳುವ ಜಲಮಾರ್ಗಗಳು (ವಾಯುಮಂಡಲದ ನದಿಗಳು)


  ರಾಷ್ಟ್ರೀಯ ಹವಾಮಾನ ಸೇವೆಯ ಹವಾಮಾನಶಾಸ್ತ್ರಜ್ಞ ಬಾಬ್ ಒರಾವೆಕ್ ಪ್ರಕಾರ, ಇದು ಕಳೆದ ವಾರದಿಂದ ಕ್ಯಾಲಿಫೋರ್ನಿಯಾವನ್ನು ಅಪ್ಪಳಿಸಿರುವ ಮೂರನೇ ವಾಯುಮಂಡಲದ ನದಿ ಚಂಡಮಾರುತವಾಗಿದೆ ಮತ್ತು ಪ್ರಬಲವಾಗಿದೆ ಎಂದು ತಿಳಿಸಿದ್ದಾರೆ. ಹವಾಮಾನ ಬದಲಾವಣೆಯು ಈ ನದಿಗಳನ್ನು ಇನ್ನಷ್ಟು ವಿಸ್ತಾರಗೊಳಿಸುತ್ತವೆ ಹಾಗೂ 25% ಉದ್ದ ಹಾಗೂ ಅಗಲವಾಗುವ ಮೂಲಕ ಹೆಚ್ಚು ವಿಸ್ತಾರಗೊಂಡು ಹೆಚ್ಚು ನೀರನ್ನು ಸಾಗಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತವೆ.


  ವಾಯುಮಂಡಲದ ನದಿಗಳು ಮಧ್ಯಮ ಗತಿಯಲ್ಲಿದ್ದರೆ ನೀರಿನ ಸರಬರಾಜಿಗೆ ಪ್ರಯೋಜನಕಾರಿಯಾಗಿರುತ್ತವೆ ಹಾಗೂ ಇದು ಯಾವಾಗಲಾದರೊಮ್ಮೆ ನಡೆಯುತ್ತದೆ. ಇನ್ನು ವಾಯುಮಂಡಲದ ನದಿಗಳು ಬಲವಾದಷ್ಟು ಅವುಗಳು ಹೆಚ್ಚಿನ ದುರಂತಗಳಿಗೆ ಕಾರಣವಾಗುತ್ತವೆ ಎಂಬುದು ಹವಾಮಾನ ತಜ್ಞರ ಅಭಿಪ್ರಾಯವಾಗಿದೆ.


  ಬಾಂಬ್ ಸೈಕ್ಲೋನ್ ಹೇಗೆ ಪರಿಣಾಮಕಾರಿ?


  ಬಾಂಬ್ ಸೈಕ್ಲೋನ್ಸ್ ಅಥವಾ ಚಂಡಮಾರುತಗಳು ಈ ವಾಯುಮಂಡಲದ ಜಲಮಾರ್ಗಗಳೊಂದಿಗೆ ಸಂಯೋಜನೆಗೊಳ್ಳುತ್ತವೆ ಅಂತೆಯೇ ಇದು ಸಾಮಾನ್ಯವಾಗಿ ಶೀತ ಮತ್ತು ಬೆಚ್ಚಗಿನ ಗಾಳಿಯ ದ್ರವ್ಯರಾಶಿಗಳು ಘರ್ಷಣೆಯಾದಾಗ ಸಾಮಾನ್ಯವಾಗಿ ಚಳಿಗಾಲದಲ್ಲಿ ರೂಪುಗೊಳ್ಳುತ್ತವೆ.


  ಚಂಡಮಾರುತದ ದೃಶ್ಯಗಳು


  ಬಾಂಬ್ ಸೈಕ್ಲೋನ್ ಅನ್ನು ಸ್ಫೋಟಕ ಸೈಕ್ಲೋಜೆನೆಸಿಸ್ ಎಂದೂ ಕರೆಯುತ್ತಾರೆ. ಬಾಂಬ್ ಸೈಕ್ಲೋನ್ ಕಡಿಮೆ ಒತ್ತಡದ ಪ್ರಕ್ರಿಯೆಯಾಗಿದ್ದು 24 ಗಂಟೆಗಳಲ್ಲಿ 24 ಮಿಲಿಬಾರ್‌ಗಳ ಒತ್ತಡದಲ್ಲಿ ಕುಸಿತಕ್ಕೆ ಕಾರಣವಾಗುತ್ತವೆ ಎಂಬುದಾಗಿ ತಜ್ಞರು ತಿಳಿಸುತ್ತಾರೆ.


  ಕಾಳ್ಗಿಚ್ಚಿಗೆ ಕಾರಣವಾಗುವ ಹವಾಮಾನ ವಿಕೋಪಗಳು


  ನಾರ್ತ್ ಕೆರೊಲಿನಾ ಸ್ಟೇಟ್ ಯೂನಿವರ್ಸಿಟಿಯ ಹವಾಮಾನ ವಿಜ್ಞಾನಿ ಕಾರ್ಲ್ ಸ್ಕ್ರೆಕ್, ಹೇಳುವಂತೆ ವಾಯುಮಂಡಲದ ನದಿಗಳು ಸೈಕ್ಲೋನ್ ಎಂಜಿನ್ ಅನ್ನು ಇನ್ನಷ್ಟು ಬಲಪಡಿಸಬಹುದು ಎಂದು ತಿಳಿಸುತ್ತಾರೆ.


  ಹವಾಮಾನ ಬದಲಾವಣೆಯಿಂದ ಬೆಚ್ಚಗಿನ ಗಾಳಿ ಮತ್ತು ನೀರಿನ ತಾಪಮಾನವು ಬಿರುಗಾಳಿಗಳನ್ನು ಹೀರಿಕೊಳ್ಳುತ್ತವೆ ಹಾಗೂ ವಾತಾವರಣಕ್ಕೆ ಬಿಡುತ್ತವೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಬೃಹತ್ ಬಿರುಗಾಳಿಗಳು ಕ್ಯಾಲಿಫೋರ್ನಿಯಾಗೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತಿದ್ದು, ಬರಗಾಲದ ಸಮಯದಲ್ಲಿ ಕಾಳ್ಗಿಚ್ಚಿಗೆ ಕಾರಣವಾಗುತ್ತವೆ ಎಂಬುದು ತಜ್ಞರ ಕಳವಳವಾಗಿದೆ.


  ಹಾನಿ ತಪ್ಪಿಸಲು ದೇಶ ಕೈಗೊಂಡಿರುವ ಕ್ರಮಗಳೇನು?


  ಹೀಗೆ ಹವಾಮಾನದ ವೈಪರೀತ್ಯಗಳಿಂದ ಉಂಟಾಗುವ ಹಾನಿಗಳನ್ನು ತಗ್ಗಿಸಲು ರಾಜ್ಯವು ಪ್ರವಾಹವನ್ನು ನಿಯಂತ್ರಿಸುವ ಪ್ರಯೋಗವನ್ನು ನಡೆಸುತ್ತಿದೆ. ಈ ಪ್ರಯೋಗವನ್ನು ಪುನರ್‌ಭರ್ತಿ ವ್ಯವಸ್ಥೆ ಎಂದೂ ಕರೆಯಲಾಗಿದ್ದು ಬಳಸದೇ ಇರುವ ಕೊಳಗಳನ್ನು ನೀರನ್ನು ಹಿಡಿದಿಟ್ಟುಕೊಳ್ಳಲು ಬಳಸಲಾಗುತ್ತದೆ


  ಇದರಿಂದ ನೀರು ಬಂಡೆ ಹಾಗೂ ಭೂಮಿಯೊಳಗೆ ವಿಸ್ತಾರಗೊಳ್ಳುತ್ತದೆ ಹಾಗೂ ಸಮುದ್ರಕ್ಕೆ ಧಾವಿಸುವ ಬದಲಿಗೆ ಜಲಚರದ ಸೃಷ್ಟಿಗೆ ಕಾರಣವಾಗುತ್ತವೆ. ಹೀಗೆ ಕೊಳಗಳಲ್ಲಿ ಸಂಗ್ರಹಿಸಲಾದ ನೀರನ್ನು ಭೂಗತ ಜಲಚರಗಳಲ್ಲಿ ಸಂಗ್ರಹಿಸಲಾಗುತ್ತದೆ. ನದಿಗಳಿಗೆ ಅಣೆಕಟ್ಟು ಕಟ್ಟಿ ನದಿಮೂಲವನ್ನು ತಿರುಗಿಸಿದಂತೆ ಈ ವ್ಯವಸ್ಥೆ ಪರಿಸರಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.


  ಕ್ಯಾಲಿಫೋರ್ನಿಯಾದ ಮೇಲೆ ಹಿಂದೆ ದಾಳಿ ನಡೆಸಿದ್ದ ಪೈನಾಪಲ್ ಎಕ್ಸ್‌ಪ್ರೆಸ್


  2019 ರಲ್ಲಿ ಪೈನಾಪಲ್ ಎಕ್ಸ್‌ಪ್ರೆಸ್ ಹೆಸರಿನ ವಾಯುಮಂಡಲದ ನದಿಯು ಕ್ಯಾಲಿಫೋರ್ನಿಯಾದ ಮೇಲೆ ದಾಳಿ ಮಾಡಿತ್ತು. ಹವಾಯಿಯ ಸಮೀಪದಿಂದ ಬಂದ ನೀರಿನ ಆವಿಯು ಮಳೆಗೆ ಕಾರಣವಾಯಿತು ಹಾಗೂ ಕೆಸರುಗದ್ದೆಗಳನ್ನುಂಟು ಮಾಡಿತು. ಸಾಕಷ್ಟು ಹಾನಿಯನ್ನುಂಟು ಮಾಡಿದ ವಾಯುಮಂಡಲದ ನದಿಯು ಮನೆಗಳನ್ನು ಇಳಿಜಾರಿಗೆ ಕುಸಿಯುವಂತೆ ಮಾಡಿತ್ತು.


  ಚಂಡಮಾರುತದ ದೃಶ್ಯಗಳು


  ಟ್ವಿಟರ್‌ನಲ್ಲಿ ಹಿಮಪಾತದ ಮಾಹಿತಿ ಹಂಚಿಕೊಂಡ ಬಳಕೆದಾರರು


  ಟ್ವಿಟರ್ ಖಾತೆಯಲ್ಲಿ ನಗರಕ್ಕೆ ಅಪ್ಪಳಿಸಿರುವ ಹಿಮಬಿರುಗಾಳಿಯನ್ನು ಪ್ರದರ್ಶಿಸಿದ್ದು ಹಿಮದಿಂದ ಆವೃತವಾದ ರಸ್ತೆಗಳು ಮತ್ತು ವಾಹನಗಳನ್ನು ತೋರಿಸುವ ಚಂಡಮಾರುತದ ವೀಡಿಯೊಗಳ ಸರಣಿಯನ್ನೇ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಚಂಡಮಾರುತದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.


  ಬಾಂಬ್ ಸೈಕ್ಲೋನ್ ಅನ್ನು ಐತಿಹಾಸಿಕ ಚಂಡಮಾರುತ ಉಲ್ಲೇಖಿಸಿರುವ ಬಳಕೆದಾರರು


  ಬಳಕೆದಾರರು ಬಾಂಬ್ ಸೈಕ್ಲೋನ್ ಅನ್ನು ಐತಿಹಾಸಿಕ ಚಂಡಮಾರುತ ಎಂದು ಉಲ್ಲೇಖಿಸಿದ್ದು ಚಳಿಗಾಲದ ಚಂಡಮಾರುತ ತೀವ್ರವಾಗಿದೆ ಹಾಗೂ ಪ್ರಖರವಾಗಿದೆ ಜೊತೆಗೆ ವೇಗವಾಗಿ ತೀವ್ರಗೊಳ್ಳುತ್ತಿದೆ ಎಂಬುದಾಗಿ ವಿಡಿಯೋಗಳು ಉಲ್ಲೇಖಿಸಿವೆ.


  ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ


  ವಾಷಿಂಗ್ಟನ್ ರಾಜ್ಯದಿಂದ ಫ್ಲೋರಿಡಾದವರೆಗೆ ಹೆಚ್ಚಿನ ಸಂಖ್ಯೆಯ ರಾಜ್ಯಗಳು ಶೀತ ಗಾಳಿಯ ಎಚ್ಚರಿಕೆಗಳು, ಹಿಮಪಾತದ ಎಚ್ಚರಿಕೆಗಳು ಹಾಗೂ ಚಳಿಗಾಲದ ಹವಾಮಾನ ಸಲಹೆಗಳನ್ನು ಪಡೆದುಕೊಂಡಿವೆ. 200 ಮಿಲಿಯನ್‌ಗಿಂತಲೂ ಹೆಚ್ಚು ಜನರ ಮೇಲೆ ಈ ಶೀತ ಗಾಳಿ ಪರಿಣಾಮ ಬೀರುತ್ತದೆ ಎಂದು ಸುದ್ದಿಮಾಧ್ಯಮಗಳು ವರದಿ ಮಾಡಿವೆ.


  ಮಾರಣಾಂತಿಕವಾಗಲಿರುವ ಚಳಿಗಾಳಿ


  ಹವಾಮಾನ ಇಲಾಖೆಯು ವರದಿ ನೀಡಿರುವಂತೆ ಪ್ರಸ್ತುತ ಚಂಡಮಾರುತವು ತೀವ್ರ ಗಾಳಿಗೆ ಕಾರಣವಾಗಿವೆ ಹಾಗೂ ಮಾರಣಾಂತಿಕ ಚಳಿಗಾಳಿಯನ್ನು ಉಂಟುಮಾಡಲಿವೆ ಎಂದು ತಿಳಿಸಿದೆ. ಇಂತಹ ಹವಾಮಾನ ಪರಿಸ್ಥಿತಿಗಳಲ್ಲಿ ದೂರದೂರಿಗೆ ಪ್ರಯಾಣಿಸುವವರು ತೀವ್ರ ಎಚ್ಚರಿಕೆಗಳನ್ನು ಪಾಲಿಸುವಂತೆ ಇಲಾಖೆ ತಿಳಿಸಿದ್ದು ಹವಾಮಾನ ಮುನ್ಸೂಚನೆಗಳಿಗೆ ಗಮನ ಹರಿಸಲು ತಿಳಿಸಿದೆ.


  ಕ್ಯಾಲಿಫೋರ್ನಿಯಾದ ಬರಗಾಲಕ್ಕೂ ಇದಕ್ಕೂ ಏನು ಸಂಬಂಧ?


  ವಾಯುಮಂಡಲದ ನದಿಗಳು ಪ್ರಪಂಚದಾದ್ಯಂತ ಎಲ್ಲಾ ಆಕಾರಗಳು ಮತ್ತು ಗಾತ್ರಗಳಲ್ಲಿ ಕಂಡುಬರುತ್ತವೆ ಹಾಗೂ ಇವುಗಳಲ್ಲಿ ಕೆಲವೊಂದು ಸ್ಥಿರವಾದ ದಿಕ್ಕುಗಳಲ್ಲಿ ಚಲಿಸುತ್ತವೆ. ಹವಾಮಾನ ವರದಿಯ ಪ್ರಕಾರ ಉದಾಹರಣೆಗೆ ಹವಾಯಿ ಭಾಗದಿಂದ ಬಂದು ಯುಎಸ್‌ನ ಪಶ್ಚಿಮ ಕರಾವಳಿಯ ಕಡೆಗೆ ಹರಿಯುತ್ತದೆ.


  ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಪ್ರಬಲ ಚಳಿಗಾಲದ ಚಂಡಮಾರುತವು ಭಾರೀ ಮಳೆಗೆ ಕಾರಣವಾಗಿದ್ದು ಮಾತ್ರವಲ್ಲದೆ ಪ್ರವಾಹವನ್ನುಂಟು ಮಾಡಿತು ಹಾಗೂ ಕಾಡ್ಗಿಚ್ಚಿಗೆ ಕಾರಣವಾಗುವ ಪ್ರದೇಶಗಳಲ್ಲಿ ಶಿಲಾಖಂಡರಾಶಿಗಳ ಹರಿವಿಗೆ ಕಾರಣವಾಗುತ್ತವೆ. ಗುಡ್ಡಗಾಡು ಅಥವಾ ಪರ್ವತ ಪ್ರದೇಶಗಳಲ್ಲಿ ಆಳವಿಲ್ಲದ ಭೂಕುಸಿತಗಳು, ಬಂಡೆಗಳ ಕುಸಿತಗಳು ಮತ್ತು ಮಣ್ಣಿನ ಕುಸಿತದ ಅಪಾಯವು ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು