Artificial Embryos: ಮಾನವ DNA ಬಳಸಿ ಕೃತಕ ಭ್ರೂಣ ಅಭಿವೃದ್ಧಿಗೆ ಮುಂದಾದ ಬಯೋಟೆಕ್, ಅಂಗಾಂಗ ಕಸಿಗೆ ಬಳಕೆ!

ಇಸ್ರೇಲ್ ಮೂಲದ ತಂತ್ರಜ್ಞಾನ ಕಂಪನಿಯು ವಿಶೇಷ ಕಾರ್ಯಗಳನ್ನು ಹೊಂದಿರುವ ಇತರ ಜೀವಕೋಶಗಳಿಂದ ಉತ್ಪತ್ತಿಯಾಗುವ ಜೀವಕೋಶಗಳನ್ನು (ಸ್ಟೆಮ್ ಸೆಲ್ಸ್) ಬಳಸಿ ಇಲಿಯ ಕೃತಕ ಭ್ರೂಣವನ್ನು ಸೃಷ್ಟಿಸಿದ್ದು ಈಗ ಅಂತಹುದ್ದೇ ಪ್ರಯೋಗವನ್ನು ಮಾನವ ಜೀವಕೋಶಗಳನ್ನು ಬಳಸಿ ಸೃಷ್ಟಿಸಲು ಮುಂದಾಗಿದೆ. 

ಡಿಎನ್‌ಎ ಬಳಸಿ ಕೃತಕ ಭ್ರೂಣಗಳ ಅಭಿವೃದ್ಧಿ

ಡಿಎನ್‌ಎ ಬಳಸಿ ಕೃತಕ ಭ್ರೂಣಗಳ ಅಭಿವೃದ್ಧಿ

  • Share this:
ಇಸ್ರೇಲ್ (Israel) ಮೂಲದ ತಂತ್ರಜ್ಞಾನ ಕಂಪನಿಯು ವಿಶೇಷ ಕಾರ್ಯಗಳನ್ನು ಹೊಂದಿರುವ ಇತರ ಜೀವಕೋಶಗಳಿಂದ ಉತ್ಪತ್ತಿಯಾಗುವ ಜೀವಕೋಶಗಳನ್ನು (ಸ್ಟೆಮ್ ಸೆಲ್ಸ್) ಬಳಸಿ ಇಲಿಯ ಕೃತಕ ಭ್ರೂಣವನ್ನು (Artificial rat embryo) ಸೃಷ್ಟಿಸಿದ್ದು ಈಗ ಅಂತಹುದ್ದೇ ಪ್ರಯೋಗವನ್ನು ಮಾನವ ಜೀವಕೋಶಗಳನ್ನು ಬಳಸಿ ಸೃಷ್ಟಿಸಲು ಮುಂದಾಗಿದೆ. ವೈಜ್‌ಮನ್‌ನ ಮಾಲಿಕ್ಯುಲರ್ ಜೆನೆಟಿಕ್ಸ್ ವಿಭಾಗದ ವಿಜ್ಞಾನಿಗಳು (Scientists) ವೀರ್ಯ, ಅಂಡಾಣು ಅಥವಾ ಗರ್ಭಾಶಯವನ್ನು ಬಳಸದೆ ಒಂದು ಗಾಜಿನ ಜಾರ್‌ನಲ್ಲಿ ಇಲಿಯ ಸಿಂಥೆಟಿಕ್ ಭ್ರೂಣವನ್ನು (synthetic mouse embryo) ಅಭಿವೃದ್ಧಿಗೊಳಿಸಿದರು ಎಂಬುದಾಗಿ ಸುದ್ದಿಪತ್ರಿಕೆಯೊಂದು ವರದಿ ಮಾಡಿದೆ. ಈ ಪ್ರಕ್ರಿಯೆ ಯಶಸ್ವಿಗೊಂಡಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಅಂಡಾಣು ಅಥವಾ ಗರ್ಭಾಶಯವನ್ನು ಬಳಸದೇ ಇಲಿಯ ಭ್ರೂಣದ ಅಭಿವೃದ್ಧಿ:
ಈ ಪ್ರತಿಕೃತಿ (ಒಂದು ವಸ್ತುವಿನ ನಿಖರವಾದ ನಕಲು,) ಭ್ರೂಣಗಳು ಸಂಪೂರ್ಣವಾಗಿ ಇಲಿಗಳಾಗಿ ಬೆಳೆಯಲು ಸಾಧ್ಯವಾಗಲಿಲ್ಲ ಎಂದು ಜಾಕೋಬ್ ಹನ್ನಾ ಗಾರ್ಡಿಯನ್ಗೆ ತಿಳಿಸಿದರು. ಆದಾಗ್ಯೂ, ಸಂಶ್ಲೇಷಿತ ಭ್ರೂಣಗಳು ಹೃದಯ ಬಡಿತ, ರಕ್ತ ಪರಿಚಲನೆ, ಮಿದುಳಿನ ಪ್ರಾರಂಭ, ನರ ಕೊಳವೆ ಮತ್ತು ಕರುಳಿನ ಟ್ರ್ಯಾಕ್ ಅನ್ನು ಹೊಂದಿರುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.

ಇಲಿಗಳ ಮೇಲಿನ ಪ್ರಯೋಗದಿಂದ ದೊರಕಿದ ಯಶಸ್ಸು:
ಇಲಿಗಳ ಮೇಲಿನ ಪ್ರಯೋಗವು ಕೊಂಚ ಮಟ್ಟಿಗಿನ ಯಶಸ್ಸನ್ನು ನೀಡಿದ್ದರ ಕಾರಣ ಈಗ ಅದೇ ಪ್ರಯೋಗವನ್ನು ತನ್ನದೇ ಜೀವಕೋಶ ಸೇರಿದಂತೆ ಮಾನವ ಜೀವಕೋಶಗಳನ್ನು ಬಳಸಿ ಭ್ರೂಣಗಳ ಸೃಷ್ಟಿಗೆ ಪ್ರಯೋಗ ವಿಜ್ಞಾನಿ ಜಾಕೋಬ್ ಹನ್ನಾ ಮುಂದಾಗಿದ್ದಾರೆ.

ಇದನ್ನೂ ಓದಿ: Self-Diagnosis: ನಿಮ್ಮನ್ನ ನೀವೇ ಡಾಕ್ಟರ್ ಅಂದುಕೊಂಡು ಬಿಟ್ಟಿದ್ದೀರಾ? ಸ್ವಯಂ ವೈದ್ಯರಾಗುವ ಮುನ್ನ ಇದನ್ನು ಓದಿ

ಭ್ರೂಣವು ಅತ್ಯುತ್ತಮ ಅಂಗ ರಚನಾ ಯಂತ್ರವಾಗಿದ್ದು ಒಂದು ಉತ್ತಮ 3ಡಿ ಬಯೋಪ್ರಿಂಟರ್ ಎಂದೆನಿಸಿದೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅನುಕರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂಬುದು ಹನ್ನಾ ಅಭಿಪ್ರಾಯವಾಗಿದೆ. ಕೃತಕವಾಗಿ ಸಂಯೋಜಿತಗೊಳಿಸಲಾದ ಮಾನವ ಭ್ರೂಣಗಳು ದೊರಕಬೇಕೆಂದರೆ ಅದು ಗಮನಾರ್ಹವಾಗಿ ಹೆಚ್ಚಿನ ಸಂಶೋಧನೆಯನ್ನು ತೆಗೆದುಕೊಳ್ಳುತ್ತದೆ ಎಂದು ಇತರ ತಜ್ಞರು ಹೇಳುತ್ತಾರೆ.

ಬಂಜೆತನ, ಆನುವಂಶಿಕ ಕಾಯಿಲೆಗಳು ಮತ್ತು ವೃದ್ಧಾಪ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರ
ಹನ್ನಾ ಸ್ಥಾಪಿಸಿರುವ ರಿನ್ಯೂವಲ್ ಬಯೋ ಕಂಪನಿಯು ಬಂಜೆತನ, ಆನುವಂಶಿಕ ಕಾಯಿಲೆಗಳು ಮತ್ತು ವೃದ್ಧಾಪ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಅಂಗ-ಅಂಗಾಂಶ ಕಸಿಗಾಗಿ ಈ ವಿಜ್ಞಾನವನ್ನು ಬಳಸಲು ಬಯಸುತ್ತದೆ. ಎಮ್‌ಐಟಿ ಟೆಕ್ನಾಲಜಿಯು ವಿಮರ್ಶಿಸಿರುವಂತೆ ಭ್ರೂಣದಿಂದ ಬೆಳೆದ ರಕ್ತ ಕಣಗಳು ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುವ ವ್ಯವಸ್ಥೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ.

ರಿನ್ಯೂವಲ್ ಬಯೋ ಅಭಿಪ್ರಾಯಪಟ್ಟಿರುವಂತೆ ವಿಶ್ವದ ಪ್ರಸ್ತುತ ಸಮಸ್ಯೆ ಜನನ ದರಗಳು ಕಡಿಮೆಯಾಗುತ್ತಿರುವುದು ಮತ್ತು ಹೆಚ್ಚು ವೇಗವಾಗಿ ವಯಸ್ಸಾಗುತ್ತಿರುವುದು ವಿಶ್ವದ ಅತ್ಯಂತ ಗಮನಾರ್ಹ ಸಮಸ್ಯೆಗಳಲ್ಲಿ ಒಂದೆನಿಸಿದೆ. ಈ ಸಂಕೀರ್ಣ ಮತ್ತು ಸಂಯೋಜಿತ ಸಮಸ್ಯೆಗಳನ್ನು ಪರಿಹರಿಸಲು, ಹೊಸ ಜೀವಕೋಶ ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಮನುಕುಲವನ್ನು ಎಳೆಯ ವಯಸ್ಸಿನ ಮತ್ತು ಆರೋಗ್ಯಕರವಾಗಿಸಲು ರಿನ್ಯೂವಲ್ ಬಯೋ ಗುರಿಯನ್ನು ಹೊಂದಿದೆ" ಎಂದು ವೆಬ್‌ಸೈಟ್ ತಿಳಿಸಿದೆ.

ಈ ಬಗ್ಗೆ ಕಂಪನಿಯ ಕಾರ್ಯನಿರ್ವಾಹಕ ಓಮ್ರಿ ಅಮಿರವ್ ಡ್ರೋಯಿ ಏನು ಹೇಳಿದ್ದಾರೆ?
ಕಂಪನಿಯು ಈ ಕುರಿತು ಹೆಚ್ಚಿನ ಭರವಸೆಯನ್ನು ಉಂಟುಮಾಡುತ್ತಿಲ್ಲ ಅಂತೆಯೇ ಸಂಭಾವ್ಯ ತಂತ್ರಜ್ಞಾನದೊಂದಿಗೆ ಜನರನ್ನು ಆತಂಕಪಡಿಸುತ್ತಲೂ ಇಲ್ಲ ಎಂಬುದಾಗಿ ಕಂಪನಿಯ ಕಾರ್ಯನಿರ್ವಾಹಕ ಓಮ್ರಿ ಅಮಿರವ್ ಡ್ರೋಯಿ ತಿಳಿಸಿದ್ದು ಹನ್ನಾ ಅವರ ಪ್ರಯೋಗವು ಅದ್ಭುತವಾಗಿದೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಶೋಧನೆಗಾಗಿ ಮಾನವ ಭ್ರೂಣದ ತದ್ರೂಪುಗಳ ಬಳಕೆಯು ವೈಜ್ಞಾನಿಕ ಸಮುದಾಯದೊಳಗೆ ಸಂಶ್ಲೇಷಿತ ಭ್ರೂಣಗಳು ನೋವು ಅಥವಾ ಭಾವನೆಯನ್ನು ಅನುಭವಿಸುವ ಸಾಮರ್ಥ್ಯವನ್ನು ಒಳಗೊಂಡಂತೆ ಒಮ್ಮೊಮ್ಮೆ ನೈತಿಕ ಕಾಳಜಿಯನ್ನು ಹುಟ್ಟುಹಾಕಿದ್ದು, 2017 ರ ಪತ್ರಿಕೆಯ ಪ್ರಕಾರ eLife ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಇದನ್ನೂ ಓದಿ:  Healthy Heart: ಶ್, ಇದು ಹೃದಯಗಳಾ ವಿಷಯ! ಅವರಿವರ ಮಾತು ಕೇಳೋದು ಬಿಡಿ, ಸ್ವಲ್ಪ ಹಾರ್ಟ್‌ನ ಮಾತೂ ಕೇಳಿ!

"ಶ್ವಾಸಕೋಶಗಳಿಲ್ಲ, ಹೃದಯವಿಲ್ಲ ಅಥವಾ ಮೆದುಳು ಇಲ್ಲದೇ" ಸಂಶ್ಲೇಷಿತ ಮಾನವ ಭ್ರೂಣಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ತಾನು ಈ ನೈತಿಕ ಕಾಳಜಿಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದು MIT ತಂತ್ರಜ್ಞಾನ ವಿಮರ್ಶೆಗೆ ಹನ್ನಾ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
Published by:Ashwini Prabhu
First published: