• Home
  • »
  • News
  • »
  • explained
  • »
  • Crime Story: ಸರಸದ ಸಮಯದಲ್ಲೇ 67ರ ಮುದುಕನಿಗೆ ಹೃದಯಾಘಾತ! ನಿಗೂಢ ಸಾವಿನ ಕಥೆ ಹೇಳಿದ ಲಾಸ್ಟ್‌ ಕಾಲ್‌!

Crime Story: ಸರಸದ ಸಮಯದಲ್ಲೇ 67ರ ಮುದುಕನಿಗೆ ಹೃದಯಾಘಾತ! ನಿಗೂಢ ಸಾವಿನ ಕಥೆ ಹೇಳಿದ ಲಾಸ್ಟ್‌ ಕಾಲ್‌!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ಬಗ್ಗೆ ತಿಳಿದು ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಇದಾದ ಬಳಿಕ ಇಂಥದ್ದೇ ಘಟನೆ ಹೋಲುವ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇತ್ತೀಚಿಗಷ್ಟೇ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ 67 ವರ್ಷದ ವೃದ್ಧ ಉದ್ಯಮಿಯೊಬ್ಬರ ಮೃತದೇಹ ಚೀಲದಲ್ಲಿ ಸುತ್ತಿದ್ದ ರೀತಿಯಲ್ಲಿ ಪತ್ತೆಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ದೆಹಲಿಯಲ್ಲಿ (Delhi) ನಡೆದ ಶ್ರದ್ಧಾ ವಾಲ್ಕರ್ (Shraddha Walker) ಎಂಬ ಯುವತಿಯ ಬರ್ಬರ ಹತ್ಯೆ (Murder) ಪ್ರಕರಣದ ಬಗ್ಗೆ ಎಲ್ಲರಿಗೂ ಗೊತ್ತು. ಶ್ರದ್ಧಾ ವಾಲ್ಕರ್ ಪ್ರಿಯಕರ (Lover) ಅಫ್ತಾಬ್ ಅಮಿನ್ ಪೂನಾವಾಲಾ (Aftab Amin Poonawala) ಎಂಬಾತ ಆಕೆಯನ್ನು ಕೊಂದು, ಬಳಿಕ ಅವಳ ದೇಹವನ್ನು (Dead Body Cut) ಸುಮಾರು 36 ಭಾಗ ಮಾಡಿ, ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ. ಬಳಿಕ ಯಾರಿಗೂ ಗೊತ್ತಾಗಂತೆ ದಿನಕ್ಕೊಂದು ಭಾಗವನ್ನು ಕಾಡಿನಲ್ಲಿ ಎಸೆಯುತ್ತಾ ಬಂದಿದ್ದ. ಈ ಘಟನೆ ಬಗ್ಗೆ ತಿಳಿದು ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಇದಾದ ಬಳಿಕ ಇಂಥದ್ದೇ ಘಟನೆ ಹೋಲುವ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇತ್ತೀಚಿಗಷ್ಟೇ ಬೆಂಗಳೂರಿನ (Bengaluru) ಪುಟ್ಟೇನಹಳ್ಳಿಯಲ್ಲಿ (Puttenahalli) 67 ವರ್ಷದ ವೃದ್ಧ ಉದ್ಯಮಿಯೊಬ್ಬರ (Old businessman) ಮೃತದೇಹ ಚೀಲದಲ್ಲಿ (Bag) ಸುತ್ತಿದ್ದ ರೀತಿಯಲ್ಲಿ ಪತ್ತೆಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ (Big Twist) ಸಿಕ್ಕಿದೆ. ಇದು ಖಂಡಿತಾ ಯಾವ ಸಿನಿಮಾ ಕಥೆಗೂ ಕಡಿಮೆ ಇಲ್ಲ ಎನ್ನುವಂತೆ ಇದೆ. ಈ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ…


ಚೀಲದಲ್ಲಿ ಪತ್ತೆಯಾಯ್ತು ಅಪರಿಚಿತ ಶವ


ಇದೇ ನವೆಂಬರ್‌ 17ರಂದು ಬೆಂಗಳೂರಿನ ಜೆಪಿ ನಗರದ 6ನೇ ಹಂತದ ರೋಸ್ ಗಾರ್ಡನ್‌ ಬಳಿ ಚೀಲ ಮತ್ತು ಬೆಡ್‍ಶೀಟ್‍ನಲ್ಲಿ ಸುತ್ತಿದ್ದ ರೀತಿಯಲ್ಲಿ ಸಂಶಯಾಸ್ಪದವಾಗಿ ಮೃತದೇಹವೊಂದು ಪತ್ತೆಯಾಗಿತ್ತು. ಮೃತದೇಹದ ಮೈಮೇಲೆ ಯಾವುದೇ ಗಾಯದ ಗುರುತು ಇರಲಿಲ್ಲ. ಹಾಗಾಗಿ ಇದು ಕೊಲೆ ಅಲ್ಲ ಅಂತ ಮೇಲ್ನೋಟಕ್ಕೆ ಗೊತ್ತಾಗಿತ್ತು. ಆದರೆ ಆ ವ್ಯಕ್ತಿ ಸತ್ತಿದ್ದಂತೂ ನಿಜ. ಹಾಗಾದ್ರೆ ಆತ ಯಾರು? ನಿಗೂಢವಾಗಿ ಸತ್ತಿದ್ದು ಹೇಗೆ? ಈ ರೀತಿ ಬ್ಯಾಗ್‌ನಲ್ಲಿ ಶವ ತುಂಬಿ ಎಸೆದಿದ್ದು ಯಾರು? ಇತ್ಯಾದಿ ಪ್ರಶ್ನೆಗಳು ಉದ್ಭವಿಸಿದ್ದವು.


ಸಾಂದರ್ಭಿಕ ಚಿತ್ರ


ಶವವಾಗಿ ಪತ್ತೆಯಾಗಿದ್ದ ಟ್ರಾನ್ಸ್‌ಪೋರ್ಟ್ ಉದ್ಯಮಿ


ಇನ್ನು ಇದನ್ನು ಪರಿಶೀಲಿಸಿದಾಗ ಅದು 67 ವರ್ಷದ ಟ್ರಾನ್ಸ್ ಪೋರ್ಟ್ ಉದ್ಯಮಿ ಬಾಲಸುಬ್ರಮಣಿ ಎನ್ನುವವರ ಶವ ಎನ್ನುವುದು ತಿಳಿದು ಬಂದಿತ್ತು. ಆದ್ರೆ ಅವರು ಈ ರೀತಿ ಶವವಾಗಿ ಪತ್ತೆಯಾಗಿದ್ದೇಕೆ? ಕೊಲೆಯಲ್ಲ, ಹಾಗಿದ್ರೆ ಅವರು ಸತ್ತಿದ್ದು ಹೇಗೆ ಎನ್ನುವ ಪ್ರಶ್ನೆ ಹಾಗೆಯೇ ಉಳಿಯಿತು.


ಸಂಜೆ ಉದ್ಯಮಿ ಮೊಬೈಲ್ ಸ್ವಿಚ್ಛ್ ಆಫ್


ಅಸಲಿಗೆ ನವೆಂಬರ್ 16 ರಂದು ಬಾಲಸುಬ್ರಮಣಿಯನ್ ನಾಪತ್ತೆಯಾಗಿದ್ದರು. ಅಂದು ಸಂಜೆ ವೇಳೆಗೆ ಅವರು ಕುಟುಂಬದ ಸಂಪರ್ಕ ಕಳೆದುಕೊಂಡು, ನಾಪತ್ತೆಯಾಗಿದ್ದರು. ಅಂದು ಅವರು ತಮ್ಮ ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್‍ಗೆ ಕರೆದುಕೊಂಡು ಹೋಗಿ, ವಾಪಸ್ ಬಂದಿದ್ದರು. ಅದೇ ದಿನ ಸಂಜೆ ಸುಮಾರು 4.55ರ ವೇಳೆಗೆ ತಮ್ಮ ಸೊಸೆಗೆ ಕರೆ ಮಾಡಿದ್ದರು. ಸ್ವಲ್ಪ ಕೆಲಸ ಇದೆ, ಮುಗಿಸಿಕೊಂಡು ಬರ್ತೀನಿ ಅಂತ ಹೇಳಿದ್ದರು. ಬಳಿಕ ರಾತ್ರಿ ವೇಳೆಗೆ ಕರೆ ಮಾಡಿದ್ರೆ ಅವರ ಮೊಬೈಲ್ ಸ್ವಿಚ್ಛ್ ಆಫ್ ಆಗಿತ್ತು.


ಇದನ್ನೂ ಓದಿ: Honeytrap: 'ಹನಿ' ಹಿಂದೆ ಹೋಗಿ ಮಾನದ ಜೊತೆ ಹಣ ಕಳೆದುಕೊಂಡ ವೃದ್ಧ! ಹೆಂಡತಿಯನ್ನೇ ಬಿಟ್ಟು 'ಟ್ರ್ಯಾಪ್' ಮಾಡಿದ ಗಂಡ!


ದೂರು ದಾಖಲಿಸಿದ್ದ ಪುತ್ರ


ಇದರಿಂದ ಗಾಬರಿಯಾದ ಮನೆಯವರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಬಳಿಕ ಅವರು ಪತ್ತೆಯಾಗದೇ ಇರುವುದರಿಂದ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮರುದಿನ ಅಂದರೆ ನವೆಂಬರ್ 18 ರಂದು ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಚೀಲ ಮತ್ತು ಬೆಡ್‍ಶೀಟ್‍ನಲ್ಲಿ ಸುತ್ತಿದ್ದ ಮೃತದೇಹವೊಂದು ಜೆಪಿ ನಗರದ 6ನೇ ಹಂತದ ಸಮೀಪ ಪತ್ತೆಯಾಗಿತ್ತು. ಇದು ಬಾಲಸುಬ್ರಮಣಿಯನ್ ಎಂದು ಗುರುತಿಸಲಾಗಿತ್ತು.


ಉದ್ಯಮಿ ಸಾವಿನ ಸುತ್ತ ಅನುಮಾನದ ಹುತ್ತ!


ಸುಬ್ರಮಣಿಯನ್ ದೇಹದ ಮೇಲೆ ಯಾವುದೇ ಗುರುತು ಮೂಡಿರಲಿಲ್ಲ. ಆದರೆ ಕೊಲೆಯಾದ ರೀತಿಯಲ್ಲಿ ಅನುಮಾನಾಸ್ಪದವಾಗಿ ಅವರ ಮೃತದೇಹ ಸಿಕ್ಕಿತ್ತು. ಇದು ಪೊಲೀಸರಿಗೆ ನಿಜಕ್ಕೂ ತಲೆನೋವು ತರಿಸಿತ್ತು. ಬಳಿಕ ಬಾಲಸುಬ್ರಮಣಿಯನ್ ಅವರ ಮೊಬೈಲ್ ಸಂಖ್ಯೆಯ ಸಿಡಿಆರ್ ಪರಿಶೀಲಿಸಿ ಕಾಲ್ ಹಿಸ್ಟರಿ ಜಾಲಾಡಿದಾಗ ಈ ನಿಗೂಢ ಸಾವಿನ ಹಿಂದೆ ಮಹಿಳೆಯೊಬ್ಬರ ನೆರಳು ಇರೋದು ಪಕ್ಕಾ ಆಯ್ತು.


ಮಹಿಳೆಯ ಜೊತೆ ಸಂಪರ್ಕದಲ್ಲಿದ್ದ ವೃದ್ಧ


ಉದ್ಯಮಿ ಬಾಲಸುಬ್ರಮಣಿ ಅವರು ಮಹಿಳೆಯೊಬ್ಬರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನುವುದು ಮೊಬೈಲ್ ಪರಿಶೀಲನೆ ವೇಳೆ ಬಯಲಾಗಿತ್ತು. ಸಾರಕ್ಕಿ ಸಿಗ್ನಲ್ ಬಳಿ ಲಾಸ್ಟ್ ಲೊಕೇಶನ್ ದಾಖಲಾಗಿತ್ತು. ಹೀಗಾಗಿ ಆ ಮಹಿಳೆ ಯಾರು ಎನ್ನುವುದರ ಕುರಿತು ಪೊಲೀಸರು ಬೆನ್ನತ್ತಿದಾಗ ಬಾಲಸುಬ್ರಮಣಿಯನ್ ಮನೆಗೆ ಬರುತ್ತಿದ್ದ ಮನೆ ಕೆಲಸದಾಕೆ ಮೇಲೆ ಅನುಮಾನ ಮೂಡಿತ್ತು. ನಂತರ ಮನೆ ಕೆಲಸದಾಕೆಯನ್ನು ವಿಚಾರಿಸಿದಾಗ ಸಾವಿನ ಸತ್ಯ ಹೊರಬಿದ್ದಿದೆ.


ಕೆಲಸದಾಕೆ ಜೊತೆ ಸರಸದಲ್ಲಿದ್ದಾಗಲೇ ಹೃದಯಾಘಾತ!
ಹೌದು, ಬಾಲಸುಬ್ರಮಣಿ ಅವರು ತಮ್ಮ ಮನೆ ಕೆಲಸಕ್ಕೆ ಬರುವ ಮಹಿಳೆ ಸುಮಾರು 35 ವರ್ಷದ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಸಾಯುವ ದಿನವೂ ಅವರು ಆ ಮಹಿಳೆ ಮನೆಗೆ ಹೋಗಿ, ಸರಸದಲ್ಲಿ ತೊಡಗಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿದೆ.


ಗಂಡನಿಗೆ ವಿಚಾರ ತಿಳಿಸಿದ ಮಹಿಳೆ


ಉದ್ಯಮಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಗ ಅವರ ಜೊತೆಯೇ ಇದ್ದ ಮನೆಕೆಲಸದವಳು ಗಾಬರಿಯಾಗಿದ್ದಾಳೆ. ಬಳಿಕ ಏನು ಮಾಡೋದಕ್ಕೂ ತೋಚದೇ ಆಕೆಯ ಗಂಡನಿಗೆ ಫೋನ್ ಮಾಡಿದ್ದಾಳೆ. ಈ ವೇಳೆ ಗಂಡ ಹಾಗೂ ಸಹೋದರ ಮನೆಗೆ ಬಂದು ವಿಷಯ ತಿಳಿದುಕೊಂಡಿದ್ದಾರೆ.


ಮೃತದೇಹ ಬ್ಯಾಗ್‌ನಲ್ಲಿ ತುಂಬಿ ಎಸೆದ ಮಹಿಳೆ


ಕೊನೆಗೆ ಮೂವರೂ ಸೇರಿ ಪ್ಲಾನ್ ಒಂದನ್ನು ಮಾಡಿದ್ದಾರೆ. ಆತನ ಹೃದಯಾಘಾತ ವಿಚಾರ ತಿಳಿದರೆ ಅನೈತಿಕ ಸಂಬಂಧದ ಬಗ್ಗೆ ತಿಳಿದು ಮಹಿಳೆಯ ಮಾನ ಹೋಗುತ್ತದೆ ಅಂತ ಅದನ್ನು ಮುಚ್ಚಿಡಲು ಯತ್ನಿಸಿದ್ದಾರೆ. ಹೀಗಾಗಿ ಸುಬ್ರಮಣಿಯನ್ ಮೃತದೇಹವನ್ನು ಬೆಡ್‌ ಶೀಟ್‌ನಲ್ಲಿ ಸುತ್ತಿದ್ದಾರೆ. ಬಳಿಕ ಅದನ್ನು ಪ್ಲಾಸ್ಟಿಕ್ ಬಾಗ್‌ನಲ್ಲಿ ತುಂಬಿದ್ದಾರೆ. ಮಧ್ಯರಾತ್ರಿ ಜನಸಂಚಾರ ಕಡಿಮೆ ಆದ ಟೈಮ್‌ನಲ್ಲಿ, ಬೈಕ್‌ನಲ್ಲಿ ತಂದು ರಸ್ತೆ ಬದಿ ತಂದು ಎಸೆದಿದ್ದಾರೆ.


ಪೊಲೀಸರಿಂದ ಮಹಿಳೆಯ ವಿಚಾರಣೆ


ಇನ್ನು ಉದ್ಯಮಿ ನಿಗೂಢ ಸಾವಿನ ಹಿಂದೆ ಮಹಿಳೆಯ ಕೈವಾಡ ಇರೋದು ಪಕ್ಕಾ ಆಗ್ತಿದ್ದಂತೆ ಪೊಲೀಸರು ಆಕೆಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆ ಎಲ್ಲವನ್ನೂ ಬಾಯ್ಬಿಟ್ಟಿದ್ದಾಳೆ. ಉದ್ಯಮಿ ಜೊತೆ ತನಗೆ ಅನೈತಿಕ ಸಂಬಂಧ ಇತ್ತು, ಆಗಾಗ ಅವರು ನಮ್ಮ ಮನೆಗೆ ಬಂದಿದ್ದರು ಎಂದಿದ್ದಾಳೆ.


ಲೈಂಗಿಕ ಕ್ರಿಯೆಯಲ್ಲಿದ್ದಾಗಲೇ ಹೃದಯಾಘಾತ


ನವೆಂಬರ್ 16 ರಂದು ಸಂಜೆ 5 ಗಂಟೆ ಸುಮಾರಿಗೆ ಆತ ತನ್ನ ಮನೆಗೆ ಬಂದಿದ್ದನು. ನಾವಿಬ್ಬರೂ ಲೈಂಗಿಕ ಕ್ರಿಯೆ ನಡೆಸುವ ವೇಳೆ ಹಾಸಿಗೆಯ ಮೇಲೆ ಬಿದ್ದು ಒದ್ದಾಡುತ್ತಿದ್ದರು. ಇದನ್ನು ಕಂಡು ನಾನು ಮೂರ್ಛೆ ರೋಗ ಎಂದುಕೊಂಡು, ಆತನ ಕೈ ಕಾಲು ಉಜ್ಜಿದೆ. ಬಳಿಕ ಅವನ ಕೈಯಲ್ಲಿ ಕೀಲಿಯನ್ನು ಇಟ್ಟು ಪರಿಶೀಲಿಸಿದ್ದೆ. ಆದರೆ ಆತ ಉಸಿರಾಟ ನಿಲ್ಲಿಸಿದ್ದ ಎಂದಿದ್ದಾಳೆ.


ಇದನ್ನೂ ಓದಿ: Honor Killing: ಮಗಳನ್ನೇ ಕೊಂದು ತಿರುಪತಿಗೆ ಹೋದ ತಂದೆ! ಪ್ರೀತಿಸಿದ ಹುಡುಗಿಗೆ ಇದೆಂಥಾ ಶಿಕ್ಷೆ?


ಮಹಿಳೆ ಸೇರಿ ಮೂವರ ಮೇಲೆ ಕೇಸ್


ಮೃತರ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಪುಟ್ಟೇನಹಳ್ಳಿ ಪೊಲೀಸರು ಸೆಕ್ಷನ್ 174 ಸಿ ಅಡಿಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪದ ಮೇಲೆ ಮಹಿಳೆ, ಆಕೆಯ ಪತಿ ಸೇರಿ ಮೂವರನ್ನು ಬಂಧಿಸಿದ್ದಾರೆ. ನಂತರ ಅವರು ಸೆಕ್ಷನ್ 176 (ಕಾನೂನುಬದ್ಧವಾಗಿ ಬದ್ಧರಾಗಿರುವ ವ್ಯಕ್ತಿಯಿಂದ ಸಾರ್ವಜನಿಕ ಸೇವಕರಿಗೆ ನೋಟಿಸ್ ಅಥವಾ ಮಾಹಿತಿಯನ್ನು ನೀಡಲು ಲೋಪ), 201 (ಅಪರಾಧದ ಪುರಾವೆಗಳು ಕಣ್ಮರೆಯಾಗುವುದು ಅಥವಾ ಅಪರಾಧವನ್ನು ಮರೆಮಾಚಲು ತಪ್ಪು ಮಾಹಿತಿಯನ್ನು ನೀಡುವುದು), 202 (ಉದ್ದೇಶಪೂರ್ವಕ ಲೋಪ) ಮತ್ತು IPC ಯ 34 (ಸಾಮಾನ್ಯ ಉದ್ದೇಶದ ಮುಂದುವರಿಕೆಗಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

Published by:Annappa Achari
First published: