Survey: ನಮ್ಮ ಮಕ್ಕಳಿಗೆ ದುಡ್ಡಿನ ಬೆಲೆ ಗೊತ್ತಿಲ್ಲಾ ಅಂತಾರೆ ಪೋಷಕರು! ಅದು ನಿಜಾನಾ?

7-12 ನೇ ತರಗತಿಗಳಲ್ಲಿ ಓದುತ್ತಿರುವ 600 ಹದಿಹರೆಯದವರು ತಮ್ಮ ಪೋಷಕರೊಂದಿಗೆ (600) ಹಂಚಿಕೊಂಡ ಪ್ರತಿಕ್ರಿಯೆಗಳನ್ನು ಸಮೀಕ್ಷೆಯು ವಿಶ್ಲೇಷಿಸಿದೆ. ಇದಲ್ಲದೆ, ಸಮೀಕ್ಷೆಗೆ ಒಳಗಾದ 94% ಪೋಷಕರು ತಮ್ಮ ಮಕ್ಕಳು ಡಿಜಿಟಲ್ ವ್ಯಾಲೆಟ್‌ಗಳ ಬಗ್ಗೆ ಕಲಿಯಲು ಆಸಕ್ತಿ ಹೊಂದಿದ್ದಾರೆ ಎಂದು ನಂಬುತ್ತಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

94% ಪೋಷಕರು (Parents) ತಮ್ಮ ಮಕ್ಕಳು (Children) ಡಿಜಿಟಲ್ ವ್ಯಾಲೆಟ್‌ಗಳ ಬಗ್ಗೆ ಕಲಿಯಲು ಆಸಕ್ತಿ ಹೊಂದಿದ್ದಾರೆ ಎಂದು ನಂಬುತ್ತಾರೆ, ಇದು ಹೆಚ್ಚು ಸಂಘಟಿತ ಮತ್ತು ವಿಶ್ವಾಸಾರ್ಹ ಆರ್ಥಿಕ ಸಲಹೆ (Financial advice) ಕಾರ್ಯವಿಧಾನದ ಅಗತ್ಯವನ್ನು ಬಲಪಡಿಸುತ್ತದೆ. 96% ದಷ್ಟು ಬಹುಪಾಲು ಭಾರತೀಯ ಪೋಷಕರು (Indian Parents) ತಮ್ಮ ಮಕ್ಕಳಿಗೆ ಹಣಕಾಸಿನ ನಿರ್ವಹಣೆಯ ಪರಿಕರಗಳ ಕುರಿತು ಸಾಕಷ್ಟು ಮಾಹಿತಿ ಇಲ್ಲ ಅಂತೆಯೇ ಇದಕ್ಕಾಗಿ ನಂಬಿಕಸ್ಥ ಆರ್ಥಿಕ ಶಿಕ್ಷಣದ (Financial education) ಅಗತ್ಯವಿದೆ ಎಂದು ಭಾವಿಸಿರುವುದು ಇದೀಗ ಮೂವಿನ್ ಮತ್ತು ಮಾಮ್ಸ್‌ಪ್ರೆಸ್ಸೊ (muvin and Momspresso)ನಡೆಸಿದ ಸಮೀಕ್ಷೆಯ ಪ್ರಕಾರ ತಿಳಿದು ಬಂದಿದೆ.


ಮೂವಿನ್ ಹಾಗೂ ಮಾಮ್ಸ್‌ಪ್ರೆಸ್ಸೊ ನಡೆಸಿದ ಸಮೀಕ್ಷೆ:
ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಮೂವಿನ್ ಹದಿಹರೆಯದವರನ್ನು ಕೇಂದ್ರೀಕರಿಸಿರುವ ಪಾಕೆಟ್ ಮನಿ ಆ್ಯಪ್ ಆಗಿದೆ. ಸಂಸ್ಥೆಯ ಸಹ ಸಂಸ್ಥಾಪಕರು ವಿನೀತ್ ಗುಪ್ತಾ ಮತ್ತು ಮುಕುಂದ್ ರಾವ್. ಮತ್ತೊಂದೆಡೆ, Momspresso.com, 2010 ರಲ್ಲಿ ಪ್ರಾರಂಭವಾಯಿತು, ಮಹಿಳೆಯರು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಲು ಮತ್ತು ವೇದಿಕೆಯನ್ನು ಬಳಸಿಕೊಂಡು ಹಣಗಳಿಸುವ ಉದ್ದೇಶಕ್ಕಾಗಿ ರೂಪುಗೊಂಡಿದೆ. Momspresso.com ನಲ್ಲಿ ಮಹಿಳೆಯರು ವಿಚಾರ ವಿಮರ್ಶೆಗಳನ್ನು ಮಾಡಬಹುದಾಗಿದ್ದು, ಅನುಭವಗಳನ್ನು ಹಂಚಿಕೊಳ್ಳಬಹುದಾಗಿದೆ. ಬರವಣಿಗೆಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿರುವ Momspresso.com ಹೊರಜಗತ್ತಿನೊಂದಿಗೆ ಅಮ್ಮಂದಿರನ್ನು ಸಂಪರ್ಕಿಸುತ್ತದೆ.


ಹೊಸ ಯುಗದ ಡಿಜಿಟಲ್ ಪರಿಕರಗಳತ್ತ ಚಿತ್ತ ನೆಟ್ಟಿರುವ ಹದಿಹರೆಯದವರು
ಸಮೀಕ್ಷೆಯ ಪ್ರಕಾರ, ಭಾರತದ ಹದಿಹರೆಯದವರು ಹೊಸ ಯುಗದ ಡಿಜಿಟಲ್ ಹಣಕಾಸು ಪರಿಹಾರಗಳ ಬಗ್ಗೆ ಕಲಿಯಲು ಹೆಚ್ಚು ಒಲವು ತೋರುತ್ತಿದ್ದಾರೆ. ಏಕೆಂದರೆ ಸಮೀಕ್ಷೆಯಲ್ಲಿ 93% ಹದಿಹರೆಯದ ಪ್ರತಿಕ್ರಿಯೆದಾರರು ಡಿಜಿಟಲ್ ಪಾವತಿಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿಯನ್ನು ವ್ಯಕ್ತಪಡಿಸುವುದರೊಂದಿಗೆ ಈ ಮಾತನ್ನು ಪುಷ್ಟೀಕರಿಸಿದೆ, ಇನ್ನು ಅವರಲ್ಲಿ ಕೇವಲ 22% ರಷ್ಟು ಜನರು ಡಿಜಿಟಲ್ ಪಾವತಿಗಳನ್ನು ಬಳಸುವ ವಿಶ್ವಾಸವನ್ನು ಹೊಂದಿದ್ದಾರೆ.


ಇದನ್ನೂ ಓದಿ: Explained: ಅಷ್ಟೊಂದು ಹಿಂಸೆಯಾಗ್ತಿದ್ರೂ ವಿಕಲಚೇತನ ಮಹಿಳೆಯರು ಎಲ್ಲಾ ನೋವು ಸಹಿಸಿಕೊಳ್ತಿರೋದೇಕೆ?

ಕ್ರಿಪ್ಟೋ, ಬ್ಲಾಕ್‌ಚೈನ್‌ನತ್ತ ಕೂಡ ತೋರಿದ ಒಲವು :
7-12 ನೇ ತರಗತಿಗಳಲ್ಲಿ ಓದುತ್ತಿರುವ 600 ಹದಿಹರೆಯದವರು ತಮ್ಮ ಪೋಷಕರೊಂದಿಗೆ (600) ಹಂಚಿಕೊಂಡ ಪ್ರತಿಕ್ರಿಯೆಗಳನ್ನು ಸಮೀಕ್ಷೆಯು ವಿಶ್ಲೇಷಿಸಿದೆ. ಇದಲ್ಲದೆ, ಸಮೀಕ್ಷೆಗೆ ಒಳಗಾದ 94% ಪೋಷಕರು ತಮ್ಮ ಮಕ್ಕಳು ಡಿಜಿಟಲ್ ವ್ಯಾಲೆಟ್‌ಗಳ ಬಗ್ಗೆ ಕಲಿಯಲು ಆಸಕ್ತಿ ಹೊಂದಿದ್ದಾರೆ ಎಂದು ನಂಬುತ್ತಾರೆ. ಇದು ಹೆಚ್ಚು ಸಂಘಟಿತ ಮತ್ತು ವಿಶ್ವಾಸಾರ್ಹ ಆರ್ಥಿಕ ಸಲಹೆ ಕಾರ್ಯವಿಧಾನದ ಅಗತ್ಯವನ್ನು ಬಲಪಡಿಸುತ್ತದೆ. ಮತ್ತೊಂದೆಡೆ, ಹದಿಹರೆಯದವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, 70% ರಷ್ಟು ಕ್ರಿಪ್ಟೋ ಸ್ವತ್ತುಗಳಾದ ಬ್ಲಾಕ್‌ಚೈನ್ ಮತ್ತು ನಾನ್-ಫಂಗಬಲ್ ಟೋಕನ್‌ಗಳ (ಎನ್‌ಎಫ್‌ಟಿ) ಬಗ್ಗೆ ಕಲಿಯಲು ಬಯಸುತ್ತಾರೆ ಎಂದು ತಿಳಿಸಿದ್ದಾರೆ.


ಯುವಜನಾಂಗದಲ್ಲಿ ಹೆಚ್ಚುತ್ತಿರುವ ಆರ್ಥಿಕ ಸಾಕ್ಷರತೆ:
ಮೂವಿನ್‌ನ ಸಹ-ಸಂಸ್ಥಾಪಕ ಮುಕುಂದ್ ರಾವ್ ಪ್ರಕಾರ, ಭಾರತೀಯ ಯುವಕ ಯುವತಿಯರು ಹಿಂದೆಂದಿಗಿಂತಲೂ ಹೆಚ್ಚು ಆರ್ಥಿಕವಾಗಿ ಸ್ವತಂತ್ರರಾಗುತ್ತಿದ್ದಾರೆ. ಯುವ ಗ್ರಾಹಕರಾಗಿ, ಅವರು ತಮ್ಮ ವೈಯಕ್ತಿಕ ಜೀವನಕ್ಕೆ ಬಂದಾಗ ಅಂತೆಯೇ ಬಳಸುತ್ತಿರುವ ವಸ್ತುಗಳ ವಿಷಯದಲ್ಲಿ ಅಂದರೆ ಗ್ಯಾಜೆಟ್‌ಗಳು, ಫ್ಯಾಷನ್, ಆಹಾರ ಅಥವಾ ಪ್ರಯಾಣಕ್ಕೆ ಸಂಬಂಧಿಸಿರಲಿ ಅವರು ತಮ್ಮದೇ ಸ್ವಂತ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದಾಗಿದೆ. ಯುವಕರಲ್ಲಿ ಆರ್ಥಿಕ ಸಾಕ್ಷರತೆಯ ಅಗತ್ಯ ಹೆಚ್ಚುತ್ತಿದ್ದು ತಮ್ಮ ನಿರ್ಧಾರಗಳನ್ನು ಸ್ವಂತವಾಗಿ ತೆಗೆದುಕೊಳ್ಳುವ ಆಸಕ್ತಿ ಹೊಂದಿದ್ದಾರೆ ಹಾಗೂ ಡಿಜಿಟಲೀಕರಣದಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದಾರೆ ಎಂಬುದು ಆರ್ಥಿಕ ಸಾಕ್ಷರತಾ ಸಮೀಕ್ಷೆಯಿಂದ ಸ್ಪಷ್ಟವಾಗಿದೆ.


ಇದನ್ನೂ ಓದಿ:  Explained: ಭಾರತದಲ್ಲಿ ಮಗುವಿನ ಪಾಲನೆ-ಪೋಷಣೆ ದುಬಾರಿ ಏಕೆ? ಮಕ್ಕಳ ಶಿಕ್ಷಣಕ್ಕೆ ತಗಲುವ ವೆಚ್ಚ ಎಷ್ಟು ಗೊತ್ತಾ?

ಸಂಶೋಧನೆ ಮತ್ತು ಮುಂಬರುವ ಮನಿ ಒಲಿಂಪಿಯಾಡ್ ಮೂಲಕ ಜಾಗೃತಿಯನ್ನು ಹೆಚ್ಚಿಸುವ ಮೂಲಕ ಹದಿಹರೆಯದವರಿಗೆ ಉತ್ತಮ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಮೂಲಕ ಮೂವಿನ್ ಜೊತೆ ಪಾಲುದಾರಿಕೆ ಹೊಂದಲು ನಾವು ಸಂತೋಷಪಡುತ್ತೇವೆ ಎಂದು Momspresso.com ನ ಸಹ-ಸಂಸ್ಥಾಪಕ ಮತ್ತು ಸಿಒಒ ಪ್ರಶಾಂತ್ ಸಿನ್ಹಾ ಹೇಳಿದ್ದಾರೆ.

Published by:Ashwini Prabhu
First published: