• ಹೋಂ
 • »
 • ನ್ಯೂಸ್
 • »
 • Explained
 • »
 • Explained: ಬ್ರಿಟನ್ ಆಯ್ತು, ಅಮೆರಿಕಾಗೂ ಭಾರತೀಯ ಮೂಲದ ಅಧ್ಯಕ್ಷೆ? ಟ್ರಂಪ್ ವಿರುದ್ಧ ಕಣಕ್ಕಿಳಿಯುತ್ತಿರೋ ನಿಕ್ಕಿ ಹೆಲಿ!

Explained: ಬ್ರಿಟನ್ ಆಯ್ತು, ಅಮೆರಿಕಾಗೂ ಭಾರತೀಯ ಮೂಲದ ಅಧ್ಯಕ್ಷೆ? ಟ್ರಂಪ್ ವಿರುದ್ಧ ಕಣಕ್ಕಿಳಿಯುತ್ತಿರೋ ನಿಕ್ಕಿ ಹೆಲಿ!

ನಿಕ್ಕಿ ಹೆಲಿ

ನಿಕ್ಕಿ ಹೆಲಿ

Who Is Nikki Haley: ಅಸೋಸಿಯೇಟೆಡ್ ಪ್ರೆಸ್‌ನ ವರದಿ ಪ್ರಕಾರ, 2024ರ ರಿಪಬ್ಲಿಕನ್ ಅಧ್ಯಕ್ಷೀಯ ನಾಮನಿರ್ದೇಶನದಲ್ಲಿ ನಿಕ್ಕಿ ಅವರು ಮೊದಲ ಪ್ರಮುಖ ಚಾಲೆಂಜರ್ ಆಗಿ ಟ್ರಂಪ್ ಅವರ ಮುಂದೆ ನಿಂತಿದ್ದಾರೆ, ಇದು ಟ್ರಂಪ್‌ಗೆ ಪ್ರಬಲ ಸವಾಲು ನೀಡುವ ಸಾಧ್ಯತೆಯಿದೆ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಅಮೆರಿಕದಲ್ಲಿ ಮುಂದಿನ ವರ್ಷದ ಅಧ್ಯಕ್ಷೀಯ ಚುನಾವಣೆಗೆ (US Presidential Elections 2024) ರಣಾಂಗಣ ಸಿದ್ಧವಾಗಿದೆ. ಒಂದೆಡೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗಿ ಮತ್ತೊಮ್ಮೆ ಕಣಕ್ಕಿಳಿಯಲು ತಯಾರಿ ನಡೆಸುತ್ತಿದ್ದರೆ ಅವರಿಗೆ ಸವಾಲಾಗಿ ಭಾರತೀಯ ಮೂಲದ ಪ್ರಜೆಯೂ ನಿಂತಿದ್ದಾರೆ. ಈ ಭಾರತೀಯ ಮೂಲದ ಪ್ರಜೆ ಬೇರಾರೂ ಅಲ್ಲ ದಕ್ಷಿಣ ಕೆರೊಲಿನಾ ರಾಜ್ಯದ ಮಾಜಿ ಗವರ್ನರ್, ನಿಕ್ಕಿ ಹ್ಯಾಲೆ (Nikki Haley). ನಿಕ್ಕಿ ಅವರು ಟ್ರಂಪ್ ಅಧ್ಯಕ್ಷರಾಗಿದ್ದಾಗ ವಿಶ್ವಸಂಸ್ಥೆಯ ಯುಎಸ್ ರಾಯಭಾರಿಯೂ ಆಗಿದ್ದರು. ಅಸೋಸಿಯೇಟೆಡ್ ಪ್ರೆಸ್‌ನ ವರದಿ ಪ್ರಕಾರ, 2024 ರ ರಿಪಬ್ಲಿಕನ್ ಅಧ್ಯಕ್ಷೀಯ ನಾಮನಿರ್ದೇಶನದಲ್ಲಿ ನಿಕ್ಕಿ ಅವರು ಮೊದಲ ಪ್ರಮುಖ ಚಾಲೆಂಜರ್ ಆಗಿ ಟ್ರಂಪ್ ಅವರ ಮುಂದೆ ನಿಂತಿದ್ದಾರೆ, ಇದು ಟ್ರಂಪ್‌ಗೆ ಪ್ರಬಲ ಸವಾಲು ನೀಡುವ ಸಾಧ್ಯತೆಯಿದೆ.


ನಿಮ್ಮ ತಂಡಕ್ಕೆ ಇಮೇಲ್ ಮಾಡುವ ಮೂಲಕ ವಿಡಿಯೋವನ್ನು ಪ್ರಕಟಿಸಲಾಗುತ್ತಿದೆ


51 ವರ್ಷದ ನಿಕ್ಕಿ ಹ್ಯಾಲೆ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ನಾಮನಿರ್ದೇಶನಕ್ಕೆ ತಮ್ಮ ಉಮೇದುವಾರಿಕೆಯನ್ನು ಪ್ರಕಟಿಸಿದ್ದಾರೆ. "ನಾನು ನಿಕ್ಕಿ ಹ್ಯಾಲಿ ಮತ್ತು ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇವೆ" ಎಂದು ಅವರು ಇಮೇಲ್ ಮೂಲಕ ತಮ್ಮ ತಂಡಕ್ಕೆ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ. ಅಲ್ಲದೇ ಅವರು ದಕ್ಷಿಣ ಕೆರೊಲಿನಾದ ಚಾರ್ಲ್ಸ್ಟನ್ ನಗರದಲ್ಲಿ ಭಾಷಣದ ಮೂಲಕ ಬುಧವಾರ ತಮ್ಮ ಪ್ರಚಾರ ಯೋಜನೆಯನ್ನು ಪ್ರಸ್ತುತಪಡಿಸಿದ್ದಾರೆ. ಈ ಬಗ್ಗೆ ತಮ್ಮ ವಿಡಿಯೋದಲ್ಲಿ ಸೂಚಿಸಿರುವ ಅವರು ಹೊಸ ಪೀಳಿಗೆಯನ್ನು ಮುನ್ನಡೆಸುವ ಸಮಯ ಇದಾಗಿದೆ ಎಂದರು. ಆದ್ದರಿಂದ ನಮ್ಮ ಹಣಕಾಸಿನ ಜವಾಬ್ದಾರಿಗಳನ್ನು ಮತ್ತೆ ಸರಿಪಡಿಸಬಹುದು, ನಮ್ಮ ಗಡಿಗಳನ್ನು ರಕ್ಷಿಸಬಹುದು ಮತ್ತು ನಮ್ಮ ದೇಶವನ್ನು ಶಕ್ತಿಯುತಗೊಳಿಸಬಹುದು, ನಮ್ಮ ಹೆಮ್ಮೆ ಮತ್ತು ನಮ್ಮ ಉದ್ದೇಶವನ್ನು ಮರುಶೋಧಿಸಬಹುದು ಎಂದಿದ್ದಾರೆ.


ಇದನ್ನೂ ಓದಿ: Donald Trumps: ಸೋಶಿಯಲ್ ಮೀಡಿಯಾಗಳಿಗೆ ಮತ್ತೆ ಬಂದ ಟ್ರಂಪ್; 2 ವರ್ಷದ ಬಳಿಕ ಅಮೇರಿಕಾ ಮಾಜಿ ಅಧ್ಯಕ್ಷರ ಫೇಸ್‌ಬುಕ್‌, ಇನ್ಸ್‌ಸ್ಟಾ ಖಾತೆ ಆ್ಯಕ್ಟೀವ್!


ತಂಡಕ್ಕೆ ಇಮೇಲ್ ಮಾಡುವ ಮೂಲಕ ವಿಡಿಯೋ ಸಂದೇಶ


51 ವರ್ಷದ ನಿಕ್ಕಿ ಹ್ಯಾಲೆ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ನಾಮನಿರ್ದೇಶನಕ್ಕೆ ತಮ್ಮ ಉಮೇದುವಾರಿಕೆಯನ್ನು ಮಂಗಳವಾರ ಪ್ರಕಟಿಸಿದರು. "ನಾನು ನಿಕ್ಕಿ ಹ್ಯಾಲಿ ಮತ್ತು ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ" ಎಂದು ಅವರು ಇಮೇಲ್ ಮೂಲಕ ತಮ್ಮ ತಂಡಕ್ಕೆ ವೀಡಿಯೊ ಸಂದೇಶವನ್ನು ಕಳುಹಿಸಿದ್ದಾರೆ. ಅವರು ದಕ್ಷಿಣ ಕೆರೊಲಿನಾದ ಚಾರ್ಲ್ಸ್ಟನ್ ನಗರದಲ್ಲಿ ಭಾಷಣದ ಮೂಲಕ ಬುಧವಾರ ತಮ್ಮ ಪ್ರಚಾರ ಯೋಜನೆಯನ್ನು ಪ್ರಸ್ತುತಪಡಿಸಿದ್ದಾರೆ.


ಅವರು ಇದನ್ನು ವಿಡಿಯೋದಲ್ಲೂ ಸೂಚಿಸಿದ್ದು, ಹೊಸ ಪೀಳಿಗೆಯನ್ನು ಮುನ್ನಡೆಸುವ ಸಮಯ ಇದಾಗಿದೆ ಎಂದರು. ಆದ್ದರಿಂದ ನಮ್ಮ ಹಣಕಾಸಿನ ಜವಾಬ್ದಾರಿಗಳನ್ನು ಮತ್ತೆ ಸರಿಪಡಿಸಬಹುದು, ನಮ್ಮ ಗಡಿಗಳನ್ನು ರಕ್ಷಿಸಬಹುದು ಮತ್ತು ನಮ್ಮ ದೇಶವನ್ನು ಶಕ್ತಿಯುತಗೊಳಿಸಬಹುದು, ನಮ್ಮ ಹೆಮ್ಮೆ ಮತ್ತು ನಮ್ಮ ಉದ್ದೇಶವನ್ನು ಮರುಶೋಧಿಸಬಹುದು ಎಂದೂ ತಿಳಿಸಿದ್ದಾರೆ.


ಈ ಸಮಯದಲ್ಲಿ ಏಕೈಕ ಚಾಲೆಂಜರ್, ಆದರೆ ಹವರಿಂದ ತಯಾರಿ


2024 ರಲ್ಲಿ ಮತ್ತೊಮ್ಮೆ ಶ್ವೇತಭವನದಲ್ಲಿ ಕ್ಯಾಂಪಿಂಗ್ ಮಾಡಲು ಟ್ರಂಪ್‌ನ ಹಾದಿಯಲ್ಲಿರುವ ಏಕೈಕ ಚಾಲೆಂಜರ್ ಎಂದರೆ ನಿಕ್ಕಿ ಹೇಲಿಎಣಬುವುದು ಗಮನಾರ್ಹ ಚಾಲೆಂಜರ್ ಆಗಿದ್ದಾರೆ, ಆದರೆ ಅವರ ಘೋಷಣೆಯು ರಿಪಬ್ಲಿಕನ್ ನಾಮನಿರ್ದೇಶನ ಸ್ಪರ್ಧೆಯು ತೀವ್ರಗೊಳ್ಳುತ್ತಿರುವ ಸಂಕೇತವೆಂದು ಪರಿಗಣಿಸಲಾಗಿದೆ. ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್, ಮಾಜಿ ಯುಎಸ್ ಉಪಾಧ್ಯಕ್ಷ ಮೈಕ್ ಪ್ಯಾನ್ಸ್, ಯುಎಸ್ ಸೆನೆಟರ್ ಟಿಮ್ ಸ್ಕಾಟ್, ದಕ್ಷಿಣ ಕೆರೊಲಿನಾದಿಂದ, ನ್ಯೂ ಹ್ಯಾಂಪ್‌ಶೈರ್ ಗವರ್ನರ್ ಕ್ರಿಸ್ ಸುನುನು ಮತ್ತು ಮಾಜಿ ಅರ್ಕಾನ್ಸಾಸ್ ಗವರ್ನರ್ ಆಸಾ ಹಚಿನ್ಸನ್ ಹೀಗೆ 2024 ರಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸ್ಪರ್ಧಿಸಬಹುದು ಎಂದು ಪರಿಗಣಿಸಲಾಗಿದೆ.


ಸಿಖ್ ಕುಟುಂಬದ ಮಗಳು ನಿಕ್ಕಿ


ಜನವರಿ 20, 1972 ರಂದು ಅಮೆರಿಕದ ಬ್ಯಾಂಬರ್ಗ್‌ನಲ್ಲಿ ಜನಿಸಿದ ನಿಕ್ಕಿ ಹ್ಯಾಲಿ ಅವರ ಪೋಷಕರು ಸಿಖ್ಖರು. ಅವರ ತಂದೆ ಅಜಿತ್ ಸಿಂಗ್ ರಾಂಧವಾ ಅವರು ಭಾರತದ ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಅಜಿತ್ ಮತ್ತು ಅವರ ಪತ್ನಿ ರಾಜ್ ಕೌರ್ ರಾಂಧವಾ ಅವರು ಮೊದಲು 1960 ರ ದಶಕದಲ್ಲಿ ಪಂಜಾಬ್‌ನಿಂದ ಕೆನಡಾಕ್ಕೆ ಹೋದರು ಮತ್ತು ಅಲ್ಲಿಂದ ಉತ್ತಮ ಭವಿಷ್ಯ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಅಮೆರಿಕಕ್ಕೆ ಹೋದರು. ರಾಜ್ ಕೌರ್ ಕೂಡ ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ.


ನಿಕ್ಕಿ ಹೆಲಿ


ಇನ್ನು ನಿಕ್ಕಿ ಹುಟ್ಟಿದ್ದು ಅಮೆರಿಕದಲ್ಲಿ. ಹುಟ್ಟುವಾಗ ನಿಕ್ಕಿಯ ಹೆಸರು ನಿಮ್ರತ್ ರಾಂಧವಾ. ನಿಕ್ಕಿಗೆ ಮಿಟ್ಟಿ ಮತ್ತು ಚರಣ್ ಎಂಬ ಇಬ್ಬರು ಸಹೋದರರಿದ್ದು, ಸಿಮ್ರನ್ ಎಂಬ ಸಹೋದರಿ ಇದ್ದಾರೆ. ನಿಕ್ಕಿಯ ಪೋಷಕರು ದಕ್ಷಿಣ ಕೆರೊಲಿನಾದಲ್ಲಿ ಎಕ್ಸೋಟಿಕಾ ಇಂಟರ್ನ್ಯಾಷನಲ್ ಹೆಸರಿನ ದೊಡ್ಡ ಬಟ್ಟೆ ಅಂಗಡಿಯನ್ನು ಹೊಂದಿದ್ದಾರೆ, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಲ್ಪಟ್ಟಿದೆ. ನಿಕ್ಕಿ 1996 ರಲ್ಲಿ ಮೈಕೆಲ್ ಹ್ಯಾಲಿಯನ್ನು ವಿವಾಹವಾದರು. ಈ ದಂಪತಿಗೆ 2 ಮಕ್ಕಳಿದ್ದಾರೆ.


ಅಮೆರಿಕದ ಕಿರಿಯ ಗವರ್ನರ್


ನಿಕ್ಕಿ 2011 ರಲ್ಲಿ ದಕ್ಷಿಣ ಕೆರೊಲಿನಾದ ಗವರ್ನರ್ ಆಗಿ ಆಯ್ಕೆಯಾದರು. ಕೇವಲ 39ರ ಹರೆಯದಲ್ಲಿ ರಾಜ್ಯಪಾಲ ಹುದ್ದೆಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ನಿಕ್ಕಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅವರು ಅಮೆರಿಕದ ಅತ್ಯಂತ ಕಿರಿಯ ಹಾಗೂ ದಕ್ಷಿಣ ಕೆರೊಲಿನಾದ ಮೊದಲ ಮಹಿಳಾ ಗವರ್ನರ್ ಕೂಡಾ ಆದರು. ಅವರು ಜನವರಿ 2017 ರಿಂದ ಡಿಸೆಂಬರ್ 2018 ರವರೆಗೆ ವಿಶ್ವಸಂಸ್ಥೆಯ 29 ನೇ ಯುಎಸ್ ರಾಯಭಾರಿಯಾಗಿ ನೇಮಕಗೊಂಡರು.


ಇದನ್ನೂ ಓದಿ: Moto Smartphones: ಮೊಟೊ ಕಂಪೆನಿಯ ಎರಡು ಸ್ಮಾರ್ಟ್​​ಫೋನ್​ಗಳು​ ಲಾಂಚ್​! ಬೆಲೆ ಎಷ್ಟು?


ರಿಸೈಕ್ಲಿಂಗ್ ಕಂಪನಿ ಮೂಲಕ ವೃತ್ತಿಜೀವನವನ್ನು ಪ್ರಾರಂಭ


ಆರೆಂಜ್‌ಬರ್ಗ್ ಪ್ರಿಪರೇಟರಿ ಶಾಲೆಯಲ್ಲಿ ಅಧ್ಯಯನ ಮಾಡಿದ ನಂತರ ನಿಕ್ಕಿ ಕ್ಲೆಮ್ಸನ್ ವಿಶ್ವವಿದ್ಯಾಲಯದಿಂದ ಬಿಎಸ್ ಪದವಿಯನ್ನು ಪಡೆದರು. ಇದರ ನಂತರ ಅವರು ತಮ್ಮ ಮೊದಲ ಕೆಲಸವನ್ನು FCR ಕಾರ್ಪೊರೇಷನ್, ಮರುಬಳಕೆ ಕಂಪನಿಯಲ್ಲಿ ಮಾಡಿದರು. ಆದಾಗ್ಯೂ, 1994 ರಲ್ಲಿ, ನಿಕ್ಕಿ ತನ್ನ ತಾಯಿಯ ಕಂಪನಿಗೆ ಸೇರಿಕೊಂಡರು. 1998 ರಲ್ಲಿ, ನಿಕ್ಕಿಯನ್ನು ಆರೆಂಜ್‌ಬರ್ಗ್ ಕೌಂಟಿ ಚೇಂಬರ್ ಆಫ್ ಕಾಮರ್ಸ್‌ನ ನಿರ್ದೇಶಕರಾಗಿ ಮಾಡಲಾಯಿತು ಮತ್ತು 2003 ರಲ್ಲಿ ಅವರು ಸೌತ್ ಕೆರೊಲಿನಾ ಚೇಂಬರ್ ಆಫ್ ಕಾಮರ್ಸ್‌ನ ನಿರ್ದೇಶಕರಾದರು. 2003 ರಲ್ಲಿ ನ್ಯಾಷನಲ್ ಅಸೋಸಿಯೇಷನ್ ​​ಆಫ್ ವುಮೆನ್ ಬಿಸಿನೆಸ್ ಹಾನರ್‌ನ ಖಜಾಂಚಿ ಸ್ಥಾನವನ್ನು ವಹಿಸಿಕೊಂಡರು. ಬಳಿಕ ಮುಂದಿನ ವರ್ಷ ಅವರು ಅದರ ಅಧ್ಯಕ್ಷರಾದರು.
2005 ರಲ್ಲಿ US ಸಂಸತ್ತನ್ನು ತಲುಪಿದರು


ನಿಕ್ಕಿ 2005 ರಲ್ಲಿ ಯುಎಸ್ ಸಂಸತ್ತನ್ನು ತಲುಪಿದರು. ರಿಪಬ್ಲಿಕನ್ ಪಕ್ಷವು ಅವರನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ (ಯುಎಸ್ ಸಂಸತ್ತಿನ ಕೆಳಮನೆ) ಕಳುಹಿಸಿತು. ಆಕೆಯ ಅವಧಿಯು 2010 ರಲ್ಲಿ ಕೊನೆಗೊಂಡಿತು ಮತ್ತು ಮುಂದಿನ ವರ್ಷ ಅವರು ದಕ್ಷಿಣ ಕೆರೊಲಿನಾದ ಗವರ್ನರ್ ಆಗಿ ಆಯ್ಕೆಯಾದರು. 2014 ರಲ್ಲಿ, ದಿ ವರ್ಕಿಂಗ್ ಮದರ್ ಮ್ಯಾಗಜೀನ್‌ನ 50 ಅತ್ಯಂತ ಶಕ್ತಿಶಾಲಿ ತಾಯಂದಿರ ಪಟ್ಟಿಯಲ್ಲಿ ನಿಕ್ಕಿ ಹೆಸರನ್ನು ಸೇರಿಸಲಾಯಿತು.

Published by:Precilla Olivia Dias
First published: