Explained: ನೀವೂ 18 ದಿನಗಳಲ್ಲಿ 8,000 ಕಿಮೀ ಚಲಿಸುವ ಶ್ರೀ ರಾಮಾಯಣ ಯಾತ್ರ ರೈಲಿನಲ್ಲಿ ಹೋಗ್ಬೇಕಾ? ಹಾಗಿದ್ರೆ ಇಲ್ಲಿದೆ ಸಂಪೂರ್ಣ ಮಾಹಿತಿ

Ramayana Train: 18 ದಿನಗಳ ಪ್ರವಾಸದ ಅವಧಿ ಹೊಂದಿರುವ ‘ ಶ್ರೀ ರಾಮಾಯಣ ಯಾತ್ರ’ ರೈಲು ಜೂನ್ 21 ರಿಂದ ಆರಂಭವಾಗಲಿದೆ. ಈ ರೈಲಿಗೆ ಇನ್ನೂ ಒಂದು ವಿಶೇಷತೆಯಿದೆ, ಅದೇನೆಂದರೆ ನೇಪಾಳಕ್ಕೆ ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ ಪ್ರಪ್ರಥಮ ಪ್ರವಾಸಿ ರೈಲು ಎಂಬ ಹಿರಿಮೆಗೆ ಪಾತ್ರವಾಗಲಿದೆ ಈ ರೈಲು.

ಶ್ರೀ ರಾಮಾಯಣ ಯಾತ್ರ ರೈಲು

ಶ್ರೀ ರಾಮಾಯಣ ಯಾತ್ರ ರೈಲು

  • Share this:
ಹಿಂದೂ ಮಹಾಕಾವ್ಯ ರಾಮಾಯಣಕ್ಕೆ (Ramayan) ಸಂಬಂಧಿಸಿದ ಸ್ಥಳಗಳಿಗೆ ಯಾತ್ರಿಗಳನ್ನು (Pilgrim) ಕರೆದೊಯ್ಯುವ ವಿಶೇಷ ಪ್ರವಾಸಿ ರೈಲನ್ನು (Special Train) ಪ್ರಾರಂಭಿಸುವ ಯೋಜನೆಯನ್ನು ಇತ್ತೀಚೆಗೆ ಭಾರತೀಯ ರೈಲು ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಅರ್‍ಸಿಟಿಸಿ) (Indian Rail Catering and Tourism Corporation) ಘೋಷಿಸಿದೆ. 18 ದಿನಗಳ ಪ್ರವಾಸದ ಅವಧಿ ಹೊಂದಿರುವ ‘ ಶ್ರೀ ರಾಮಾಯಣ ಯಾತ್ರ’ ರೈಲು ಜೂನ್ 21 ರಿಂದ ಆರಂಭವಾಗಲಿದೆ. ಈ ರೈಲಿಗೆ ಇನ್ನೂ ಒಂದು ವಿಶೇಷತೆಯಿದೆ, ಅದೇನೆಂದರೆ ನೇಪಾಳಕ್ಕೆ ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ ಪ್ರಪ್ರಥಮ ಪ್ರವಾಸಿ ರೈಲು ಎಂಬ ಹಿರಿಮೆಗೆ ಪಾತ್ರವಾಗಲಿದೆ ಈ ರೈಲು.

ರಾಮಾಯಣ ಯಾತ್ರ ರೈಲಿನ ವಿಶೇಷತೆ ಏನು?
ದೇಶಿಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮತ್ತು ಶ್ರೀ ರಾಮಚಂದ್ರ ಪ್ರಭುವಿನ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳ ಪ್ರವಾಸ ಮಾಡಿಸಲು ‘ಭಾರತ್ ಗೌರವ್ ಟೂರಿಸ್ಟ್ ಟ್ರೈನ್’ ಎಂಬ ಹೆಸರಿನ ರೈಲನ್ನು ಆರಂಭಿಸಲಾಗಿದೆ.

ಲಕ್ನೋದ ಐ ಆರ್ ಸಿ ಟಿ ಸಿ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಅಜಿತ್ ಕುಮಾರ್ ಸಿನ್ಹಾ ಅವರು, ಶ್ರೀ ರಾಮಚಂದ್ರ , ಸೀತಾ ಮಾತೆ ಮತ್ತು ಲಕ್ಷ್ಮಣ 14 ವರ್ಷ ವನವಾಸದ ಅವಧಿಯಲ್ಲಿ ಕಾಲಿಟ್ಟ ಪ್ರದೇಶಗಳನ್ನು ನೋಡಲು ಬಯಕೆ ಇಟ್ಟುಕೊಂಡಿರುವ ಭಕ್ತರ ಕನಸುಗಳನ್ನು ಈಡೇರಿಸುವ ಗುರಿಯನ್ನು ಈ ಪ್ರವಾಸದ ಪ್ಯಾಕೇಜ್ ಹೊಂದಿದೆ ಎಂದು ಹೇಳಿದ್ದಾರೆ.

ಜೂನ್ 21 ರಂದು ದೆಹಲಿಯ ಸಫ್ದರ್‍ಜಂಗ್ ರೈಲ್ವೇ ನಿಲ್ದಾಣದಿಂದ ಪ್ರಾರಂಭ
ಜೂನ್ 21 ರಂದು ದೆಹಲಿಯ ಸಫ್ದರ್‍ಜಂಗ್ ರೈಲ್ವೇ ನಿಲ್ದಾಣದಿಂದ ಈ ರೈಲು ಹೊರಡಲಿದೆ ಮತ್ತು ಈ ಯಾತ್ರೆಗಾಗಿ ಈಗಾಗಲೇ ಬುಕ್ಕಿಂಗ್ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ರೈಲಿನಲ್ಲಿ 14 ಕೋಚ್‍ಗಳಿದ್ದು, 11 ಥರ್ಡ್ ಏಸಿ ಕೋಚ್‍ಗಳು, ಪ್ಯಾಂಟ್ರಿ ಕಾರ್, ರೆಸ್ಟೊರೆಂಟ್ ಕಾರ್ ಮತ್ತು ರೈಲು ಸಿಬ್ಬಂದಿಯ ಬಳಕೆಗಾಗಿ ಪ್ರತ್ಯೇಕ ಕೋಚ್ ಅನ್ನು ಒಳಗೊಂಡಿದೆ. ಈ ರೈಲು 600 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದು, 62, 370 ರೂ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಿಕೆಟ್ ಬೆಲೆ ಎಷ್ಟು
ಈ ರೈಲು ದೆಹಲಿ ಮಾತ್ರವಲ್ಲದೆ, ಅಲಿಘರ್, ತುಂಡ್ಲಾ, ಕಾನ್ಪುರ ಮತ್ತು ಲಕ್ನೋದಲ್ಲಿಯೂ ಬೋರ್ಡಿಂಗ್ ಪಾಯಿಂಟ್‍ಗಳನ್ನು ಹೊಂದಿದೆ. ಪ್ರಯಾಣಿಕರು ಯಾವ ನಿಲ್ದಾಣದಿಂದ ಹತ್ತಿದ್ದರೂ ಟಿಕೆಟ್ ಬೆಲೆ ಮಾತ್ರ 62, 370 ರೂಗಳೇ ಆಗಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪ್ಯಾಕೇಜ್, ಆಹಾರ, ವಸತಿ ಸೌಲಭ್ಯ ಮತ್ತು ವೀಕ್ಷಣೆಯ ಸ್ಥಳಗಳಲ್ಲಿ ಗೈಡ್‍ಗಳ ಸೇವೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ ಎಂದು ಸಿನ್ಹಾ ಹೇಳಿದ್ದಾರೆ.

ಇದನ್ನೂ ಓದಿ:  Subarnarekha River: ಭಾರತದ ಈ ನದಿಯಲ್ಲಿ ಸಿಗುತ್ತೆ ಚಿನ್ನ! ಸ್ವರ್ಣ ರೇಖಾ ನದಿ ಬಗ್ಗೆ ಗೊತ್ತೇ?

ಸುಮಾರು 8000 ಕಿಮೀಗಳ ದೂರವನ್ನು ಕ್ರಮಿಸಿ, ಪ್ರವಾಸದ 18ನೇಯ ದಿನ ದೆಹಲಿಗೆ ಮರಳುವ ಈ ಭಾರತ್ ಗೌರವ್ ಟೂರಿಸ್ಟ್ ಟ್ರೈನ್‍ನ ಒಳಾಂಗಣ ವಿನ್ಯಾಸವು ರಾಮಾಯಣ ಮಹಾಕಾವ್ಯವನ್ನು ಆಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲಿನಲ್ಲಿ ಪ್ರವಾಸಿಗಳಿಗೆ, ರೈಲಿನೊಳಗೆ ತಾಜಾವಾಗಿ ತಯಾರಿಸಿದ ಕಟ್ಟುನಿಟ್ಟಾದ ಸಸ್ಯಹಾರಿ ಊಟವನ್ನಷ್ಟೇ ನೀಡಲಾಗುವುದು. ರೈಲಿನಲ್ಲಿ ಮಾಹಿತಿ ಮತ್ತು ಮನರಂಜನೆ ವ್ಯವಸ್ಥೆ, ಸಿಸಿಟಿವಿ ಕ್ಯಾಮರಾಗಳು ಹಾಗೂ ಭದ್ರತಾ ಸಿಬ್ಬಂದಿಗಳ ವ್ಯವಸ್ಥೆ ಇರುತ್ತದೆ.

ರಾಮಾಯಣ ಯಾತ್ರೆಯ ಸ್ಥಳಗಳು ಯಾವುವು?
ಸಫ್ದರ್‍ಜಂಗ್ ನಿಲ್ದಾಣದಿಂದ ಹೊರಟ ರೈಲು, ಮೊದಲು ಅಯೋಧ್ಯೆಯಲ್ಲಿ ನಿಲ್ಲುತ್ತದೆ. ಅಲ್ಲಿ ಪ್ರವಾಸಿಗಳು, ರಾಮ ಜನ್ಮಭೂಮಿ ದೇಗುಲ , ಹನುಮಾನ್ ದೇವಾಲಯ ಮತ್ತು ನಂದಿಗ್ರಾಮದಲ್ಲಿರುವ ಭರತ್ ಮಂದಿರವನ್ನು ನೋಡಬಹುದು.

ಇದನ್ನೂ ಓದಿ: Explained: ತಾಂಬೂಲ ಪ್ರಶ್ನೆ ಎಂದರೇನು? ಇದರ ಆಚರಣೆ, ಮಹತ್ವಗಳ ಬಗ್ಗೆ ಇಲ್ಲಿದೆ ಮಾಹಿತಿ

18 ದಿನಗಳ ಈ ರೈಲು ಯಾತ್ರೆಯಲ್ಲಿ, ಜನಕಪುರಿ (ನೇಪಾಳ), ಸೀತಾಮರ್ಹಿ, ಬಕ್ಸರ್, ವಾರಣಾಸಿ, ಪ್ರಯಾಗ್ ರಾಜ್, ಶ್ರಿಂಗ್‍ವೇರ್‍ಪುರ್, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರಂ, ಕಾಂಜಿಪುರಂ ಮತ್ತು ಬದ್ರಾಚಲಂ ( ದಕ್ಷಿಣದ ಆಯೋಧ್ಯೆ ಎಂದು ಜನಪ್ರಿಯತೆ ಪಡೆದಿದೆ) ಅನ್ನು ನೋಡಬಹುದು. ಮೊತ್ತ ಮೊದಲ ಬಾರಿಗೆ ಪ್ರವಾಸಿ ರೈಲೊಂದು ಎರಡು ಪ್ರಮುಖ ಧಾರ್ಮಿಕ ನಗರಗಳಾದ ಆಯೋಧ್ಯ ಮತ್ತು ಜನಕಪುರಿಯನ್ನು ಸಂಪರ್ಕಿಸಲಿದೆ ಎಂದು ಸಿನ್ಹಾ ತಿಳಿಸಿದ್ದಾರೆ.
Published by:Ashwini Prabhu
First published: