ರಾಜ್ಯ ಸರ್ಕಾರಿ ನೌಕರರ (state government employees) ಹೋರಾಟ ಒಂದು ಮಟ್ಟಿಗೆ ಫಲಕೊಟ್ಟಿದೆ. ಅವರಿಗೂ ಹೆಚ್ಚಲ್ಲ, ಇವರಿಗೂ ಕಡಿಮೆಯಲ್ಲ ಎನ್ನುವಂತೆ ರಾಜ್ಯ ಸರ್ಕಾರ (state government) ಮಧ್ಯಂತರ ಪರಿಹಾರದ ಆದೇಶ ನೀಡಿದೆ. ರಾಜ್ಯ ಸರ್ಕಾರಿ ನೌಕರರ ಸಂಬಳ ಜಾಸ್ತಿ (Salary Hike) ಮಾಡಬೇಕು, 7ನೇ ವೇತನ ಆಯೋಗ (7th Pay Commission) ಜಾರಿಗೆ ತರಬೇಕು ಅಂತ ಹೋರಾಟ ನಡೆಯುತ್ತಿತ್ತು. ನಿನ್ನೆ ಖುದ್ದು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ನಡೆಸಿದ ಸಭೆ ಅಷ್ಟೊಂದು ಫಲಪ್ರದವಾಗಿರಲಿಲ್ಲ. ಹೀಗಾಗಿ ಇಂದು ರಾಜ್ಯಾದ್ಯಂತ ಸರ್ಕಾರಿ ನೌಕರರು ಕೆಲಸಕ್ಕೆ ಗೈರು ಹಾಜರಾಗಿದ್ದರು. ಇದರ ಬಿಸಿ ತಟ್ಟುತ್ತಿದ್ದಂತೆ ರಾಜ್ಯ ಸರ್ಕಾರ ಕೊಂಚ ಮೆತ್ತಗಾಗಿದೆ. ರಾಜ್ಯ ಸರ್ಕಾರಿ ನೌಕರರಿಗೆ ಮೂಲ ವೇತನದ (Basic Salary) ಶೇಕಡಾ 17ರಷ್ಟು ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶೇ. 20ರಷ್ಟು ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದ ಸರ್ಕಾರಿ ನೌಕರರು ಕಡೆಗೂ ಹೋರಾಟದ ಮೂಲಕ ಶೇ.17ರಷ್ಟು ವೇತನ ಹೆಚ್ಚಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಹಾಗಾದರೆ ಶೇಕಡಾ 17ರಷ್ಟು ಸ್ಯಾಲರಿ ಏರಿಕೆಯ ಲೆಚ್ಚಾಚಾರ ಹೇಗಿದೆ? ಯಾರ ಸಂಬಳ ಎಷ್ಟು ಹೆಚ್ಚಾಗಲಿದೆ? ಇದು ಜಾರಿಗೆ ಬರುವುದು ಯಾವಾಗ? ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…
ಶೇಕಡಾ 17ರಷ್ಟು ಸಂಬಳ ಏರಿಕೆ
ರಾಜ್ಯ ಸರ್ಕಾರಿ ನೌಕರರ ಸಂಬಳ ಏರಿಕೆಗೆ ಕೊನೆಗೂ ಸರ್ಕಾರ ಅಸ್ತು ಎಂದಿದೆ. ಶೇಕಡಾ 20ರಷ್ಟು ಸಂಬಳ ಏರಿಕೆ ಬಗ್ಗೆ ನೌಕರರು ಪಟ್ಟು ಹಿಡಿದಿದ್ದರು. ಆದರೆ ಇದರಲ್ಲಿ ಚೌಕಾಸಿ ಮಾಡಿರುವ ರಾಜ್ಯ ಸರ್ಕಾರ, ಶೇಕಡಾ 17ರಷ್ಟು ಸಂಬಳ ಏರಿಕೆಗೆ ಆದೇಶ ನೀಡಿದ್ದಾರೆ.
ಸಂಬಳ ಏರಿಕೆಯಾಗುವುದು ಯಾವಾಗ?
2023ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರಿ ನೌಕರರಿಗೆ ಮೂಲ ವೇತನದ ಶೇಕಡಾ 17ರಷ್ಟು ವೇತನ ಹೆಚ್ಚಳವಾಗಲಿದೆ. 19.11.2022ರ ಸರ್ಕಾರಿ ಆದೇಶದಲ್ಲಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು 7ನೇ ರಾಜ್ಯವೇತನ ಆಯೋಗವನ್ನು ರಚಿಸಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ.
ಇದನ್ನೂ ಓದಿ: HD Deve Gowda-Vokkaliga: ವಿಶ್ರಮಿಸುತ್ತಾರಾ ದೇವೇಗೌಡರು? ಬಿಜೆಪಿ-ಕಾಂಗ್ರೆಸ್‌ನತ್ತ ವಾಲುತ್ತಾರಾ ಒಕ್ಕಲಿಗರು?
ವೇತನ ಏರಿಕೆ ಎಷ್ಟು?
ಮೂಲ ವೇತನ | ಪ್ರಸ್ತುತ ತುಟ್ಟಿ ಭತ್ಯೆ 31% | ಮಧ್ಯಂತರ ಪರಿಹಾರ 17% |
17000 | 5270 | 2890 |
17400 | 5394 | 2958 |
17800 | 5518 | 3026 |
18200 | 5642 | 3094 |
18600 | 5766 | 3162 |
19050 | 5906 | 3239 |
19500 | 6045 | 3315 |
19950 | 6185 | 3392 |
20400 | 6324 | 3468 |
123300 | 38223 | 20961 |
126100 | 39091 | 21437 |
128900 | 39959 | 21913 |
132000 | 40920 | 22440 |
135100 | 41881 | 22967 |
138200 | 42842 | 23494 |
141300 | 43803 | 24021 |
144400 | 44764 | 24548 |
147500 | 45725 | 25075 |
150600 | 46686 | 25602 |
ಸರ್ಕಾರಕ್ಕೆ 12,000 ಕೋಟಿ ಹೊರೆ
ಕರ್ನಾಟಕ ಸರ್ಕಾರಿ ಸಚಿವಾಲಯದ ನೌಕರರ ಸಂಘವು ಸುಮಾರು 5,000 ನೌಕರರನ್ನು ಹೊಂದಿದೆ. ಮುಖ್ಯಮಂತ್ರಿಗಳು ಘೋಷಿಸಿರುವ ಮಧ್ಯಂತರ ಪರಿಹಾರದಿಂದ ಸರಕಾರಕ್ಕೆ ಹೆಚ್ಚುವರಿಯಾಗಿ 12,000 ಕೋಟಿ ರೂಪಾಯಿ ಬರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ