ICC Rule: ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯದಲ್ಲಿ 12 ಜನ ಒಂದೇ ತಂಡದಲ್ಲಿ ಆಡಬಹುದು ಹೇಗೆ ಗೊತ್ತಾ?

12 Players allowed to play in 1 cricket match, know how: ಯಾವ ನಿಯಮದ ಅಡಿಯಲ್ಲಿ ಅಷ್ಟು ಜನರನ್ನು ಆಡಿಸಬಹುದು? ಎಲ್ಲಾ ಪಂದ್ಯದಲ್ಲೂ ಹಾಗಾದರೆ ಯಾಕೆ ಆಡಿಸುವುದಿಲ್ಲ ಎಂದು ತಾವು ಯೋಚಿಸುತ್ತಿರಬಹುದು. ಆ ಎಲ್ಲಾ ಅನುಮಾನಗಳಿಗೆ ಈ ಕೆಳಗೆ ಉತ್ತರವಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು: ಅಂತಾರಾಷ್ಟ್ರೀಯ ಪಂದ್ಯದಲ್ಲಿ (International Cricket Matches) 12 ಆಟಗಾರರು ಒಂದೇ ಪಂದ್ಯದಲ್ಲಿ ಒಂದೇ ತಂಡದಲ್ಲಿ ಆಡಬಹುದು. ಅಯ್ಯೋ ಅದು ಹೇಗೆ ಸಾಧ್ಯ, ಒಂದು ಪಂದ್ಯದಲ್ಲಿ ಕೇವಲ 11 ಜನ ಮಾತ್ರ ಆಡಬಹುದು, ಇದು ಸುಳ್ಳು ಅಥವಾ ತಪ್ಪು ಎಂದು ನಿಮಗೆ ಅನಿಸಬಹುದು. ಆದರೆ ನಿಜಕ್ಕೂ ಎರಡೂ ತಂಡಗಳು 12 ಜನರನ್ನು ಆಡಿಸಬಹುದು. ಅದೂ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಎಂಬುದು ಎಷ್ಟೋ ಜನರಿಗೆ ಗೊತ್ತಿರಲು ಸಾಧ್ಯವಿಲ್ಲ. ಹಾಗಾದರೆ ಹೇಗೆ, ಯಾವ ನಿಯಮದ ಅಡಿಯಲ್ಲಿ ಅಷ್ಟು ಜನರನ್ನು ಆಡಿಸಬಹುದು? ಎಲ್ಲಾ ಪಂದ್ಯದಲ್ಲೂ ಹಾಗಾದರೆ ಯಾಕೆ ಆಡಿಸುವುದಿಲ್ಲ ಎಂದು ತಾವು ಯೋಚಿಸುತ್ತಿರಬಹುದು. ಆ ಎಲ್ಲಾ ಅನುಮಾನಗಳಿಗೆ ಈ ಕೆಳಗೆ ಉತ್ತರವಿದೆ. 

    IPL 2021​ ಅಬ್ಬರ ಮುಗಿದ ಬೆನ್ನಲ್ಲೇ ದುಬೈನಲ್ಲಿ T-20 ವಿಶ್ವಕಪ್ (T-20 World Cup 2021, Dubai)​ ಆರಂಭವಾಗಿದೆ. ಕೆಲ ತಂಡಗಳು ವಿಶ್ವಕಪ್​ಗೆ ಅರ್ಹತಾ ಪಂದ್ಯಗಳನ್ನು (T20 world cup qualifier) ಆಡುತ್ತಿದ್ದರೆ ಕೆಲ ತಂಡಗಳು ವಾರ್ಮ್​ ಅಪ್​ ಪಂದ್ಯಗಳನ್ನು (T20 World Cup Warmup Matches) ಆಡುತ್ತಿವೆ. ಇಂದು ನಡೆದ ಭಾರತ ಮತ್ತು ಇಂಗ್ಲೆಂಡ್ (India vs England Warmup Match)​ ತಂಡದ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ ಇಂಗ್ಲೆಂಡ್​ ವಿರುದ್ಧ ಗೆಲುವು ಸಾಧಿಸಿದೆ. ಕನ್ನಡಿಗ ಕೆಎಲ್​ ರಾಹುಲ್ (KL Rahul)​ ಅತ್ಯುತ್ತಮ ಪ್ರದರ್ಶನ ನೀಡಿ ಕೇವಲ 22 ಬಾಲ್​ ಗಳಲ್ಲಿಯೇ ಅರ್ಧ ಶತಕ ಸಿಡಿಸಿದರೆ, ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದರೂ ನಂತರ ಉತ್ತಮ ಆಟವಾಡಿದ ಇಶಾನ್​ ಕಿಶನ್​ (Ishan Kishan) ಅರ್ಧ ಶತಕ ಬಾರಿಸಿದರು.

    ಒಂದೇ ಪಂದ್ಯದಲ್ಲಿ 12 ಜನ ಹೇಗೆ? (12 Players in one match):

    ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ ಕಾನೂನಿನ ಪ್ರಕಾರ ಒಂದು ತಂಡದಲ್ಲಿ ಗರಿಷ್ಟ 11 ಜನ ಆಡಬಹುದು. ಹಿಂದಿನಿಂದಲೂ ಇದೇ ಪದ್ಧತಿಯನ್ನು ಕ್ರಿಕೆಟ್​ನಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಟಿ-20 ಇರಲಿ, ಟೆಸ್ಟ್​ ಇರಲಿ ಅಥವಾ ಏಕದಿನ ಪಂದ್ಯವಿರಲಿ, ಇದೇ ಸ್ಟಾಂಡರ್ಟ್​ ರೂಲನ್ನು ಐಸಿಸಿ ಮಾಡಿದೆ (International Cricket Council Rules). ಆದರೆ ಐಸಿಸಿಯ ಕಾನೂನಿನಲ್ಲೇ 12 ಜನ ಆಟಗಾರರು ಎರಡೂ ತಂಡಗಳಲ್ಲಿ ಆಡಬಹುದು. ಆಟಕ್ಕೂ ಮುನ್ನ ಎರಡೂ ತಂಡದ ನಾಯಕರು ಇದನ್ನು ನಿರ್ಧರಿಸಬೇಕು, ಅದಕ್ಕೆ ಅಂಪೈರ್​ಗಳು ಮತ್ತು ಮ್ಯಾಚ್​ ರೆಫ್ರಿ ಅನುಮೋದನೆ ಕೊಡುತ್ತಾರೆ.

    ಅಭ್ಯಾಸ ಪಂದ್ಯದಲ್ಲಿ ಮಾತ್ರ ಅವಕಾಶ (Rule available only for warmup matches):

    ಹಾಗಾದರೆ ಯಾವ ಪಂದ್ಯಗಳಲ್ಲಿ 12 ಜನರನ್ನು ಆಡಿಸಬಹುದು ಎಂದು ಕುತೂಹಲ ಹುಟ್ಟುವುದು ಸಹಜ. ಈಗ ಟಿ-20 ವಿಶ್ವಕಪ್​ನ ಅಭ್ಯಾಸ ಪಂದ್ಯ ನಡೆಯುತ್ತಿದೆ. ಅಭ್ಯಾಸ ಪಂದ್ಯದಲ್ಲಿ ಎರಡೂ ತಂಡದ ನಾಯಕರು ಮಾತನಾಡಿಕೊಂಡರೆ 12 ಜನರನ್ನು ಆಡಿಸಬಹುದು. ಅಭ್ಯಾಸ ಪಂದ್ಯ ಮುಖ್ಯ ಉದ್ದೇಶ ಎಲ್ಲಾ ತಂಡಗಳೂ ವಾರ್ಮ್​ ಅಪ್​ ಆಗಲಿ, ಅದಾದ ನಂತರ ವಿಶ್ವಕಪ್​ನಲ್ಲಿ ಆಡಲು ಆಟಗಾರರಿಗೆ ಸಹಕಾರಿಯಾಗಲಿ ಎಂಬುದು.

    ಇದನ್ನೂ ಓದಿ: Warm Up Matches: ಇಂಗ್ಲೆಂಡ್ ವಿರುದ್ಧ ಭಾರತ ಜಯಭೇರಿ; ಇಲ್ಲಿದೆ ಎಲ್ಲ ವಾರ್ಮಪ್ ಮ್ಯಾಚ್​ಗಳ ರಿಸಲ್ಟ್

    ಇದೇ ಕಾರಣಕ್ಕೆ ಅಭ್ಯಾಸ ಪಂದ್ಯದಲ್ಲಿ 12 ಜನರನ್ನು ಆಡಿಸಲು ಐಸಿಸಿ ನಿಯಮಾವಳಿಯಲ್ಲಿ ಅವಕಾಶವಿದೆ. ಇಂದು ನಡೆದ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಪಂದ್ಯದಲ್ಲಿ 11 ಆಟಗಾರರೇ ಎರಡೂ ತಂಡದಲ್ಲಿದ್ದರು. ಆದರೆ ನಾಯಕರು ಇನ್ನೊಬ್ಬ ಆಟಗಾರನಿಗೂ ಪ್ರಾಕ್ಟಿಸ್​ ಆಗಲಿ ಎಂದು ಉದ್ದೇಶಿಸಿದರೆ ಅವರು ಆಡಿಸಬಹುದು ಎನ್ನುತ್ತದೆ ಐಸಿಸಿ ನಿಯಮಾವಳಿ.

    ಇದನ್ನೂ ಓದಿ: T20 World Cup: ಶ್ರೀಲಂಕಾ, ಐರ್​ಲೆಂಡ್ ತಂಡಗಳಿಗೆ ನಿರಾಯಾಸ ಗೆಲುವು; ಇಲ್ಲಿದೆ ಅಂಕಪಟ್ಟಿ

    ಸೂಪರ್​ ಸಬ್​ (Super Sub in Cricket):

    ಸೂಪರ್​ ಸಬ್​ ಎಂಬ ಪದ ಕ್ರಿಕೆಟ್​ ಪ್ರಿಯರಿಗೆ ಹೊಸದೇನಲ್ಲ. ಈ ನಿಮಾವಳಿಯನ್ನು ಐಸಿಸಿ ಈ ಹಿಂದೆ ತಂದಿತ್ತು. ಸುಮಾರು ಎರಡು ವರ್ಷಗಳ ಕಾಲ ಸೂಪರ್​ ಸಬ್​ ಆಗಿ ಪ್ರತಿ ತಂಡವೂ ಒಬ್ಬ ಹೆಚ್ಚುವರಿ ಆಟಗಾರರನ್ನು ಆಡಿಸಲು ಈ ನಿಯಮ ದಾರಿ ಮಾಡಿಕೊಟ್ಟಿತ್ತು. ಇದರಿಂದ ಎಷ್ಟೋ ಆಟಗಾರರ ಕರಿಯರ್​ನಲ್ಲಿ ಹೊಸ ಶಕೆಯೇ ಆರಂಭವಾಗಿತ್ತು. ಆಲ್​ರೌಂಡರ್​ ಅಗತ್ಯವಿದ್ದಾಗ, ಕೇವಲ ಬ್ಯಾಟ್ಸ್​ಮನ್​ ಅಥವಾ ಬೌಲರ್​ಗಳಿಗೆ ಅವಕಾಶ ಕಡಿಮೆ. ಹೀಗಿರುವಾಗ ಸೂಪರ್​ ಸಬ್​ ಆಯ್ಕೆ ಮಾಡಿಕೊಂಡು ಬ್ಯಾಟ್ಸ್​ಮನ್​ ಅಥವಾ ಬೌಲರ್​ ಆಡಿಸಲು ಸಾಧ್ಯವಾಗಿತ್ತು. ಸುರೇಶ್​ ರೈನಾ (Suresh Raina) ಭಾರತ ತಂಡದಲ್ಲಿ ಸಂಪೂರ್ಣ ಸ್ಥಾನ ಗಿಟ್ಟಿಸಿಕೊಳ್ಳಲು ಒದ್ದಾಡುತ್ತಿದ್ದಾಗ ಇದೇ ನಿಯಮ ಅವರಿಗೆ ವರವಾಗಿ ಸಿಕ್ಕಿತ್ತು. ಆದರೆ ಈ ನಿಯಮವನ್ನು ಐಸಿಸಿ ಕಿತ್ತು ಹಾಕಿದೆ.
    Published by:Sharath Sharma Kalagaru
    First published: