ಅಭಯ್ ಡಿಯೋಲ್ ಹೊಸ ತಲೆಮಾರಿನ ನಟ. ಕಮರ್ಷಿಯಲ್ ಸಿನಿಮಾಗಳಿಗಿಂತ ಹೆಚ್ಚಾಗಿ ಕಾಲತ್ಮಕ ಚಿತ್ರಗಳಿಗೆ ಒತ್ತು ಕೊಡುವ ಅಭಯ್ ಅವರ ನಟನಾ ಸಾಮರ್ಥ್ಯದ ಬಗ್ಗೆ ಚಕಾರ ಎತ್ತುವಂತಿಲ್ಲ. ಇಂತಹ ನಟ ಈಗ ಬಾಲಿವುಡ್ನಲ್ಲಿ ಆರಂಭವಾಗಿರುವ ಸ್ವಜನಪಕ್ಷಪಾತ (ನೆಪೋಟಿಸಮ್) ಚರ್ಚೆಗೆ ತಾವೂ ಸೇರಿಕೊಂಡಿದ್ದಾರೆ.
ಹಿರಿಯ ನಟ ಧರ್ಮೇಂಧ್ರ ಅವರು ಅಭಯ್ ಅವರ ದೊಡ್ಡಪ್ಪ. ಸಿನಿ ರಂಗದಲ್ಲಿ ಇಂತಹ ಕುಟುಂಬದಿಂದ ಬಂದರೂ ಅಭಯ್ಗೆ ನಟಿಸಲು ಅವಕಾಶಗಳು ಸಿಕ್ಕಿದ್ದು ಬಹಳ ಕಡಿಮೆ. ಅಭಯ್ 9 ವರ್ಷಗಳ ಬಳಿಕ ತಮ್ಮ ಮನಸ್ಸಿನಲ್ಲಿದ್ದ ನೋವನ್ನು ಹೊರ ಹಾಕಿದ್ದಾರೆ. ಪ್ರಶಸ್ತಿಗಳಿಗೆ ಆಯ್ಕೆ ಮಾಡುವಾಗ ನಡೆಯುವ ರಾಜಕೀಯವನ್ನು ಬಹಿರಂಗಪಡಿಸಿದ್ದಾರೆ. ಅಭಯ್ ಈಗ ಅಸಮಾಧಾನ ಹೊರಹಾಕಲು ಕಾರಣ,
ಸುಶಾಂತ್ ಸಿಂಗ್ ರಜಪೂತ್ ಅವರ ಅಗಲಿಕೆಯಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಸ್ವಜನಪಕ್ಷಪಾತದ ವಿರುದ್ಧ ನೆಟ್ಟಿಗರು ಸಮರ ಸಾರಿರುವುದು.
![Zindagi Na Milegi Dobara actor Abhay Deol Joins the Nepotism debate by sharing his experience]()
ಜಿಂದಗಿ ನಾ ಮಿಲೇಗಿ ದೋಬಾರ ಸಿನಿಮಾದಲ್ಲಿ ಹೃತಿಕ್, ಅಭಯ್ ಹಾಗೂ ಫರ್ಹಾನ್
ಜೋಯಾ ಅಖ್ತರ್ ನಿರ್ದೇಶನದ ಜಿಂದಗಿ ನಾ ಮಿಲೇಗಿ ದೋಬಾರ ಸಿನಿಮಾದಲ್ಲಿ
ಹೃತಿಕ್ ರೋಷನ್, ಅಭಯ್ ಡಿಯೋಲ್ ಹಾಗೂ ಫರ್ಹಾನ್ ಅಖ್ತರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಕತ್ರಿನಾ ಕೈಫ್ ಹೃತಿಕ್ಗೆ ಹಾಗೂ ಕಲ್ಕಿ ಅಭಯ್ಗೆ ನಾಯಕಿಯರಾಗಿದ್ದರು.
2011ರಲ್ಲಿ ತೆರೆಕಂಡಿದ್ದ ಈ ಸಿನಿಮಾ ತೆರೆಕಂಡಿದ್ದು, ಆಗ ನಡೆದಿದ್ದ ಎಲ್ಲ ಪ್ರಶಸ್ತಿ ಸಮಾರಂಭಗಳಲ್ಲೂ ಅಭಯ್ ಹಾಗೂ ಫರ್ಹಾನ್ ಅಖ್ತರ್ ಅವರನ್ನು ಕಡೆಗಣಿಸಲಾಗಿತ್ತಂತೆ. ಸಿನಿಮಾ ಮಾಡುವಾಗ ಹೃತಿಕ್, ಅಭಯ್ ಹಾಗೂ ಫರ್ಹಾನ್ ಅವರ ಪಾತ್ರಗಳನ್ನು ಮುಖ್ಯ ಪಾತ್ರವೆಂದೇ ಪರಿಗಣಿಸಲಾಗಿತ್ತಂತೆ. ಆದರೆ ಪ್ರಶಸ್ತಿಗಳ ವಿಷಯಕ್ಕೆ ಬಂದಾಗ ಮಾತ್ರ ಹೃತಿಕ್ ಅವರನ್ನು ಮಾತ್ರ ಪ್ರಮುಖ ಪಾತ್ರವೆಂದು ಪ್ರಶಸ್ತಿ ಆಯ್ಕೆಗೆ ನಾಮಿನೇಟ್ ಮಾಡಿದ್ದು, ಅಭಯ್ ಹಾಗೂ ಫರ್ಹಾನ್ ಅವರನ್ನು ಪೋಷಕ ನಟರೆಂದು ಗುರುತಿಸಲಾಗಿತ್ತಂತೆ.
![Zindagi Na Milegi Dobara actor Abhay Deol Joins the Nepotism debate by sharing his experience]()
ತಮಗಾದ ಅನುಭವದ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಅಭಯ್ ಡಿಯೋಲ್
ಈ ವಿಷಯವಾಗಿ ಬರೆದುಕೊಂಡಿರುವ ಅಭಯ್, ಪ್ರಶಸ್ತಿಗಳಿಗೆ ಆಯ್ಕೆ ನಡೆಯುವಾಗ ಹೇಗೆಲ್ಲ ರಾಜಕೀಯ ನಡೆಯುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಾಬಿ ಮಾಡುವ ಜನರು ಬಾಲಿವುಡ್ನಲ್ಲಿದ್ದಾರೆ. ಜಿಂದಗಿ ನಾ ಮಿಲೇಗಿ ದೋಬಾರ ಸಿನಿಮಾದ ವಿಷಯದಲ್ಲಿ ನೇರವಾಗುಯೇ ಲಾಬಿ ಮಾಡಲಾಗಿತ್ತು ಎಂದು ಸಿಟ್ಟು ಹೊರಹಾಕಿದ್ದಾರೆ ಅಭಯ್ ಡಿಯೋಲ್.
Sushant Singh Rajput: ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ ಸುಶಾಂತ್: ಇಲ್ಲಿವೆ ಫೋಟೋಗಳು..!
ಇದನ್ನೂ ಓದಿ: ಟ್ರೋಲ್ ಆಗುತ್ತಿದೆ ಮಹೇಶ್ ಭಟ್ - ರಿಯಾ ಚಕ್ರವರ್ತಿ ಫೋಟೋ: ಸುಶಾಂತ್ ಜೊತೆಗಿನ ಚಿತ್ರಗಳನ್ನು ಡಿಲೀಟ್ ಮಾಡಿದ ನಟಿ..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ