ಜಿಲ್ಲಾ ಗೋರಖ್​ಪುರ್​ ಚಿತ್ರ ವಿವಾದ: ಸಿನಿಮಾ ಕೈ ಬಿಟ್ಟ ವಿನೋದ್ ತಿವಾರಿ..!

news18
Updated:July 30, 2018, 1:53 PM IST
ಜಿಲ್ಲಾ ಗೋರಖ್​ಪುರ್​ ಚಿತ್ರ ವಿವಾದ: ಸಿನಿಮಾ ಕೈ ಬಿಟ್ಟ ವಿನೋದ್ ತಿವಾರಿ..!
news18
Updated: July 30, 2018, 1:53 PM IST
ನ್ಯೂಸ್​ 18 ಕನ್ನಡ 

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ಜೀವನಾಧಾರಿತ ಕಥೆ ಎಂದೇ ಹೇಳಲಾಗುತ್ತಿರುವ 'ಜಿಲ್ಲಾ ಗೋರಖ್​ಪುರ' ಸಿನಿಮಾ ಕುರಿತಾದ ವಿವಾದ ದಿನೇ ದಿನೇ  ಹೆಚ್ಚುತ್ತಿದೆ.

ಲಕನೌದ ಬಿಜೆಪಿ ಮುಖಂಡ ಐಪಿ ಸಿಂಗ್​ ಎಂಬುವರು ಭಾನುವಾರ ವಿಭೂತಿ ಖಂಡ ಪೊಲೀಸ್​ ಠಾಣೆಯಲ್ಲಿ 'ಜಿಲ್ಲಾ ಗೋರಖ್​ಪುರ್​' ಸಿನಿಮಾದ ನಿರ್ಮಾಪಕ ವಿನೋದ್​ ತಿವಾರಿ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಸಿನಿಮಾದಲ್ಲಿ ಗುಂಪು ಹಲ್ಲೆ ಹಾಗೂ ಕೇಸರಿ ಭಯೋತ್ಪಾದನೆ ಕುರಿತು ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿ, ವಿನೋದ್​ ತಿವಾರಿ ವಿರುದ್ದ ದೂರು ದಾಖಲಿಸಲಾಗಿದೆ.

'ಈ ಸಿನಿಮಾದ ಮೂಲಕ ಯೋಗಿ ಆದಿತ್ಯನಾಥ್​ ಅವರ ವರ್ಷಸ್ಸಿಗೆ ಧಕ್ಕೆ ಮಾಡುವುದಲ್ಲದೆ, ಹಿಂದೂ ಹಾಗೂ ನಾಥ್​ ಸಂಪ್ರದಾಯಕ್ಕೆ ಕಳಂಕ ತರುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹ ಸಿನಿಮಾವನ್ನು ತೆರೆಕಾಣಲು ಬಿಡುವುದಿಲ್ಲ' ಎಂದು ಐಪಿ ಸಿಂಗ್​ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

सस्ती लोकप्रियता के लिए नाथ संप्रदाय और हिंदू सभ्यता पर हमला क़त्तई बर्दाश्त नहीं करूँगा, फ़िल्म ‘ज़िला गोरखपुर’ में माननीय @myogiadityanath की छवि को खंडित करने वाले आपत्तिजनक पोस्टर पर आप सभी के आदेश पर विभूतिखंड थाने में निर्माताओं के ख़िलाफ़ मुक़दमा दर्ज करा दिया है। pic.twitter.com/zXuBBw0IOF
Loading...
ಈ ಸಿನಿಮಾದ ವಿವಾದ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿನೋದ್​ ತಿವಾರಿ ವಿರುದ್ಧ ಸಾಕಷ್ಟು ವಿರೋಧವೂ ಕೇಳಿ ಬಂದಿತ್ತು.ದೂರು ಸ್ವೀಕರಿಸಿರುವ ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಸಿನಿಮಾ ವಿವಾದ ಕೈಮೀರುತ್ತಿದೆ ಎಂದೆನಿಸಿದ ತಕ್ಷಣ ವಿನೋದ್​ ತಿವಾರಿ ಅವರು ಸಿನಿಮಾ ಪ್ರಾಜೆಕ್ಟ್​ ಅನ್ನೇ ನಿಲ್ಲಿಸುವ ನಿರ್ಧಾರ ಮಾಡಿರುವುದಾಗಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

'ಜಿಲ್ಲಾ ಗೋರಖ್​ಪುರ್​' ಸಿನಿಮಾದ ನಿರ್ಮಾಪಕ ವಿನೋದ್​ ತಿವಾರಿ


ಯೋಗಿ ಆದಿತ್ಯನಾಥ್ ಅವರು ಗೋರಖ್​ಪುರ ನಿವಾಸಿ, ಅವರಿಗೆ ಗೋವಿನೊಂದಿಗೆ ಅವಿನಾಭಾವ ಸಂಬಂಧವಿದೆ. ಅಲ್ಲದೆ ಇತ್ತೀಚೆಗೆ ಬಿಡುಗಡೆಯಾದ ಈ ಸಿನಿಮಾದ ಪೋಸ್ಟರ್​ನಲ್ಲೂ ಗೋರಖ್​ಪುರದಲ್ಲಿರುವ ಗೋರಖ್​ನಾಥ ದೇವಾಲಯದ ಒಂದು ತುಣುಕನ್ನು ತೋರಿಸಿದ್ದು, ಯೋಗಿಯೊಬ್ಬರು ಕೈಯಲ್ಲಿ ಗನ್​ ಹಿಡಿದು ನಿಂತಿರುವ ಚಿತ್ರವನ್ನು ಪೋಸ್ಟರ್​ನಲ್ಲಿ ಕಾಣಬಹುದಾಗಿದೆ.
First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...