ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾದೊಂದಿಗೆ 2022ರಲ್ಲಿ ಭಾರತೀಯ ಚಿತ್ರರಂಗದಲ್ಲಿ ಹೊಸ ಕ್ರೇಜ್ ಹುಟ್ಟಿಸಿದ್ದ ಜೀ ಸ್ಟುಡಿಯೋಸ್ (Zee Studios) 2023ರಲ್ಲಿ ಸೌತ್ ಮಾರ್ಕೆಟ್ನಲ್ಲಿ ಮೆಗಾ ರಿಲೀಸ್ಗಳನ್ನ ಕೊಡಲು ರೆಡಿಯಾಗಿದೆ. ಜೀ ಸ್ಟುಡಿಯೋಸ್ ವರ್ಲ್ಡ್ ಕ್ಲಾಸ್ ಕಂಟೆಂಟ್ಗಳೊಂದಿಗೆ (Content) ಜನರನ್ನು ರಂಜಿಸುತ್ತಲೇ ಬಂದಿದೆ. ಮನರಂಜನೆಯನ್ನು ಇನ್ನೊಂದು ಹಂತಕ್ಕೆ ತಲುಪಿಸಿರುವ ಜೀ ಸ್ಟುಡಿಯೋಸ್ ವಿಶೇಷವಾಗಿ 2022ರಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟಿದೆ. ಹಲವಾರು ಭಾಷೆಗಳಲ್ಲಿ (Languages), ಹಂತಗಳಲ್ಲಿ ಗಡಿಗಳನ್ನು ಮೀರಿ ಸಿನಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಜೀ ಸ್ಟುಡಿಯೋಸ್ ಹಿಂದೆ ಬಿದ್ದಿಲ್ಲ.
ಜೀ ಸ್ಟುಡಿಯೋಸ್ ವಿವಿಧ ಕಂಟೆಂಟ್ಗಳ ಮೂಲಕ ಪ್ರತಿ ಭಾರತೀಯ ಮನೆಯನ್ನೂ ತಲುಪುತ್ತಿದೆ. ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಜೀ ಸ್ಟುಡಿಯೋಸ್ ಕಡೆ ಜನರು ಈಗ ಸಾಕಷ್ಟು ನಿರೀಕ್ಷೆಯಿಂದ ನೋಡುತ್ತಿದ್ದಾರೆ.
ರಿಚ್ ಕಂಟೆಂಟ್ಗಳಿರುವ ಸೌತ್ ಸಿನಿಮಾಗಳು
ಅಂತಾರಾಷ್ಟ್ರೀಯ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್ಗಳಲ್ಲಿ ಅತ್ಯಧಿಕ ಭಾರತೀಯ ಸಿನಿಮಾಗಳನ್ನು ರೆಪ್ರೆಸೆಂಟ್ ಮಾಡಿದ ಹಿರಿಮೆ ಜೀ ಸ್ಟುಡಿಯೋಗೆ ಸಲ್ಲುತ್ತದೆ. 2022ರಲ್ಲಿ ದಕ್ಷಿಣ ಭಾರತದಲ್ಲಿ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳನ್ನು ಕೊಟ್ಟಿರುವ ಜೀ ಸ್ಟುಡಿಯೋಸ್ ಭೇಷ್ ಎನಿಸಿಕೊಂಡಿದೆ.
2021ರಲ್ಲಿ ಜೀ ಸ್ಟುಡಿಯೋಸ್ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಮಾತ್ರ 10 ಸಕ್ಸಸ್ಫುಲ್ ಹಿಟ್ ಸಿನಿಮಾಗಳನ್ನು ಕೊಟ್ಟಿದೆ. ಪ್ರೇಕ್ಷಕರ ಕಂಟೆಂಟ್ ಆಸಕ್ತಿ ದಿಢೀರ್ ಬದಲಾದಾಗ Zee ಸ್ಟುಡಿಯೋಸ್ ಭೌಗೋಳಿಕ ಅಡೆತಡೆಗಳನ್ನು ಮೀರಿ ಸೌತ್ ಸಿನಿಮಾ ಮಾರ್ಕೆಟ್ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ.
ಇದನ್ನೂ ಓದಿ: Vedha Film: ವೇದ ಸಿನಿಮಾದಲ್ಲಿ ಮಿಂಚಿದ ಶ್ವೇತಾ ಚಂಗಪ್ಪ; ‘ಕಾದಂಬರಿ’ ಅಭಿನಯ ಸೂಪರ್!
ಲಾಕ್ಡೌನ್ ಹಾಗೂ ಲಾಕ್ಡೌನ್ ನಂತರದ ಅವಧಿಯಲ್ಲಿ ಝೀ ಸ್ಟುಡಿಯೋ ವಲಿಮೈ, ಕಾಲಪುರಂ, ರಿಪಬ್ಲಿಕ್, ಇಟ್ಲು ಮರೆಡುಮಿಲಿ ಪ್ರಜಾನೀಕಂ, ಸೋಲೋ ಬ್ರಾತುಕೆ ಸೋ ಬೆಟರ್, ಬಂಗಾರರಾಜು, ದೃಶ್ಯ 2, ಹೆಡ್ಬುಶ್, ವೇದ(ರಿಲೀಸ್ ಆಗಿ ಸಕ್ಸಸ್ಫುಲ್ ಆಗಿ ಓಡುತ್ತಿರುವ ಶಿವರಾಜ್ಕುಮಾರ್ ಅವರ ಸಿನಿಮಾ), ಹಿಟ್ ಆಗಿದೆ.
2023ರಲ್ಲಿ ಬರುತ್ತೆ ಬಿಗ್ ಬಜೆಟ್ ಸಿನಿಮಾಗಳು
ಮುಂಬರುವ ವರ್ಷದಲ್ಲಿ ಕೆಲವು ಮೆಗಾ-ಬಜೆಟ್ ಸಿನಿಮಾಗಳನ್ನು ಜೀ ಸ್ಟುಡಿಯೋಸ್ ನೀಡಲಿದೆ. ಹಾಗಾಗಿ ಹೊಸ ವರ್ಷದಲ್ಲಿಯೂ ಪ್ರೇಕ್ಷಕರು ಜೀ ಸ್ಟುಡಿಯೋಸ್ನಿಂದ ಬಿಗ್ ರಿಲೀಸ್ ಎದುರು ನೋಡಬಹುದು. ಹಿಂದಿ, ಪಂಜಾಬಿ ಮತ್ತು ಮರಾಠಿ ಸಿನಿಮಾಗಳನ್ನು ನಿರ್ಮಿಸಲಿದೆ.
ಜೀ ಸ್ಟುಡಿಯೋಸ್ ಸೌತ್ ಇಂಡಸ್ಟ್ರಿಯಲ್ಲಿ ತಮಿಳಿನಲ್ಲಿ ಅಜಿತ್ ಕುಮಾರ್ ಅಭಿನಯದ ಥುನಿವು, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಅಭಿನಯದ ಕಿಂಗ್ ಆಫ್ ಕೋಥಾ, ಕಥರ್ಬಾಷಾ ಎಂದ್ರಾ ಮುಂತಾದ ಚಿತ್ರಗಳನ್ನು ನಿರ್ಮಿಸಲಿದೆ.
ತಮಿಳಿನಲ್ಲಿ ಆರ್ಯ ನಟಿಸಿದ ಮುತ್ತುರಾಮಲಿಂಗಂ, ಕನ್ನಡದಲ್ಲಿ ಜಗ್ಗೇಶ್ ನಟಿಸಿದ ರಂಗನಾಯಕ, ಸಮುದ್ರಕನಿ ನಟಿಸಿದ ವಿಮಾನ (ತಮಿಳು ಮತ್ತು ತೆಲುಗು ದ್ವಿಭಾಷಾ) ಸಿನಿಮಾ ನಿರ್ಮಿಸಲಿದೆ.
ಕನ್ನಡದ ವೇದ ಸಿನಿಮಾ ಸೂಪರ್ ಹಿಟ್
ಸ್ಯಾಂಡಲ್ವುಡ್ನಲ್ಲಿ ಕಾಂತಾರ ನಂತರ ವರ್ಷಾಂತ್ಯದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೆಣ್ಮಕ್ಕಳನ್ನು ಲೀಡ್ ರೋಲ್ಗಳಲ್ಲಿ ಕಾಣಲು ಸಾಧ್ಯ ಇರುವ ಈ ಸಿನಿಮಾ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ