Amulya Gowda: ನೀಳ ಕೂದಲೇ ಜೀವನದ ಖುಷಿ ಎಂದ ನಟಿ ಅಮೂಲ್ಯ ಗೌಡ! ಜಲಪಾತದ ಮುಂದೆ ಚಂದದ ವಿಡಿಯೋ

Amulya Gowda: ಕಮಲಿ ಧಾರವಾಹಿಯಿಂದ ಖ್ಯಾತಿ ಗಳಿಸಿದ ನಟಿ ಅಮೂಲ್ಯ ಗೌಡ ಸಹಜ ಸುಂದರಿ. ಈಗ ನಟಿ ಜಲಪಾತದ ಮುಂದೆ ನಿಂತಿರುವ ವಿಡಿಯೋ ಶೇರ್ ಮಾಡಿದ್ದಾರೆ.

ಅಮೂಲ್ಯ ಗೌಡ

ಅಮೂಲ್ಯ ಗೌಡ

  • Share this:
ಝೀ ವಾಹಿನಿಯಲ್ಲಿ ಪ್ರಸಾರವಾಗುವ ಕಮಲಿ ಧಾರವಾಹಿ ಮೂಲಕ ಅಮೂಲ್ಯ ಗೌಡ ಇಂದು ಚಿರಪರಿಚಿತ. ಕನ್ನಡ ಕಿರುತೆರೆ ಅಭಿಮಾನಿಗಳ ಮನದಲ್ಲಿ ಸ್ಥಾನ ಪಡೆದಿರುವ ನಟಿ ಅಮೂಲ್ಯ ಧಾರವಾಹಿಯಲ್ಲಿ ಸಿಂಪಲ್ ಆಗಿರೋ ಹಳ್ಳಿ ಹುಡುಗಿ ಪಾತ್ರ ಮಾಡಿದ್ರೂ ಇವರು ನಿಜ ಜೀವನದಲ್ಲಿ ಸಖತ್ ಮಾಡರ್ನ್. ಲಂಗ ದಾವಣಿ ಹಾಕಿ ಎರಡು ಜೆಡೆಯಲ್ಲಿ ಮಿಂಚುತ್ತಿದ್ದ ಕಮಲಿ ಪಾತ್ರ ಮಾಡುವ ಅಮೂಲ್ಯ ಗೌಡ ಅವರ ಇನ್​ಸ್ಟಾಗ್ರಾಮ್ ವಾಲ್ ನೋಡಿದರೆ ಅರೆ ಇವರೇ ಕಮಲಿಯಾ ಎಂದು ಮೂಗಿನ ಮೇಲೆ ಬೆರಳಿಡುತ್ತೀರಿ ನೀವು. ಹಾಗಿದೆ ನಟಿಯ ರಿಯಲ್ ಲೈಫ್ ಸ್ಟೈಲ್. ಸೀರಿಯಲ್​ನಲ್ಲಿ ಹಳ್ಳಿಯಿಂದ ಬಂದ ಹುಡುಗಿಯ ಪಾತ್ರ ಮಾಡುವ ಕಮಲಿ ತನಗೆ ಪಾಠ ಮಾಡುವ ಉಪನ್ಯಾಸಕರ ಪ್ರೀತಿಯಲ್ಲಿ ಬಿದ್ದು ಅವರನ್ನು ಮದುವೆಯಾಗುತ್ತಾಳೆ ಕೂಡಾ. ಇದೊಂಥಾರಾ ರೊಮ್ಯಾಂಟಿಕ್ ಕಾಲೇಜ್ ಲವ್​ಸ್ಟೋರಿಯಾಗಿ ಶುರುವಾಗಿ ಈ ಪ್ರೇಕ್ಷಕರ ಮನಸು ಗೆಲ್ಲುತ್ತಾ ಮುಂದೆ ಸಾಗಿದೆ.

ಜಲಪಾತದ ಮುಂದೆ ಅಮೂಲ್ಯ ಗೌಡ

ನಟಿ ಅಮೂಲ್ಯ ಗೌಡ ಇನ್​ಸ್ಟಾಗ್ರಾಮ್​ನಲ್ಲಿ ಇತ್ತೀಚೆಗೆ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಶಾರ್ಟ್ ಡ್ರೆಸ್​​ನಲ್ಲಿ ಧುಮ್ಮಿಕ್ಕುವ ಜಲಪಾತದ ಮುಂದೆ ಇನ್​ಸ್ಟಾಗ್ರಾಮ್ ರೀಲ್ಸ್ ಮಾಡಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಬ್ಲಾಕ್ ಡ್ರೆಸ್​ನಲ್ಲಿ ನೀಳ ಕೇಶರಾಶಿಯ ಸೌಂದರ್ಯ ತೋರಿಸಿರುವ ನಟಿಯ ವಿಡಿಯೋ ಈಗ ವೈರಲ್ ಆಗಿದೆ.


ಕೇಶ ರಾಶಿಯ ಕುರಿತು ವಿಶೇಷ ಆಸಕ್ತಿ

ನಟಿಗೆ ತನ್ನ ನೀಳ ಕೂದಲಿನ ಬಗ್ಗೆ ಹೆಚ್ಚಿನ ಪ್ರೀತಿ ಇದೆ. ಇದು ನಟಿಯ ವಿಡಿಯೋದಲ್ಲಿ ರಿವೀಲ್ ಆಗಿದೆ. ವಿಡಿಯೋವನ್ನು ಶೇರ್ ಮಾಡಿರುವ ಅಮೂಲ್ಯ ಗೌಟ ಹ್ಯಾಪಿ ಹೇರ್, ಹ್ಯಾಪಿ ಲೈಫ್ ಎಂದು ನಟಿ ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

ಹೇಗಿದೆ ವಿಡಿಯೋಗೆ ರಿಯಾಕ್ಷನ್?

ವಿಡಿಯೋಗೆ 21 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು ನೂರಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ. ಸೂಪರ್, ಡ್ರೀಮ್ ಗರ್ಲ್, ಲವ್ಲೀ, ಬ್ಯೂಟಿಫುಲ್ ಎಂದು ಬಹಳಷ್ಟು ಜನರು ಕಮೆಂಟ್ ಮಾಡಿ ನಟಿಯ ಬಗ್ಗೆ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ. ವಿಡಿಯೋ ಅಂತೂ ಸುಂದರವಾಗಿ ಮೂಡಿ ಬಂದಿದ್ದು ಜಲಪಾತದ ಸೌಂದರ್ಯದ ಜೊತೆಗೆ ನಟಿಯ ನೀಳ ಕೇಶರಾಶಿಯ ಸೌಂದರ್ಯವನ್ನೂ ಇಲ್ಲಿ ಕಾಣಬಹುದು.

ಇದನ್ನೂ ಓದಿ: Srinidhi Shetty: ಕೆಂಪು ಡ್ರೆಸ್​​ನಲ್ಲಿ ಕೆಜಿಎಫ್ ಚೆಲುವೆ! ಶ್ರೀನಿಧಿ ಸ್ಟೈಲ್ ಸೂಪರ್

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಮಲಿ' ಧಾರಾವಾಹಿ ಕರ್ನಾಟಕದಾದ್ಯಂತ ಸಾಕಷ್ಟು ಜನಪ್ರಿಯಗಳಿಸಿದ ಧಾರಾವಾಹಿಗಳಲ್ಲಿ ಒಂದು. ಕಮಲಿ ಸೀರಿಯಲ್​ನಲ್ಲಿ ಲೀಡ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದು ನಟಿ ಅಮೂಲ್ಯ ಓಂಕಾರ್. ಈ ಹಿಂದೆ ಅವರು 'ಅರಮನೆ' ಎಂಬ ಧಾರಾವಾಹಿಯಲ್ಲಿ ಮಾಡರ್ನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಆದರೆ 'ಕಮಲಿ' ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕರ್ನಾಟಕದ ಮನೆಮಾತಾಗಿದ್ದಾರೆ.

ಅಮೂಲ್ಯ ಅವರ ಹಿಟ್ ಧಾರವಾಹಿಗಳು

ಟ್ರೆಡಿಷ್ನಲ್ ಮತ್ತು ಮಾಡರ್ನ್ ಎರಡು ಪಾತ್ರಗಳನ್ನು ಸಲೀಸಾಗಿ ನಿರ್ವಹಿಸುವ ಅಮೂಲ್ಯ ಗೌಡ ಅವರು ಸ್ವಾತಿಮುತ್ತು, ಅರಮನೆ, ಪುನರ್ ವಿವಾಹ, ಕಮಲಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಪ್ರಸ್ತುತ ಕಮಲಿ ಧಾರಾವಾಹಿ ಮೂಲಕ ಕರ್ನಾಟಕದ ಮನೆಮಾತಾಗಿದ್ದಾರೆ.

ಇದನ್ನೂ ಓದಿ: Amulya Gowda: ತೆಲುಗು ಸೀರಿಯಲ್​ನತ್ತ ಮುಖ ಮಾಡಿದ ಕಮಲಿ, ಅಮೂಲ್ಯ ಗೌಡ ನಿಜ ಜೀವನದಲ್ಲಿ ಹೇಗಿರ್ತಾರೆ ಗೊತ್ತಾ?

ಅಮೂಲ್ಯ ಗೌಡ ಹುಟ್ಟಿದ್ದು ಜನವರಿ 8, 1993ರಲ್ಲಿ. ಮೂಲತಃ ಮೈಸೂರಿನವರು, ಇವರ ರ ತಂದೆಯ ಹೆಸರು ಓಂಕಾರ್ ಗೌಡ. ಇವರು ಬೆಳೆದದ್ದೆಲ್ಲ ಮೈಸೂರಿನಲ್ಲೇ. 2014 ರಲ್ಲಿ ಸ್ವಾತಿ ಮುತ್ತು ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನಾ ಲೋಕಕ್ಕೆ ಪಾದಾರ್ಪಣೆ ಮಾಡಿದರು.
Published by:Divya D
First published: