Gattimela Serial: ವೇದಾಂತ್ ವಸಿಷ್ಠ ಮುಂದೆ ಯಾವಾಗ ಬಯಲಾಗುತ್ತೆ ಸುಹಾಸಿನಿಯ ನಿಜ ಮುಖ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಗಟ್ಟಿಮೇಳ. ಪ್ರತಿದಿನ ಹೊಸ ಹೊಸ ತಿರುವುಗಳ ಮೂಲಕ ಪ್ರೇಕ್ಷಕರನ್ನು ಆರಂಭದಿಂದಲೂ ಈ ತಂಡವು ಯಶಸ್ವಿಯಾಗಿ ಮನರಂಜಿಸುತ್ತಾ ಬಂದಿದೆ. 

ವೇದಾಂತ್

ವೇದಾಂತ್

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಗಟ್ಟಿಮೇಳ (Gattimela). ಪ್ರತಿದಿನ ಹೊಸ ಹೊಸ ತಿರುವುಗಳ ಮೂಲಕ ಪ್ರೇಕ್ಷಕರನ್ನು ಆರಂಭದಿಂದಲೂ ಈ ತಂಡವು ಯಶಸ್ವಿಯಾಗಿ ಮನರಂಜಿಸುತ್ತಾ ಬಂದಿದೆ. ರೌಡಿ ಬೇಬಿ ಅಮೂಲ್ಯ (Amulya) ಮತ್ತು ವೇದಾಂತ (Vedanth) ನಡುವಿನ ಲವ್ ಸ್ಟೋರಿ ನೋಡಲು ಪ್ರೇಕ್ಷಕರು ಕಾಯುತ್ತಿರುತ್ತಾರೆ. ಅಮೂಲ್ಯ ವಸಿಷ್ಟ ಮನೆಯ ಸೊಸೆಯಾಗಿ ಹಾಗೂ ಮಂಜುನಾಥ್ ಮಗಳಾಗಿ ತನ್ನ ಕರ್ತವ್ಯವನ್ನು ಬಹಳ ಚೆನ್ನಾಗಿ ನಿಭಾಯಿಸಿಕೊಂಡು ಬರುತ್ತಿದ್ದಾಳೆ. ತನ್ನ ಮನೆಗೆ ತಂದೆ ಮಂಜುನಾಥ್ ವಾಚ್ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಇದೀಗ ಅಮೂಲ್ಯಳಿಗೆ ತಿಳಿದಿದೆ. ತಂದೆಗೆ ತಿಳಿಯದಂತೆ ತಂದೆಯ ಕರ್ತವ್ಯವನ್ನು ಬಹಳ ಚೆನ್ನಾಗಿ ಅಮೂಲ್ಯ ಮಾಡುತ್ತಿರುವುದು ಬಹಳ ಸಂತೋಷ.

  ಹೆತ್ತ ತಾಯಿಗೆ ಸಂಬಳ ಕೊಡಲು ಹೋದ ವೇದಾಂತ್

  ವೇದಾಂತ್ ತಾಯಿ ವೈದೇಹಿ ಇದೀಗ ಮನೆಯಲ್ಲಿ ಅಜ್ಜಿಯ ಸೇವೆ ಮಾಡುವ ಉದ್ದೇಶದಿಂದ ವಸಿಷ್ಟ ಮನೆಗೆ ಬಂದಿದ್ದಾಳೆ. ತನ್ನದೇ ಮನೆಯಲ್ಲಿ ಕೆಲಸದ ಹಾಳಾಗಿ ತನು ಮಕ್ಕಳ ಸಂತೋಷದಲ್ಲಿ ಭಾಗಿಯಾಗುವ ಉದ್ದೇಶವನ್ನು ವೈದೇಹಿ ಇಟ್ಟುಕೊಂಡಿದ್ದಾಳೆ.

  ಆದರೆ ನಿನ್ನೆ ಸಂಚಿಕೆಯಲ್ಲಿ ವೇದಾಂತ್ ವೈದೇಹಿಗೆ ತಾನು ಮಾಡಿದಂತಹ ಕೆಲಸಕ್ಕೆ ಸಂಬಳವಾಗಿ ದುಡ್ಡನ್ನು ಕೊಡಲು ಹೋಗುತ್ತಾನೆ. ಈ ದೃಶ್ಯವಂತೂ ಮನಕಲಕುವಂತೆ ಇದ್ದದ್ದು ಸುಳ್ಳಲ್ಲ.

  ಇದನ್ನೂ ಓದಿ: Shanti Kranti: ಶಾಂತಿ ಕ್ರಾಂತಿ ಮಾಡುವಾಗ ಪಟ್ಟ ಕಷ್ಟ ಅಷ್ಟಿಷ್ಟಲ್ಲ! ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಕ್ರೇಜಿಸ್ಟಾರ್ ಹೇಳಿದ್ದೇನು?

  ಸಿಕ್ಕಿಬೀಳುತ್ತಾಳಾ ಅದಿತಿ?

  ಅಮೂಲ್ಯಾಳ ತಂಗಿ ಅದಿತಿ ಮತ್ತು ವೇದಾಂತ ತಮ್ಮ ಧ್ರುವ ಪರಸ್ಪರ ಇಷ್ಟಪಡುತ್ತಿದ್ದಾರೆ ಆದರೆ ಈ ಬಗ್ಗೆ ಇನ್ನೂ ಮನೆಯಲ್ಲಿ ಯಾರಿಗೂ ತಿಳಿದಿರಲಿಲ್ಲ. ಧ್ರುವ ಕೋಮಾಕ್ಕೆ ಹೋದ ಬಳಿಕ ಇದೀಗ ಅದಿತಿ ದ್ರವನನ್ನು ನೋಡಿಕೊಳ್ಳಲು ನರ್ಸ್ ಆಗಿ ವಸಿಷ್ಟ ಮನೆಯನ್ನು ಸೇರಿದ್ದಾರೆ.

  ಈ ಬಗ್ಗೆ ಈಗಾಗಲೇ ವೇದಾಂತ್ ವಸಿಷ್ಠ ತಂಗಿ ಆದ್ಯಳಿಗೆ ತಿಳಿದು ಹೋಗಿದೆ‌. ಆದ್ಯ ಒಳ್ಳೆ ಮನಸ್ಸಿನ ಹುಡುಗಿ ಯಾಗಿರುವುದರಿಂದ ಅವರಿಬ್ಬರ ಪ್ರೀತಿಗೆ ಸಪೋರ್ಟ್ ಕೊಡುವುದಾಗಿ ಹೇಳಿದ್ದಾಳೆ.

  ಆದರೆ ನಿನ್ನೆ ಸಂಚಿಕೆಯಲ್ಲಿ ಆರತಿ ಮತ್ತು ಅಮ್ಮು ಯಾವುದೋ ಮಾತ್ರೆ ತೆಗೆದುಕೊಂಡು ಬಂದು ಇದರಲ್ಲಿ ತಲೆನೋವಿನ ಮಾತ್ರೆ ಯಾವುದೆಂದು ಅದಿತಿ ಬಳಿ ಕೇಳಿದ್ದಾರೆ. ಆದರೆ ಈ ಬಗ್ಗೆ ಏನು ತಿಳಿಯದ ಅದಿತಿ ಅಕ್ಕನವರ ಮುಂದೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಕಾಣಿಸುತ್ತಿದೆ. ಸೈಕಲ್ ಗ್ಯಾಪ್ ನಲ್ಲಿ ವಿಕ್ರಾಂತ್ ಬಂದು ಅದಿತಿಯನ್ನು ಸೇವ್ ಮಾಡಿದ್ದಾನೆ. ಆದರೆ ಕಾಂತನ ಬಳಿ ಕಾಲ್ ಮಾಡಿ ಬಗ್ಗೆ ಕೇಳಿದಾಗ ಕಾಂತ ಸತ್ಯ ಹೇಳುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.

  ಇದನ್ನೂ ಓದಿ: Kichcha Sudeep: ಡಿಕೆಡಿ ವೇದಿಕೆಗೆ ವಿಶೇಷ ಅತಿಥಿಯಾಗಿ ಕಿಚ್ಚ ಸುದೀಪ್​, ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ ನಟ

  ಅಪಾಯದಲ್ಲಿರುವ ಆರತಿ ಮತ್ತು ಮಗು

  ಇದೀಗ ವಶಿಷ್ಟ ಮನೆಯಲ್ಲಿ ಆರತಿ ಗರ್ಭಿಣಿ ಎಂಬ ವಿಚಾರ ತಿಳಿದ ಮೇಲಂತೂ ಸಂಭ್ರಮ ಮನೆ ಮಾಡಿದೆ.

  ಆರಂಭದಲ್ಲಿ ಆರತಿ ಮತ್ತು ಅಮ್ಮು ನಡುವೆ ಭಿನ್ನಾಭಿಪ್ರಾಯಗಳು ಎದುರಾಗಿದ್ದರೂ ತವರುಮನೆಯ ಕಷ್ಟ ನೋಡಿ ಮತ್ತು ಅಮೂಲ್ಯಳನ್ನು ಸರಿಯಾಗಿ ಅರ್ಥಮಾಡಿಕೊಂಡು ಆರತಿ ಇದೀಗ ಮತ್ತೆ ತಂಗಿ ಜೊತೆ ಅನ್ಯೋನ್ಯತೆಯಿಂದ ಇದ್ದಾಳೆ.

  ಇತ್ತೀಚಿಗಷ್ಟೇ ವೇದಾಂತ್ ಆರತಿಗೆ ಹುಟ್ಟುವ ಮಗುವಿಗೆ ಗಿಫ್ಟ್ ಆಗಿ ಹುಟ್ಟುವ ಮುನ್ನವೇ ಒಂದು ಶಾಲೆಯನ್ನು ಕಟ್ಟಿಸುತ್ತಿದ್ದಾನೆ.  ಆದರೆ ಇದನ್ನು ಕುತಂತ್ರಿ ಸುಹಾಸಿನಿ ಸಹಿಸಲು ಸಾಧ್ಯವಾಗುತ್ತಿಲ್ಲ. ಅದೇ ಕಾರಣಕ್ಕೆ ಆರತಿಯ ಜೀವ ತೆಗೆಯಲು ರೌಡಿಗಳನ್ನು ಸಹ ಕಳಿಸಿದ್ದಳು ಸುಹಾಸಿನಿ.

  ಆದರೆ ರೌಡಿಗಳ ವಿರುದ್ಧ ವೇದಾಂತ್ ಮತ್ತು ವಿಕ್ರಾಂತ್ ಹೋರಾಡಿ ಆರತಿಯನ್ನು ರಕ್ಷಿಸಿದ್ದಾರೆ. ಈ ಕೊಲೆ ಪ್ರಯತ್ನ ತನಗೆ ಬಿಸ್ನೆಸ್ ನಲ್ಲಿ ಯಾರು ಆಗದವರು ಮಾಡಿದ್ದಾರೆ ಎಂದು ವೇದಾಂತ್ ನಂಬಿದ್ದಾನೆ. ಆದರೆ ಅಮೂಲ್ಯ ಮತ್ತು ವಿಕ್ರಾಂತ್ ಮನಸ್ಸಲ್ಲಿ ಈ ಬಗ್ಗೆ ಸಂಶಯದ ಹುಳ ಸುತ್ತಾಡುತ್ತಾ ಇದೆ.
  Published by:Swathi Nayak
  First published: