• Home
 • »
 • News
 • »
 • entertainment
 • »
 • Anchor Anushree: ಜೀ ಕುಟುಂಬ ಅವಾರ್ಡ್ಸ್​ನಲ್ಲಿ ಅನುಶ್ರೀಗೆ ಜನಪ್ರಿಯ ನಿರೂಪಕಿ ಪ್ರಶಸ್ತಿ, ಅಶ್ವಿನಿ ಕೈಯಿಂದ ಪ್ರಶಸ್ತಿ ಪಡೆದು ಕಣ್ಣೀರು

Anchor Anushree: ಜೀ ಕುಟುಂಬ ಅವಾರ್ಡ್ಸ್​ನಲ್ಲಿ ಅನುಶ್ರೀಗೆ ಜನಪ್ರಿಯ ನಿರೂಪಕಿ ಪ್ರಶಸ್ತಿ, ಅಶ್ವಿನಿ ಕೈಯಿಂದ ಪ್ರಶಸ್ತಿ ಪಡೆದು ಕಣ್ಣೀರು

 ಜನಪ್ರಿಯ ನಿರೂಪಕಿ ಪ್ರಶಸ್ತಿ ಅನುಶ್ರೀಗೆ

ಜನಪ್ರಿಯ ನಿರೂಪಕಿ ಪ್ರಶಸ್ತಿ ಅನುಶ್ರೀಗೆ

ಅನುಶ್ರೀಗೆ ಜನ ಮೆಚ್ಚಿದ ನಿರೂಪಕಿ ಪ್ರಶಸ್ತಿಯನ್ನು ದಿವಂಗತ ನಟ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನೀಡಿದ್ದಾರೆ. ನನಗೆ ಖುಷಿಯಾಯ್ತು ಎಂದು ಪ್ರಶಸ್ತಿಯನ್ನು ಅಪ್ಪು ಸರ್ಗೆ ಅರ್ಪಿಸಿ. ವೇದಿಕೆ ಮೇಲೆ ಭಾವುಕರಾದ್ರು.

 • News18 Kannada
 • 4-MIN READ
 • Last Updated :
 • Karnataka, India
 • Share this:

  ಅಭಿಮಾನದ ಪ್ರಶಸ್ತಿಯ ಮೆರುಗಲ್ಲಿ ಸಂಬಂಧಗಳನ್ನು ಸಂಭ್ರಮಿಸುವ ಹಬ್ಬ ಜೀ ಕುಟುಂಬ (Zee Family) ಅವಾರ್ಡ್ಸ್ (Awards). ಶುಕ್ರವಾರ, ಶನಿವಾರ, ಭಾನುವಾರ ಸಂಜೆ 6.30ಕ್ಕೆ ರಿಂದ ಪ್ರಸಾರವಾಗಿದೆ. ಕಲಾವಿದರಿಗೆ ಪ್ರಶಸ್ತಿಯನ್ನು ನೀಡಲು ನಟಿ ಮಾಲಾಶ್ರೀ, ನಟಿ ಪ್ರಿಯಾಂಕಾ ಉಪೇಂದ್ರ, ಗಾಯಕ ಗುರುಕಿರಣ್, ನಟ ರಂಗಾಯಣ ರಘು ಬಂದಿದ್ದರು. ಅಲ್ಲದೇ ಕಾರ್ಯಕ್ರಮಕ್ಕೆ ಪ್ರಶಸ್ತಿ ನೀಡಲು ನಟ ಡಾಲಿ ಧನಂಜಯ್ ಸಹ ಬಂದಿದ್ದರು. ಕಲಾವಿದರೆಲ್ಲಾ ಖುಷಿಯಾಗಿದ್ದರು. ಜನಪ್ರಿಯ ನಿರೂಪಕಿ (Anchor) ಅವಾರ್ಡ್ ಅನುಶ್ರೀಗೆ ಸಿಕ್ಕಿದೆ. ಆ ಅವಾರ್ಡ್‍ನ್ನು ಅನುಶ್ರೀಗೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನೀಡಿದ್ದಾರೆ. ಅನುಶ್ರೀ ಪ್ರಶಸ್ತಿಯನ್ನು ಅಪ್ಪು ಸರ್ ಗೆ ಅರ್ಪಿಸಿ ವೇದಿಕೆಯಲ್ಲಿ ಭಾವುಕರಾಗಿದ್ದಾರೆ (Emotional).


  ಜನ ಮೆಚ್ಚಿದ ನಿರೂಪಕಿ
  ಅನುಶ್ರೀ ಜೀ ಕನ್ನಡದಲ್ಲಿ ಪ್ರಸಾರವಾಗುವ ಹಲವು ಕಾರ್ಯಕ್ರಮಗಳಿಗೆ ನಿರೂಪಣೆ ಮಾಡ್ತಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸರಿಗಪಮ ಕಾರ್ಯಕ್ರಮಗಳನ್ನು ಅದ್ಭತವಾಗಿ ನಡೆಸಿ ಕೊಡ್ತಾರೆ. ಅನುಶ್ರೀ ನಿರೂಪಣೆ ಮಾಡ್ತಾ ಇದ್ರೆ ಅದನ್ನು ನೋಡೋಕೆ ಚೆಂದ. ಸ್ಟೇಜ್ ಯಾವಾಗಲೂ ಲವಲವಿಕೆಯಿಂದ ಕೂಡಿರುವಂತೆ ಮಾಡ್ತಾಳೆ ನಿರೂಪಕಿ ಅನುಶ್ರೀ. ಈ ಬಾರಿ ಜನ ಮೆಚ್ಚಿದ ನಿರೂಪಕಿ ಅವಾರ್ಡ್ ಅನುಶ್ರೀಗೆ ಬಂದಿದೆ.


  ಅಪ್ಪು ನೆನೆದು ಭಾವುಕ
  ಅನುಶ್ರೀಗೆ ಜನ ಮೆಚ್ಚಿದ ನಿರೂಪಕಿ ಪ್ರಶಸ್ತಿಯನ್ನು ದಿವಂಗತ ನಟ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನೀಡಿದ್ದಾರೆ. ಅದಕ್ಕೆ ಅನುಶ್ರೀ ತುಂಬಾ ಖುಷಿಯಾದ್ಲು. ನನ್ನ ನೆಚ್ಚಿನ ನಟನ ಪತ್ನಿ ಪ್ರಶಸ್ತಿ ನೀಡಿದ್ದು ನನಗೆ ಖುಷಿಯಾಯ್ತು ಎಂದು ಪ್ರಶಸ್ತಿಯನ್ನು ಅಪ್ಪು ಸರ್ಗೆ ಅರ್ಪಿಸಿ. ವೇದಿಕೆ ಮೇಲೆ ಭಾವುಕರಾದ್ರು.


  ಇದನ್ನೂ ಓದಿ: Malathi Sar Deshpande: ಮಗಳಿಗೆ ದೋಸ್ತಿ ಎಂದು ಹೆಸರಿಟ್ಟ ಸತ್ಯ ಸೀರಿಯಲ್‍ನ ಸೀತಾ, ಕಾರಣವೇನು? 


  ಅನುಶ್ರೀ ಹೇಳಿದ್ದೇನು?
  'ಅಪ್ಪು ಸರ್ ಲವ್ ಯೂ. ಥ್ಯಾಂಕ್ಸ್ ಸರ್. ನೀವೂ ಯಾವಾಗಲೂ, ಎಲ್ಲಾ ಟೈಮ್‍ನಲ್ಲೂ ಬೆನ್ನಲ್ಲಿ ನಿಂತಿದ್ದೀರಿ. ನೀವು ನನ್ನ ದೊಡ್ಡ ಸ್ಟ್ರೆಂಥ್. ಸಂಜೆ ಆಗ್ತಾ, ಆಗ್ತಾ, ಅಯ್ಯೋ ಇಷ್ಟೊಂದು ಜನ ಸೇರ್ತಾ ಇದಾರೆ. ಇಷ್ಟು ಜನಕ್ಕೆ ಮಾತನಾಡ್ತಾ ಇದ್ದೇವೆ. ಇಷ್ಟು ಜನಕ್ಕೆ ನಾವು ಕೆಲಸ ಮಾಡ್ತಾ ಇದ್ದೇವೆ.

  View this post on Instagram


  A post shared by Zee Kannada (@zeekannada)
  Zee Kannada, Zee Kutumba Award, Jana Priya Anchor Anushree, ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಜನಪ್ರಿಯ ನಿರೂಪಕಿ ಪ್ರಶಸ್ತಿ ಅನುಶ್ರೀಗೆ, ಅಶ್ವಿನಿ ಕೈಯಿಂದ ಪ್ರಶಸ್ತಿ ಪಡೆದು ಕಣ್ಣೀರು, Kannada news, Karnataka news,
  ಅನುಶ್ರೀ


  ಯಾರಿಗೆ ಮಾಡ್ತಾ ಇದೀವಿ. ಅದನ್ನು ಅವರು ನೋಡ್ತಾರಾ ಅನ್ನೋ ಸಂಕಟ ತುಂಬಾ ಕಾಡ್ತಾ ಇರುತ್ತೆ. ಎಮೋಷನಲ್ ತುಂಬಾ ಸ್ಟ್ರೆಸ್ ಆಗುತ್ತೆ. ಪ್ರತಿಯೊಂದು ಹೆಜ್ಜೆಯಲ್ಲೂ ಅಶ್ವಿನಿ ಮ್ಯಾಮ್ ನಮಗೆ ತುಂಬಾ ಶಕ್ತಿ ನೀಡಿದ್ದಾರೆ. ಇವತ್ತು. ಈ ಕ್ಷಣ ನನ್ನ ಜೀವನದ ಬೆಸ್ಟ್ ಮೂಮೆಂಟ್ ಮಾಡಿದ್ದಕ್ಕೆ ಥ್ಯಾಂಕ್ಯೂ'.


  ಇದನ್ನೂ ಓದಿ: Actress Deepa Iyer: ಬಿಗ್ ಬಾಸ್‍ನ ಸಾನ್ಯಾ ಐಯ್ಯರ್ ಅಮ್ಮ ದೀಪಾ ಐಯ್ಯರ್ ನಟಿ, ನಿರೂಪಕಿ!


  ಯಾರಿಗೆ ಪ್ರಶಸಿ ಲಭಿಸಿತು?
  ಪಾರು ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಅಣ್ಣ ಪಾತ್ರ ಮಾಡುತ್ತಿರುವ ವೀರಯ್ಯ ಅಂದ್ರೆ ಎಸ್. ನಾರಾಯಣ್ ಅವರಿಗೆ ರಂಗಾಯಣ ರಘು ಅವರು ಪ್ರಶಸ್ತಿ ನೀಡಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ನಟಿ ಅನು ಸಿರಿಮನೆಗೆ ಜನಪ್ರಿಯ ನಾಯಕಿ ನಟಿ ಪ್ರಶಸ್ತಿ ದೊರಕಿದೆ. ಸತ್ಯ ಧಾರಾವಾಹಿಯಿಂದ ಸತ್ಯಾಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಪಡೆದು ಇಬ್ಬರೂ ಖುಷಿಯಾಗಿದ್ದಾರೆ.


  Zee Kannada, Zee Kutumba Award, Jana Priya Anchor Anushree, ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಜನಪ್ರಿಯ ನಿರೂಪಕಿ ಪ್ರಶಸ್ತಿ ಅನುಶ್ರೀಗೆ, ಅಶ್ವಿನಿ ಕೈಯಿಂದ ಪ್ರಶಸ್ತಿ ಪಡೆದು ಕಣ್ಣೀರು, Kannada news, Karnataka news,
  ಅನುಶ್ರೀ


  ಈ ಬಾರಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಕ್ಕೆ ನಟ ಶಿವ ರಾಜ್ ಕುಮಾರ್ ಮಹಾ ಗುರುವಾಗಿ ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಶಿವಣ್ಣರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯ್ತು.ನಟ ಶಿವರಾಜ್ ಕುಮಾರ್ ಅವರಿಗೆ, ನಟ ರವಿಚಂದ್ರನ್ ಅವರು ಜೀ ಕುಟುಂಬದ ವಿಶೇಷ ಅವಾರ್ಡ್ ನ್ನು ಕೊಟ್ಟಿದ್ದಾರೆ.

  Published by:Savitha Savitha
  First published: