ಜೀ ಕನ್ನಡದಲ್ಲಿ ಭಾನುವಾರ ಮತ್ತು ಶನಿವಾರ ರಾತ್ರಿ 09 ಗಂಟೆಗೆ ವೀಕೆಂಡ್ ವಿತ್ ರಮೇಶ್ ಸೀಸನ್ ಕಾರ್ಯಕ್ರಮ ಪ್ರಸಾರವಾಗ್ತಿದೆ. ಐದನೇ ವಾರದ 6ನೇ ಅತಿಥಿಯಾಗಿ ಶನಿವಾರ ನಟ ಅವಿನಾಶ್ ಬಂದಿದ್ದರು. ಹಿರಿಯ ನಟ ಅವಿನಾಶ್ ಹಲವು ದಶಕಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈಗಲೂ ಬಹು ಬೇಡಿಕೆಯ ಪೆÇೀಷಕ ನಟರಲ್ಲಿ ಒಬ್ಬರಾಗಿದ್ದಾರೆ. ಅವಿನಾಶ್ ಸಹ ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದವರು.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರದಮಲ್ಲಿ ನಟ ಅವಿನಾಶ್ ರಜನಿಕಾಂತ್ ಜೊತೆ ನಟಿಸಿದ ಅನುಭವವನ್ನು ಹೇಳಿಕೊಂಡಿದ್ದಾರೆ. ರಜನಿಕಾಂತ್ ಜೊತೆ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ಆಕ್ಟ್ ಮಾಡ್ತೀನಿ ಅಂತ ನಾನು ಕನಸು ಕೂಡ ಕಂಡಿರಲಿಲ್ಲ. ಆಪ್ತಮಿತ್ರ ಆದ್ಮೇಲೆ ಅದರ ರೀಮೇಕ್‍ನಲ್ಲಿ ಅವಿನಾಶ್ ಅವರೇ ನಟಿಸಬೇಕು ಅಂತ ರಜನಿಕಾಂತ್ ಹೇಳ್ತಿದ್ದಾರೆ ಅಂತಲೇ ಸುದ್ದಿ ಬಂತು. ಅದನ್ನು ಕೇಳಿ ನನಗೆ ತುಂಬಾ ಖುಷಿಯಾಯ್ತು ಎಂದು ಹೇಳಿದ್ದಾರೆ.
'ಪಿ.ವಾಸು ಅವರೂ ಕೂಡ ರಜನಿಕಾಂತ್ ಹೇಳ್ತಿದ್ದಾರೆ ನೀವೇ ಮಾಡಿ ಎಂದರು. ನನಗೆ ಸರ್‍ಪ್ರೈಸ್ ಆಯ್ತು. ಮೊದಲನೇ ದಿನ ಶೂಟಿಂಗ್‍ಗೆ ಹೋದೆ. 'ಚಂದ್ರಮುಖಿ' ಸೆಟ್‍ನಲ್ಲೇ ನಾನು ಮೊದಲನೇ ಬಾರಿಗೆ ರಜನಿಕಾಂತ್ ಅವರನ್ನ ನೋಡಿದ್ದು' ಎಂದು ಅವಿನಾಶ್ ಹೇಳಿದ್ದಾರೆ.
ಆಪ್ತಮಿತ್ರ ಚಿತ್ರದಲ್ಲಿ ಅವಿನಾಶ್ ಅವರು ರಾಮಚಂದ್ರ ಆಚಾರ್ಯರ ಪಾತ್ರವನ್ನು ಮಾಡಿದ್ದರು. ಸಿನಿಮಾದಲ್ಲಿ ಅದೊಂದು ಮುಖ್ಯ ಪಾತ್ರವಾಗಿತ್ತು. ಅವಿನಾಶ್ ಅವರು ಆ ಪಾತ್ರವನ್ನು ಅದ್ಭುತವಾಗಿ ಮಾಡಿದ್ರು.
ಅವಿನಾಶ್ ನಟನೆ ನೋಡಿದ ರಜನಿಕಾಂತ್ ನಮ್ಮ ಸಿನಿಮಾದಲ್ಲೂ ಅವರೇ ನಟಿಸಬೇಕು ಎಂದು ಹೇಳಿದ್ರಂತೆ. ಅಲ್ಲದೇ ಇಲ್ಲೊಂದು ಸಮಸ್ಯೆ ಖಂಡಿತಾ ಇದೇ ಎನ್ನುವ ಡೈಲಾಗ್ ಎಲ್ಲೆಡೆ ವೈರಲ್ ಆಗಿತ್ತು.
37 ವರ್ಷಗಳ ಸಿನಿ ಜರ್ನಿಯಲ್ಲಿ ಅವಿನಾಶ್ ಅವರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಅವಿನಾಶ್ ಅವರು ಶನಿವಾರದ ಕಾರ್ಯಕ್ರಮದಲ್ಲಿ ತಮ್ಮ ಜೀವನದ ಪಯಣದ ಬಗ್ಗೆ ತಿಳಿಸಿದ್ದಾರೆ. ಭಾನುವಾರ ಮಂಡ್ಯ ರಮೇಶ್ ಅವರು ಸಂಚಿಕೆ ಪ್ರಸಾರವಾಗಲಿದೆ.
top videos
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ