Paaru Serial: ಆದಿಯ ಎರಡನೇ ಮದುವೆ ಯೋಗ ತಡೆಯುವ ಅನಿವಾರ್ಯತೆಯಲ್ಲಿ ಅಖಿಲಾಂಡೇಶ್ವರಿ, ಸಕ್ಸಸ್ ಆಗುತ್ತಾ ಪ್ಲ್ಯಾನ್?

ಅಖಿಲಾಂಡೇಶ್ವರಿ ತನ್ನ ಮಗ ಆದಿತ್ಯನ ಜಾತಕವನ್ನು ಗುರುಗಳಿಗೆ ತೋರಿಸಿದ್ದಳು. ಆಗ ಆದಿತ್ಯನ ಜಾತಕದಲ್ಲಿ ಎರಡನೇ ಮದುವೆ ಯೋಗ ಇದೆ ಎಂದು ಗುರುಗಳು ಹೇಳ್ತಾರೆ. ಅದನ್ನು ಕೇಳಿ ಅಖಿಲಾ ಶಾಕ್ ಆಗಿ, ಅದನ್ನು ಹೇಗಾದ್ರೂ ತಡೆಯುವ ಪ್ರಯತ್ನದಲ್ಲಿ ಇದ್ದಾಳೆ.

ಪಾರು

ಪಾರು

  • Share this:
    ಜೀ ಕನ್ನಡದಲ್ಲಿ (Zee Kannada) ಸಂಜೆ 6.30ಕ್ಕೆ ಪ್ರಸಾರವಾಗುತ್ತಿರುವ ಪಾರು (Paaru) ಸೀರಿಯಲ್ (Serial) ಹಲವಾರು ಜನರ ಮನಸ್ಸು ಗೆದ್ದಿದೆ. ದಿನಕ್ಕೊಂದು ತಿರುವಿನೊಂದಿಗೆ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಅಖಿಲಾಂಡೇಶ್ವರಿ ಪಾತ್ರದಲ್ಲಿರುವ ವಿನಯ್ ಪ್ರಸಾದ್ ಅಭಿನಯ ನೋಡೋದೇ ಒಂದು ಚೆಂದ. ಅರಸನ ಕೋಟೆಯನ್ನು ಬೆಳೆಸುತ್ತಾ, ತನ್ನ ಮಕ್ಕಳನ್ನು ಬೆಳೆಸುತ್ತ, ತನ್ನ ಕೋಟೆಯನ್ನು ಭದ್ರಮಾಡಿಕೊಳ್ಳುತ್ತಾ ಮುನ್ನೆಡೆಯುತ್ತಿದ್ದಾರೆ. ಸಂಸಾರದ (Family), ಜೊತೆ ಕಂಪನಿಯನ್ನು (Company) ನಡೆಸಿಕೊಂಡು ಹೋಗುತ್ತಿದ್ದಾಳೆ. ಅಖಿಲಾ ಹಿರಿಯ ಪುತ್ರ ಅಮ್ಮನ ವಿರೋಧದ ನಡುವೆಯೂ ಪಾರ್ವತಿಯನ್ನು ಮದುವೆ ಆಗಿರುತ್ತಾನೆ. ಇಷ್ಟು ದಿನ ಪಾರ್ವತಿಯನ್ನು ಸೊಸೆ ಎಂದು ಅಖಿಲಾ ಒಪ್ಪಿರಲಿಲ್ಲ. ಈಗ ಸೊಸೆ ಎಂದು ಒಪ್ಪಿಕೊಳ್ಳಲು ತಯಾರಾಗಿದ್ದಾಳೆ. ಆದ್ರೆ ಆದಿತ್ಯನಿಗೆ ಎರಡನೇ ಮದುವೆ ಯೋಗ ಇದೆ ಎಂದು ಕೇಳಿ ಅಖಿಲಾ ಕಂಗಾಲಾಗಿದ್ದಾಳೆ.

    ಪಾರ್ವತಿಯನ್ನು ಸೊಸೆ ಎಂದು ಒಪ್ಪಿಕೊಂಡಿದ್ದಿಲ್ಲ ಅಖಿಲಾ‘

    ಪಾರು ಮೊದಲು ಅಖಿಲಾಂಡೇಶ್ವರಿ ಮನೆಯಲ್ಲಿ ಕೆಲಸ ಮಾಡಿಕೊಂಡು ಇರುತ್ತಾಳೆ. ಆಗ ಅಖಿಲಾ ದೊಡ್ಡ ಮಗ ಆದಿತ್ಯನಿಗೆ ಪಾರು ಮೇಲೆ ಲವ್ ಆಗುತ್ತೆ. ಪಾರ್ವತಿಗೂ ಆದಿತ್ಯ ಅಂದ್ರೆ ಇಷ್ಟ ಇರುತ್ತೆ. ಅದಕ್ಕೆ ಇಬ್ಬರು ಅಖಿಲಾಂಡೇಶ್ವರಿಗೆ ಹೇಳದೇ ಮದುವೆ ಆಗಿರುತ್ತಾರೆ. ಅದಕ್ಕೆ ನಂಬಿಕೆ ಉಳಿಸಿಕೊಳ್ಳಲಿಲ್ಲ ಎಂದು ಪಾರು ಮತ್ತು ಆದಿತ್ಯನನ್ನು ಅಖಿಲಾಂಡೇಶ್ವರಿ ಮಾತನಾಡಿಸುವುದನ್ನು ಬಿಟ್ಟಿದ್ದಾರೆ.

    Zee Kannada serial, Kannada serial, Paaru serial today episode, Paaru serial cast, Second Marriage to hero, ಪಾರು ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಅಖಿಲಾಂಡೇಶ್ವರಿ


    ಪಾರ್ವತಿಯನ್ನು ಸೊಸೆ ಎಂದು ಒಪ್ಪಿಕೊಂಡಿರುವುದಿಲ್ಲ. ಈಗ ಆಕೆಯನ್ನು ಸೊಸೆ ಎಂದು ಒಪ್ಪಿಕೊಳ್ಳಲು ತೀರ್ಮಾನ ಮಾಡಿದ್ದಾಳೆ. ಆದ್ರೆ ಆದಿತ್ಯನಿಗೆ ಎರಡನೇ ಮದುವೆ ಯೋಗ ಇರೋದು ತಿಳಿದಿದೆ.

    ಆದಿಗೆ ಎರಡನೇ ಮದುವೆ ಯೋಗ
    ಅಖಿಲಾಂಡೇಶ್ವರಿ ತನ್ನ ಮಗ ಆದಿತ್ಯನ ಜಾತಕವನ್ನು ಗುರುಗಳಿಗೆ ತೋರಿಸಿದ್ದಳು. ಆಗ ಆದಿತ್ಯನ ಜಾತಕದಲ್ಲಿ ಎರಡನೇ ಮದುವೆ ಯೋಗ ಇದೆ ಎಂದು ಗುರುಗಳು ಹೇಳ್ತಾರೆ. ಅದನ್ನು ಕೇಳಿ ಅಖಿಲಾ ಶಾಕ್ ಆಗಿ, ಅದನ್ನು ಹೇಗಾದ್ರೂ ತಡೆಯುವ ಪ್ರಯತ್ನದಲ್ಲಿ ಇದ್ದಾಳೆ.

    ಇದನ್ನೂ ಓದಿ: Olavina Nildana: ಸಿದ್ಧಾಂತ್‍ಗೆ ಅವಮಾನ ಮಾಡಲು ಪಾಲಾಕ್ಷನ ಕುತಂತ್ರ ಬುದ್ಧಿ! ಕಾಲೇಜಿನಿಂದ ಡಿಬಾರ್ ಆಗ್ತಾನಾ ಸಿದ್ದು?

    ಮನೆಯವರಿಗೆಲ್ಲಾ ರಕ್ತ ಪರೀಕ್ಷೆ
    ಅಖಿಲಾಂಡೇಶ್ವರಿ ಮನೆಯವರಿಗೆಲ್ಲಾ ರಕ್ತ ಪರೀಕ್ಷೆ ಮಾಡಿಸುತ್ತಿದ್ದಾರೆ. ಮನೆಗೆ ಡಾಕ್ಟರ್ ಬಂದು ರಕ್ತದ ಸ್ಯಾಂಪಲ್ ತೆಗೆದುಕೊಂಡು ಹೋಗಿದ್ದಾರೆ. ಅಖಿಲಾ ಡಾಕ್ಟರ್ ಬಳಿ ತನ್ನ ಸೊಸೆ ಪಾರ್ವತಿಯ ರಕ್ತ ಪರೀಕ್ಷೆಯ ರಿಪೋರ್ಟ್ ಬೇಕು. ಎಲ್ಲಾ ರೀತಿಯ ಟೆಸ್ಟ್ ಬೇಕಾದ್ರೆ ಮಾಡಿ ಎನ್ನುತ್ತಾಳೆ. ಇದನ್ನು ಕೇಳಿಸಿಕೊಂಡ ಅಖಿಲಾ ಪತಿ ರಘು ಆತಂಕಗೊಂಡಿದ್ದಾನೆ.

    ಪಾರ್ವತಿ ಬಗ್ಗೆ ನಿನ್ನ ಮನಸ್ಸಿನಲ್ಲಿ ಏನಿದೆ ಹೇಳು ಎಂದು ಪ್ರಶ್ನೆ?
    ಅಖಿಲಾ ಡಾಕ್ಟರ್ ಬಳಿ ಮಾತನಾಡುತ್ತಿರುವುದನ್ನು ಆದಿತ್ಯ, ರಘು ಇಬ್ಬರು ಕೇಳಿಸಿಕೊಂಡಿದ್ದಾರೆ. ಅದಕ್ಕೆ ರಘು, ಅಖಿಲಾಂಡೇಶ್ವರಿಯನ್ನು ಪ್ರಶ್ನೆ ಮಾಡುತ್ತಿದ್ದಾನೆ. ನನ್ನ ಮೇಲೆ ಆಣೆ ಇಟ್ಟು ಹೇಳು, ಪಾರ್ವತಿ ಬಗ್ಗೆ ನಿನ್ನ ಮನಸ್ಸಿನಲ್ಲಿ ಏನಿದೆ ಎಂದು ಎನ್ನುತ್ತಾನೆ.

    ಇದನ್ನೂ ಓದಿ: Gattimela: ಧ್ರುವನನ್ನು ಸಾಯಿಸಲು ಸುಹಾಸಿನಿಗೆ ಆರ್ಡರ್ ಮಾಡಿದ ಅಗ್ನಿ! ತಮ್ಮನನ್ನು ಉಳಿಸಿಕೊಳ್ತಾರಾ ವೇದಾಂತ್, ವಿಕ್ರಾಂತ್?

    ಅದಕ್ಕೆ ಅಖಿಲಾ, ಚಿಂತೆ ಇರೋದು ಪಾರ್ವತಿ ಬಗ್ಗೆ ಅಲ್ಲ. ಆದಿತ್ಯನ ಬಗ್ಗೆ. ಆದಿ ಜಾತಕದಲ್ಲಿ ಎರಡನೇ ಮದುವೆ ಯೋಗ ಇದೆ. ಅದನ್ನು ತಡೆಯಲು ಈ ರೀತಿ ಮಾಡುತ್ತಿದ್ದೇನೆ ಎನ್ನುತ್ತಾಳೆ.

    Zee Kannada serial, Kannada serial, Paaru serial today episode, Paaru serial cast, Second Marriage to hero, ಪಾರು ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ರಘು


    ಆದಿತ್ಯನಿಗೆ ಎರಡನೇ ಮದುವೆ ಯೋಗ ಇರೋದು ಪಾರ್ವತಿಗೆ ಗೊತ್ತಾಗುತ್ತಾ? ಗೊತ್ತಾದ್ರೆ ಏನ್ ಕಥೆ? ಇದನ್ನು ತಡೆಯಲು ಅಖಿಲಾಂಡೇಶ್ವರಿ ಏನ್ ಪ್ಲ್ಯಾನ್ ಮಾಡಿದ್ದಾಳೆ? ಎಲ್ಲವನ್ನೂ ನೋಡಲು ಪಾರು ಸೀರಿಯಲ್ ನೋಡಬೇಕು.
    Published by:Savitha Savitha
    First published: