• Home
 • »
 • News
 • »
 • entertainment
 • »
 • Super Queen: ಟ್ಯಾಟೂ ಹಾಕಿಸಿಕೊಂಡು ಅಮ್ಮನಿಗೆ ಸರ್ಪ್ರೈಸ್ ನೀಡಿದ ಗೀತಾ ಭಟ್!

Super Queen: ಟ್ಯಾಟೂ ಹಾಕಿಸಿಕೊಂಡು ಅಮ್ಮನಿಗೆ ಸರ್ಪ್ರೈಸ್ ನೀಡಿದ ಗೀತಾ ಭಟ್!

ಟ್ಯಾಟೋ ಹಾಕಿಸಿಕೊಂಡು ಅಮ್ಮನಿಗೆ ಸಪ್ರೈಸ್ ನೀಡಿದ ಗೀತಾ ಭಟ್!

ಟ್ಯಾಟೋ ಹಾಕಿಸಿಕೊಂಡು ಅಮ್ಮನಿಗೆ ಸಪ್ರೈಸ್ ನೀಡಿದ ಗೀತಾ ಭಟ್!

ಅಮ್ಮಂದಿರ ರೌಂಡ್ ಗೆ ಗೀತಾ ಭಟ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದನ್ನು ನೋಡಿ ಗೀತಾ ಅವರ ತಾಯಿ ತುಂಬಾ ಖುಷಿ ಆಗಿದ್ದಾರೆ. ಅಷ್ಟೊಂದು ನೋವಾದ್ರೂ ಟ್ಯಾಟೂ ಹಾಕಿಸಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.

 • News18 Kannada
 • 4-MIN READ
 • Last Updated :
 • Karnataka, India
 • Share this:

  ಜೀ ಕನ್ನಡ (Zee Kannada) ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ (Reality Show) ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈಗಾಗಲೇ ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಶ್ರೀರಸ್ತು ಶುಭಮಸ್ತು, ಜೊತೆ ಜೊತೆಯಲಿ, ಸತ್ಯ, ನಾಗಿಣಿಯಂತಹ ಹಿಟ್ ಧಾರಾವಾಹಿಗಳನ್ನು ನೀಡುತ್ತಾ ಇದೆ. ಈಗ ಮತ್ತೊಂದು ನೂತನ ರಿಯಾಲಿಟಿ ಶೋ ಕಾರ್ಯಕ್ರಮವನ್ನು ಪರಿಚಯಿಸಿದೆ. ಸೂಪರ್ ಕ್ವೀನ್ (Super Queen) ಎಂಬ ರಿಯಾಲಿಟಿ ಶೋ ಶನಿವಾರ ಮತ್ತು ಭಾನುವಾರ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ನಟಿ ಗೀತಾ ಭಟ್ ಸ್ಪರ್ಧಿ ಆಗಿದ್ದಾರೆ. ಅಮ್ಮನ ಟ್ಯಾಟೋ (Tattoo) ಹಾಕಿಸಿಕೊಂಡು ಸಪ್ರೈಸ್ ನೀಡಿದ್ದಾರೆ.


  ಸೂಪರ್ ಕ್ವೀನ್ ಕಾರ್ಯಕ್ರಮ


  ಸೂಪರ್ ಕ್ವೀನ್ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳಿಗಾಗಿ ಶುರು ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳು ಸ್ಟ್ರಾಂಗ್ ಎನ್ನುವುದನ್ನು ತೋರಿಸಿ ಕೊಡಲಾಗುತ್ತೆ. ಕಾರ್ಯಕ್ರಮದ ಜಡ್ಜ್ ಗಳಾಗಿ ನಟ ವಿಜಯ ರಾಘವೇಂದ್ರ, ನಟಿ ರಚಿತ್ ರಾಮ್ ಇದ್ದಾರೆ. ನಿರೂಪಕರಾಗಿ ಕುರಿ ಪ್ರತಾಪ್, ಶ್ವೇತಾ ಚಂಗಪ್ಪ ಇದ್ದಾರೆ. ಸ್ಪರ್ಧಿಗಳಾಗಿ ಸೀರಿಯಲ್ ಕಲಾವಿದರು, ಗಾಯಕರು ಎಂಟ್ರಿ ಆಗಿದ್ದಾರೆ.


  ಸೂಪರ್ ಕ್ವೀನ್ ಕಾರ್ಯಕ್ರಮಕ್ಕೆ ನಟಿ ಗೀತಾ ಭಟ್
  ಬ್ರಹ್ಮಗಂಟು ಧಾರಾವಾಹಿಯಲ್ಲಿ ಲಕ್ಕಿಯ ಮುದ್ದಿನ ಮಡದಿ ಪಾತ್ರ ಮಾಡಿದ್ದಳು ಗೀತಾ. ಅವಳು ಇರುವ ದಪ್ಪಕ್ಕೆ ಅವಳನ್ನು ಎಲ್ಲರೂ ಗುಂಡಮ್ಮ ಗುಂಡಮ್ಮ ಎಂದು ರೇಗಿಸುತ್ತಿದ್ದರು. ಈಗ ಅದೇ ಗುಂಡಮ್ಮ ಸೂಪರ್ ಕ್ವೀನ್ ಕಾರ್ಯಕ್ರಮಕ್ಕೆ ಎಂಟ್ರಿ ಆಗಿದ್ದಾರೆ. ಕಾರ್ಯಕ್ರಮದಲ್ಲಿ ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ.


  ಇದನ್ನೂ ಓದಿ: Actress Neha Gowda: ಗೊಂಬೆ ಈಗ ಗಿರಿಜಾ, ಹೊಸ ಧಾರಾವಾಹಿಯಲ್ಲಿ ನಟಿಸಲು ಸಜ್ಜಾದ ನೇಹಾ ಗೌಡ 


  ಅಮ್ಮಂದಿರಿಗೆ ಧನ್ಯವಾದ ಹೇಳೋ ರೌಂಡ್
  ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಅಮ್ಮಂದಿರಿಗೆ ಧನ್ಯವಾದ ಹೇಳೋ ರೌಂಡ್ ನಡೆಯುತ್ತಿದೆ. ಎಲ್ಲರೂ ತಮ್ಮ ತಾಯಿ ಬಗ್ಗೆ ಹೇಳಲಿದ್ದಾರೆ. ಅವರ ಬದುಕಿನ ಕಷ್ಟ, ನೋವನ್ನು ಹಂಚಿಕೊಳ್ಳಲಿದ್ದಾರೆ. ಒಬ್ಬಬ್ಬರದ್ದು ನೋವಿನ ಕಥೆ ಆಗಿದೆ.


  ಗೀತಾ ಭಟ್


  ಟ್ಯಾಟೂ ಹಾಕಿಸಿಕೊಂಡ ಗೀತಾ ಭಟ್
  ಅಮ್ಮಂದಿರ ರೌಂಡ್ ಗೆ ಗೀತಾ ಭಟ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದನ್ನು ನೋಡಿ ಗೀತಾ ಅವರ ತಾಯಿ ತುಂಬಾ ಖುಷಿ ಆಗಿದ್ದಾರೆ. ಎಷ್ಟೊಂದು ನೋವಾದ್ರೂ ಟ್ಯಾಟೂ ಹಾಕಿಸಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಗೀತಾ ಅವರಿಗೆ ತಮ್ಮ ಅಮ್ಮ ಎಷ್ಟು ಬೆಂಬಲವಾಗಿ ನಿಂತಿದ್ರು ಎಂದು ಹೇಳಿದ್ದಾರೆ.  ದಪ್ಪ ಇರುವುದಕ್ಕೆ ಗೇಲಿ ಮಾಡ್ತಾ ಇದ್ರಂತೆ
  ಕಾಲೇಜಿನಲ್ಲಿ ಇದ್ದಾಗ, ಸ್ಕೂಲ್ ನಲ್ಲಿ ಇದ್ದಾಗ ಗೀತಾ ದಪ್ಪ ಇರುವುದರಿಂದ ತುಂಬಾ ಜನ ಗೇಲಿ ಮಾಡ್ತಾ ಇದ್ರು. ತುಂಬಾ ಜನ ತಮಾಷೆ ಮಾಡ್ತಾ ಇದ್ರಂತೆ. ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಿದ್ರು. ಡುಮ್ಮಿ, ಆಲದ ಮರ, ಪೂರಿ ಮೂಟೆ ಏನೇನೋ ಹೇಳ್ತಾ ಇದ್ರಂತೆ. ಅದಕ್ಕೆಲ್ಲಾ ಬೇಸರ ಮಾಡಿಕೊಳ್ಳದೇ, ತಮ್ಮ ತೂಕವನ್ನು ಗೀತಾ ಇಳಿಸಿಕೊಂಡಿದ್ದಾರೆ.


  ಸೂಪರ್ ಕ್ವೀನ್


  ಇದನ್ನೂ ಓದಿ: BBK Rakesh: ಕಳಪೆ ಸ್ಥಾನ ಪಡೆದ ರಾಕೇಶ್ ಅಡಿಗ, ಗೆಲುವಿನ ಓಟಕ್ಕೆ ಬೀಳುತ್ತಾ ಬ್ರೇಕ್? 


  ನನಗೆ ಇರೋ ಒಂದು ಮೈನಸ್ ಪ್ಲಸ್ ಆಗಿ ಬದಲಾಗುತ್ತೆ ಅಂತ ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ಅಲ್ಲಿಂದ ಇಲ್ಲಿಗೆ ಬರೋಕೆ ಒಂದು ಜರ್ನಿ ಇತ್ತಲ್ಲ, ಆ ಜರ್ನಿಯಲ್ಲಿ ತುಂಬಾ ಕಲಿತಿದ್ದೇನೆ. ತುಂಬಾ ವಿಷಯಗಳನ್ನು ಕಳ್ಕೊಂಡಿದೀನಿ, ಪಡೆದುಕೊಂಡಿದ್ದೇನೆ. ನಾನು 30 ಕೆ.ಜಿ ತೂಕ ಕಳೆದುಕೊಂಡಿದ್ದೇನೆ. ಇನ್ನೂ 30 ಕೆಜಿ ತೂಕ ಕಳೆದುಕೊಳ್ಳುವ ಗೋಲ್ ಇದೆ.' ಎಂದು ಗೀತಾ ಭಟ್ ಹೇಳಿದ್ದಾರೆ.

  Published by:Savitha Savitha
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು