• Home
  • »
  • News
  • »
  • entertainment
  • »
  • Shrirasthu Shubhamasthu: ಸಿರಿ-ಸಮರ್ಥ್ ಮದುವೆಗೆ ತುಳಸಿ ಒಪ್ಪಿಗೆ, ಆದ್ರೂ ವಿವಾಹಕ್ಕೆ ಎದುರಾಗಿದೆ ವಿಘ್ನ!

Shrirasthu Shubhamasthu: ಸಿರಿ-ಸಮರ್ಥ್ ಮದುವೆಗೆ ತುಳಸಿ ಒಪ್ಪಿಗೆ, ಆದ್ರೂ ವಿವಾಹಕ್ಕೆ ಎದುರಾಗಿದೆ ವಿಘ್ನ!

ಸಿರಿ-ಸಮರ್ಥ್ ಮದುವೆಗೆ ತುಳಸಿ ಒಪ್ಪಿಗೆ

ಸಿರಿ-ಸಮರ್ಥ್ ಮದುವೆಗೆ ತುಳಸಿ ಒಪ್ಪಿಗೆ

ತುಳಸಿ ಸಿರಿಯನ್ನು ತನ್ನ ಮನೆ ಸೊಸೆಯಾಗಿ ಒಪ್ಪಿಕೊಂಡಿದ್ದಾಳೆ. ಅದಕ್ಕೆ ಅವರ ಮನೆಗೆ ಹೋಗಿ ಆಕೆಯ ಅಪ್ಪನ ಬಳಿ ಮಾತನಾಡಿದ್ದಾಳೆ. ತುಳಸಿ ಮಾವ, ಸಮರ್ಥ್‍ಗೆ ತಾನು ತೋರಿಸಿದ ಹುಡುಗಿಯನ್ನೇ ಮದುವೆ ಮಾಡಬೇಕು ಎಂದು ಆಕೆ ಬಳಿ ಪ್ರಮಾಣ ಮಾಡಿಸಿಕೊಂಡಿದ್ದಾನೆ. ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ಮುಂದೇನಾಗುತ್ತೆ?

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

    ಜೀ ಕನ್ನಡ (Zee Kannada) ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ (Serials) ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಜೊತೆ ಜೊತೆಯಲಿ, ಸತ್ಯ, ನಾಗಿಣಿಯಂತಹ ಹಿಟ್ ಧಾರಾವಾಹಿಗಳನ್ನು ನೀಡುತ್ತಾ ಇದೆ. ಈಗ ಅದೇ ಸಾಲಿಗೆ ನಿಲ್ಲುತ್ತಿದೆ ಶ್ರೀರಸ್ತು ಶುಭಮಸ್ತು ಧಾರಾವಾಹಿ. ಈ ಸೀರಿಯಲ್ ಪ್ರತಿದಿನ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ನಟಿ ಸುಧಾರಾಣಿ (Sudha Rani) ಅವರು ತುಳಸಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ನಟನ ಪಾತ್ರದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ಅನಿ ಅಂದ್ರೆ ದೀಪಕ್ ಅವರು ಸಮರ್ಥ್ ಪಾತ್ರ ನಿರ್ವಹಿಸುತ್ತಿದ್ದಾರೆ. ಸಿರಿ-ಸಮರ್ಥ್ ಮದುವೆಗೆ (Marriage) ತುಳಸಿ ಒಪ್ಪಿದ್ದಾಳೆ.


    ತ್ಯಾಗಮಯಿ ಈ ತುಳಸಿ
    ಸುಧಾರಾಣಿ ಅವರು ತುಳಸಿ ಪಾತ್ರ ಮಾಡುತ್ತಿದ್ದು, ಮನೆಯವರಿಗಾಗಿ ಒಂದೇ ಸಮನೇ ಕೆಲಸ ಮಾಡುತ್ತಾರೆ, ಬೆಳಗ್ಗಿನ ಪೇಪರ್ ಕೊಡುವುದರಿಂದ ಹಿಡಿದು, ಮಗನ ಶೂ ಪಾಲಿಶ್ ಮಾಡೋವರೆಗೂ ಎಲ್ಲಾ ಕೆಲಸ ಮಾಡುತ್ತಾಳೆ. ಗೃಹಿಣಿಯಾಗಿ ಇಡೀ ಮನೆಯನ್ನು ನಿಭಾಯಿಸುವ ಪಾತ್ರವನ್ನು ಮಾಡುತ್ತಿದ್ದಾರೆ. ಮಕ್ಕಳು, ಮನೆ ಎಂದು ತನ್ನೆಲ್ಲ ಆಸೆಗಳನ್ನು ಪಕ್ಕಕ್ಕಿಟ್ಟು, ದಾಸಿ ರೀತಿ ಬೇರೆಯವರಿಗಾಗಿ ದಿನಪೂರ್ತಿ ದುಡಿಯುವ ಈಕೆ ಒಮ್ಮೊಮ್ಮೆ ಒಂಟಿಯಾಗುತ್ತಾಳೆ.


    ಮಾಲ್ ನಲ್ಲಿ ಸ್ನೇಹಿತರಾದ ತುಳಸಿ-ಸಿರಿ
    ಮಾಲ್ ಗೆ ಹೋಗಿದ್ದಾಗ ತುಳಸಿ ಮತ್ತು ಸಿರಿ ಸ್ನೇಹಿತರಾಗಿರುತ್ತಾರೆ. ಇಬ್ಬರು ಅಮ್ಮ-ಮಗಳ ರೀತಿ ಕ್ಲೋಸ್ ಆಗಿ ಮಾತನಾಡುತ್ತಾರೆ. ಕಾಲ್ ಮಾಡಿ ಎಲ್ಲ ವಿಷಯ ಶೇರ್ ಮಾಡಿಕೊಳ್ತಾರೆ. ಸಿರಿ ತಾನು ಒಂದು ಹುಡುಗನನ್ನು ಪ್ರೀತಿಸುವುದಾಗಿ ತುಳಸಿ ಬಳಿ ಹೇಳಿದ್ದಾನೆ. ಸಿರಿ ಪ್ರೀತಿಸುತ್ತಿರುವು ತನ್ನ ಮಗನೇ ಎಂದು ಗೊತ್ತಿಲ್ಲದೇ, ಐಡಿಯಾ ಕೊಡುತ್ತಿದ್ದಾಳೆ. ನಿಮ್ಮ ಅತ್ತೆಯನ್ನು ಭೇಟಿ ಮಾಡು ಎಂದು ಹೇಳಿದ್ದಾಳೆ. ಸಿರಿ ತುಳಸಿ ಹೇಳಿದಂತೆ ಮಾಡ್ತಾ ಇದ್ದಾಳೆ.


    zee kannada serial, kannada serial, shrirasthu shubhamasthu serial, samarth siri love, tulasi agree to marriage, ಶ್ರೀರಸ್ತು ಶುಭಮಸ್ತು ಧಾರಾವಾಹಿ, ಸಿರಿ-ಸಮರ್ಥ್ ನಡುವೆ ಜಗಳ, ಮಾಧವ ತುಳಸಿ ಜೊತೆ ಮಾತನಾಡುತ್ತಾನಾ?, ಸಿರಿ-ಸಮರ್ಥ್ ಮದುವೆಗೆ ತುಳುಸಿ ಒಪ್ಪಿಗೆ, ಆದ್ರೂ ವಿವಾಹಕ್ಕೆ ಇದೆ ಒಂದು ಅಡ್ಡಿ!, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಸಿರಿ


    ಅತ್ತೆ ತುಳಸಿ ಮನೆಗೆ ಬಂದ ಸಿರಿ
    ತುಳಸಿ ನಾನು ಐಡಿಯಾ ಕೊಡ್ತಾ ಇರೋದು ತನ್ನ ಸೊಸೆಗೆ ಎಂದು ಗೊತ್ತಿಲ್ಲದೇ, ಹೂವು ಹಣ್ಣನ್ನು ತೆಗೆದುಕೊಂಡು ಹೋಗು ನಿಮ್ಮ ಅತ್ತೆ ಖುಷಿ ಪಡ್ತಾರೆ ಎಂದು ಹೇಳ್ತಾಳೆ. ಅದಕ್ಕೆ ಸಿರಿ ಆಕೆ ಹೇಳಿದಂತೆ ಮಾಡ್ತಾಳೆ. ಸಮರ್ಥ್ ಮನೆ ಬಾಗಿಲಿಗೆ ಹೋಗಿ ರಿಂಗ್ ಮಾಡ್ತಾಳೆ. ಆಗ ತುಳಸಿ ಬಂದು ಡೋರ್ ತೆಗೆಯುತ್ತಾಳೆ. ಇಬ್ಬರು ಶಾಕ್ ಆಗಿ ನಿಂತಿದ್ದಾರೆ.


    ಇದನ್ನೂ ಓದಿ: Wedding Gossips: ಸುಕೃತ ನಾಗ್ ಜೊತೆಗಿನ ಮದುವೆಯ ವದಂತಿಗೆ ತೆರೆ ಎಳೆದ ಶೈನ್ ಶೆಟ್ಟಿ! 


    ಸೊಸೆಯಾಗಿ ಸ್ವೀಕರಿಸಿದ ತುಳಸಿ
    ತುಳಸಿ ಸಿರಿಯನ್ನು ತನ್ನ ಮನೆ ಸೊಸೆಯಾಗಿ ಒಪ್ಪಿಕೊಂಡಿದ್ದಾಳೆ. ಅದಕ್ಕೆ ಅವರ ಮನೆಗೆ ಹೋಗಿ ಆಕೆಯ ಅಪ್ಪನ ಬಳಿ ಮಾತನಾಡಿದ್ದಾಳೆ. ತುಳಸಿ ನನ್ನ ಮನೆ ಸೊಸೆಯಾಗುತ್ತಿರುವುದು ಖುಷಿ ಎಂದು ಹೇಳಿದ್ದಾಳೆ. ಸಿರಿ ಅಪ್ಪ ಕೂಡ ಖುಷಿಯಾಗಿದ್ದಾರೆ. ಮದುವೆ ಯಾವಾಗ ಮಾಡೋಣ ಎಂದು ಕೇಳಿದ್ದಾರೆ.


    zee kannada serial, kannada serial, shrirasthu shubhamasthu serial, samarth siri love, tulasi agree to marriage, ಶ್ರೀರಸ್ತು ಶುಭಮಸ್ತು ಧಾರಾವಾಹಿ, ಸಿರಿ-ಸಮರ್ಥ್ ನಡುವೆ ಜಗಳ, ಮಾಧವ ತುಳಸಿ ಜೊತೆ ಮಾತನಾಡುತ್ತಾನಾ?, ಸಿರಿ-ಸಮರ್ಥ್ ಮದುವೆಗೆ ತುಳುಸಿ ಒಪ್ಪಿಗೆ, ಆದ್ರೂ ವಿವಾಹಕ್ಕೆ ಇದೆ ಒಂದು ಅಡ್ಡಿ!, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಸಮರ್ಥ್


    ಮದುವೆಗೆ ಹೆಚ್ಚಿದ ಅಡ್ಡಿ
    ತುಳಸಿಗೆ ಮದುವೆ ವಿಚಾರ ಬಂದಾಕ್ಷಣ ಭಯ ಶುರುವಾಗಿದೆ. ಯಾಕಂದ್ರೆ ತುಳಸಿ ಮಾವ, ಸಮರ್ಥ್‍ಗೆ ತಾನು ತೋರಿಸಿದ ಹುಡುಗಿಯನ್ನೇ ಮದುವೆ ಮಾಡಬೇಕು ಎಂದು ಆಕೆ ಬಳಿ ಪ್ರಮಾಣ ಮಾಡಿಸಿಕೊಂಡಿದ್ದಾನೆ. ಅದಕ್ಕೆ ತುಳಸಿ ಭಯ ಪಡುತ್ತಿದ್ದಾಳೆ. ಮದುವೆ ಯಾಕಿಷ್ಟು ಬೇಗ, ಇನ್ನೂ ಸ್ವಲ್ಪ ದಿನ ಕಳೆಯಬೇಕು ಎಂದು ಹೇಳಿದ್ದಾರೆ.


    ಇದನ್ನೂ ಓದಿ: Actress Amulya: ತಿರುಪತಿಯಲ್ಲಿ ಅಮೂಲ್ಯ ಜಗದೀಶ್, ವೆಂಕಟೇಶ್ವರನಿಗೆ ಮಕ್ಕಳ ಕೂದಲು ಅರ್ಪಣೆ 


    ಸಿರಿ-ಸಮರ್ಥ್ ಮದುವೆ ಆಗುತ್ತಾ? ಈ ಮದುವೆಗೆ ಸಮರ್ಥ್ ತಾತಾ ಅಡ್ಡಿ ಮಾಡ್ತಾರಾ? ಮುಂದೇನಾಗುತ್ತೆ ಅಂತ ತಿಳಿದುಕೊಳ್ಳುವುದಕ್ಕೆ ಶ್ರೀರಸ್ತು ಶುಭಮಸ್ತು ಸೀರಿಯಲ್ ನೋಡಬೇಕು.

    Published by:Savitha Savitha
    First published: