• Home
  • »
  • News
  • »
  • entertainment
  • »
  • Shrirasthu Shubhamasthu: ಹೂವು-ಹಣ್ಣು ಹಿಡಿದು ತುಳಸಿ ಮನೆಗೆ ಬಂದ ಸಿರಿ! ಸೊಸೆಯಾಗಿ ಸ್ವೀಕರಿಸ್ತಾಳಾ ಅತ್ತೆ?

Shrirasthu Shubhamasthu: ಹೂವು-ಹಣ್ಣು ಹಿಡಿದು ತುಳಸಿ ಮನೆಗೆ ಬಂದ ಸಿರಿ! ಸೊಸೆಯಾಗಿ ಸ್ವೀಕರಿಸ್ತಾಳಾ ಅತ್ತೆ?

ಹೂವು-ಹಣ್ಣು ಹಿಡಿದು ತುಳಸಿ ಮನೆಗೆ ಬಂದ ಸಿರಿ

ಹೂವು-ಹಣ್ಣು ಹಿಡಿದು ತುಳಸಿ ಮನೆಗೆ ಬಂದ ಸಿರಿ

ಸಿರಿ ತುಳಸಿ ಹೇಳಿದಂತೆ ಮಾಡ್ತಾಳೆ. ಸಮರ್ಥ್ ಮನೆ ಬಾಗಿಲಿಗೆ ಹೋಗಿ ರಿಂಗ್ ಮಾಡ್ತಾಳೆ. ಆಗ ತುಳಸಿ ಬಂದು ಡೋರ್ ತೆಗೆಯುತ್ತಾಳೆ. ಇಬ್ಬರು ಶಾಕ್ ಆಗಿ ನಿಂತಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಜೀ ಕನ್ನಡ (Zee Kannada) ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ (Serials) ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ (Reality show) ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈಗಾಗಲೇ ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಜೊತೆ ಜೊತೆಯಲಿ, ಸತ್ಯ, ನಾಗಿಣಿಯಂತಹ ಹಿಟ್ ಧಾರಾವಾಹಿಗಳನ್ನು ನೀಡುತ್ತಾ ಇದೆ. ಈಗ ಅದೇ ಸಾಲಿಗೆ ನಿಲ್ಲುತ್ತಿದೆ ಶ್ರೀರಸ್ತು ಶುಭಮಸ್ತು ಧಾರಾವಾಹಿ. ಈ ಸೀರಿಯಲ್ ಪ್ರತಿದಿನ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ನಟಿ ಸುಧಾರಾಣಿ (Sudha Rani) ಅವರು ತುಳಸಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ನಟನ ಪಾತ್ರದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ಅನಿ ಅಂದ್ರೆ ದೀಪಕ್ (Deepak) ಅವರು ಸಮರ್ಥ್ ಪಾತ್ರ ನಿರ್ವಹಿಸುತ್ತಿದ್ದಾರೆ.


    ಮನೆಗಾಗಿ ಜೀವನ ಮೀಸಲಿಟ್ಟಿರೋ ತುಳಸಿ


    ಸುಧಾರಾಣಿ ಅವರು ತುಳಸಿ ಪಾತ್ರ ಮಾಡುತ್ತಿದ್ದು, ಮನೆಯವರಿಗಾಗಿ ಒಂದೇ ಸಮನೇ ಕೆಲಸ ಮಾಡುತ್ತಾರೆ, ಬೆಳಗ್ಗಿನ ಪೇಪರ್ ಕೊಡುವುದರಿಂದ ಹಿಡಿದು, ಮಗನ ಶೂ ಪಾಲಿಶ್ ಮಾಡೋವರೆಗೂ ಎಲ್ಲಾ ಕೆಲಸ ಮಾಡುತ್ತಾಳೆ. ಗೃಹಿಣಿಯಾಗಿ ಇಡೀ ಮನೆಯನ್ನು ನಿಭಾಯಿಸುವ ಪಾತ್ರವನ್ನು ಮಾಡುತ್ತಿದ್ದಾರೆ. ಮಕ್ಕಳು, ಮನೆ ಎಂದು ತನ್ನೆಲ್ಲ ಆಸೆಗಳನ್ನು ಪಕ್ಕಕ್ಕಿಟ್ಟು, ದಾಸಿ ರೀತಿ ಬೇರೆಯವರಿಗಾಗಿ ದಿನಪೂರ್ತಿ ದುಡಿಯುವ ಈಕೆ ಒಮ್ಮೊಮ್ಮೆ ಒಂಟಿಯಾಗುತ್ತಾಳೆ.


    ಸಮರ್ಥ್-ಸಿರಿ ಜಗಳ


    ತುಳಸಿ ಮಗ ಸಮರ್ಥ್ ಮತ್ತು ಸಿರಿ ಎನ್ನುವ ಹುಡುಗಿ ಹಲವು ದಿನಗಳಿಂದ ಪ್ರೀತಿ ಮಾಡ್ತಾ ಇದ್ದಾರೆ. ಸಿರಿ ಈ ವಿಚಾರವನ್ನು ತನ್ನ ತಂದೆಗೆ ಹೇಳಿದ್ದಾಳೆ. ಆದ್ರೆ ಸಮರ್ಥ ಮನೆಯಲ್ಲಿ ಹೇಳಲು ಪರದಾಡುತ್ತಿದ್ದಾನೆ. ಅದಕ್ಕೆ ಸಿರಿಯೇ ಸಮರ್ಥ್ ಮನೆಯಲ್ಲಿ ಹೇಳಲು ತಯಾರಿ ಮಾಡಿಕೊಂಡಿದ್ದಾಳೆ.


    ಇದನ್ನೂ ಓದಿ: Bigg Boss Kannada: ಕ್ಯಾಪ್ಟನ್ ಆದ್ರೂ ಕಾವ್ಯಶ್ರೀ ಮಾತಿಗೆ ಬೆಲೆ ಇಲ್ಲ, ರೊಚ್ಚಿಗೆದ್ದ ಮಂಗಳಗೌರಿ!


    ಮಾಲ್ ನಲ್ಲಿ ಸ್ನೇಹಿತರಾದ ತುಳಸಿ-ಸಿರಿ


    ಮಾಲ್ ಗೆ ಹೋಗಿದ್ದಾಗ ತುಳಸಿ ಮತ್ತು ಸಿರಿ ಸ್ನೇಹಿತರಾಗಿರುತ್ತಾರೆ. ಇಬ್ಬರು ಅಮ್ಮ-ಮಗಳ ರೀತಿ ಕ್ಲೋಸ್ ಆಗಿ ಮಾತನಾಡುತ್ತಾರೆ. ಕಾಲ್ ಮಾಡಿ ಎಲ್ಲ ವಿಷಯ ಶೇರ್ ಮಾಡಿಕೊಳ್ತಾರ. ಸಿರಿ ತಾನು ಒಂದು ಹುಡುಗನನ್ನು ಪ್ರೀತಿಸುವುದಾಗಿ ತುಳಸಿ ಬಳಿ ಹೇಳಿದ್ದಾನೆ. ಸಿರಿ ಪ್ರೀತಿಸುತ್ತಿರುವು ತನ್ನ ಮಗನೇ ಎಂದು ಗೊತ್ತಿಲ್ಲದೇ, ಐಡಿಯಾ ಕೊಡುತ್ತಿದ್ದಾಳೆ. ನಿಮ್ಮ ಅತ್ತೆಯನ್ನು ಭೇಟಿ ಮಾಡು ಎಂದು ಹೇಳಿದ್ದಾಳೆ. ಸಿರಿ ತುಳಸಿ ಹೇಳಿದಂತೆ ಮಾಡ್ತಾ ಇದ್ದಾಳೆ.


    zee kannada serial, kannada serial, shrirasthu shubhamasthu serial, samarth siri love, siri comes to tulasi home, ಶ್ರೀರಸ್ತು ಶುಭಮಸ್ತು ಧಾರಾವಾಹಿ, ಸಿರಿ-ಸಮರ್ಥ್ ನಡುವೆ ಜಗಳ, ಹೂವು-ಹಣ್ಣು ಹಿಡಿದು ತುಳಸಿ ಮನೆಗೆ ಬಂದ ಸಿರಿ, ಸೊಸೆಯಾಗಿ ಸ್ವೀಕರಿಸ್ತಾಳಾ ಅತ್ತೆ?, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಸಿರಿ


    ಹೂವು-ಹಣ್ಣು ಹಿಡಿದು ತುಳಸಿ ಮನೆಗೆ ಬಂದ ಸಿರಿ
    ತುಳಸಿ ನಾನು ಐಡಿಯಾ ಕೊಡ್ತಾ ಇರೋದು ತನ್ನ ಸೊಸೆಗೆ ಎಂದು ಗೊತ್ತಿಲ್ಲದೇ, ಹೂವು ಹಣ್ಣನ್ನು ತೆಗೆದುಕೊಂಡು ಹೋಗು ನಿಮ್ಮ ಅತ್ತೆ ಖುಷಿ ಪಡ್ತಾರೆ ಎಂದು ಹೇಳ್ತಾಳೆ. ಅದಕ್ಕೆ ಸಿರಿ ಆಕೆ ಹೇಳಿದಂತೆ ಮಾಡ್ತಾಳೆ. ಸಮರ್ಥ್ ಮನೆ ಬಾಗಿಲಿಗೆ ಹೋಗಿ ರಿಂಗ್ ಮಾಡ್ತಾಳೆ. ಆಗ ತುಳಸಿ ಬಂದು ಡೋರ್ ತೆಗೆಯುತ್ತಾಳೆ. ಇಬ್ಬರು ಶಾಕ್ ಆಗಿ ನಿಂತಿದ್ದಾರೆ.


    zee kannada serial, kannada serial, shrirasthu shubhamasthu serial, samarth siri love, siri comes to tulasi home, ಶ್ರೀರಸ್ತು ಶುಭಮಸ್ತು ಧಾರಾವಾಹಿ, ಸಿರಿ-ಸಮರ್ಥ್ ನಡುವೆ ಜಗಳ, ಹೂವು-ಹಣ್ಣು ಹಿಡಿದು ತುಳಸಿ ಮನೆಗೆ ಬಂದ ಸಿರಿ, ಸೊಸೆಯಾಗಿ ಸ್ವೀಕರಿಸ್ತಾಳಾ ಅತ್ತೆ?, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಸಮರ್ಥ್-ಸಿರಿ


    ಸಿರಿಯನ್ನು ಸೊಸೆಯಾಗಿ ಒಪ್ಪಿಕೊಳ್ತಾಳಾ?
    ಇಷ್ಟು ದಿನ ತುಳಸಿ ಸಿರಿಯನ್ನು ಪುಟ್ಟ-ಪುಟ್ಟ ಎಂದು ಚೆನ್ನಾಗಿ ಮಾತನಾಡಿಸುತ್ತಿದ್ಲು. ಈಗ ಆಕೆಯೇ ತನ್ನ ಸೊಸೆಯಾಗುವಳು ಎಂದು ಗೊತ್ತಾದ್ರೆ, ಅದನ್ನು ತುಳಸಿ ಒಪ್ತಾಳಾ ನೋಡಬೇಕು. ಯಾಕಂದ್ರೆ ತುಳಸಿ ಮಾವ ತಾನು ಹೇಳಿದ ಹುಡುಗಿಯನ್ನೇ ಸಮರ್ಥ್ ಮದುವೆ ಆಗಬೇಕು. ಅದು ನಿನ್ನ ಜವಾಬ್ದಾರಿ ಎಂದು ಹೇಳಿದ್ದಾರೆ.


    ಇದನ್ನೂ ಓದಿ: Bhagya Lakshmi: ಭಾಗ್ಯ ಮನೆ ಗೃಹಪ್ರವೇಶ, ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ? 


    ಸಮರ್ಥ್-ಸಿರಿ ಪ್ರೀತಿ ಸಕ್ಸಸ್ ಆಗಿತ್ತಾ? ರುಳಸಿ ಸಿರಿಯನ್ನು ಸೊಸೆ ಎಂದು ಒಪ್ಪಿಕೊಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಶ್ರೀರಸ್ತು ಶುಭಮಸ್ತು ಸೀರಿಯಲ್ ನೋಡಬೇಕು.

    Published by:Savitha Savitha
    First published: