• Home
  • »
  • News
  • »
  • entertainment
  • »
  • Shrirasthu Shubhamasthu: ತಾತನಿಗೆ ತಿಳಿಯದಂತೆ ಸಮರ್ಥ್-ಸಿರಿ ಮದುವೆ! ಸಂಕಷ್ಟದಲ್ಲಿ ತುಳಸಿ

Shrirasthu Shubhamasthu: ತಾತನಿಗೆ ತಿಳಿಯದಂತೆ ಸಮರ್ಥ್-ಸಿರಿ ಮದುವೆ! ಸಂಕಷ್ಟದಲ್ಲಿ ತುಳಸಿ

ತಾತನಿಗೆ ತಿಳಿಯದಂತೆ ಸಮರ್ಥ್-ಸಿರಿ ಮದುವೆ!

ತಾತನಿಗೆ ತಿಳಿಯದಂತೆ ಸಮರ್ಥ್-ಸಿರಿ ಮದುವೆ!

ಸಮಥ್-ಸಿರಿ ಕಾಲೇಜಿನಲ್ಲಿ ಓದುತ್ತಿದ್ದಾಗಿನಿಂದ ಪ್ರೀತಿ ಮಾಡ್ತಾ ಇದ್ರು. ಇಬ್ಬರ ಪ್ರೀತಿಗೆ ಈಗ ಮದುವೆ ಎಂದು ಮೂರು ಗಂಟು ಬೀಳುತ್ತಿದೆ. ಇಬ್ಬರ ಮದುವೆ ಗ್ರ್ಯಾಂಡ್ ಆಗಿ ನಡೆಯುತ್ತಿದೆ. ಸಿರಿ ತುಂಬಾ ಖುಷಿಯಲ್ಲಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಜೀ ಕನ್ನಡ (Zee Kannada) ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಜೊತೆ ಜೊತೆಯಲಿ, ಸತ್ಯ, ನಾಗಿಣಿಯಂತಹ ಹಿಟ್ ಧಾರಾವಾಹಿಗಳನ್ನು ನೀಡುತ್ತಾ ಇದೆ. ಈಗ ಅದೇ ಸಾಲಿಗೆ ನಿಲ್ಲುತ್ತಿದೆ ಶ್ರೀರಸ್ತು ಶುಭಮಸ್ತು (Shrirasthu Shubhamasthu) ಧಾರಾವಾಹಿ (Serial). ಈ ಸೀರಿಯಲ್ ಪ್ರತಿದಿನ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ನಟಿ ಸುಧಾರಾಣಿ ಅವರು ತುಳಸಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ನಟನ ಪಾತ್ರದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ಅನಿ ಅಂದ್ರೆ ದೀಪಕ್ ಅವರು ಸಮರ್ಥ್ ಪಾತ್ರ ನಿರ್ವಹಿಸುತ್ತಿದ್ದಾರೆ. ಸಿರಿ-ಸಮರ್ಥ್ ಮದುವೆ (Marriage) ತಾತಾನಿಗೆ ಗೊತ್ತಿಲ್ಲದೇ ನಡೆಯುತ್ತಾ?


    ಸಮರ್ಥ್-ಸಿರಿ ಮದುವೆ
    ಸಮಥ್-ಸಿರಿ ಕಾಲೇಜಿನಲ್ಲಿ ಓದುತ್ತಿದ್ದಾಗಿನಿಂದ ಪ್ರೀತಿ ಮಾಡ್ತಾ ಇದ್ರು. ಇಬ್ಬರ ಪ್ರೀತಿಗೆ ಈಗ ಮದುವೆ ಎಂದು ಮೂರು ಗಂಟು ಬೀಳುತ್ತಿದೆ. ಇಬ್ಬರ ಮದುವೆ ಗ್ರ್ಯಾಂಡ್ ಆಗಿ ನಡೆಯುತ್ತಿದೆ. ಸಿರಿ ತುಂಬಾ ಖುಷಿಯಲ್ಲಿದ್ದಾಳೆ. ಅಮ್ಮನಾಗಿ ಅತ್ತೆ ತುಳುಸಿ ಸಿಕ್ತಿದ್ದಾಳೆ ಎಂದು ಸಂತೋಷವಾಗಿದ್ದಾಳೆ.


    ಮನೆಯಲ್ಲಿ ಹೇಳದೇ ಮದುವೆ ತಯಾರಿ
    ಸಮರ್ಥ್ ಮದುವೆಗೆ ತುಳಸಿ ಒಪ್ಪಿರುತ್ತಾಳೆ. ಅದನ್ನು ಆಕೆ ತನ್ನ ಮಾವನ ಬಳಿ ಹೇಳುತ್ತಾಳೆ. ಸಮರ್ಥ್ ಸಿರಿ ಎನ್ನುವ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂದು. ಆದ್ರೆ ಆಕೆಯ ಮಾವ ಒಪ್ಪಲ್ಲ. ನಾನು ಸತ್ತ ಮೇಲೆ ಈ ಮದುವೆ ಮಾಡಿಸಿ ಎಂದು ಹೇಳುತ್ತಾರೆ. ಅದಕ್ಕೆ ಸಮರ್ಥ್ ಮನೆಯಲ್ಲಿ ಹೇಳದೇ ಮದುವೆ ಆಗಲು ತಯಾರಿ ನಡೆಸಿದ್ದಾನೆ.


    ಇದನ್ನೂ ಓದಿ: Ramachari: ಚಾರು ಕೋಣೆಯಲ್ಲಿ ಕೋದಂಡ, ಅಣ್ಣ ಕೊಲ್ಲುವುದನ್ನು ತಪ್ಪಿಸ್ತಾನಾ ರಾಮಾಚಾರಿ? 


    ಮಗ ಹೇಳಲಿಲ್ಲ ಎಂದು ತುಳಸಿ ಬೇಸರ
    ಸಮರ್ಥ್, ಸಿರಿ ಮನೆಗೆ ಹೋಗಿ ನಮ್ಮ ಮನೆಯಲ್ಲಿ ಮದುವೆಗೆ ಒಪ್ಪಿದ್ದಾರೆ. ತಯಾರಿ ಮಾಡಿಕೊಳ್ಳಿ ಎಂದು ಹೇಳ್ತಾನೆ. ಅವರು ನಂಬಿಕೊಂಡು ಮದುವೆ ತಯಾರಿ ಮಾಡಿದ್ದಾರೆ. ಸಿರಿ ಈ ವಿಷಯವನ್ನು ತುಳಸಿಗೆ ತಿಳಸಿದ್ದಾಳೆ. ಅದಕ್ಕೆ ತುಳಸಿ ಬೇಸರ ಮಾಡಿಕೊಂಡಿದ್ದಳು. ಮಗ ತನಗೆ ಹೇಳದೇ ಮದುವೆ ಆಗುತ್ತಿದ್ದಾನೆ ಎಂದು.


    zee kannada new serial, shrirasthu shubhamasthu serial, samarth siri marriage episode, ಶ್ರೀರಸ್ತು ಶುಭಮಸ್ತು ಧಾರಾವಾಹಿ, ತಾತಾನಿಗೆ ತಿಳಿಯದಂತೆ ಸಮರ್ಥ್-ಸಿರಿ ಮದುವೆ!, ಸಂಕಷ್ಟದಲ್ಲಿ ತುಳಸಿ, ಜೀ ಕನ್ನಡ ಧಾರಾವಾಹಿಗಳು, kannada news, karnataka news,
    ತುಳಸಿ


    ಸಮರ್ಥ್ ಸಹ ಅಕ್ಕನ ದಾರಿ ಹಿಡಿದ
    ಸಮರ್ಥ್ ಅಕ್ಕ ಸಹ ಪ್ರೀತಿಸಿ, ಓಡಿ ಹೋಗಿ ಮದುವೆ ಆಗಿರುತ್ತಾಳೆ. ಅದಕ್ಕೆ ತಾತಾನಿಗೆ ತುಂಬಾ ಕೋಪ ಇರುತ್ತೆ. ಆಕೆಯನ್ನು ಮನೆಗೆ ಸೇರಿಸುತ್ತಿಲ್ಲ. ಮೊಮ್ಮಗನಿಗಾದ್ರೂ, ತಾವೇ ಹೆಣ್ಣು ಹುಡಕಿ ಮದುವೆ ಮಾಡಬೇಕು ಎಂಬ ಆಸೆ ಇಟ್ಟುಕೊಂಡಿರ್ತಾರೆ. ಆದ್ರೆ ಅವರ ಆಸೆಗೆ ಸಮರ್ಥ್ ತಣ್ಣೀರು ಹಾಕಿದ್ದಾನೆ.


    zee kannada new serial, shrirasthu shubhamasthu serial, samarth siri marriage episode, ಶ್ರೀರಸ್ತು ಶುಭಮಸ್ತು ಧಾರಾವಾಹಿ, ತಾತಾನಿಗೆ ತಿಳಿಯದಂತೆ ಸಮರ್ಥ್-ಸಿರಿ ಮದುವೆ!, ಸಂಕಷ್ಟದಲ್ಲಿ ತುಳಸಿ, ಜೀ ಕನ್ನಡ ಧಾರಾವಾಹಿಗಳು, kannada news, karnataka news,
    ತಾತನಿಗೆ ತಿಳಿಯದಂತೆ ಸಮರ್ಥ್-ಸಿರಿ ಮದುವೆ!


    ನಿರ್ವಿಘ್ನವಾಗಿ ನಡೆಯುತ್ತಾ ಮದುವೆ
    ಸಮರ್ಥ್-ಸಿರಿ ಮದುವೆ ವಿಚಾರ ತಾತಾನಿಗೆ ಗೊತ್ತಾಗಿದೆ. ಸಮರ್ಥ್ ತಾಳಿ ಕಟ್ಟುವ ಸಮಯಕ್ಕೆ ತಾತಾ ಅಲ್ಲಿಗೆ ಬರುತ್ತಾರೆ. ಈ ಮದುವೆಯನ್ನು ನಿಲ್ಲಿಸುತ್ತಾರಾ? ಅಥವಾ ಸಮರ್ಥ್ ತಾಳಿ ಕಟ್ತಾನಾ? ತಾತಾ ಅಲ್ಲಿಗೆ ಬಂದ್ರೆ ಖಂಡಿತವಾಗಿಯೂ ಮದುವೆ ನಡೆಯಲು ಬಿಡಲ್ಲ. ಮೊದಲೇ ಮೊಮ್ಮಗಳ ಮೇಲೆ ಕೋಪ ಇದೆ. ಇವನು ಇದೇ ರೀತಿ ಮಾಡಿದ್ರೆ ಅವರು ಸಹಿಸಲ್ಲ.


    ಇದನ್ನೂ ಓದಿ: Bigg Boss Kannada: ಈ ವಾರದ ಕಳಪೆ ಯಾರು? ಅಮೂಲ್ಯನಾ, ಆರ್ಯವರ್ಧನ್ ಗುರೂಜಿನಾ? 


    ಸಮರ್ಥ್-ಸಿರಿ ಪ್ರೀತಿ ಸಕ್ಸಸ್ ಆಗುತ್ತಾ? ನಿರ್ವಿಘ್ನವಾಗಿ ನಡೆಯುತ್ತಾ ಮದುವೆ? ತುಳಸಿ ಸಿರಿಯನ್ನು ಸೊಸೆಯಾಗಿ ಮಾಡಿಕೊಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ನೋಡಬೇಕು.

    Published by:Savitha Savitha
    First published: