• Home
  • »
  • News
  • »
  • entertainment
  • »
  • Shrirasthu Shubhamasthu: ಸಿರಿ-ಸಮರ್ಥ್ ನಡುವೆ ಜಗಳ, ಮಾಧವ ತುಳಸಿ ಜೊತೆ ಮಾತನಾಡುತ್ತಾನಾ?

Shrirasthu Shubhamasthu: ಸಿರಿ-ಸಮರ್ಥ್ ನಡುವೆ ಜಗಳ, ಮಾಧವ ತುಳಸಿ ಜೊತೆ ಮಾತನಾಡುತ್ತಾನಾ?

 ಶ್ರೀರಸ್ತು ಶುಭಮಸ್ತು ಧಾರಾವಾಹಿ

ಶ್ರೀರಸ್ತು ಶುಭಮಸ್ತು ಧಾರಾವಾಹಿ

ಸಮರ್ಥ್-ಸಿರಿ ಜಗಳ ಮುಗಿದು ಪ್ರೀತಿ ಹುಟ್ಟುತ್ತಾ? ತುಳಸಿ-ಮಾಧವ ಭೇಟಿ ಆಗ್ತಾರಾ? ಮುಂದೇನಾಗುತ್ತೆ ಅಂತ ನೋಡೋಕೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ನೋಡಬೇಕು.

  • News18 Kannada
  • Last Updated :
  • Karnataka, India
  • Share this:

    ಜೀ ಕನ್ನಡ (Zee Kannada) ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ (Serials) ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ (Reality Show) ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈಗಾಗಲೇ ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಜೊತೆ ಜೊತೆಯಲಿ, ಸತ್ಯ, ನಾಗಿಣಿಯಂತಹ ಹಿಟ್ ಧಾರಾವಾಹಿಗಳನ್ನು ನೀಡುತ್ತಾ ಇದೆ. ಈಗ ಅದೇ ಸಾಲಿಗೆ ನಿಲ್ಲುತ್ತಿದೆ ಶ್ರೀರಸ್ತು ಶುಭಮಸ್ತು (Shrirasthu Shubhamasthu) ಧಾರಾವಾಹಿ. ಈ ಸೀರಿಯಲ್ ಪ್ರತಿದಿನ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ನಟಿ ಸುಧಾರಾಣಿ (Sudha Rani) ಅವರು ತುಳಸಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ನಟನ ಪಾತ್ರದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ಅನಿ ಅಂದ್ರೆ ದೀಪಕ್ ಅವರು ಸಮರ್ಥ ಪಾತ್ರ ನಿರ್ವಹಿಸುತ್ತಿದ್ದಾರೆ.


    ಮನೆಗಾಗಿ ಜೀವನ ಮೀಸಲಿಟ್ಟಿರೋ ತುಳಸಿ
    ಸುಧಾರಾಣಿ ಅವರು ತುಳಸಿ ಪಾತ್ರ ಮಾಡುತ್ತಿದ್ದು, ಮನೆಯವರಿಗಾಗಿ ಒಂದೇ ಸಮನೇ ಕೆಲಸ ಮಾಡುತ್ತಾರೆ, ಬೆಳಗ್ಗಿನ ಪೇಪರ್ ಕೊಡುವುದರಿಂದ ಹಿಡಿದು, ಮಗನ ಶೂ ಪಾಲಿಶ್ ಮಾಡೋವರೆಗೂ ಎಲ್ಲಾ ಕೆಲಸ ಮಾಡುತ್ತಾಳೆ.


    ಗೃಹಿಣಿಯಾಗಿ ಇಡೀ ಮನೆಯನ್ನು ನಿಭಾಯಿಸುವ ಪಾತ್ರವನ್ನು ಮಾಡುತ್ತಿದ್ದಾರೆ. ಗಂಡ, ಮಕ್ಕಳು, ಮನೆ ಎಂದು ತನ್ನೆಲ್ಲ ಆಸೆಗಳನ್ನು ಪಕ್ಕಕ್ಕಿಟ್ಟು, ದಾಸಿ ರೀತಿ ಬೇರೆಯವರಿಗಾಗಿ ದಿನಪೂರ್ತಿ ದುಡಿಯುವ ಗೃಹಿಣಿ ಎಲ್ಲಾ ಇದ್ದರೂ ಒಮ್ಮೊಮ್ಮೆ ಒಂಟಿಯಾಗುತ್ತಾಳೆ.


    ಸಮರ್ಥ್-ಸಿರಿ ಜಗಳ
    ಸಮರ್ಥ್ ಮತ್ತು ಸಿರಿ ಹಲವು ದಿನಗಳಿಂದ ಪ್ರೀತಿ ಮಾಡ್ತಾ ಇದ್ದಾರೆ. ಸಿರಿ ಈ ವಿಚಾರವನ್ನು ತನ್ನ ತಂದೆಗೆ ಹೇಳಿದ್ದಾಳೆ. ಆದ್ರೆ ಸಮರ್ಥ ಮನೆಯಲ್ಲಿ ಹೇಳಲು ಪರದಾಡುತ್ತಿದ್ದಾನೆ. ಸಿರಿ ಸಮರ್ಥ್‍ನನ್ನು ಭೇಟಿ ಆಗಲು ಹೇಳಿರುತ್ತಾನೆ. ಆದ್ರೆ ಆತನ ಗಾಡಿ ಕೆಟ್ಟು ಹೋಗಿ ಬರುವುದು ತಡವಾಗುತ್ತೆ. ಈ ವಿಚಾರದ ಸಲುವಾಗಿ ಇಬ್ಬರ ನಡುವೆ ಹೋಟೆಲ್ ನಲ್ಲೇ ಜಗಳ ನಡೆಯುತ್ತೆ.


    ಇದನ್ನೂ ಓದಿ: Kannadathi: ಅಮ್ಮಮ್ಮನ ಅಂತ್ಯಸಂಸ್ಕಾರ, ಹರ್ಷನ ಕಣ್ಣೀರು! ಆಸ್ತಿ ಬಗ್ಗೆ ನಿಜ ಹೇಳ್ತಾಳಾ ವರು? 


    ನಮ್ಮ ಪ್ರೀತಿ ಬ್ರೇಕ್ ಅಪ್ ಎಂದು ಸಮರ್ಥ್
    ಇಬ್ಬರು ಮಾತನಾಡುತ್ತಾ, ಮಾತನಾಡುತ್ತಾ ಜಗಳ ಹೆಚ್ಚಾಗುತ್ತೆ. ಸಿರಿ, ಯಾವಾಗಲು ಸುಳ್ಳು ಹೇಳ್ತೀಯಾ ಎನ್ನುತ್ತಾಳೆ. ಅದಕ್ಕೆ ಕೋಪ ಮಾಡಿಕೊಂಡ ಸಮರ್ಥ್, ನಿನಗೆ ನನ್ನ ಮೇಲೆ ನಂಬಿಕೆ ಇಲ್ಲ ತಾನೇ, ಮತ್ತೆ ಯಾಕ್ ಲವ್ ಮಾಡೋದು? ಬೇಡ, ಬ್ರೇಕ್ ಅಪ್ ಮಾಡಿಕೊಳ್ಳೋಣ ಎಂದು ಎದ್ದು ಹೋಗುತ್ತಾನೆ. ಸಿರಿ ಅಳುತ್ತಾ ಕೂರುತ್ತಾಳೆ.


    zee kannada serial, kannada serial, shrirasthu shubhamasthu serial, samarth siri love, ಶ್ರೀರಸ್ತು ಶುಭಮಸ್ತು ಧಾರಾವಾಹಿ, ಸಿರಿ-ಸಮರ್ಥ್ ನಡುವೆ ಜಗಳ, ಮಾಧವ ತುಳಸಿ ಜೊತೆ ಮಾತನಾಡುತ್ತಾನಾ?, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಸಿರಿ


    ಮಾಧವ-ತುಳಸಿ ನಡುವೆ ಸಿರಿ ಸೇತುವೆ
    ಮಾಧವ ಈ ಧಾರಾವಾಹಿಯಲ್ಲಿ ಅಡುಗೆ ಕಾರ್ಯಕ್ರಮ ನಡೆಸಿ ಕೊಡುವವರು. ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾರೆ. ತುಳಸಿಗೆ ಇವರ ಕಾರ್ಯಕ್ರಮ ಅಂದ್ರೆ ತುಂಬಾ ಇಷ್ಟ. ಅವರನ್ನು ಒಮ್ಮೆ ಭೇಟಿಯಾಗಬೇಕು ಎಂದುಕೊಂಡಿರುತ್ತಾಳೆ.


    ಸಿರಿ ಅವರಿಬ್ಬರನ್ನು ಭೇಟಿ ಮಾಡಿಸುತ್ತಾಳಾ ನೋಡಬೇಕು. ಅಲ್ಲದೇ ಮಾಧವ ಅವರಿಗೆ ತುಳಸಿ ಮಾಡೋ ಪುಳಿಯೊಗರೆ ತುಂಬಾ ಇಷ್ಟ. ಅದನ್ನು ಯಾರೂ ಮಾಡುತ್ತಾರೆ ಎಂದು ಕಂಡು ಹಿಡಿಯುವ ಪ್ರಯತ್ನದಲ್ಲಿ ಇದ್ದಾನೆ. ತುಳಸಿ ಮಾಡೋದು ಅಂತ ಗೊತ್ತಿಲ್ಲ.


    zee kannada serial, kannada serial, shrirasthu shubhamasthu serial, samarth siri love, ಶ್ರೀರಸ್ತು ಶುಭಮಸ್ತು ಧಾರಾವಾಹಿ, ಸಿರಿ-ಸಮರ್ಥ್ ನಡುವೆ ಜಗಳ, ಮಾಧವ ತುಳಸಿ ಜೊತೆ ಮಾತನಾಡುತ್ತಾನಾ?, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಮಾಧವ


    ಸಮರ್ಥ್‍ಗೆ ಭರವಸೆ ಕೊಟ್ಟ ತುಳಸಿ
    ಸಮರ್ಥ್ ಸಿರಿ ಜೊತೆ ಜಗಳವಾಡಿಕೊಂಡು ಬಂದು ಮನೆಯಲ್ಲಿ ಒಬ್ಬನೇ ಕೂತಿರುತ್ತಾನೆ. ಆಗ ತುಳಸಿ ಬಂದು ಅವನಿಗೆ ಸಮಾಧಾನ ಮಾಡಿ. ಊಟ ತಿನ್ನಿಸಿ. ನಮ್ಮ ಅಭಿಪ್ರಾಯ ಏನೇ ಇರಬಹುದು. ನೀನು ಇಷ್ಟ ಪಟ್ಟ ಹುಡುಗಿಯನ್ನೇ ನೀನು ಮದುವೆ ಆಗು ಎಂದು ಹೇಳುತ್ತಾಳೆ. ಅದನ್ನು ಕೇಳಿ ಸಮರ್ಥ್‍ಗೆ ಖುಷಿ ಆಗಿದೆ. ಅಮ್ಮನಿಗೆ ಥ್ಯಾಂಕ್ಸ್ ಹೇಳಿದ್ದಾನೆ.


    zee kannada serial, kannada serial, shrirasthu shubhamasthu serial, samarth siri love, ಶ್ರೀರಸ್ತು ಶುಭಮಸ್ತು ಧಾರಾವಾಹಿ, ಸಿರಿ-ಸಮರ್ಥ್ ನಡುವೆ ಜಗಳ, ಮಾಧವ ತುಳಸಿ ಜೊತೆ ಮಾತನಾಡುತ್ತಾನಾ?, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಸಮರ್ಥ್


    ಇದನ್ನೂ ಓದಿ: Bhagya Lakshmi: ತಾಂಡವ್ ಮನೆಗೆ ಬಂತು ಕೇಕ್, ಹೆಚ್ಚಾಯ್ತು ಅನುಮಾನ! 


    ಸಮರ್ಥ್-ಸಿರಿ ಜಗಳ ಮುಗಿದು ಪ್ರೀತಿ ಹುಟ್ಟುತ್ತಾ? ತುಳಸಿ-ಮಾಧವ ಭೇಟಿ ಆಗ್ತಾರಾ? ಮುಂದೇನಾಗುತ್ತೆ ಅಂತ ನೋಡೋಕೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ನೋಡಬೇಕು.

    Published by:Savitha Savitha
    First published: