ಜೀ ಕನ್ನಡ (Zee Kannada) ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ (Serials) ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ (Reality Show) ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಜೊತೆ ಜೊತೆಯಲಿ, ಸತ್ಯ, ನಾಗಿಣಿಯಂತಹ ಹಿಟ್ ಧಾರಾವಾಹಿಗಳನ್ನು ನೀಡುತ್ತಾ ಇದೆ. ಈಗ ಅದೇ ಸಾಲಿಗೆ ನಿಲ್ಲುತ್ತಿದೆ ಶ್ರೀರಸ್ತು ಶುಭಮಸ್ತು (Shrirasthu Shubhamasthu) ಧಾರಾವಾಹಿ. ಈ ಸೀರಿಯಲ್ ಪ್ರತಿದಿನ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ನಟಿ ಸುಧಾರಾಣಿ ಅವರು ತುಳಸಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ನಟನ ಪಾತ್ರದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ಅನಿ ಅಂದ್ರೆ ದೀಪಕ್ ಅವರು ಸಮರ್ಥ್ ಪಾತ್ರ ನಿರ್ವಹಿಸುತ್ತಿದ್ದಾರೆ. ತುಳಸಿ ಇಷ್ಟ ಇಲ್ಲ ಅಂದ್ರೂ ಕ್ಯಾಮೆರಾವನ್ನು (Camera) ಮಾಧವನಿಗೆ ಕೊಟ್ಟಿದ್ದಾಳೆ.
ತ್ಯಾಗಮಯಿ ಈ ತುಳಸಿ
ಸುಧಾರಾಣಿ ಅವರು ತುಳಸಿ ಪಾತ್ರ ಮಾಡುತ್ತಿದ್ದು, ಮನೆಯವರಿಗಾಗಿ ಒಂದೇ ಸಮನೇ ಕೆಲಸ ಮಾಡುತ್ತಾರೆ, ಬೆಳಗ್ಗಿನ ಪೇಪರ್ ಕೊಡುವುದರಿಂದ ಹಿಡಿದು, ಮಗನ ಶೂ ಪಾಲಿಶ್ ಮಾಡೋವರೆಗೂ ಎಲ್ಲಾ ಕೆಲಸ ಮಾಡುತ್ತಾಳೆ. ಗೃಹಿಣಿಯಾಗಿ ಇಡೀ ಮನೆಯನ್ನು ನಿಭಾಯಿಸುವ ಪಾತ್ರವನ್ನು ಮಾಡುತ್ತಿದ್ದಾರೆ. ಮಕ್ಕಳು, ಮನೆ ಎಂದು ತನ್ನೆಲ್ಲ ಆಸೆಗಳನ್ನು ಪಕ್ಕಕ್ಕಿಟ್ಟು, ದಾಸಿ ರೀತಿ ಬೇರೆಯವರಿಗಾಗಿ ದಿನಪೂರ್ತಿ ದುಡಿಯುವ ಈಕೆ ಒಮ್ಮೊಮ್ಮೆ ಒಂಟಿಯಾಗುತ್ತಾಳೆ.
ಮಾಧವ ಅಂದ್ರೆ ತುಳಸಿಗೆ ಇಷ್ಟ
ಮಾಧವ ಅಂದ್ರೆ ಅಡುಗೆ ಕಾರ್ಯಕ್ರಮ ನಡೆಸಿ ಕೊಡೋ ಪಾತ್ರ. ಅವರು ಮಾಡೋ ಅಡುಗೆ, ಅವರ ನೀತಿ ಪಾಠಗಳು ತುಳಸಿಗೆ ತುಂಬಾ ಇಷ್ಟ. ಅವರ ದೊಡ್ಡ ಅಭಿಮಾನಿ ತುಳಸಿ. ಅವರು ಹೇಳಿದ ಎಲ್ಲವನ್ನೂ ಒಂದು ನೋಟ್ ಬುಕ್ ನಲ್ಲಿ ಬರೆದಿಟ್ಟು ಕೊಳ್ತಾಳೆ. ಅವರನ್ನು ಒಮ್ಮೆ ಭೇಟಿಯಾಗಬೇಕು ಎಂದು ಆಸೆ ಪಡುತ್ತಿದ್ದಳು.
ಇದನ್ನೂ ಓದಿ: Lakshana: ನಾನೇ ತಾಳಿ ಕದ್ದಿದ್ದು ಎಂದು ಒಪ್ಪಿಕೊಂಡ ಶ್ವೇತಾ! ನಕ್ಷತ್ರಾ ಮುಂದಿನ ನಡೆ ಏನು?
ಮನೆಗೆ ಬಂದ ಮಾಧವ
ತುಳಸಿ ಮಾವ ದತ್ತ ತಮ್ಮ ಮನೆಯಲ್ಲಿದ್ದ ಕ್ಯಾಮೆರಾವನ್ನು ಸೇಲ್ ಮಾಡಲು ಆನ್ ಲೈನ್ ನಲ್ಲಿ ಹಾಕಿರುತ್ತಾರೆ. ಅದನ್ನು ಇಷ್ಟ ಪಟ್ಟ ಮಾಧವ ಕ್ಯಾಮೆರಾ ತೆಗೆದುಕೊಂಡು ಹೋಗಲು ತುಳಸಿ ಮನೆಗೆ ಬಂದಿದ್ದಾರೆ. ಮಾಧವನನ್ನು ತನ್ನ ಮನೆ ಬಾಗಿಲಲ್ಲಿ ನೋಡಿ ತುಳಸಿ ತುಂಬಾ ಖುಷಿಯಾಗಿದ್ದಾಳೆ. ಕನಸೋ, ನನಸೋ ಎಂದು ಗೊತ್ತಾಗದೇ ಆಶ್ಚರ್ಯ ಪಡುತ್ತಿದ್ದಾಳೆ.
ತಾನೇ ಕಾಫಿ ಮಾಡಿಕೊಟ್ಟ ಮಾಧವ
ಮಾಧವ ಮನೆಗೆ ಬಂದ ಖುಷಿಯಲ್ಲಿ, ತುಳಸಿಗೆ ಕೈ-ಕಾಲೇ ಆಡುತ್ತಿಲ್ಲ. ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಕಾಫಿ ಮಾಡಲು ಹೋಗಿ, ಪಾತ್ರೆಗಳನ್ನು ಬೀಳಿಸಿದ್ದಾಳೆ. ಅದಕ್ಕೆ ಮಾಧವ, ತುಳಸಿಯನ್ನು ಕೂರಿಸಿ, ನೀರು ಕೊಟ್ಟು. ಕಾಫಿ ಮಾಡಿ ಕೊಟ್ಟಿದ್ದಾರೆ. ತುಳಸಿ ತುಂಬಾ ಖುಷಿಯಾಗಿದ್ದಾರೆ.
ಇಷ್ಟ ಇಲ್ಲ ಅಂದ್ರೂ ಕ್ಯಾಮೆರಾ ಕೊಟ್ಟಳು!
ತುಳಸಿ ಗಂಡ ಕ್ಯಾಮೆರಾವೊಂದನ್ನು ತನ್ನ ಮಗ ಸಮರ್ಥ್ಗೆ ಕೊಟ್ಟಿರುತ್ತಾರೆ. ಅದು ಎಂದ್ರೆ ತುಳಸಿಗೆ ಕ್ಯಾಮೆರಾ ಎಂದ್ರೆ ತುಂಬಾ ಪ್ರೀತಿ ಇರುತ್ತೆ. ತುಂಬ ಆವರ್ಷಗಳಿಂದ ಕಾಪಾಡಿಕೊಂಡು ಬಂದಿರುತ್ತಾರೆ. ಆದ್ರೆ ಮಾವ ದತ್ತ ಅದನ್ನು ಈಗ ಸೇಲ್ ಗೆ ಹಾಕಿದ್ದಾರೆ. ತುಳಸಿಗೆ ಇಷ್ಟ ಇಲ್ಲ ಅಂದ್ರೂ ಕ್ಯಾಮೆರಾವನ್ನು ಮಾಧವಗೆ ಕೊಟ್ಟು ಕಳಿಸಿದ್ದಾಳೆ.
ಇದನ್ನೂ ಓದಿ: Bigg Boss Kannada: ತಲೆಗೆ ಎಣ್ಣೆ ಹಚ್ಚುವ ವಿಷಯಕ್ಕೆ ಮನಸ್ತಾಪ, ಅಮೂಲ್ಯಗೆ ಅಹಂಕಾರ ಹೆಚ್ಚು ಎಂದ ರಾಕಿ!
ಕ್ಯಾಮೆರಾ ಮೂಲಕ ತುಳಸಿ-ಮಾಧವನ ಸ್ನೇಹ ಆಗುತ್ತಾ? ಇಬ್ಬರ ಒಡನಾಟಕ್ಕೆ ಇದು ಸೇತುವೆ ಆಗತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಶ್ರೀರಸ್ತು-ಶುಭಮಸ್ತು ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ