ಜೀ ಕನ್ನಡ (Zee Kannda) ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ (Serials) ಮೂಲಕ ಜನರನ್ನು ರಂಜಿಸುತ್ತೆ. ಶ್ರೀರಸ್ತು ಶುಭಮಸ್ತು (Shrirasthu Shubhamasthu) ಧಾರಾವಾಹಿ ಜನರಿಗೆ ಇಷ್ಟ ಆಗಿದೆ. ಶ್ರೀರಸ್ತು ಶುಭಮಸ್ತು ಧಾರಾವಾಹಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ನಟಿ ಸುಧಾರಾಣಿ ಅವರು ತುಳಸಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ತುಳಸಿಯ ಮುಗ್ಧತೆ ಜನರನ್ನು ಹಿಡಿದಿಟ್ಟುಕೊಳ್ಳುತ್ತಿದೆ. ತುಳಸಿಗೆ ಗಂಡ ತೀರಿ ಹೋಗಿದ್ದರೂ, ಮಾವ, ಮಕ್ಕಳನ್ನು ನೋಡಿಕೊಂಡು ಸಂಸಾರ ಸಾಗಿಸಿಕೊಂಡು ಹೋಗ್ತಾ ಇದ್ದಾರೆ. ಮಾಧವನ ಪಾತ್ರವೂ ಜನರನ್ನು ಸೆಳೆದಿದೆ. ಮಾಧವ-ತುಳಸಿ ಮದುವೆಗೆ (Marriage) ಜ್ಯೋತಿಷಿಗಳೇ ಒಪ್ಪಿದಂತಾಗಿದೆ.
ಮಾಧವ ಸೂಪರ್
ಧಾರಾವಾಹಿಯಲ್ಲಿ ಮಾಧವನ ಪಾತ್ರವೂ ಜನರನ್ನು ಸೆಳೆದಿದೆ. ಮಾಧವ ಅಂದ್ರೆ ಅಡುಗೆ ಕಾರ್ಯಕ್ರಮ ನಡೆಸಿ ಕೊಡೋ ಪಾತ್ರ. ಅವರು ಮಾಡೋ ಅಡುಗೆ, ಅವರ ನೀತಿ ಪಾಠಗಳು ತುಂಬಾ ಜನರಿಗೆ ಇಷ್ಟ. ತುಳಸಿ ಸಹ ಇವರ ದೊಡ್ಡ ಅಭಿಮಾನಿ. ಅಡುಗೆ ಶೋ ಮುಗಿದ ಮೇಲೆ ಮಾಧವ ಕೆಫೆ ನಡೆಸುತ್ತಾರೆ. ಕೆಫೆಯಲ್ಲಿನ ಊಟ ತಿಂಡಿ ಎಲ್ಲರಿಗೂ ಇಷ್ಟವಾಗಿದೆ.
ಮಾಧವನ ಕೆಫೆಯಲ್ಲಿ ತುಳಸಿ ಕೆಲಸ
ಮಾಧವನ ಕೆಫೆಯಲ್ಲಿ ತುಳಸಿ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಮನೆಯಿಂದ ಹೊರಗೆ ಆಚೆ ಹೋಗದ ತುಳಸಿಗೆ ಮಾಧವ ಧೈರ್ಯ ತುಂಬಿದ್ದಾನೆ. ತುಳಸಿ ಜೊತೆಗೆ ಇರುವುದರಿಂದ ಮಾಧವ ಸಹ ಖುಷಿಯಾಗಿದ್ದಾನೆ. ಇಬ್ಬರನ್ನು ನೋಡಿ ಸೊಸೆಯಂದಿರು ತುಂಬಾ ಖುಷಿಯಾಗಿದ್ದಾರೆ. ಯಾವಾಗಲೂ ಜೊತೆಗಿರಲಿ ಎಂದುಕೊಳ್ತಾ ಇದ್ದಾರೆ.
ಮಾಧವನ ಹುಟ್ಟುಹಬ್ಬಕ್ಕೆ ಸಪ್ರ್ರೈಸ್ ಕೊಟ್ಟ ತುಳಸಿ
ತುಳಸಿಗೆ ಮಾಧವನ ಹುಟ್ಟುಹಬ್ಬ ಎಂದು ಗೊತ್ತಾಗುತ್ತೆ. ಅದಕ್ಕೆ ತುಳಸಿ ಮನೆಯಲ್ಲಿ ಮಾಧವ ಅವರ ಹುಟ್ಟುಹಬ್ಬ ಆಚರಿಸಲು ತೀರ್ಮಾನ ಮಾಡಿ, ಮಾವ ದತ್ತನ ಅನುಮತಿ ಪಡೆದಿದ್ದಾರೆ. ಅದಕ್ಕೆ ಮಾಧವನನ್ನು ಕರೆಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಮಾಧವ ಸಹ ಮೊದಲ ಬಾರಿಗೆ ಹುಟ್ಟುಹಬ್ಬ ಆಚರಿಸಿಕೊಂಡು ಖುಷಿಯಾಗಿದ್ದಾರೆ. ತುಳಸಿ ಮನೆಯಲ್ಲೂ ಎಲ್ಲರೂ ಬೆಂಬಲ ನೀಡಿದ್ದಾರೆ.
ತುಳಸಿ-ಮಾಧವನ ಬಗ್ಗೆ ಕೆಟ್ಟ ಮಾತು
ತುಳಸಿ, ಮಾಧವ ಅವರ ಜೊತೆಗೆ ಸ್ನೇಹಿತೆ ಆಗಿರುವುದಕ್ಕೆ ಪಕ್ಕದ ಮನೆಯವಳು ಕೆಟ್ಟದಾಗಿ ಮಾತನಾಡಿದ್ದಾಳೆ. ಶ್ರೀಮಂತರರನ್ನು ಫ್ರೆಂಡ್ ಮಾಡಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ ಸ್ನೇಹಾ ಬೇಕಾ? ಇಬ್ಬರ ನಡುವೆ ಏನೋ ಸಂಬಂಧ ಇದೆ ಎಂದು ಮಾತನಾಡಿದ್ದಾಳೆ. ಅದನ್ನು ಕೇಳಿ ತುಳಸಿ ಬೇಸರ ಮಾಡಿಕೊಂಡಿದ್ದಾಳೆ. ಅಳುತ್ತಾ ಕೂತಿರುತ್ತಾಳೆ. ದತ್ತ ತುಳಸಿಯನ್ನು ಸಮಾಧಾನ ಮಾಡಿದ್ದಾನೆ. ಯೋಗ್ಯತೆ ಇಲ್ಲದವರ ಮಾತಿನ ಬಗ್ಗೆ ತಲೆ ಕೆಡೆಸಿಕೊಳ್ಳಬೇಡ ಎಂದು ಹೇಳಿದ್ದಾನೆ.
ತುಳಸಿ ಜಾತಕದಲ್ಲಿ ಮದುವೆ ಯೋಗ
ಯಾಕೋ ತುಳಸಿಗೆ ಪದೇ ಪದೇ ತೊಂದ್ರೆ ಆಗ್ತಿದೆ. ಅದಕ್ಕೆ ದತ್ತ ಜ್ಯೋತಿಷಿಗಳ ಬಳಿ ಅವಳ ಜಾತಕ ತೋರಿಸಿದ್ದಾನೆ. ಅವರು ಈ ಜಾತಕದ ಪ್ರಕಾರ ಇವರಿಗೆ ಕನ್ಯಾದಾನ ಯೋಗ ಇದೆ. ಈ ವಯಸ್ಸಿನಲ್ಲಿ ಕನ್ಯಾದಾನ ಯೋಗ ಇರುವುದು ಕಮ್ಮಿ. ಮದುವೆ ಮಾಡಿ ಒಳ್ಳೆದಾಗುತ್ತೆ ಎಂದು ಹೇಳಿದ್ದಾರೆ. ಅದನ್ನು ಕೇಳಿ ದತ್ತ ಶಾಕ್ ಆಗಿದ್ದಾನೆ.
ಹೆಂಡ್ತಿ ಕಳೆದುಕೊಂಡಿರುವ ಮಾಧವ
ಮಾಧವ ಕಾರು ಓಡಿಸುತ್ತಾನೆ. ಆದ್ರೆ ಅಷ್ಟಾಗಿ ಬರಲ್ಲ. ಈ ಹಿಂದೆ ಕಾರು ಡ್ರೈವ್ ಮಾಡಲು ಹೋಗಿ ಅಪಘಾತ ಆಗಿರುತ್ತೆ. ಆ ಅಪಘಾತದಲ್ಲಿ ಮಾಧವನ ಹೆಂಡ್ತಿ ತೀರಿ ಹೋಗುತ್ತಾಳೆ. ತಮ್ಮ ಬೆಡ್ ಹಿಡಿದು ಮಲಗಿದ್ದಾನೆ. ಅದಕ್ಕೆ ಮಾಧವನನ್ನು ಕಂಡ್ರೆ ಮಗನಿಗೆ ಆಗಲ್ಲ. ಅಮ್ಮನನ್ನು ಸಾಯಿಸಿದವ ಇವನು ಎಂದು ದ್ವೇಷ ಮಾಡ್ತಾ ಇದ್ದಾರೆ.
ಇದನ್ನೂ ಓದಿ: Kendasampige: ತಾಯ್ತನದ ಬಗ್ಗೆ ಮಾತನಾಡಿದ ಸುಮನಾ, ಸೊಸೆ ಗರ್ಭಿಣಿ ಎಂದುಕೊಂಡ ಮಾವ!
ದತ್ತ ತುಳಸಿಗೆ ಮದುವೆ ಮಾಡಿಸ್ತಾರಾ? ತುಳಸಿ-ಮಾಧವನ ಮದುವೆ ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ನೊಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ