ಜೀ ಕನ್ನಡ (Zee Kannada) ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ (Serials) ಮೂಲಕ ಜನರನ್ನು ರಂಜಿಸುತ್ತೆ. ಶ್ರೀರಸ್ತು ಶುಭಮಸ್ತು (Shrirasthu Shubhamasthu) ಧಾರಾವಾಹಿ ಜನರಿಗೆ ಇಷ್ಟ ಆಗಿದೆ. ಶ್ರೀರಸ್ತು ಶುಭಮಸ್ತು ಧಾರಾವಾಹಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ನಟಿ ಸುಧಾರಾಣಿ ಅವರು ತುಳಸಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ತುಳಸಿಯ ಮುಗ್ಧತೆ ಜನರನ್ನು ಹಿಡಿದಿಟ್ಟುಕೊಳ್ಳುತ್ತಿದೆ.ನಾಯಕನ ಪಾತ್ರದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ದೀಪಕ್ ಮಾಡಿದ್ದಾರೆ. ಸಮರ್ಥ್ ಆಗಿ ಪಾತ್ರ ಮಾಡ್ತಿದ್ದು, ಸಿರಿ ಎಂಬುವವಳನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಮಾಧವನ ಪಾತ್ರವೂ ಜನರನ್ನು ಸೆಳೆದಿದೆ. ಮಾಧವನ ಸಹಾಯಕ್ಕೆ (Help) ತುಳಸಿ ಬಂದಿದ್ದಾಳೆ.
ಕೆಫೆ ನಡೆಸುತ್ತಿರುವ ಮಾಧವ
ಧಾರಾವಾಹಿಯಲ್ಲಿ ಮಾಧವನ ಪಾತ್ರವೂ ಜನರನ್ನು ಸೆಳೆದಿದೆ. ಮಾಧವ ಅಂದ್ರೆ ಅಡುಗೆ ಕಾರ್ಯಕ್ರಮ ನಡೆಸಿ ಕೊಡೋ ಪಾತ್ರ. ಅವರು ಮಾಡೋ ಅಡುಗೆ, ಅವರ ನೀತಿ ಪಾಠಗಳು ತುಂಬಾ ಜನರಿಗೆ ಇಷ್ಟ. ತುಳಸಿ ಸಹ ಇವರ ದೊಡ್ಡ ಅಭಿಮಾನಿ. ಅಡುಗೆ ಶೋ ಮುಗಿದ ಮೇಲೆ ಮಾಧವ ಕೆಫೆ ನಡೆಸುತ್ತಾರೆ. ಕೆಫೆಯಲ್ಲಿನ ಊಟ ತಿಂಡಿ ಎಲ್ಲರಿಗೂ ಇಷ್ಟವಾಗಿದೆ.
ಅಪ್ಪನ ಕೆಫೆ ಮೇಲೆ ಕಿರಿ ಮಗ ಅಭಿ ಕಣ್ಣು
ಮಾಧವನ ಕಿರಿಯ ಮಗ ಅಭಿಗೆ ಅಪ್ಪನ ಕೆಫೆ ಮೇಲೆ ಕಣ್ಣು ಬಿದ್ದಿದೆ. ಅದನ್ನು ಕೆಡವಿ ಅಲ್ಲಿ ಬಾರ್ ಮಾಡಬೇಕು ಎಂದುಕೊಂಡಿದ್ದಾರೆ. ಅದಕ್ಕೆ ಅಭಿ ಮಾವ ಸಪೋರ್ಟ್ ಮಾಡ್ತಾ ಇದ್ದಾರೆ. ಅಭಿ ಕೆಫೆಯನ್ನು ಬಿಟ್ಟು ಕೊಡು ಎಂದು ಕೇಳ್ತಾ ಇದ್ದಾನೆ. ಅದಕ್ಕೆ ಮಾಧವ ಬಾರ್ ಮಾಡೋಕೆ ನಾನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಒಂದು ದಿನದಲ್ಲಿ 3 ಲಕ್ಷ ದುಡಿಯುವ ಚಾಲೆಂಜ್
ಅಪ್ಪ ಕೆಫೆ ಬಿಟ್ಟು ಕೊಡಲ್ಲ ಎಂದಿದ್ದಕ್ಕೆ ಅಭಿ ಬೇಸರ ಮಾಡಿಕೊಂಡಿದ್ದಾನೆ. ಇಲ್ಲಿ ಬಾರ್ ಮಾಡಿದ್ರೆ ವೀಕೆಂಡ್‍ನಲ್ಲಿ 4 ಲಕ್ಷ ದುಡಿಯಬಹುದು ಎಂದು ಹೇಳಿದ್ದಾನೆ. ಅಲ್ಲದೇ ಒಂದೇ ದಿನದಲ್ಲಿ 3 ಲಕ್ಷ ಸಂಪಾದನೆ ಮಾಡಿ ತೋರಿಸಿ ಎಂದು ಹೇಳ್ತಾನೆ. ಮಾಧವನು ಆ ಸವಾಲು ಸ್ವೀಕರಿಸಿದ್ದಾನೆ. ಅದಕ್ಕೆ ಆಹಾರ ಮೇಳ ಮಾಡಲು ತೀರ್ಮಾನ ಮಾಡಿದ್ದಾನೆ.
ಸಂಕಷ್ಟದಲ್ಲಿ ಮಾಧವ
ಮಾಧವ ತನ್ನ ಅಡುಗೆ ಕಾರ್ಯಕ್ರಮದಲ್ಲಿ ಎಲ್ಲರೂ ಆಹಾರ ಮೇಳಕ್ಕೆ ಬನ್ನೆ ಎಂದು ಹೇಳಿದ್ದಾನೆ. ಆದ್ರೆ ಕೆಫೆಯಲ್ಲಿ ಬಂದು ನೋಡಿದ್ರೆ ಯಾವ ಅಡುಗೆ ಕೆಲಸದವರೂ ಇಲ್ಲ. ಅದಕ್ಕೆ ಏನು ಮಾಡುವುದು ಎಂದು ಗೊತ್ತಾಗ್ತಾ ಇಲ್ಲ. ಹೇಗೆ ಅಡುಗೆ ಮಾಡುವುದು. ಆಹಾರ ಮೇಳಕ್ಕೆ ಊಟಗಳನ್ನು ಹೇಗೆ ತಯಾರಿಸುವುದು ಎನ್ನುವ ಚಿಂತೆಯಲ್ಲಿದ್ದಾನೆ.
ಮಾಧವನ ಸಹಾಯಕ್ಕೆ ಬಂದ ತುಳಸಿ
ಮಾಧವ ಈಗ ಏನ್ ಮಾಡುವುದು ಎಂದು ಚಿಂತೆಯಲ್ಲಿ ದೇವರನ್ನು ಪ್ರಾರ್ಥನೆ ಮಾಡ್ತಾ ಇದ್ದ, ಅಷ್ಟರಲ್ಲಿ ತುಳಸಿ ಬಂದಿದ್ದಾಳೆ. ತುಳಸಿ ಜೊತೆ ಅವರ ಏರಿಯಾದ 6 ಜನರನ್ನು ಕರೆದುಕೊಂಡು ಬಂದಿದ್ದಾಳೆ. ತುಳಸಿಯನ್ನು ಅಲ್ಲಿ ನೋಡಿ ಮಾಧವನಿಗೆ ತುಂಬಾ ಖುಷಿ ಆಗಿದೆ. ನಮ್ಮ ಕಷ್ಟ ಎಲ್ಲ ಪರಿಹಾರ ಆಯ್ತು ಎಂದು ಖುಷಿ ಆಗಿದ್ದಾನೆ.
ಇದನ್ನೂ ಓದಿ: Lakshmi Baramma: ಕೀರ್ತಿ ನೆನೆದು ಕಣ್ಣೀರಿಟ್ಟ ವೈಷ್ಣವ್, ತನ್ನ ಮೇಲೆ ಪ್ರೀತಿ ಇಲ್ಲ ಎಂದು ಗೊತ್ತಾಗಿ ಕುಸಿದ ಲಕ್ಷ್ಮಿ!
ಮಾಧವನ ಆಹಾರ ಮೇಳ ಯಶಸ್ವಿಯಾಗುತ್ತಾ? ಕೆಫೆ ಮಾಧವನ ಬಳಿಯೇ ಉಳಿಯುತ್ತಾ? ತುಳಸಿ ಸಹಾಯಕ್ಕೆ ಅರ್ಥ ಸಿಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ