ಜೀ ಕನ್ನಡ (Zee Kannada) ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ (Serials) ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ (Reality Show) ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಜೊತೆ ಜೊತೆಯಲಿ, ಸತ್ಯ, ನಾಗಿಣಿಯಂತಹ ಹಿಟ್ ಧಾರಾವಾಹಿಗಳನ್ನು ನೀಡುತ್ತಾ ಇದೆ. ಈಗ ಅದೇ ಸಾಲಿಗೆ ನಿಲ್ಲುತ್ತಿದೆ ಶ್ರೀರಸ್ತು ಶುಭಮಸ್ತು (Shrirasthu Shubhamasthu) ಧಾರಾವಾಹಿ. ಈ ಸೀರಿಯಲ್ ಪ್ರತಿದಿನ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ನಟಿ ಸುಧಾರಾಣಿ ಅವರು ತುಳಸಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ಮಾಧವನ ಪಾತ್ರವೂ ಜನರನ್ನು ಸೆಳೆದಿದೆ. ಸೊಸೆಯನ್ನು ಕಾಪಾಡಲು ಮಾಧವ ಹಳೆ ನೆನಪು ಮೆಟ್ಟಿ ನಿಲ್ತಾನಾ ನೋಡಬೇಕು.
ಪ್ರೀತಿ ಮಾವ ಈ ಮಾಧವ
ಮಾಧವ ಅಂದ್ರೆ ಅಡುಗೆ ಕಾರ್ಯಕ್ರಮ ನಡೆಸಿ ಕೊಡೋ ಪಾತ್ರ. ಅವರು ಮಾಡೋ ಅಡುಗೆ, ಅವರ ನೀತಿ ಪಾಠಗಳು ತುಂಬಾ ಜನರಿಗೆ ಇಷ್ಟ. ತುಳಸಿ ಸಹ ಇವರ ದೊಡ್ಡ ಅಭಿಮಾನಿ. ಊರೆಲ್ಲಾ ಇಷ್ಟ ಪಡೋ ಮಾಧವನನ್ನು ಮನೆಯಲ್ಲಿ ಮಗನೇ ಇಷ್ಟ ಪಡಲ್ಲ. ತಂದೆಯನ್ನು ಕಂಡ್ರೆ ಆಗಲ್ಲ. ಆದ್ರೆ ಸೊಸೆ ಪೂರ್ಣಿಗೆ ಮಾವ ಅಂದ್ರೆ ತುಂಬಾ ಇಷ್ಟ.
ಗರ್ಭಿಣಿ ಪೂರ್ಣಿಗೆ ಹೊಟ್ಟೆ ನೋವು
ಪೂರ್ಣಿಗೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಿದ್ದಾರೆ. ಗಂಡ ಕೆಲಸದ ಮೇಲೆ ಬೇರೆ ಊರಿಗೆ ಹೋಗಿದ್ದಾನೆ. ಪೂರ್ಣಿಗೆ ಹೊಟ್ಟೆ ನೋವು ಬಂದು ಒದ್ದಾಡುತ್ತಿದ್ದಾಳೆ. ಅಳುತ್ತಿದ್ದಾಳೆ. ಅಲ್ಲಿಗೆ ಮಾಧವ ಬಂದಿದ್ದಾನೆ. ಡ್ರೈವರ್ ಗೆ ಹೇಳಿ, ಕಾರು ತೆಗೆಯಲು ಹೇಳಿ ಆಸ್ಪತ್ರೆಗೆ ಹೋಗಬೇಕು ಎನ್ನುತ್ತಾನೆ. ಆದ್ರೆ ಮನೆಯಲ್ಲಿ ಯಾವ ಡ್ರೈವರ್ ಸಹ ಇರಲ್ಲ.
ಇದನ್ನೂ ಓದಿ: New Serials: ಇಂದಿನಿಂದ 2 ಹೊಸ ಧಾರಾವಾಹಿಗಳು, ಪುಣ್ಯವತಿ ಜೊತೆ ತ್ರಿಪುರ ಸುಂದರಿ ಪಯಣ
ತಾನೇ ಕಾರು ಓಡಿಸಲು ತೀರ್ಮಾನ
ಸೊಸೆ ಪೂರ್ಣಿಗೆ ತೊಂದರೆ ಆಗಬಾರದು ಎಂದು ಮಾಧವ ಕಾರು ಓಡಿಸಲು ನಿರ್ಧಾರ ಮಾಡಿದ್ದಾರೆ. ನಡೆದ ಹಳೆ ಕಹಿ ನೆನೆಪನ್ನು ಮೆಟ್ಟಿ ನಿಂತು ಕಾರನ್ನು ಓಡಿಸುತ್ತಾನಾ ನೋಡಬೇಕು. ಮಾಧವ ಎಲ್ಲಾ ಭಾರವನ್ನು ದೇವರ ಮೇಲೆ ಹಾಕಿ ಕಾರು ಡ್ರೈವ್ ಮಾಡಲು ತೀರ್ಮಾನ ಮಾಡಿದ್ದಾನೆ. ಅದು ತನ್ನ ಸೊಸೆ ಪೂರ್ಣಿಗಾಗಿ.
ಹೆಂಡ್ತಿ ಕಳೆದುಕೊಂಡಿರುವ ಮಾಧವ
ಮಾಧವ ಕಾರು ಓಡಿಸುತ್ತಾನೆ. ಆದ್ರೆ ಅಷ್ಟಾಗಿ ಬರಲ್ಲ. ಈ ಹಿಂದೆ ಕಾರು ಡ್ರೈವ್ ಮಾಡಲು ಹೋಗಿ ಅಪಘಾತ ಆಗಿರುತ್ತೆ. ಆ ಅಪಘಾತದಲ್ಲಿ ಮಾಧವನ ಹೆಂಡ್ತಿ ತೀರಿ ಹೋಗುತ್ತಾಳೆ. ತಮ್ಮ ಬೆಡ್ ಹಿಡಿದು ಮಲಗಿದ್ದಾನೆ. ಅದಕ್ಕೆ ಮಾಧವನನ್ನು ಕಂಡ್ರೆ ಮಗನಿಗೆ ಆಗಲ್ಲ. ಅಮ್ಮನನ್ನು ಸಾಯಿಸಿದವ ಇವನು ಎಂದು ದ್ವೇಷ ಮಾಡ್ತಾ ಇದ್ದಾರೆ.
ಸುರಕ್ಷಿತವಾಗಿ ಕಾರು ಓಡಿಸಿ
ಶ್ರೀರಸ್ತು ಶುಭಮಸ್ತು ಧಾರಾವಾಹಿ ಜನರಿಗೆ ಇಷ್ಟವಾಗಿದೆ. ಮಾಧವ ಭಯದಿಂದಲೇ ಕಾರು ಓಡಿಸಲು ಸಿದ್ಧವಾಗಿದ್ಧಾನೆ. ಈ ನಡುವೆ ಅಭಿಮಾನಿಗಳು ಮಾಧವ ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಸುರಕ್ಷಿತವಾಗಿ ಕಾರು ಓಡಿಸಿ, ಏನು ಆಗಲ್ಲ. ನಿಮ್ಮ ಸೊಸೆ ಕಾಪಾಡಿ ಎಂದು ಕಾಮೆಂಟ್ ಹಾಕಿದ್ದಾರೆ.
ಇದನ್ನೂ ಓದಿ: Kannadathi: ಭುವಿ ಕೊಲ್ಲಲು ಬಂದ ರೌಡಿಗಳು, ಹರ್ಷನಿಗೆ ಹೆಚ್ಚಿದ ಟೆನ್ಶನ್!
ಮಾಧವ ನಿಧಾನವಾಗಿ ಕಾರು ಓಡಿಸುತ್ತಾನಾ? ಸೊಸೆ ಪೂರ್ಣಿ ಪ್ರಾಣ ಉಳಿಸುತ್ತಾನಾ? ಮುಂದೇನಾಗುತ್ತೆ ಅಂತ ನೊಡೋಕೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ