• Home
 • »
 • News
 • »
 • entertainment
 • »
 • Shrirasthu Shubhamasthu: ಸೊಸೆ ಪ್ರಾಣ ಉಳಿಸುವ ಜವಾಬ್ದಾರಿ ಮಾಧವನ ಮೇಲೆ, ಅವಿನಾಶ್ ಕೆಂಡಾಮಂಡಲ!

Shrirasthu Shubhamasthu: ಸೊಸೆ ಪ್ರಾಣ ಉಳಿಸುವ ಜವಾಬ್ದಾರಿ ಮಾಧವನ ಮೇಲೆ, ಅವಿನಾಶ್ ಕೆಂಡಾಮಂಡಲ!

ಅವಿನಾಶ್ ಕೆಂಡಾಮಂಡಲ

ಅವಿನಾಶ್ ಕೆಂಡಾಮಂಡಲ

ಅವಿನಾಶ್ ಗೆ ಅಪ್ಪ ಮಾಧವನನ್ನು ಕಂಡ್ರೆ ಆಗಲ್ಲ. ಈಗ ನನ್ನ ಹೆಂಡ್ತಿ ಕೊಲ್ಲಲು ಕಾರು ಡ್ರೈವ್ ಮಾಡಿಕೊಂಡು ಬಂದ್ರಾ ಎಂದು ಅಪ್ಪನ ಕಾಲರ್ ಹಿಡಿದುಕೊಂಡಿದ್ದಾನೆ.

 • News18 Kannada
 • 3-MIN READ
 • Last Updated :
 • Karnataka, India
 • Share this:

  ಜೀ ಕನ್ನಡ (Zee Kannada) ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ (Serials) ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಜೊತೆ ಜೊತೆಯಲಿ, ಸತ್ಯ, ನಾಗಿಣಿಯಂತಹ ಹಿಟ್ ಧಾರಾವಾಹಿಗಳನ್ನು ನೀಡುತ್ತಾ ಇದೆ. ಈಗ ಅದೇ ಸಾಲಿಗೆ ನಿಲ್ಲುತ್ತಿದೆ ಶ್ರೀರಸ್ತು ಶುಭಮಸ್ತು (Shrirasthu Shubhamasthu) ಧಾರಾವಾಹಿ. ಈ ಸೀರಿಯಲ್ ಪ್ರತಿದಿನ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ನಟಿ ಸುಧಾರಾಣಿ ಅವರು ತುಳಸಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ಮಾಧವನ ಪಾತ್ರವೂ ಜನರನ್ನು ಸೆಳೆದಿದೆ. ಸೊಸೆಯನ್ನು (Daughter In Law) ಕಾಪಾಡುವ ಜವಾಬ್ದಾರಿ ಮಾಧವನ ಮೇಲಿದೆ. ಮಗ ಅವಿನಾಶ್ ಕೋಪಗೊಂಡಿದ್ದಾನೆ.


  ಪ್ರೀತಿಯ ಮಾವ ಈ ಮಾಧವ
  ಮಾಧವ ಅಂದ್ರೆ ಅಡುಗೆ ಕಾರ್ಯಕ್ರಮ ನಡೆಸಿ ಕೊಡೋ ಪಾತ್ರ. ಅವರು ಮಾಡೋ ಅಡುಗೆ, ಅವರ ನೀತಿ ಪಾಠಗಳು ತುಂಬಾ ಜನರಿಗೆ ಇಷ್ಟ. ತುಳಸಿ ಸಹ ಇವರ ದೊಡ್ಡ ಅಭಿಮಾನಿ. ಊರೆಲ್ಲಾ ಇಷ್ಟ ಪಡೋ ಮಾಧವನನ್ನು ಮನೆಯಲ್ಲಿ ಮಗನೇ ಇಷ್ಟ ಪಡಲ್ಲ. ತಂದೆಯನ್ನು ಕಂಡ್ರೆ ಆಗಲ್ಲ. ಆದ್ರೆ ಸೊಸೆ ಪೂರ್ಣಿಗೆ ಮಾವ ಅಂದ್ರೆ ತುಂಬಾ ಇಷ್ಟ.


  ತಾನೇ ಕಾರ್ ಡ್ರೈವ್ ಮಾಡಿದ ಮಾಧವ
  ಪೂರ್ಣಿಗೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಿದ್ದಾರೆ. ಗಂಡ ಕೆಲಸದ ಮೇಲೆ ಬೇರೆ ಊರಿಗೆ ಹೋಗಿದ್ದಾನೆ. ಪೂರ್ಣಿಗೆ ಹೊಟ್ಟೆ ನೋವು ಬಂದು ಒದ್ದಾಡುತ್ತಿದ್ದಾಳೆ. ಅಳುತ್ತಿದ್ದಾಳೆ. ಅಲ್ಲಿಗೆ ಮಾಧವ ಬಂದಿದ್ದಾನೆ. ಡ್ರೈವರ್ ಗೆ ಹೇಳಿ, ಕಾರು ತೆಗೆಯಲು ಹೇಳಿ ಆಸ್ಪತ್ರೆಗೆ ಹೋಗಬೇಕು ಎನ್ನುತ್ತಾನೆ. ಆದ್ರೆ ಮನೆಯಲ್ಲಿ ಯಾವ ಡ್ರೈವರ್ ಸಹ ಇರಲ್ಲ. ಅದಕ್ಕೆ ಅವನೇ ಡ್ರೈವ್ ಮಾಡಿಕೊಂಡು ಆಸ್ಪತ್ರೆಗೆ ಹೋಗಿದ್ದಾನೆ.


  ಇದನ್ನೂ ಓದಿ: Ramachari: ಚಾರುಗಾಗಿ ಮನೆಯವರಿಗೆ ವಿಲನ್ ಆದ ರಾಮಾಚಾರಿ, ಕಣ್ಣು ಕಾಣದವಳಿಗೆ ಉಪಚಾರ! 


  ಪೂರ್ಣಿ ಪ್ರಾಣ ಅಪಾಯದಲ್ಲಿ
  ಆಸ್ಪತ್ರೆಯಲ್ಲಿ ಡಾಕ್ಟರ್, ಪೂರ್ಣಿ ಪ್ರಾಣ ಅಪಾಯದಲ್ಲಿದೆ. ಬೇಗ ಅವರ ಗಂಡನನ್ನು ಕರೆಸು ಎಂದು ಹೇಳ್ತಾ ಇದ್ದಾರೆ. ಮಾಧವ ಕಾಲ್ ಮಾಡಿದ್ರೂ ಅವಿನಾಶ್ ತೆಗೆಯುತ್ತಿಲ್ಲ. ಮಗು ಅಥವಾ ಸೊಸೆ ಇಬ್ಬರಲ್ಲಿ ಒಬ್ಬರ ಪ್ರಾಣ ಉಳಿಸಿಕೊಳ್ಳಬೇಕಿದೆ. ಅದಕ್ಕೆ ಸೈನ್ ಮಾಡಿಕೊಡಲು ಒದ್ದಾಡುತ್ತಿದ್ದಾನೆ. ಕಣ್ಣೀರು ಹಾಕುತ್ತಿದ್ದಾನೆ.


  zee kannada serial, kannada serial, shrirasthu shubhamasthu serial, avinash angry about father madhav, ಶ್ರೀರಸ್ತು ಶುಭಮಸ್ತು ಧಾರಾವಾಹಿ, ಸೊಸೆ ಪ್ರಾಣ ಉಳಿಸುವ ಜವಾಬ್ದಾರಿ ಮಾಧವನ ಮೇಲೆ, ಅವಿನಾಶ್ ಕೆಂಡಾಮಂಡಲ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಪೂರ್ಣಿ


  ಸಲಹೆ ನೀಡಿದ ತುಳಸಿ
  ಮಾಧವ ಟೆನ್ಷನ್ ನಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಆಗ ತುಳಸಿ ಕಾಲ್ ಬಂದಿದೆ. ಮಾಧವ ಸರ್ ಗೆ ತುಳಸಿ ಸಲಹೆ ನೀಡಿದ್ದಾರೆ. ನೀವು ದೇವರನ್ನು ಪ್ರಾರ್ಥನೆ ಮಾಡಿಕೊಂಡು, ನಿಮಗೆ ಏನು ಸರಿ ಅನ್ನಿಸುತ್ತೋ ಅದನ್ನು ಮಾಡಿ ಎನ್ನುತ್ತಾಳೆ. ಅದಕ್ಕೆ ಮಾಧವ ಪೂರ್ಣಿ ಉಳಿಸಿಕೊಳ್ಳಲು ಸೈನ್ ಮಾಡಿ ಕೊಟ್ಟಿದ್ದಾನೆ.


  zee kannada serial, kannada serial, shrirasthu shubhamasthu serial, avinash angry about father madhav, ಶ್ರೀರಸ್ತು ಶುಭಮಸ್ತು ಧಾರಾವಾಹಿ, ಸೊಸೆ ಪ್ರಾಣ ಉಳಿಸುವ ಜವಾಬ್ದಾರಿ ಮಾಧವನ ಮೇಲೆ, ಅವಿನಾಶ್ ಕೆಂಡಾಮಂಡಲ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ತುಳಸಿ


  ಅವಿನಾಶ್ ಕೆಂಡಾಮಂಡಲ
  ಮಾಧವ ಕಾರು ಓಡಿಸುತ್ತಾನೆ. ಆದ್ರೆ ಅಷ್ಟಾಗಿ ಬರಲ್ಲ. ಈ ಹಿಂದೆ ಕಾರು ಡ್ರೈವ್ ಮಾಡಲು ಹೋಗಿ ಅಪಘಾತ ಆಗಿರುತ್ತೆ. ಆ ಅಪಘಾತದಲ್ಲಿ ಮಾಧವನ ಹೆಂಡ್ತಿ ತೀರಿ ಹೋಗುತ್ತಾಳೆ. ಅದಕ್ಕೆ ಅವಿನಾಶ್ ಗೆ ಅಪ್ಪ ಮಾಧವನನ್ನು ಕಂಡ್ರೆ ಆಗಲ್ಲ. ಈಗ ನನ್ನ ಹೆಂಡ್ತಿ ಕೊಲ್ಲಲು ಕಾರು ಡ್ರೈವ್ ಮಾಡಿಕೊಂಡು ಬಂದ್ರಾ ಎಂದು ಅಪ್ಪನ ಕಾಲರ್ ಹಿಡಿದುಕೊಂಡಿದ್ದಾನೆ.


  zee kannada serial, kannada serial, shrirasthu shubhamasthu serial, avinash angry about father madhav, ಶ್ರೀರಸ್ತು ಶುಭಮಸ್ತು ಧಾರಾವಾಹಿ, ಸೊಸೆ ಪ್ರಾಣ ಉಳಿಸುವ ಜವಾಬ್ದಾರಿ ಮಾಧವನ ಮೇಲೆ, ಅವಿನಾಶ್ ಕೆಂಡಾಮಂಡಲ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಮಾಧವ


  ಇದನ್ನೂ ಓದಿ: Kannadathi: ಭುವಿ ರಕ್ಷಣೆಗೆ ಬಂದ ಹರ್ಷನಿಗೆ ಅಪಾಯ, ತನ್ನನ್ನು ತಾನು ಕಾಪಾಡಿಕೊಳ್ತಾನಾ? 


  ಪೂರ್ಣಿ ಪ್ರಾಣ ಅಪಾಯದಲ್ಲಿದೆ, ಮಾಧವನಿಗೆ ಬಿಸಿ ತುಪ್ಪವಾದ ಮಗನ ನಡೆ, ಅವಿನಾಶ್ ಕೋಪ ಕಡಿಮೆ ಆಗಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ನೋಡಬೇಕು.

  Published by:Savitha Savitha
  First published: