Sathya Serial: ಅತ್ತೆ ಸೀತಾ ಚುಚ್ಚು ಮಾತಿನಿಂದ ತಾಳ್ಮೆ ಕಳೆದುಕೊಳ್ಳುತ್ತಾಳಾ ಸತ್ಯ?

ಸತ್ಯ ಈಗ ಕೋಟೆಮನೆಯ (Kote Mane) ಸೊಸೆಯಾಗಿ ಕಾಲಿಟ್ಟು ಹೊಸ ಹೊಸ ಪರೀಕ್ಷೆಗಳನ್ನು ಎದುರಿಸುತ್ತಿದ್ದಾಳೆ. ಕಾರ್ತಿಕ್ ತಾಯಿ ಚುಚ್ಚು ಮಾತಿನಿಂದ ನೊಂದು ಹೋಗಿದ್ದಾಳೆ ಸತ್ಯ. 

ಸತ್ಯ

ಸತ್ಯ

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಸತ್ಯ (Sathya) ಧಾರಾವಾಹಿಗೆ ಎಲ್ಲಾ ವಯಸ್ಸಿನವರೂ ಅಭಿಮಾನಿಗಳೇ. ಹೌದು ಅಮೂಲ್ ಬೇಬಿ ಕಾರ್ತಿಕ್ (Amul Baby Karthik) ಮತ್ತು ರೌಡಿ ಸತ್ಯಾಳ ಕ್ಯೂಟ್ ಜಗಳ ನೋಡಲು ಪ್ರೇಕ್ಷಕರು ಪ್ರತಿದಿನ ಕಾಯುತ್ತಾ ಇರುತ್ತಾರೆ. ಇದೀಗ ಸತ್ಯ (Sathya) ಮತ್ತು ಅಮೂಲ್ ಬೇಬಿ ಮದುವೆಯಾದ ಬಳಿಕವಂತೂ ಅವರಿಬ್ಬರ ಕೋಳಿ ಜಗಳ ನೋಡಲು ಖುಷಿಯಾಗುತ್ತದೆ. ಸತ್ಯ ಈಗ ಕೋಟೆಮನೆಯ (Kote Mane) ಸೊಸೆಯಾಗಿ ಕಾಲಿಟ್ಟು ಹೊಸ ಹೊಸ ಪರೀಕ್ಷೆಗಳನ್ನು ಎದುರಿಸುತ್ತಿದ್ದಾಳೆ. ಕಾರ್ತಿಕ್ ತಾಯಿ ಚುಚ್ಚು ಮಾತಿನಿಂದ ನೊಂದು ಹೋಗಿದ್ದಾಳೆ ಸತ್ಯ. ಪ್ರತಿ ಸಂಚಿಕೆಯಲ್ಲಿ ಹೊಸ ಹೊಸ ಟ್ವಿಸ್ಟ್ ಗಳನ್ನು ನೀಡುವ ಮೂಲಕ ಪ್ರೇಕ್ಷಕರಲ್ಲಿ ಇನ್ನೇನು ನಡೆಯಲಿದೆ ಎಂಬ ಕುತೂಹಲವನ್ನು ಹೆಚ್ಚಿಸುತ್ತಿದೆ.

    ಅತ್ತೆ ಸೀತಾಳ ಮನಸ್ಸನ್ನು ಯಾವಾಗ ಗೆಲ್ಲುತ್ತಾಳೆ ಸತ್ಯಾ

    ಕೋಟೆ ಮನೆಯಲ್ಲಿ ಎಲ್ಲಾ ವಿಚಾರಗಳಿಗೂ ಸಂಸ್ಕೃತಿ ಆಚಾರ-ವಿಚಾರಗಳ ಕಟ್ಟುಪಾಡು ಇದೆ. ಅಮೂಲ್ ಬೇಬಿ ತಾಯಿ ಸೀತಾಳಿಗೆ ಆರಂಭದಿಂದಲೂ ಸತ್ಯಾಳನ್ನು ಕಂಡರೆ ಎಲ್ಲಿಲ್ಲದ ಕೋಪ. ಪತಿ ರಾಮಚಂದ್ರರಾಯರ ಮಾತಿಗೆ ಕಟ್ಟುಬಿದ್ದು ಸತ್ಯಳನ್ನು ಮನೆಯ ಸೊಸೆಯನ್ನಾಗಿ ಮಾಡಿಕೊಂಡಿದ್ದಾರೆ ಸೀತಾ.

    ಇದೀಗ ಆಕೆ ಮನೆಯೊಳಗೆ ಕಾಲಿಡುತ್ತಿದ್ದಂತೆ ಒಂದೊಂದು ಎಡವಟ್ಟುಗಳನ್ನು ಮಾಡುತ್ತಿದ್ದಾಳೆ. ಮನೆಗೆ ಕಾಲಿಟ್ಟ ಮೊದಲ ದಿನವೇ ಎಡವಟ್ಟುಗಳನ್ನು ಮಾಡಿದ ಸತ್ಯಾಳಿಗೆ ಅತ್ತೆ ಸೀತಾ ಅಡುಗೆ ಕೋಣೆಗೆ ಇನ್ನು ಕಾಲಿರಿಸಿದಂತೆ ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಾಳೆ.

    ರಾಮಚಂದ್ರರಾಯರ ಸಂತೋಷಕ್ಕೋಸ್ಕರ ಇದೀಗ ಸತ್ಯ ಹಾಗೂ ಅಮೂಲ್ ಬೇಬಿ ಪರಸ್ಪರ ಇಷ್ಟಪಟ್ಟವರಂತೆ ನಾಟಕವಾಡುತ್ತಿದ್ದಾರೆ. ಆದರೆ ಇವರಿಬ್ಬರು ‌ಮಾತ್ರ ಜೊತೆಗೆ ಇದ್ದಾಗ ಹಾವು ಮುಂಗುಸಿಗಳ ತರ ಜಗಳವನ್ನು ಆಡುವುದನ್ನು ಮದುವೆಯಾದ ಬಳಿಕವೂ ಮುಂದುವರಿಸಿದ್ದಾರೆ.

    ಇದನ್ನೂ ಓದಿ: Gattimela Serial: ಸಂಕಷ್ಟದಿಂದ ಹೇಗೆ ಹೊರಗೆ ಬರ್ತಾಳೆ ರೌಡಿ ಬೇಬಿ? ವರ್ಕೌಟ್ ಆಗ್ಬಿಡ್ತಾ ಸುಹಾಸಿನಿ ಪ್ಲಾನ್?

    ಖಾಲಿ ಕೈಯಲ್ಲಿ ತವರು ಮನೆಯಿಂದ ಗಂಡನ ಮನೆಗೆ ಕಾಲಿರಿಸಿದ ಸತ್ಯಾ

    ಖಾಲಿ ಕೈಯಲ್ಲಿ ತವರು ಮನೆಯಿಂದ ಗಂಡನ ಮನೆಗೆ ಕಾಲಿರಿಸಿದ ಸತ್ಯಾಳ ಬಳಿ ಉಟ್ಟ ಸೀರೆ ಬಿಟ್ಟು ಬೇರೇನೂ ಇಲ್ಲ‌. ಇದೇ ಕಾರಣಕ್ಕೆ ಆಕೆ ತನ್ನ ಪತಿ ಅಮೂಲ್ ಬೇಬಿಯ ಪ್ಯಾಂಟ್ ಮತ್ತು ಶರ್ಟ್ ಅನ್ನು ಹಾಕಿಕೊಂಡು ಅಮೂಲ್ ಬೇಬಿ ಮುಂದೆ ಬರುತ್ತಾಳೆ.

    ಈ ರೀತಿ ಡ್ರೆಸ್ ಮಾಡಿಕೊಂಡು ರೂಮಿನಿಂದ ಹೊರ ಹೋದರೆ ತಾಯಿ ಸೀತಾ ಸತ್ಯಾಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅರಿತ ಕಾರ್ತಿಕ್ ತನ್ನ ಅಕ್ಕ ಕೀರ್ತನಾ ಬಳಿಯಿಂದ ಸತ್ಯಾಳಿಗೆ ಸೀರೆ ಕೇಳಿ ತರುತ್ತಾನೆ. ಇದನ್ನು ತಪ್ಪಾಗಿ ತಿಳಿದುಕೊಂಡ ಅಕ್ಕ ಕೀರ್ತನ ಮತ್ತು ಅವಳ ಗಂಡ ಸುಹಾಸ್ ಮದುವೆಯಾದ ಒಂದೇ ದಿನಕ್ಕೆ ಸತ್ಯಾ ಕಾರ್ತಿಕ್ ಅನ್ನು ಬುಟ್ಟಿಗೆ ಹಾಕಿಕೊಂಡಿದ್ದಾಳೆ ಎಂದು ಅಂದುಕೊಳ್ಳುತ್ತಾರೆ.

    ಇದನ್ನೂ ಓದಿ: Hitler Kalyana Serial: ಎಜೆ ನೀಡಿದ ಸರ್ಪ್ರೈಸ್ ಲೀಲಾ ಫುಲ್ ಖುಷ್! ಎಡವಟ್ಟು ಸುಂದರಿ ಲವ್​ನಲ್ಲಿ ಬಿದ್ಲಾ?

    ಯೂಟ್ಯೂಬ್ ನೋಡಿ ಸೀರೆ ಉಡಲು ಕಲಿತ ರೌಡಿ ಸತ್ಯ

    ಮದುವೆಯ ಮುನ್ನ ಪ್ಯಾಂಟ್ ಶರ್ಟ್ ಹಾಕಿಕೊಂಡು ಆರಾಮವಾಗಿದ್ದ ಸತ್ಯಾಳಿಗೆ ಈಗ ಸೀರೆ ಉಡುವ ಅನಿವಾರ್ಯತೆ ಎದುರಾಗಿದೆ. ಇದೇ ಕಾರಣಕ್ಕೆ ಆಕೆ ಯುಟ್ಯೂಬ್ ನೋಡಿಕೊಂಡು ಸೀರೆ ಉಡುವುದನ್ನು ಕೂಡ ಕಲಿತುಕೊಂಡಿದ್ದಾಳೆ.

    ಸೀರೆ ಉಟ್ಟು ಕೆಳಗಡೆ ಬಂದ ಸತ್ಯ ಅತ್ತೆಯ ಮನಸ್ಸನ್ನು ಗೆಲ್ಲಲು ದೇವರ ಕೋಣೆಯ ಕಡೆ ಹೋಗಿ ದೇವರ ದೀಪ ಉರಿಸಲು ತಯಾರಾಗುತ್ತಾಳೆ. ಇದನ್ನು ಕಂಡ ಅತ್ತೆ ಸೀತಾ ಸತ್ಯಾಳಿಗೆ ಬಹಳ ಅವಮಾನ ಮಾಡುತ್ತಾಳೆ. ಮುಂದೆ ಇಂದಿಗೂ ನಿನಗೆ ಈ ದೇವರ ಕೊಣೆ ಒಳಕ್ಕೆ ಪ್ರವೇಶಿಸಲು ಅನುಮತಿ ಇಲ್ಲ.

    ನಿನ್ನೆ ನೀನು ಮಾಡಿದ ಆವಾಂತರ ಸಾಕು ಎಂದು ಹೇಳಿಬಿಡುತ್ತಾಳೆ. ಇದನ್ನು ಕೇಳಿದ ತಕ್ಷಣ ಈಗ ಸತ್ಯ ತನ್ನ ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾಳೆ. ಇದೇ ಸಿಟ್ಟಿನಲ್ಲಿ ಅತ್ತೆಯ ಮೇಲೆ ರೇಗಾಡುತ್ತಾಳಾ ಸತ್ಯಾ ಎಂದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
    Published by:Swathi Nayak
    First published: