Sathya Serial: ಕೋಟೆ ಮನೆ ಸೊಸೆ ಸತ್ಯಾಳಿಗೆ ಇನ್ನು ಪ್ರತಿದಿನ ಹೊಸ ಹೊಸ ಪರೀಕ್ಷೆ!

ಕೋಟೆ ಮನೆಯಲ್ಲಿ ಅವಳು ಮಾಡುತ್ತಿರುವ ಅವಾಂತರಗಳು ನೋಡಲು ಖುಷಿ ಎನಿಸಿದರು ಅವಳ ಪರಿಸ್ಥಿತಿ ಕಂಡು ಅಯ್ಯೋ ಅನಿಸುತ್ತದೆ. ಸಂಸ್ಕಾರ ಆಚಾರ ವಿಚಾರಗಳ ಬಗ್ಗೆ ಏನೂ ತಿಳಿಯದ ಸತ್ಯ ಕೋಟೆ ಮನೆಯಲ್ಲಿ ಇನ್ನೇನು ಕಷ್ಟ ಅನುಭವಿಸುತ್ತಾಳೆ ಎನ್ನುವುದೇ ಪ್ರೇಕ್ಷಕರ ಪ್ರಶ್ನೆ.

ಸತ್ಯ

ಸತ್ಯ

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿ ಸತ್ಯ (Sathya) ಇದೀಗ ಹೊಸ ತಿರುವುಗಳೊಂದಿಗೆ ಪ್ರೇಕ್ಷಕರನ್ನು ಉತ್ತಮ ರೀತಿಯಲ್ಲಿ ಮನರಂಜಿಸುತ್ತಿದೆ. ಪ್ರತಿ ಸಂಚಿಕೆಯಲ್ಲಿ ಹೊಸ ಹೊಸ ಟ್ವಿಸ್ಟ್ (Twist) ಗಳನ್ನು ನೀಡುವ ಮೂಲಕ ಪ್ರೇಕ್ಷಕರಲ್ಲಿ ಇನ್ನೇನು ನಡೆಯಲಿದೆ ಎಂಬ ಕುತೂಹಲವನ್ನು ಹೆಚ್ಚಿಸುತ್ತಿದೆ. ಸತ್ಯಾಳಿಗೆ ಅಮೂಲ್ ಬೇಬಿ ಕಾರ್ತಿಕ್ (Karthik) ಜೊತೆ ಮದುವೆ ನಡೆದಿದೆ. ಕೋಟೆ ಮನೆಯಲ್ಲಿ ಅವಳು ಮಾಡುತ್ತಿರುವ ಅವಾಂತರಗಳು ನೋಡಲು ಖುಷಿ ಎನಿಸಿದರು ಅವಳ ಪರಿಸ್ಥಿತಿ ಕಂಡು ಅಯ್ಯೋ ಅನಿಸುತ್ತದೆ. ಸಂಸ್ಕಾರ ಆಚಾರ ವಿಚಾರಗಳ ಬಗ್ಗೆ ಏನೂ ತಿಳಿಯದ ಸತ್ಯ ಕೋಟೆ ಮನೆಯಲ್ಲಿ ಇನ್ನೇನು ಕಷ್ಟ ಅನುಭವಿಸುತ್ತಾಳೆ ಎನ್ನುವುದೇ ಪ್ರೇಕ್ಷಕರ ಪ್ರಶ್ನೆ.

     ಸುಳ್ಳಿನ ಅರಮನೆಯಲ್ಲಿ  ದಿವ್ಯಾಳಿಗೆ ತಾಳಿ ಕಟ್ಟಿದ ಬಾಲ

    ಮದುವೆ ಮನೆಯಿಂದ ಓಡಿಹೋದ ದಿವ್ಯಾಳ ಕತೆ ಬಗ್ಗೆ ಎಲ್ಲರಿಗೂ ಒಂದು ಸಂಶಯವಿತ್ತು. ಹೌದು ಬಾಲನ ನಿಜ ರೂಪ ತಿಳಿದು ಮರಳಿ ಮದುವೆ ಮನೆಗೆ ಬಂದು ಸತ್ಯಳಾ ಮದುವೆ ಕೆಡಿಸುತ್ತಾಳೆ ಅಂದುಕೊಂಡರೆ ಅಲ್ಲಿ ನಡೆದಿದ್ದೇ ಬೇರೆ. ಬಾಲನ ಸುಳ್ಳಿನ ಕೋಟೆಯಲ್ಲಿ ಬಂಧಿಯಾಗಿದ್ದಾಳೆ ದಿವ್ಯಾ. ಶ್ರೀಮಂತಿಕೆ ವೈಭೋಗಗಳನ್ನು ಬಯಸುತ್ತಿದ್ದ ದಿವ್ಯಾಳಿಗೆ ಬಾಲ ಸರಿಯಾಗಿಯೇ ಚಳ್ಳೆಹಣ್ಣು ತಿನ್ನಿಸಿದ್ದಾನೆ.

    ತಾನು ಶ್ರೀಮಂತ ಎಂದು ನಂಬಿಸಿ ದಿವ್ಯಾಳ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾನೆ ಬಾಲ. ದಿವ್ಯ ಅಂತೂ ತನ್ನ ಮುಂದಿನ ಜೀವನದ ಬಗ್ಗೆ ದೊಡ್ಡ ದೊಡ್ಡ ಕನಸುಗಳು ಇಟ್ಟುಕೊಂಡು ಪ್ರಪಂಚವನ್ನೇ ಮರೆತವಳಂತೆ ಇದ್ದಾಳೆ. ಸುಳ್ಳಿನ ಮೇಲೆ ಸುಳ್ಳು ಹೇಳಿ ಸುಂದರವಾದ ಕಥೆ ಕಟ್ಟಿ ಇದೀಗ ಬಾಲ ದಿವ್ಯಾಳಿಗೆ ಸುಳ್ಳಿನ ಅರಮನೆಯಲ್ಲಿ ತಾಳಿ ಕಟ್ಟಿದ್ದಾನೆ.

    ನಿನ್ನೆಯ ಸಂಚಿಕೆಯಲ್ಲಿ ಅವರಿಬ್ಬರೂ ಜೊತೆಗೆ ತಾಳಿ ಕಟ್ಟಿಸಿಕೊಂಡು ಫೋಟೋ ಕೂಡ ತೆಗೆದುಕೊಂಡಿದ್ದಾರೆ. ಮುಂದೆ ಬಾಲನ ನಿಜ ರೂಪ ಬಯಲಾದರೆ ದಿವ್ಯ ಏನು ಮಾಡುತ್ತಾರೆ ಎಂಬುದರ ಬಗ್ಗೆ ಊಹೆ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ.

    ಇದನ್ನೂ ಓದಿ: Actress Koli Ramya: ಬದುಕಿನಲ್ಲಿ ಏಳು-ಬೀಳೂಗಳನ್ನು ಕಂಡ ನಟಿ ಕೋಳಿ ರಮ್ಯಾ ಲೈಫ್​ಸ್ಟೋರಿ ಇದು

    ಬೈಕಿನಲ್ಲಿ ಕಾರ್ತಿಕ್ ಮನೆಗೆ ತಲುಪಿದ್ದಳು ಸತ್ಯ

    ಇತ್ತ ಸತ್ಯ ಬಾಳು ಅತಂತ್ರವಾಗಿದೆ. ಅಮೂಲ್ ಬೇಬಿ ಕಾರ್ತಿಕ್ ನ ಮೊದಲೇನೂ ತುಂಬಾ ಇಷ್ಟಪಡುತ್ತಿದ್ದ ಸತ್ಯ ಕನಕ ದಿವ್ಯಾಳನ್ನು ಮದುವೆಯಾಗುತ್ತಿರುವ ಹುಡುಗ ಇವನೇ ಎಂದು ತಿಳಿದ ಮೇಲೆ ತನ್ನಲ್ಲಿರುವ ಪ್ರೀತಿಯನ್ನು ಸುಟ್ಟುಕೊಂಡಿದ್ದರು ಸತ್ಯ. ಆದರೆ ಅನಿವಾರ್ಯವಾಗಿ ರಾಮಚಂದ್ರರಾಯರ ಮಾತಿಗೆ ಕಟ್ಟುಬಿದ್ದು ಸತ್ಯ ಇದೀಗ ಕಾರ್ತಿಕ್ ನ ಮದುವೆಯಾಗಿದ್ದಾಳೆ. ಇವರಿಬ್ಬರ ಮಧ್ಯೆ ಆರಂಭದಲ್ಲಿ ಒಳ್ಳೆಯ ಸ್ನೇಹ ಇದ್ದರೂ ಮದುವೆಯ ನಂತರ ಪರಸ್ಪರ ದ್ವೇಷಗಳಂತೆ ನಡೆದುಕೊಳ್ಳುತ್ತಿದ್ದಾರೆ. ಸತ್ಯವನ್ನು ನಡುದಾರಿಯಲ್ಲಿ ಬಿಟ್ಟು ಕೂಡ ಬಂದಿದ್ದ.

    ರಾಯಲ್ ಆಗಿ ಸತ್ಯ ತನ್ನ ಬೈಕಿನಲ್ಲಿ ಕಾರ್ತಿಕ್ ಮನೆಗೆ ಮದುವೆಯ ಬಳಿಕ ತಲುಪಿದ್ದಳು. ಕೋಟೆ ಮನೆಯಲ್ಲಿ ಕೀರ್ತನ ಸುಹಾಸ್ ಹಾಗೂ ಕಾರ್ತಿಕ್ ತಾಯಿ ಸತ್ಯಳನ್ನು ವಿನಾಕಾರಣ ದ್ವೇಷಿಸುತ್ತಿದ್ದಾರೆ. ಕಾರ್ತಿಕ್ ತಾಯಿ ಅಂತೂ ಮಾತುಮಾತಿಗೆ ಸತ್ಯಳಿಗೆ ಸಂಸ್ಕೃತಿ ಇಲ್ಲ, ಒಳ್ಳೆಯ ನಡತೆಯಿಂದ ರೌಡಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಚುಚ್ಚುತ್ತಿದ್ದಾರೆ.

    ಇದನ್ನೂ ಓದಿ: Sushma Shekhar: ಗಿಣಿರಾಮ ಧಾರಾವಾಹಿ ಮೂಲಕ ಮತ್ತೆ ನಟನೆಗೆ ಮರಳುತ್ತಿದ್ದಾರೆ ಸುಷ್ಮಾ ಶೇಖರ್

    ಸತ್ಯಳಿಗೆ ಮನೆಯಲ್ಲಿ ಪ್ರತಿದಿನವೂ ಹೊಸ ಹೊಸ ಪರೀಕ್ಷೆ

    ಅವರು ಹೇಳುವಂತೆ ಸತ್ಯ ಇಲ್ಲಿ ಸೇರು ಒದಿಯುವ ಸಂದರ್ಭದಲ್ಲಿ ಅದನ್ನು ರೌಡಿಯಂತೆ ಕುಟ್ಟಿದಾಗ ಅದು ಮನೆಯ ಅಳಿಯ ಸುಹಾಸ್ ನ ತಲೆಗೆ ತಾಗಿತ್ತು. ಇನ್ನು ದೇವರ ಕೋಣೆಗೆ ಹೋಗಿ ದೀಪ ಹಚ್ಚಲು ಹೇಳಿದಾಗ ಅಲ್ಲೂ ಕೂಡ ಬೆಂಕಿ ಕಡ್ಡಿಯನ್ನು ರಾಯಲ್ ಆಗಿ ಕೀರಿದ್ದಳು. ಅರಿಶಿನ-ಕುಂಕುಮವನ್ನು ಎಲ್ಲಿ ಹಚ್ಚಿಕೊಳ್ಳಬೇಕು ಎನ್ನುವುದು ಕೂಡ ಆಕೆಗೆ ತಿಳಿಯುತ್ತಿಲ್ಲ. ಮುಂದೆ ಸತ್ಯಳಿಗೆ ಮನೆಯಲ್ಲಿ ಪ್ರತಿದಿನವೂ ಹೊಸ ಹೊಸ ಪರೀಕ್ಷೆ ಎದುರಾಗುವುದರಲ್ಲಿ ಸಂಶಯವಿಲ್ಲ. ಈ ಎಲ್ಲಾ ಪರೀಕ್ಷೆಗಳ ನಡುವೆ ಸತ್ಯ ಕಾರ್ತಿಕ್ ನ ಪ್ರೀತಿಯನ್ನು ಮತ್ತೆ ಮರಳಿ ಹೇಗೆ ಪಡೆಯುತ್ತಾರೆ ಎಂಬುದೇ ಪ್ರೇಕ್ಷಕರ ಪ್ರಶ್ನೆಯಾಗಿದೆ.
    Published by:Swathi Nayak
    First published: