Sathya Serial: ಕೋಟೆ ಮನೆಯ ಸೊಸೆ ಸತ್ಯಾಳಿಗೆ ಪ್ರತಿ ದಿನ ಅಗ್ನಿ ಪರೀಕ್ಷೆ ! ಸೀತಾಳ ಮನಸ್ಸನ್ನು ಯಾವಾಗ ಗೆಲ್ಲುತ್ತಾಳೆ ಸತ್ಯಾ

ಸತ್ಯ ಈಗ ಕೋಟೆ ಮನೆಯ ಸೊಸೆಯಾಗಿ ಕಾಲಿಟ್ಟು ಹೊಸ ಹೊಸ ಪರೀಕ್ಷೆಗಳನ್ನು ಎದುರಿಸುತ್ತಿದ್ದಾಳೆ. ಕಾರ್ತಿಕ್ ತಾಯಿ ಚುಚ್ಚು ಮಾತಿನಿಂದ ನೊಂದು ಹೋಗಿದ್ದಾಳೆ ಸತ್ಯ.

ಸತ್ಯ

ಸತ್ಯ

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಯಲ್ಲಿ ಸತ್ಯ (Sathya) ಧಾರಾವಾಹಿ ಕೂಡ ಒಂದು. ಇದೀಗ ಹೊಸ ತಿರುವುಗಳೊಂದಿಗೆ ಪ್ರೇಕ್ಷಕರನ್ನು ಉತ್ತಮ ರೀತಿಯಲ್ಲಿ ಮನರಂಜಿಸುತ್ತಿದೆ. ಪ್ರತಿ ಸಂಚಿಕೆಯಲ್ಲಿ ಹೊಸ ಹೊಸ ಟ್ವಿಸ್ಟ್ ಗಳನ್ನು ನೀಡುವ ಮೂಲಕ ಪ್ರೇಕ್ಷಕರಲ್ಲಿ ಇನ್ನೇನು ನಡೆಯಲಿದೆ ಎಂಬ ಕುತೂಹಲವನ್ನು ಹೆಚ್ಚಿಸುತ್ತಿದೆ. ಸತ್ಯಾಳಿಗೆ ಅಮೂಲ್ ಬೇಬಿ ಕಾರ್ತಿಕ್ (Karthik) ಜೊತೆ ಮದುವೆ ನಡೆದಿದೆ. ಸತ್ಯ ಈಗ ಕೋಟೆ ಮನೆಯ (Kote Mane) ಸೊಸೆಯಾಗಿ ಕಾಲಿಟ್ಟು ಹೊಸ ಹೊಸ ಪರೀಕ್ಷೆಗಳನ್ನು ಎದುರಿಸುತ್ತಿದ್ದಾಳೆ. ಕಾರ್ತಿಕ್ ತಾಯಿ ಚುಚ್ಚು ಮಾತಿನಿಂದ ನೊಂದು ಹೋಗಿದ್ದಾಳೆ ಸತ್ಯ.

  ಅತ್ತೆ ಸೀತಾಳ ಕೆಂಗಣ್ಣಿಗೆ ಮತ್ತೆ ಮತ್ತೆ ‌ಗುರಿಯಾಗುತ್ತಾಳೆ ಸತ್ಯಾ

  ಸಂಸ್ಕೃತಿ ಆಚಾರ-ವಿಚಾರಗಳ ಬಗ್ಗೆ ಸತ್ಯಾಳಿಗೆ ಏನೂ ತಿಳಿದಿಲ್ಲ. ಈಗ ಅವಳು ಕೋಟೆ ಮನೆಯ ಸೊಸೆಯಾಗಿ ಕಾಲಿಟ್ಟಿದ್ದಾಳೆ. ಕೋಟೆ ಮನೆಯಲ್ಲಿ ಎಲ್ಲಾ ವಿಚಾರಗಳಿಗೂ ಸಂಸ್ಕೃತಿ ಆಚಾರ-ವಿಚಾರಗಳ ಕಟ್ಟುಪಾಡು ಇದೆ. ಅಮೂಲ್ ಬೇಬಿ ತಾಯಿ ಸೀತಾಳಿಗೆ ಆರಂಭದಿಂದಲೂ ಸತ್ಯಾಳನ್ನು ಕಂಡರೆ ಎಲ್ಲಿಲ್ಲದ ಕೋಪ. ಪತಿ ರಾಮಚಂದ್ರರಾಯರ ಮಾತಿಗೆ ಕಟ್ಟುಬಿದ್ದು ಸತ್ಯಳನ್ನು ಮನೆಯ ಸೊಸೆಯನ್ನಾಗಿ ಮಾಡಿಕೊಂಡಿದ್ದಾರೆ ಸೀತಾ. ಇದೀಗ ಆಕೆ ಮನೆಯೊಳಗೆ ಕಾಲಿಡುತ್ತಿದ್ದಂತೆ ಒಂದೊಂದು ಎಡವಟ್ಟುಗಳನ್ನು ಮಾಡುತ್ತಿದ್ದಾಳೆ.

  ದೇವರ ಕೋಣೆಯಲ್ಲಿ ದೀಪ ಉರಿಸುವ ಸಂದರ್ಭದಲ್ಲಿ ಬೆಂಕಿ ಕಡ್ಡಿಯನ್ನು ರೌಡಿಗಳ ಕೀರುತ್ತಾಳೆ. ಬಳಿಕ ತೆಂಗಿನಕಾಯಿ ಒಡೆಯುವ ಸಂದರ್ಭದಲ್ಲಿ ರಭಸದಲ್ಲಿ ತೆಂಗಿನಕಾಯಿಯಲ್ಲಿ ಹೊಡೆದು ಮನೆಯ ಅಳಿಯ ಸುಹಾಸ್ ತಲೆಗೆ ಪೆಟ್ಟಾಗುವಂತೆ ಮಾಡುತ್ತಾಳೆ. ಹೀಗೆ ಪ್ರತಿ ವಿಚಾರದಲ್ಲೂ ಎಡವಟ್ಟು ಮಾಡುವ ಸತ್ಯಳಿಗೆ ಮಾತು ಮಾತಿನಲ್ಲಿ ಚುಚ್ಚುತ್ತಿದ್ದಾರೆ ಅತ್ತೆ ಸೀತಾ.

  ಅಲ್ಲಿಗೆ ಆಕೆಯ ಎಡವಟ್ಟು ನಿಲ್ಲದೆ ಬಳಿಕ ಅಡುಗೆ ಕೋಣೆಯಲ್ಲಿ ಹಾಲು ಉಕ್ಕಿಸುವ ಶಾಸ್ತ್ರ ಮಾಡಲು ಹೇಳಿದಾಗ ಹಾಲಿನ ಪ್ಯಾಕೆಟನ್ನು ಬಾಯಲ್ಲೇ ಓಪನ್ ಮಾಡಲು ಹೋಗುತ್ತಾಳೆ. ಬಳಿಕ ಗ್ಯಾಸ್ ನಲ್ಲಿ ಇರಿಸಿದ ಹಾಲಿನ ಬಿಸಿ ಪಾತ್ರೆಯನ್ನು ಖಾಲಿ ಕೈಯಲ್ಲಿ ಎತ್ತಲು ಹೊರಟಾಗ ಹಾಲಿನ ಪಾತ್ರೆ ಕೆಳಗೆ ಬೀಳುತ್ತದೆ. ಅಲ್ಲೂ ಅತ್ತೆ ಸೀತಾಳ ಕೆಂಗಣ್ಣಿಗೆ ‌ಗುರಿಯಾಗುತ್ತಾಳೆ.

  ಇದನ್ನೂ ಓದಿ: 777 Charlie: ತಮಿಳುನಾಡಿನಲ್ಲೂ ಚಾರ್ಲಿ ಹವಾ, ಈ ಥರ ಕಟೌಟ್​​ ಯಾವ್​ ಹೀರೋಗಳಿಗೂ ಹಾಕಿಲ್ಲ ರೀ

  ಮಗಳಿಗೆ ಸಮಾಧಾನ ಹೇಳಿ ಸಂತೈಸುತ್ತಿರುವ ಜಾನಕಿ

  ಕೋಟೆ ಮನೆಯ ಆಚಾರ ವಿಚಾರಗಳನ್ನು ಕಂಡು ಸತ್ಯಾಳಿಗೆ ಭಯ ಕೂತಿದೆ. ಜಾನಕಿಯ ಬಳಿ ಸತ್ಯ ಅಳುತ್ತಾ ನಾನು ಮನೆಗೆ ವಾಪಸ್ ಬರುತ್ತೇನೆ ಎಂದು ಹೇಳಿ ಬಿಡುತ್ತಾಳೆ.

  ಜಾನಕಿ ಸತ್ಯಾಳನ್ನು ಸಂತೈಸುತ್ತಾ ಜೀವನದಲ್ಲಿ ನೀನು ಎಷ್ಟೆಲ್ಲಾ ಕಷ್ಟ ಪಟ್ಟಿರುವೆ ಅದರ ನಡುವೆ ಇದಕ್ಕೆಲ್ಲ ಹೆದರಬಾರದು. ದಿನ ಹೋದಂತೆ ಎಲ್ಲಾ ಕೆಲಸಗಳನ್ನು ನೀನು ಅಚ್ಚುಕಟ್ಟಾಗಿ ಕಲಿಯುತ್ತಿಯ. ತಾಯಿಯ ಈ ಮಾತಿನಿಂದ ಸತ್ಯಾಳಿಗೆ ಕೊಂಚ ಸಮಾಧಾನವಾದಂತೆ ಕಾಣಿಸುತ್ತಿದೆ.

  ಇದನ್ನೂ ಓದಿ: Reality Show: ಡಿಕೆಡಿ - ಡ್ರಾಮಾ ಜೂನಿಯರ್ಸ್ ಮಹಾಸಂಗಮ, ಜೀ ಕನ್ನಡದಲ್ಲಿ ಮನರಂಜನೆಯ ಮಹಾಪೂರ

  ರಾಮಚಂದ್ರರಾಯರಿಗೆ ಸತ್ಯಾಳ ಮೇಲೆ ಸಂಪೂರ್ಣ ನಂಬಿಕೆ

  ತಾಯಿಯ ಬಳಿ ಸತ್ಯ ಫೋನ್ ನಲ್ಲಿ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ ರಾಮಚಂದ್ರರಾಯರಿಗೆ ಬೇಸರವಾಗುತ್ತದೆ. ಆದರೆ ಸತ್ಯಾಳ ಮೇಲೆ ಸಂಪೂರ್ಣ ನಂಬಿಕೆ ಇರುವ ರಾಯರಿಗೆ ಸತ್ಯ ಗಟ್ಟಿಗಿತ್ತಿ ಹುಡುಗಿ ಎಲ್ಲವನ್ನೂ ಆದಷ್ಟು ಬೇಗ ಕಲಿಯುತ್ತಾಳೆ ಸ್ವಲ್ಪ ದಿನ ಹೋದಮೇಲೆ ಎಲ್ಲವೂ ಸರಿಯಾಗುತ್ತದೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ.

  ಊಟಕ್ಕೆ ಕುಳಿತುಕೊಂಡ ಸಂದರ್ಭದಲ್ಲಿ ಕೂಡ ಸೀತಾ ಸತ್ಯಾಳನ್ನು ಹಂಗಿಸಿ ಮಾತನಾಡುತ್ತಾಳೆ. ಬೆಳಗ್ಗೆ ಎದ್ದ ತಕ್ಷಣ ಕುಲದೇವರ ದರ್ಶನಕ್ಕೆ ಗಂಡು ಹೆಣ್ಣನ್ನು ಕರೆದುಕೊಂಡು ಹೋಗಬೇಕು ಎನ್ನುವ ವಿಚಾರ ಬಂದಾಗ ಕಾರ್ತಿಕ್ ತನ್ನ ತಂದೆ ರಾಮಚಂದ್ರರಾಯರನ್ನು ಮದುವೆಯ ಬಳಿಕ ನಿಮಗೆ ಬಹಳ ಸುಸ್ತಾಗಿದೆ ನೀವು ರೆಸ್ಟ್ ಮಾಡಿ ಎಂದು ಹೇಳುತ್ತಾನೆ.

  ಆದರೂ ಸತ್ಯಾಳ ಪರ ನಿಂತ ರಾಯರು ಆಕೆಗೆ ಕಣ್ಣಿನಲ್ಲೇ ಸಮಾಧಾನ ‌ಮಾಡುತ್ತಾರೆ. ಇನ್ನು ಮುಂದೆ ಸತ್ಯ ಕೋಟೆ ಮನೆಯಲ್ಲಿ ಎಂತಹ ಕಷ್ಟಗಳನ್ನು ಅನುಭವಿಸುತ್ತಾಳೆ ಎನ್ನುವುದನ್ನು ಕಾದು ನೋಡಬೇಕಿದೆ.
  Published by:Swathi Nayak
  First published: