ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ‘ಸತ್ಯ‘ (Sathya Serial) ಸೀರಿಯಲ್ನಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ರಾಮಚಂದ್ರ ರಾಯರು ಗುರುಗಳ ಮಾತಿನಂತೆ ಸತ್ಯಳ ಬಳಿ ತನ್ನ ಮಗ ಕಾರ್ತಿಕ್ನನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಾರೆ ಆದರೆ ಸತ್ಯ ಈ ಮಾತನ್ನು ತಿರಸ್ಕರಿಸಿ ಮದುವೆ ಮನೆಯಿಂದ ಹೊರಟುಬಿಡುತ್ತಾಳೆ. ಇತ್ತ ಕಾರ್ತಿಕ್ ನ ತಾಯಿ ಸೀತಾ ನಿಶಾ ಜೊತೆ ಕಾರ್ತಿಕ್ ನ ಮದುವೆ (Marriage) ಮಾಡಿಸಲು ಹೊರಟಿದ್ದಾಳೆ. ವೀಕ್ಷಕರ ಮುಂದಿರುವ ಪ್ರಶ್ನೆ ನಿಗದಿಯಾದ ಮುಹೂರ್ತದಲ್ಲಿ ಕಾರ್ತಿಕ ಮದುವೆ ಯಾರ ಜೊತೆಯಾಗುತ್ತದೆ ಎಂಬ ಕುತೂಹಲ (Sathya Serial Twist) ಮನೆಮಾಡಿದೆ. ಅಷ್ಟಕ್ಕೂ ಮುಂದೇನಾಗುತ್ತೆ?
ಕಾರ್ತಿಕ್ ಜೊತೆ ರಾಮಚಂದ್ರ ರಾಯರ ಮಾತು! ರಾಮಚಂದ್ರರಾಯರು ಕಾರ್ತಿಕ್ ಬಳಿ ಬಂದು ನಾನು ತೋರಿಸಿದ ಹುಡುಗಿಯೊಂದಿಗೆ ಮದುವೆ ಮಾಡಿಕೊಳ್ಳಬೇಕು ಎಂದು ಮಾತು ತೆಗೆದುಕೊಂಡಿದ್ದಾರೆ. ಕಾರ್ತಿಕ್ ಕೂಡ ಹಿಂದುಮುಂದು ನೋಡದೆ ತಂದೆ ಮಾತಿಗೆ ' ನೀವು ಯಾವುದೇ ಹುಡುಗಿಯನ್ನು ತೋರಿಸಿದರು ನಾನು ಮದುವೆಯಾಗಲು ಸಿದ್ಧನಿದ್ದೇನೆ' ಎಂದು ತಂದೆಗೆ ಹೇಳಿದ್ದಾನೆ. ತಂದೆಯ ಅನಾರೋಗ್ಯದ ಬಗ್ಗೆ ಕಾರ್ತಿಕ್ ಇಗೆ ಭಯ ಇರುವುದೇ ಇದಕ್ಕೆ ಕಾರಣ. ಒಲ್ಲದ ಮನಸ್ಸಿನಿಂದ ಕಾರ್ತಿಕ ಮದುವೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆ.
ಸತ್ಯ ಮದುವೆಯಲ್ಲಿ ಗಿರಿಜಮ್ಮ ಮತ್ತು ಜಾನಕಿ ಸತ್ಯ ಈ ಮದುವೆಗೆ ಉಪ್ಪಿ ಕಾರ್ತಿಕ್ ಜೊತೆ ಖುಷಿಯಿಂದ ಮದುವೆಯಾಗುತ್ತಾಳೆ ಎನ್ನುವ ಭರವಸೆಯಿಂದ ವೇದಿಕೆಯಲ್ಲಿ ಸತ್ಯ ತಾಯಿ ಜಾನಕಿ ಹಾಗೂ ಗಿರಿಜಮ್ಮ ಕಾಯುತ್ತಿದ್ದಾರೆ. ಅತ್ತ ದೊಡ್ಡಪ್ಪ ಮದುಮಗಳು ಯಾರು ಎಂಬ ಕುತೂಹಲದಿಂದ ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಆದರೆ ಕಾರ್ತಿಕ್ ಗೂ ಕೂಡ ಮದುವೆಯಾಗುತ್ತಿರುವ ಹುಡುಗಿಯರು ಎಂಬ ಸೂಚನೆ ಇಲ್ಲ. ಮದುವೆಗೆ ಬಂದಿರುವಂತಹ ಎಲ್ಲಾ ಅತಿಥಿಗಳ ಮನದಲ್ಲಿ ಮದುವೆ ಹುಡುಗಿ ಯಾರೆಂಬ ಪ್ರಶ್ನೆ ಪ್ರಶ್ನೆಯಾಗಿ ಉಳಿದಿದೆ. ಈ ಬಗ್ಗೆ ತಿಳಿದಿರುವುದು ರಾಮಚಂದ್ರರಾಯರಿಗೆ ಮಾತ್ರ.
ಕೀರ್ತನಾಳ ಪ್ಲಾನ್ ಪ್ಲಾಪ್ ಆಗುವ ಸೂಚನೆ ಇದೆ ವೇದಿಕೆಗೆ ಹೋಗಿ ಕೀರ್ತನಾ ಕಾರ್ತಿಕ್ ನ ಮದುವೆಯಾಗುತ್ತಿರುವ ಹುಡುಗಿ ನಿಶಾ ಎಂದು ಹೇಳಿ ಬಿಡುತ್ತಾಳೆ. ಅಪ್ಪ ತೋರಿಸಿದೆ ಯಾವುದೇ ಹುಡುಗಿಯನ್ನು ಆದರೆ ನಾನು ಮದುವೆಯಾಗಲು ತಯಾರಿದ್ದೇನೆ ಎಂದು ಕಾರ್ತಿಕ್ ಹೇಳಿದಾಗ ಕೀರ್ತನಾಳ ಖುಷಿ ಎಲ್ಲೆ ಇಲ್ಲದಂತ್ತಾಗುತ್ತದೆ. ಆದರೆ ರಾಮಚಂದ್ರರಾಯರ ಉದ್ದೇಶ ಬೇರೆಯೇ ಇದೆ ಈ ಬಗ್ಗೆ ಕೀರ್ತನಾಳಿಗೆ ಸೂಚನೆ ಕೂಡ ಇಲ್ಲ.
ಕಾರ್ತಿಕ್ ತಾಯಿ ಸೀತಾ ಮನದಲ್ಲಿ ಗೊಂದಲ ರಾಮಚಂದ್ರರಾಯರ ನಡವಳಿಕೆಯಿಂದ ಪತ್ನಿ ಸೀತಾ ಗೊಂದಲಗೊಂಡಿದ್ದಾರೆ. ಮದುವೆಯಾಗಿ ಇಷ್ಟು ಸಮಯದಲ್ಲಿ ಯಾವುದೇ ವಿಚಾರದಲ್ಲಿ ನಿನ್ನ ಇಷ್ಟಕ್ಕೆ ವಿರುದ್ಧವಾಗಿ ನಾನೇನು ಮಾಡಲಿಲ್ಲ ಆದರೆ ಈ ಬಾರಿ ನಾನು ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸ ಬೇಡ ಹಾಗೆ ಕಾರ್ತಿಕ್ ನ ಮದುವೆ ಆ ಹುಡುಗಿಯ ಜೊತೆ ಮದುವೆಯಾಗುದನ್ನು ತಡೆಯ ಬೇಡ ಎಂದು ರಾಮಚಂದ್ರರಾಯರು ಪತ್ನಿ ಸೀತಾಳ ಬಳಿ ಮಾತನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಸೀತಾಳ ಮನದಲ್ಲಿ ಬಹಳ ಪ್ರಶ್ನೆಗಳು ಮೂಡಿವೆ. ಮತ್ತೆ ಮತ್ತೆ ರಾಮಚಂದ್ರರಾಯರ ಬಳಿ ಹುಡುಗಿ ಯಾರೆಂಬ ಎಂಬ ಪ್ರಶ್ನೆಯನ್ನು ಇಟ್ಟಿದ್ದಾಳೆ. ಆದರೆ ರಾಮಚಂದ್ರರಾಯರು ಯಾವುದೇ ಉತ್ತರವನ್ನು ನೀಡದೆ ಸುಮ್ಮನಿದ್ದು ವೇದಿಕೆಗೆ ಹುಡುಗಿ ಬಂದಾಗಲೇ ಎಲ್ಲರಿಗೂ ತಿಳಿಯಲಿ ಎಂದು ಹೇಳಿ ಅಲ್ಲಿಂದ ಹೋಗುತ್ತಾರೆ.
ಇಂದಿನ ಸಂಚಿಕೆಯಲ್ಲಿ ಪ್ರೇಕ್ಷಕರ ಮದುವೆಯ ಎಲ್ಲಾ ಗೊಂದಲಗಳು ಕೊನೆಗೊಳ್ಳಲಿದೆ ಮದುವೆಯ ತಯಾರಿಯಲ್ಲಿ ಕಾರ್ತಿಕ್ ನ ಚಿಕ್ಕಪ್ಪ ಓಡಾಡುತ್ತಿದ್ದಾರೆ. ಇತ್ತ ಮದುವೆ ಹುಡುಗಿಯನ್ನು ಕಾರ್ತಿಕ್ ನ ತಂಗಿ ತಯಾರು ಮಾಡುತ್ತಿದ್ದಾಳೆ ಎಂದು ಬಾಮೈದ ಹೇಳುತ್ತಾನೆ. ಪ್ರೇಕ್ಷಕರೆಲ್ಲರೂ ಕಾರ್ತಿಕ್ ನ ಮದುವೆ ಯಾರ ಜೊತೆ ಯಾಗುತ್ತದೆ ಎಂಬುವ ಗೊಂದಲದಲ್ಲಿದ್ದಾರೆ. ಇಂದಿನ ಸಂಚಿಕೆಯಲ್ಲಿ ಪ್ರೇಕ್ಷಕರ ಮದುವೆಯ ಎಲ್ಲಾ ಗೊಂದಲಗಳು ಕೊನೆಗೊಳ್ಳಲ್ಲಿದೆ.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ