ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ‘ಸತ್ಯ‘ (Sathya) ಸೀರಿಯಲ್ ನಲ್ಲಿ (Serial) ಬಿಗ್ ಟ್ವಿಸ್ಟ್ ಸಿಕ್ಕಿದೆ. ಮದುವೆಯ ಸಂಭ್ರಮದಲ್ಲಿರುವವರಿಗೆ ದೊಡ್ಡ ಆಘಾತ ಉಂಟಾಗಿದೆ. ಮದುವೆಯ ಮಂಟಪಕ್ಕೆ ಬರಬೇಕಿದ್ದ ಮಧುಮಗಳು ಕಾಣೆಯಾಗಿದ್ದಾರೆ. ಹೌದು, ಪುರೋಹಿತರು ಮದುವೆ ಮಂಟಪಕ್ಕೆ ಹುಡುಗಿಯನ್ನು ಕರೆದುಕೊಂಡು ಬನ್ನಿ ಎಂದಾಗ ಸತ್ಯ, ದಿವ್ಯಾ (Divya) ಸ್ನೇಹಿತೆ ರಮ್ಯಾಳನ್ನು (Ramya) ನೋಡಿ ಶಾಕ್ ಆಗಿದ್ದಾಳೆ. ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ (Karthik) ಮದುವೆ ನಿಂತು ಹೋಗುತ್ತೇನೋ ಎಂದು ಎಲ್ಲರೂ ತಿಳಿದಿದ್ದಾರೆ. ಆದರೆ ನಿಶ್ಚಯವಾದ ಮುಹೂರ್ತದಲ್ಲೇ ಮದುವೆ ಮಾಡಿ ಎಂದು ಗುರುಗಳು ತಿಳಿಸಿದ್ದಾರೆ. ಸತ್ಯ ಜೊತೆಗೆ ಮದುವೆ ಮಾಡಿಸಲು ರಾಮಚಂದ್ರ ರಾಯರು (Ramachandra) ನಿರ್ಧಾರ ಮಾಡಿದ್ದಾರೆ.
ಕಣ್ಣೀರು ಹಾಕುತ್ತಿರುವ ಜಾನಕಿ, ಗಿರಿಜಮ್ಮ!
ಒಬ್ಬ ಮಗಳಿಗೋಸ್ಕರ ಮತ್ತೊಬ್ಬಳು ಮಗಳ ಬಾಳನ್ನು ಕತ್ತಲೆಗೆ ದೂಡಿ ತಪ್ಪು ಮಾಡಿದ್ವಿ. ಆದರೆ ಆ ದೇವರು ನಮಗೆ ಸರಿಯಾಗೇ ಪಾಠ ಕಲಿಸಿದ್ದಾನೆ. ನಡೀರಿ ಬೀಗರು ಬರುವ ಮುಂಚೆ ಹೊರಟು ಬಿಡೋಣ. ಇನ್ನು ಹೆಚ್ಚು ಹೊತ್ತು ನಾವು ಇಲ್ಲಿರುವುದು ಬೇಡ ಎಂದು ಜಾನಕಿ ಹೇಳುತ್ತಾಳೆ. ಇತ್ತ ಜಾನಕಿ ಹಾಗೂ ಗಿರಿಜಮ್ಮ ನೊಂದುಕೊಂಡಿರುತ್ತಾರೆ. ಸತ್ಯ ಸಮಾಧಾನ ಮಾಡುತ್ತಿರುತ್ತಾಳೆ. ಆದರೆ ಅಷ್ಟರಲ್ಲಿ ರಾಮಚಂದ್ರ ರಾಯರು ಬಂದು, ಕಣ್ತಪ್ಪಿಸಿ ಹೋಗಬೇಕು ಎಂದು ಕೊಂಡಿದ್ದೀರಾ. ಎಲ್ಲಿಗೆ ಹೊರಟಿದ್ದೀರಾ ಎಂದು ರಾಮಚಂದ್ರ ರಾಯರು ಕೇಳುತ್ತಾರೆ. ಆಗ ಜಾನಕಿ ಹಾಗೂ ಗಿರಿಜಮ್ಮ ಇನ್ನಿಲ್ಲಿದ್ದು ನಾವೇನು ಮಾಡೋದು, ನಿಮ್ಮ ಮನೆ ಆಸೆಪಟ್ಟು ತಪ್ಪು ಮಾಡಿದ್ವಿ ಎಂದು ಕ್ಷಮೆ ಕೇಳುತ್ತಾರೆ.
ಸತ್ಯ ಗುಣಗಳನ್ನು ಕಾರ್ತಿಕ್ ಒಪ್ಪಿಕೊಂಡಿರುವುದು. ಈ ಮದುವೆಯಾಗುವುದರಿಂದ ಎಲ್ಲವೂ ಸರಿ ಹೋಗುತ್ತೆ. ಎರಡೂ ಜೋಡಿಗಳೂ ಒಂದಾಗುತ್ತವೆ ಎನ್ನುತ್ತಾರೆ. ಆದರೆ ರಾಮಚಂದ್ರ ರಾಯರು ತಾಂಬೂಲ ತೆಗೆದುಕೊಳ್ಳದೆ ಹಾಗೆ ಹೊರಟು ಬಿಡುತ್ತಾರೆ. ಹುಡುಗರು ನಾವು ಸತ್ಯ ತಮ್ಮಂದಿರು., ತಾಂಬುಲ ಕೊಡುತ್ತಿದ್ದೇವೆ ಇಲ್ಲ ಎನ್ನದೇ ತೆಗೆದುಕೊಳ್ಳಿ. ಈ ಮೂಲಕನಾದರೂ ಸತ್ಯ ಪ್ರೀತಿಗೆ ಜಯ ಸಿಗುತ್ತೆ. ಕಾರ್ತಿಕ್ ಕೂಡ ಸತ್ಯಳನ್ನ ಇಷ್ಟಪಟ್ಟಿದ್ದಾನೆ ಎನ್ನುತ್ತಾರೆ. ಆದರೆ. ರಾಮಚಂದ್ರ ರಾಯರು ಸುಮ್ಮನೆ ಹೋಗುತ್ತಾರೆ. ಆದರೆ ಹುಡುಗರು ಅಷ್ಟಕ್ಕೇ ಸುಮ್ಮನಾಗದೇ, ಆವತ್ತು ಮಂಗಳಮುಖಿಗೆ ಸಹಾಯ ಮಾಡಿದ್ದು ಸತ್ಯ, ಆದರೆ ಕಾರ್ತಿಕ್ ದಿವ್ಯಾ ನ ನೋಡಿ ಕನ್ಫ್ಯೂಸ್ ಆಗಿದ್ದಾರೆ.
ಸತ್ಯ-ಕಾರ್ತಿಕ್ ಪ್ರೀತಿ ವಿಚಾರ ಬಹಿರಂಗ!
ಸತ್ಯ ಹಾಗೂ ಅಮೂಲ್ ಬೇಬಿ ಪ್ರೀತಿ ವಿಚಾರವನ್ನು ರಾಮಚಂದ್ರ ರಾಯರ ಬಳಿ ಮಾತನಾಡಬೇಕು. ಕಾರ್ತಿಕ್ ಹಾಗೂ ಸತ್ಯಗೆ ಮದುವೆ ಮಾಡಿಸಬೇಕು ಎಂದು ಕಾಕ್ರೋಚ್ ಹಾಗೂ ಸ್ನೇಹಿತರು ನಿರ್ಧಾರ ಮಾಡಿದ್ದಾರೆ. ಹಾಗಾಗಿ ಈ ವಿಚಾರವನ್ನು ಮಾತನಾಡಲು ರಾಮಚಂದ್ರ ರಾಯರನ್ನು ಭೇಟಿ ಮಾಡಿದ್ದಾರೆ. ಹಣ್ಣು-ಹೂವು ಹಿಡಿದುಕೊಂಡು ಬಂದಿರುವ ಹುಡುಗರು ರಾಮಚಂದ್ರ ರಾಯರಿಗೆ ಕೊಡಲು ಮುಂದಾಗಿದ್ದು, ಈಗ ಮದುವೆ ನಿಲ್ಲುವ ಬದಲು ಸತ್ಯ ಅವರ ಜೊತೆಗೆ ಮದುವೆ ಮಾಡಿಸಬಹುದಲ್ವಾ ಎಂದು ಹೇಳುತ್ತಾರೆ. ಹುಡುಗರ ಮಾತು ಕೇಳಿದ ರಾಮಚಂದ್ರ ರಾಯರು ಒಂದು ಕ್ಷಣ ಶಾಕ್ ಆಗುತ್ತಾರೆ.
ಆಗ ರಾಮಚಂದ್ರ ರಾಯರು ಇಟ್ಟ ಮುಹೂರ್ತದಲ್ಲೇ ಮದುವೆ ನಡೆಯುತ್ತೆ ಗಂಡು-ಹೆಣ್ಣಿಗೆ ಆಶೀರ್ವಾದ ಮಾಡಿನೇ ಹೋಗಬೇಕು ಎನ್ನುತ್ತಾರೆ. ನಡೆದ ಎಲ್ಲಾ ಘಟನೆಗಳು ನೆಪವಷ್ಟೇ. ನಿಮ್ಮ ಮೊಮ್ಮೊಗಳನ್ನು ನಮ್ಮ ಮನೆ ತುಂಬಿಸಿಕೊಳ್ಳುತ್ತೀನಿ ಎಂದು ಮಾತು ಕೊಟ್ಟಿದ್ದೀನಿ. ಈಗಲೂ ಆ ಮಾತನ್ನು ಉಳಿಸಿಕೊಳ್ಳೋದಕ್ಕೆ ಬಂದಿದ್ದೀನಿ ಎಂದು ರಾಮಚಂದ್ರ ರಾಯರು ಹೇಳುತ್ತಾರೆ. ಅಲ್ಲಿಗೆ ಸತ್ಯ ಹಾಗೂ ಕಾರ್ತಿಕ್ ಮದುವೆ ನಡೆಯೋದು ಪಕ್ಕಾ ಆಗಿದೆ. ಆದರೆ ಈ ಮದುವೆಗೆ ಸೀತಾ ಹಾಗೂ ಕಾರ್ತಿಕ್ ಒಪ್ಪುತ್ತಾರಾ ಕಾದು ನೋಡಬೇಕಿದೆ.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ