Sathya Serial: ಬೈಕ್ ನಲ್ಲೇ ಅತ್ತೆ ಮನೆಗೆ ರಾಯಲ್ ಆಗಿ ಎಂಟ್ರಿ ಕೊಡ್ತಾಳಾ ಸತ್ಯಾ?

ಕಾರ್ತಿಕ್ ಇತ್ತೀಚೆಗೆ ಸತ್ಯಗಳನ್ನು ಅತಿಯಾಗಿ ದ್ವೇಷಿಸುತ್ತಾನೆ. ಮದುವೆ ವಿಚಾರದಲ್ಲಂತೂ ಆಕೆಯನ್ನು ಶತ್ರುವಂತೆ ಕಾಣುತ್ತಿದ್ದಾನೆ ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇತ್ತು. ದಿನದಿಂದ ದಿನಕ್ಕೆ ರೋಚಕ ತಿರುವುಗಳಲ್ಲಿ ಧಾರಾವಾಹಿ ಮುನ್ನುಗ್ಗುತ್ತಿದೆ.

ಸತ್ಯ

ಸತ್ಯ

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಸತ್ಯ (Sathya) ಧಾರವಾಹಿಗೆ ಎಲ್ಲಾ ವಯಸ್ಕರು ಅಭಿಮಾನಿಗಳೇ ಆಗಿದ್ದಾರೆ. ಹೌದು ಲೇಡಿ ರಾಮಾಚಾರಿ ಹಾಗೂ ಅಮುಲ್ ಬೇಬಿ ಕ್ಯೂಟ್ ಲವ್ ಸ್ಟೋರಿ ನೋಡಲು ಎಲ್ಲರೂ ಕಾಯುತ್ತಾರೆ. ಇದೀಗ ದಾರವಾಹಿಯಲ್ಲಿ ಹೊಸದೊಂದು ತಿರುವು ಬಂದು ಸತ್ಯ ಹಾಗೂ ಕಾರ್ತಿಕ್ (Karthik) ಮದುವೆ ಕೂಡ ಆಗಿದೆ. ಈ ಅನಿರೀಕ್ಷಿತ ತಿರುವು ಮುಂದೇನಾಗುತ್ತದೆ ಎಂಬ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಕಾರ್ತಿಕ್ ಇತ್ತೀಚೆಗೆ ಸತ್ಯಗಳನ್ನು ಅತಿಯಾಗಿ ದ್ವೇಷಿಸುತ್ತಾನೆ. ಮದುವೆ (Marriage) ವಿಚಾರದಲ್ಲಂತೂ ಆಕೆಯನ್ನು ಶತ್ರುವಂತೆ ಕಾಣುತ್ತಿದ್ದಾನೆ ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇತ್ತು. ದಿನದಿಂದ ದಿನಕ್ಕೆ ರೋಚಕ ತಿರುವುಗಳಲ್ಲಿ ಧಾರಾವಾಹಿ ಮುನ್ನುಗ್ಗುತ್ತಿದೆ.

  ಸತ್ಯಳ ಗ್ಯಾಂಗ್ ನ ಗೆಳೆತನದ ಶಕ್ತಿ

  ಸತ್ಯಳ ಗ್ಯಾಂಗ್ ನ ಎಲ್ಲಾ ಸಹಾಯ ಕಂಡು ಎಂಥವರಿಗಾದರೂ ಗೆಳೆತನದ ಮೇಲೆ ನಂಬಿಕೆ ಬರಬಹುದು. ಸತ್ಯ ಹಾಗೂ ಗ್ಯಾಂಗ್ ಎಲ್ಲಾ ಕೆಲಸಗಳಲ್ಲೂ ಜೊತೆಯಾಗಿ ಇದ್ದವರು. ಅಮೂಲ್ ಬೇಬಿ ಮತ್ತು ಸತ್ಯ ಒಂದಾಗಬೇಕೆಂದು ತಮ್ಮಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ ಇವರು, ಗೆಳೆತನದ ಶಕ್ತಿಯಲ್ಲಿ ಪ್ರದರ್ಶನವಾಗುತ್ತದೆ.

  ರಾಮಚಂದ್ರರಾಯರಿಗೆ ತಾಂಬೂಲ ನೀಡಿ ಸತ್ಯಳಾ ಮದುವೆ ಕಾರ್ತಿಕ್ ಜೊತೆ ಮಾಡಿಕೊಡಿ ಎಂದು ತಮ್ಮಂದಿರ ಸ್ಥಾನದಲ್ಲಿ ನಿಂತು ಬೇಡಿದ್ದಾರೆ ಈ ಹುಡುಗರು. ಸತ್ಯ ಕಾರು ಹತ್ತಿ ಕಾರ್ತಿಕ್ ಜೊತೆ ಹೋಗುವ ಆ ಸಂದರ್ಭದಲ್ಲಿ ಅವರು ಪಟ್ಟ ವ್ಯಕ್ತಿಯನ್ನು ಕಂಡರೆ ಎಂಥವರ ಕಣ್ಣಲ್ಲೂ ನೀರು ಬರಬಹುದು.

  ಇದನ್ನೂ ಓದಿ: Jothe Jotheyali: ಅಧರ್ಮದ ವಿರುದ್ಧ ಹೋರಾಡಲು ಜೊತೆಯಾದ ಅನು-ಮೀರಾ! ಇನ್ನೇನು ಕಾದಿದೆ ಆರ್ಯವರ್ಧನ್‌ಗೆ?

  ತಾಯಿ ಜಾನಕಿ ಮತ್ತು ಗಿರಿಜಮ್ಮನ ಉಪದೇಶ

  ಲೇಡಿ ರಾಮಚಾರಿಯಾಗಿ ಫೈಟಿಂಗ್ ಬೈಕ್ ರೈಡಿಂಗ್ ಸ್ಪ್ಯಾನರ್ ಹಿಡಿದುಕೊಂಡು ಕೆಲಸ ಮಾಡುವ ಸತ್ಯಾ ಈಗ ಕೋಟೆ ಮನೆಯ ಸೊಸೆ. ಅವಳ ಆಚಾರ ವಿಚಾರಕ್ಕೂ ಕೋಟಿ ಮನೆಯ ಸಂಸ್ಕೃತಿಗೂ ಅಜಗಜಾಂತರ ವ್ಯತ್ಯಾಸ ಇದೆ. ಈ ಬಗ್ಗೆ ಸತ್ಯಾಳ ತಾಯಿ ಜಾನಕಿ ಸತ್ಯಾಳಿಗೆ ಗಿಣಿಗೆ ಹೇಳಿದಂತೆ ಬುದ್ಧಿ ಹೇಳಿದ್ದಾರೆ. ಆ ಮನೆ ಸಂಸ್ಕೃತಿಗೆ ಹೊಂದಿಕೊಂಡು ಒಳ್ಳೆಯ ರೀತಿಯಲ್ಲಿ ಬಾಳು ನಡೆಸು ಎಂದು ಕಿವಿ ಮಾತನ್ನು ಹೇಳಿದ್ದಾರೆ.

  ಕೋಟೆ ಮನೆಯ ಆಚಾರ-ವಿಚಾರಗಳಿಗೆ ಸತ್ಯ ಹೇಗೆ ಹೊಂದಿಕೊಳ್ಳುತ್ತಾಳೆ ಎಂಬ ಚಿಂತೆ ತಾಯಿಯಲ್ಲಿ ಎದ್ದು ಕಾಣುತ್ತಿತ್ತು. ಆದರೂ ಇದರ ಜೊತೆಗೆ ಖಾಲಿ ಕೈಯಲ್ಲಿ ಮಗಳನ್ನು ಗಂಡನ ಮನೆಗೆ ಕಳುಹಿಸಿ ಕೊಡುತ್ತಿದ್ದೇವೆ ಎಂಬ ನೋವು ಕೂಡ ಗಿರಿಜಮ್ಮ ಹಾಗೂ ಜಾನಕಿಯಲ್ಲಿ ಕಾಡುತ್ತಿದ್ದಂತು ಸುಳ್ಳಲ್ಲ.

  ಇದನ್ನೂ ಓದಿ: Paaru Serial: ಧಾಮಿನಿಯ ಕುತಂತ್ರಕ್ಕೆ ಬಲಿಯಾಗುತ್ತಾ ಜನನಿ-ಪಾರು ಸಂಬಂಧ! ಪಾರು ಧಾರಾವಾಹಿಯಲ್ಲಿ ಇದೇನಿದು ಟ್ವಿಸ್ಟ್

  ನಡುದಾರಿಯಲ್ಲಿ ಸತ್ಯಳನ್ನು ಬಿಟ್ಟು ಹೋದ ಕಾರ್ತಿಕ್?

  ಅನಿರೀಕ್ಷಿತವಾಗಿ ತಂದೆ ಮಾತಿಗೆ ಕಟ್ಟುಬಿದ್ದು ಕಾರ್ತಿಕ್ ಸತ್ಯಳನ್ನು ಮದುವೆಯಾಗಿದ್ದಾನೆ. ಸತ್ಯಳ ಅಕ್ಕ ದಿವ್ಯಾಳನ್ನು ಮನಸ್ಪೂರ್ತಿ ಆಗಿ ಇಷ್ಟ ಪಟ್ಟು ಮದುವೆಯಾಗಲು ಹೊರಟಿದ್ದ ಕಾರ್ತಿಕ್. ಆದರೆ ದಿವ್ಯ ಓಡಿಹೋಗಲು ಸತ್ಯಳೇ ಕಾರಣ ಎಂದು ಬಲವಾಗಿ ನಂಬಿದ್ದಾನೆ ಕಾರ್ತಿಕ್. ರಾಯರ ಮಾತಿಗೆ ಕಟ್ಟುಬಿದ್ದು ಅಮುಲ್ ಬೇಬಿನ  ಮದುವೆಯಾಗಲು ಒಪ್ಪಿಕೊಂಡಿದ್ದಾಳೆ ಸತ್ಯ ಆದರೆ ಈ ಬಗ್ಗೆ ಯಾರಿಗೂ ಅರಿವಿಲ್ಲ.

  ಮದುವೆಯಾದ ಬಳಿಕ ಮರಳಿ ಮನೆಗೆ ಹೋಗುವ ದಾರಿಯಲ್ಲಿ ಸತ್ಯಳನ್ನು ನಡುದಾರಿಯಲ್ಲಿ ಬಿಟ್ಟು ಹೋಗುತ್ತಾನೆ ಕಾರ್ತಿಕ್. ಆದರೆ ಲೇಡಿ ರಾಮಚಾರಿ ಒಂದು ಕ್ಷಣಕ್ಕೆ ದಂಗಾದರು ಮತ್ತೆ ತನ್ನ ಗೆಳೆಯರ ಸಹಾಯದಿಂದ ರಾಯಲ್ ಆಗಿ ಬೈಕ್ ನಲ್ಲಿ ಕಾರ್ತಿಕ್ ಕಾರ್ ನ ಪಕ್ಕವೇ ತಲುಪುತ್ತಾಳೆ.

  ಇತ್ತ ಮನೆಯಲ್ಲಿ ಕಾರ್ತಿಕ್ ಚಿಕ್ಕಪ್ಪ ಹಾಗೂ ಚಿಕ್ಕಮ್ಮ ಇವರ ಬರುವಿಕೆಗಾಗಿ ಕಾಯುತ್ತಿದ್ದಾರೆ. ಕಾರ್ತಿಕ್ ಹಾಗೂ ಸತ್ಯ ಜೊತೆಗೆ ಒಂದೇ ಕಾರಿನಲ್ಲಿ ಹೋಗುತ್ತಾರೆ ಎಂಬುವುದೇ ಪ್ರೇಕ್ಷಕರಿಗೆ ಕುತೂಹಲ.
  Published by:Swathi Nayak
  First published: