Sathya Serial: ಬಾಲನ ಸುಳ್ಳಿನ ಕೋಟೆಯಲ್ಲಿ ಬಂಧಿಯಾಗಿ ಬಿಟ್ಲಾ ದಿವ್ಯಾ? ಮುಂದಿದೆ ಬಿಗ್ ಟ್ವಿಸ್ಟ್!

ಸತ್ಯ ಮತ್ತು ಕಾರ್ತಿಕ್ ಮದುವೆ ಪರಸ್ಪರ ಇಷ್ಟವಿಲ್ಲದೆ ನಡೆದರು ಅವರಿಬ್ಬರ ನಡುವೆ ಮನದ ಮೂಲೆಯಲ್ಲೊಂದು ಪ್ರೀತಿಯ ಭಾವನೆ ಅಡಗಿದೆ ಎನ್ನುವ ಬಗ್ಗೆ ಪ್ರೇಕ್ಷಕರಿಗೆ ಆಗಾಗ ತಿಳಿಯುತ್ತಿದೆ. 

ದಿವ್ಯಾ

ದಿವ್ಯಾ

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಸತ್ಯ (Sathya) ಧಾರವಾಹಿ ಕೂಡ ಒಂದು. ಅಮೂಲ್ ಬೇಬಿ ಕಾರ್ತಿಕ್ (Karthik) ಮತ್ತು ಸತ್ಯ ನಡುವಿನ ಕ್ಯೂಟ್ ಜಗಳ ನೋಡಲು ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಇದೀಗ ಸತ್ಯ ಮತ್ತು ಕಾರ್ತಿಕ್ ಮದುವೆ ಪರಸ್ಪರ ಇಷ್ಟವಿಲ್ಲದೆ ನಡೆದರು ಅವರಿಬ್ಬರ ನಡುವೆ ಮನದ ಮೂಲೆಯಲ್ಲೊಂದು ಪ್ರೀತಿಯ ಭಾವನೆ ಅಡಗಿದೆ ಎನ್ನುವ ಬಗ್ಗೆ ಪ್ರೇಕ್ಷಕರಿಗೆ ಆಗಾಗ ತಿಳಿಯುತ್ತಿದೆ. ಸತ್ಯ ಮದುವೆಯಾಗಿ ಇದೀಗ ಸತ್ಯ ಕೋಟೆ ಮನೆಯ (Kote Mane) ಸೊಸೆ ಯಾಗಿದ್ದಾಳೆ. ಕೋಟೆ ಮನೆಯ ಆಚಾರ ವಿಚಾರ ಸಂಸ್ಕೃತಿಯ ಬಗ್ಗೆ ಏನು ತಿಳಿಯದ ಸತ್ಯ ಅಲ್ಲಿ ಅನುಭವಿಸುತ್ತಿರುವ ಸವಾಲುಗಳು ಕಂಡಾಗ ಪ್ರೇಕ್ಷಕರ ಮನದಲ್ಲಿ ನೋವುಂಟಾಗುವುದಂತು ಸುಳ್ಳಲ್ಲ.

    ಬಾಲನ ಮೋಸದ ಬಲೆಗೆ ಹಾಕಿಕೊಂಡ ದಿವ್ಯ
    ಶ್ರೀಮಂತಿಕೆ ಆಡಂಬರ ಮತ್ತು ಮಾಡರ್ನ್ ಲೈಫ್ ಸ್ಟೈಲ್ ಅನ್ನು ಬಯಸುತ್ತಿದ್ದ ದಿವ್ಯಾಳನ್ನು ಬಾಲ ಚೆನ್ನಾಗಿ ಮೋಸ ಮಾಡಿದ್ದಾನೆ. ದಿವ್ಯಾಳಿಗೆ ಇನ್ನೂ ಸತ್ಯದ ಅರಿವಾಗಿಲ್ಲ ಬಾಲ ಹೇಳಿದ ಸುಳ್ಳ ನೆಲ್ಲ ಸತ್ಯವೆಂದೇ ನಂಬಿ ಐಷಾರಾಮಿ ಜೀವನವನ್ನು ನಡೆಸುವ ಬಗ್ಗೆ ಕನಸು ಕಾಣುತ್ತಿದ್ದಾಳೆ. 

    ಸುಳ್ಳಿನ ಮೇಲೆ ಸುಳ್ಳು
    ಅಷ್ಟೇ ಅಲ್ಲದೆ ಈಗಾಗಲೇ ಬಾಲನ ಬಳಿ ಇದ್ದ ಎಲ್ಲಾ ದುಡ್ಡು ಖಾಲಿಯಾಗಿದೆ. ಆದರೆ ತನ್ನ ಬುದ್ಧಿವಂತಿಕೆಯಿಂದ ಮತ್ತೆ ಕೀರ್ತನಾಳ ಬಳಿಯಿಂದ ಸ್ವಲ್ಪ ದುಡ್ಡನ್ನು ಪಡಕೊಳ್ಳುವಲ್ಲಿ ಬಾಲ ಯಶಸ್ವಿಯಾಗಿದ್ದಾನೆ. ಮದುವೆಯಾದಾಗಿನಿಂದ ಬಾಲ ದಿವ್ಯಾಳನ್ನು ಯಾಮಾರಿಸಿಕೊಂಡು ಒಂದು ಹೋಟೆಲಿನಿಂದ ಇನ್ನೊಂದು ಹೋಟೆಲ್ ಗೆ ಕರೆದುಕೊಂಡು ಹೋಗಿ ಸುಳ್ಳುಗಳ  ಮೇಲೆ ಸುಳ್ಳುಗಳನ್ನು ಬಂದಿದ್ದಾನೆ. ದಿವ್ಯ ಕಳೆದ ಕೆಲವು ದಿನಗಳಿಂದ ಬಾಲನ ಬಳಿ ಐಷಾರಾಮಿ ಜೀವನದ ಆಸೆಗೆ ಬಲಿಯಾಗಿ ಬಂಗಲೆಗೆ ಕರೆದುಕೊಂಡು ಹೋಗಲು ಕೇಳುತ್ತಲೇ ಇದ್ದಾಳೆ. ಆದರೆ ಸುಳ್ಳಿನ ಮೇಲೆ ಸುಳ್ಳು ಹೇಳಿ ಬಾಲ ದಿವ್ಯಾಳನ್ನು ನಂಬಿಸುವ ಪ್ರಯತ್ನ ಮಾಡುತ್ತಿದ್ದಾನೆ.


    ಇದನ್ನೂ ಓದಿ: Nannarasi Radhe Serial: ಅಶ್ವಿನಿಯ ನಿಜರೂಪ ಬಯಲು ಮಾಡಿಬಿಟ್ಲಾ ಲಾವಣ್ಯ? ಮುಂದಿದೆ ಬಿಗ್ ಟ್ವಿಸ್ಟ್

    ಅಕ್ಕನ ಬಗ್ಗೆ ಕಟ್ಟು-ಕತೆ ಕಟ್ಟಿದ ಬಾಲ
    ತನ್ನ ಒಡಹುಟ್ಟಿದ ಅಕ್ಕ ಯಾರೋ ಒಬ್ಬ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದಳು. ಅದೇ ಕಾರಣಕ್ಕೆ ಸಿಟ್ಟಿನಲ್ಲಿ ಅಪ್ಪ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಒಂದು ಸುಳ್ಳು ಕಥೆಯನ್ನು ಬಾಲ ಸೃಷ್ಟಿಸಿ ದಿವ್ಯಾಳ ಬಳಿ ಹೇಳಿದ್ದಾನೆ. ಅಷ್ಟೇ ಅಲ್ಲದೆ ಹೋಟೆಲ್ ಸರ್ವೆಂಟ್ ಬಳಿ ಒಂದು ಸುಳ್ಳು ಕರೆಯನ್ನು ಮಾಡಿಸಿ ತಂದೆಯ ಜೊತೆ ಮಾತನಾಡಿಸುವಂತೆ ನಟಿಸಿ ದಿವ್ಯಾಳನ್ನು ಹೆದರಿಸುವ ಪ್ರಯತ್ನ ಮಾಡಿದ್ದಾನೆ ಬಾಲ.

    ಇದನ್ನೂ ಓದಿ: Kannadathi Serial: ಕನ್ನಡತಿಯಲ್ಲಿ ಕೊನೆಯಾಗುತ್ತಾ ಅಮ್ಮಮ್ಮನ ಪಾತ್ರ? ವಾಹಿನಿಯವರಲ್ಲಿ ಅಭಿಮಾನಿಗಳ ಕೋರಿಕೆ ಏನು?

    ಅತ್ತ ಹೋಟೆಲ್ ಸರ್ವೆಂಟ್ ಬಾಲನ ತಂದೆಯಂತೆ ಬಹಳ ಗಂಭೀರವಾಗಿ ಮಾತನಾಡಿ ಓಡಿ ಬಂದು ಮದುವೆಯಾಗಿರುವುದು ದೊಡ್ಡ ಪಾಪ ಕಾರ್ಯವೆಂಬಂತೆ ಮಾತನಾಡಿದ್ದಾನೆ. ಇದನ್ನು ನಂಬಿದ ದಿವ್ಯ ಜವಾಗೂ ಮಾವನ ಜೊತೆ ಮಾತನಾಡುವಂತೆ ಮಾವನನ್ನು ಒಲಿಸಿಕೊಳ್ಳಲು ಕ್ಷಮಾಪಣೆ ಕೂಡ ಕೇಳುತ್ತಾಳೆ. ಬಾಲನ ಪ್ಲಾನ್ ಯಾವಾಗ ದಿವ್ಯಾಳಿಗೆ ತಿಳಿಯುತ್ತದೆ ಎನ್ನುವ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಅಡಗಿದೆ.

    ವಠಾರದಲ್ಲಿ ಕಾರ್ತಿಕ್ ಗೆ ಅದ್ದೂರಿ ಸ್ವಾಗತ
    ಈಗಾಗಲೇ ಅಮೂಲ್ ಬೇಬಿ ಮತ್ತು ಕಾರ್ತಿಕ್ ಮದುವೆ ಆಗಿ ಹೋಗಿದೆ. ಮದುವೆಯಾದ ಬಳಿಕ ಮೊದಲ ಬಾರಿಗೆ ವಠಾರದ ಕಡೆಗೆ ದಂಪತಿಗಳು ಹೋಗುದ್ದಾರೆ. ವಠಾರದ ಜನಗಳು ಸತ್ಯ ಮತ್ತು ಕಾರ್ತಿಕ್ ಗೆ ಅದ್ಧೂರಿ ಸ್ವಾಗತವನ್ನು ನೀಡಿದ್ದಾರೆ ಮತ್ತು ಅವರ ಆಚಾರ-ವಿಚಾರಗಳನ್ನು ಪಾಲನೆ ಮಾಡುತ್ತಿದ್ದಾರೆ. ಕಾರ್ತಿಕ್ ಗೆ ಇದನ್ನೆಲ್ಲ ಕಂಡು ಬಹಳ ಕಿರಿಕಿರಿ ಕೂಡ ಆಗುತ್ತಿದೆ. ಆದರೆ ತಂದೆ ಮತ್ತು ಚಿಕ್ಕಪ್ಪನ ಸಂತೋಷಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಾನೆ ಅಮೂಲ್ಯ ಬೇಬಿ ಕಾರ್ತಿಕ್.
    Published by:Swathi Nayak
    First published: