Sathya Serial: ಕೋಟೆಮನೆ ಸತ್ಯಾಳಿಗೆ ಮತ್ತೆ ಮತ್ತೆ ಅಗ್ನಿಪರೀಕ್ಷೆ! ಅತ್ತೆ ಸೀತಾಳ ಮನಸ್ಸನ್ನು ಯಾವಾಗ ಗೆಲ್ಲುತ್ತಾಳೆ ಸತ್ಯ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಸತ್ಯ ಇದೀಗ ಪ್ರತಿದಿನ ಹೊಸ ತಿರುವುಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತದೆ. ಅಮೂಲ್ ಬೇಬಿ ಕಾರ್ತಿಕ್ ಜೊತೆ ಸತ್ಯಳ ಮದುವೆಯಾಗಿ ಇದೀಗ ಸತ್ಯ ಕೋಟೆ ಮನೆಯ ಸೊಸೆ ಯಾಗಿದ್ದಾಳೆ.
ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಸತ್ಯ (Sathya) ಇದೀಗ ಪ್ರತಿದಿನ ಹೊಸ ತಿರುವುಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತದೆ. ಅಮೂಲ್ ಬೇಬಿ ಕಾರ್ತಿಕ್ (Amul Baby Karthik) ಜೊತೆ ಸತ್ಯಳ ಮದುವೆಯಾಗಿ ಇದೀಗ ಸತ್ಯ ಕೋಟೆ ಮನೆಯ (Kote Mane) ಸೊಸೆ ಯಾಗಿದ್ದಾಳೆ. ಕೋಟೆ ಮನೆಯ ಆಚಾರ ವಿಚಾರ ಸಂಸ್ಕೃತಿಯ ಬಗ್ಗೆ ಏನು ತಿಳಿಯದ ಸತ್ಯ ಅಲ್ಲಿ ಅನುಭವಿಸುತ್ತಿರುವ ಸವಾಲುಗಳು ಕಂಡಾಗ ಪ್ರೇಕ್ಷಕರ ಮನದಲ್ಲಿ ನೋವುಂಟಾಗುವುದಂತು ಸುಳ್ಳಲ್ಲ. ಅತ್ತೆ ಸೀತಾಳ (Seetha) ಚುಚ್ಚುಮಾತು ಸತ್ಯಾಳಿಗೆ ಬಹಳ ನೋವು ಕೊಡುತ್ತಿದೆ. ಅಮೂಲ್ ಬೇಬಿ ಮತ್ತು ಸತ್ಯಾಳ ನಡುವೆ ಈಗೀಗ ಬಹಳ ಭಿನ್ನಾಭಿಪ್ರಾಯಗಳು ಕೂಡ ಮೂಡುತ್ತಿದೆ.
ರೌಡಿ ಗ್ಯಾಂಗ್ ಜೊತೆ ಫೈಟ್ ಮಾಡಿದ ಸತ್ಯಾ
ದೇವಸ್ಥಾನದಲ್ಲಿ ಪೂಜೆ ಸಂದರ್ಭದಲ್ಲಿ ರೀತು ಅನ್ನು ಚುಡಾಯಿಸಿದ ರೌಡಿ ಗ್ಯಾಂಗ್ ಯೊಂದಿಗೆ ಸತ್ಯ ಫೈಟ್ ಮಾಡುತ್ತಾಳೆ. ವಾಸ್ತವದಲ್ಲಿ ಇದು ಒಳ್ಳೆಯ ಕೆಲಸವೇ ಆಗಿದ್ದರೂ ಅತ್ತೆ ಸೀತಾಳ ಎದುರು ಇದೀಗ ಮತ್ತೆ ಸತ್ಯ ವಿಲನ್ ಕಾಣಿಸಿಕೊಂಡಿದ್ದಾಳೆ. ತಾನು ಮಾಡುವ ಪ್ರತಿ ಹೆಜ್ಜೆಯಲ್ಲೂ ತಪ್ಪನ್ನು ಹುಡುಕುತ್ತಿರುವ ಅತ್ತೆ ಸೀತಾಳ ಮನವನ್ನು ಸತ್ಯ ಯಾವಾಗ ಗೆಲ್ಲುತ್ತಾಳೆ ಎನ್ನುವುದನ್ನು ಕಾದು ನೋಡಬೇಕಿದೆ.
ಈಗಾಗಲೇ ದೇವಸ್ಥಾನದಲ್ಲಿ ಗುರುಗಳು ಸಿಕ್ಕಿ ಸತ್ಯಾಳ ಬಗ್ಗೆ ಒಳ್ಳೆಯ ವಿಚಾರಗಳನ್ನು ಹೇಳಿದ್ದಾರೆ ಅಷ್ಟೇ ಅಲ್ಲ ಮುಂದೆ ಕೋಟೆ ಮನೆಯನ್ನು ಕಾಪಾಡುವ ಶಕ್ತಿ ಈ ಹೆಣ್ಣಿನಲ್ಲಿದೆ ಎಂದು ಕೂಡ ಹೇಳಿದ್ದಾರೆ. ಆದರೆ ಗುರುಗಳು ಹೇಳಿದ ಮಾತುಗಳನ್ನು ಸೀತಾ ನಂಬಲು ತಯಾರಿಲ್ಲ. ಮತ್ತೆ ಮತ್ತೆ ಸತ್ಯದ ಮೇಲೆ ರೇಗಾಡುತ್ತಿದ್ದಾರೆ. ಯಾರನ್ನು ನೀವು ಇಂದು ತಿರಸ್ಕಾರ ಮಾಡುತ್ತಿದ್ದೀರೋ, ನಾಳೆ ಅವಳನ್ನೇ ನೀವು ಪುರಸ್ಕಾರ ಮಾಡುತ್ತೀರಾ. ಆ ದಿನಗಳು ಬಂದೇ ಬರುತ್ತದೆ ಎಂದು ಹೇಳಿ ಕಳುಹಿಸುತ್ತಾರೆ.
ಈ ನಿಮ್ಮ ಸೊಸೆ ನಿಮ್ಮ ಮನೆಯ ದೀಪ. ಈ ದೀಪವನ್ನು ಸದಾ ನಂದಾದೀಪವಾಗಿ ಬೆಳಗುವಂತೆ ನೀವು ನೋಡಿಕೊಳ್ಳಬೇಕು. ಆಗ ಕೋಟೆ ಮನೆಗೆ ಒಳ್ಳೆಯದಾಗುತ್ತದೆ ಎಂದು ಗುರುಗಳು ಹೇಳಿದ್ದಾರೆ. ಆದರೆ ಇದನ್ನು ಒಪ್ಪದ ಸೀತಾ ಇಲ್ಲ ಈಕೆ ನಮ್ಮ ಮನೆಗೆ ಬಂದಾಗಿನಿಂದಲೂ ಮನೆಯಲ್ಲಿ ಯಾರಿಗೂ ನೆಮ್ಮದಿ ಇಲ್ಲ ಎನ್ನುತ್ತಾಳೆ. ಅಷ್ಟಕ್ಕೂ ಮನೆಗೆ ಬರುವ ಸೊಸೆ ಮಹಾಲಕ್ಷ್ಮಿಯಂತೆ ಇರಬೇಕು ಆದರೆ ಇವಳು ಕಾಳಿ ಎಂದು ಹೇಳುತ್ತಾರೆ. ಆಗ ಗುರುಗಳು ಹೇಳಿದ ಮಾತು ಊರ್ಮಿಳಾಳಿಗೆ ಮಾತ್ರ ಬಹಳ ಖುಷಿಯನ್ನು ನೀಡಿತು ಹೌದು ಯಾಕೆ ಕಾಳಿದೇವಿ ಅಲ್ಲವೇ ದೇವಿಗೆ ಯಾವಾಗ ಕಾಳಿ ಯಾಗಿರಬೇಕು ಯಾವಾಗ ತಾಯಿಯಾಗಬೇಕು ಎನ್ನುವ ಬಗ್ಗೆ ತಿಳಿದಿರುತ್ತದೆ ಎಂದು ಹೇಳುತ್ತಾರೆ.
ಈ ಮದುವೆ ವಿಚಾರದಲ್ಲಿ ಕಾರ್ತಿಕ್ ಅಭಿಪ್ರಾಯವನ್ನು ಕೇಳುತ್ತಾರೆ ಗುರುಗಳು. ಒಬ್ಬಳು ಹುಡುಗಿಯನ್ನು ಇಷ್ಟಪಟ್ಟು ಇನ್ನೊಂದು ಹುಡುಗಿಯನ್ನು ಮದುವೆಯಾಗುವುದು ಅಷ್ಟು ಸುಲಭದ ಕೆಲಸವಲ್ಲ ಗುರುಗಳೆಂದು ಹೇಳಿಬಿಡುತ್ತಾನೆ ಕಾರ್ತಿಕ್. ಅದಕ್ಕೆ ಗುರುಗಳು ನಿನ್ನ ಹಣೆಯಲ್ಲಿ ಆಕೆ ಹೆಸರನ್ನೇ ಬರೆದಿದ್ದೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ ಇವತ್ತಲ್ಲ ನಾಳೆ ನೀನು ಅವಳನ್ನು ಒಪ್ಪಿಕೊಳ್ಳಲೇಬೇಕು ಈ ಜನ್ಮಕ್ಕೆ ಅವಳೇ ನಿನ್ನ ಹೆಂಡತಿ ಈಕೆ ನಿನ್ನ ಹೆಂಡತಿ ಅಷ್ಟೇ ಅಲ್ಲ ನಿನಗೆ ದಾರಿತೋರಿಸುವ ಗುರುವಾಗಿ ಇವಳು ಬಂದಿದ್ದಾಳೆ. ನೀನು ಅದೃಷ್ಟವಂತ ಅದಕ್ಕೆ ನೀನು ಆಕೆಯನ್ನು ಹೆಂಡತಿಯಾಗಿ ಪಡೆದಿದ್ದಾರೆ ಎಂದು ಕೂಡ ಹೇಳುತ್ತಾರೆ. ಆದರೆ ಇದನ್ನು ನಂಬಲು ತಯಾರಿಲ್ಲ ಅಮೂಲ್ ಬೇಬಿ ಕಾರ್ತಿಕ್.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ